Blue Jet Healthcare IPO: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಆರಂಭಿಕ ಷೇರು ವಿತರಣೆ ಆರಂಭ; ಈ ಐಪಿಒ ಖರೀದಿಸಬಹುದೇ, ಓದಿ ಐಪಿಒ ವಿಮರ್ಶೆ
ಕನ್ನಡ ಸುದ್ದಿ  /  ಜೀವನಶೈಲಿ  /  Blue Jet Healthcare Ipo: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಆರಂಭಿಕ ಷೇರು ವಿತರಣೆ ಆರಂಭ; ಈ ಐಪಿಒ ಖರೀದಿಸಬಹುದೇ, ಓದಿ ಐಪಿಒ ವಿಮರ್ಶೆ

Blue Jet Healthcare IPO: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಆರಂಭಿಕ ಷೇರು ವಿತರಣೆ ಆರಂಭ; ಈ ಐಪಿಒ ಖರೀದಿಸಬಹುದೇ, ಓದಿ ಐಪಿಒ ವಿಮರ್ಶೆ

Blue Jet Healthcare IPO Review: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಐಪಿಒ ಚಂದಾದಾರಿಕೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್‌ 25ರಿಂದ ಅಕ್ಟೋಬರ್‌ 27ರವರೆಗೆ ಅವಕಾಶ ನೀಡಲಾಗಿದೆ. ಈ ಐಪಿಒ ಸದ್ಯದಲ್ಲಿಯೇ ಬಿಎಸ್‌ಇ, ಎನ್‌ಎಸ್‌ಇ ಷೇರುಪೇಟೆಯಲ್ಲಿ ಲಿಸ್ಟ್‌ ಆಗಲಿದೆ.

Blue Jet Healthcare IPO: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಆರಂಭಿಕ ಷೇರು ವಿತರಣೆ
Blue Jet Healthcare IPO: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಆರಂಭಿಕ ಷೇರು ವಿತರಣೆ

Blue Healthcare IPO Latest Updates: ಬ್ಲೂ ಜೆಟ್‌ ಹೆಲ್ತ್‌ಕೇರ್‌ ಐಪಿಒ ಚಂದಾದಾರಿಕೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ತಮ್ಮ ಷೇರು ಹೂಡಿಕೆ ಖಾತೆಯಲ್ಲಿ ಅರ್ಜಿ ಸಲ್ಲಿಸಿ ಯುಪಿಐ ಆದೇಶ ನೀಡಬಹುದು. ಬ್ಲೂ ಜೆಟ್‌ ಹೆಲ್ತ್‌ಕೇರ್‌ ಐಪಿಒಗೆ ಅಕ್ಟೋಬರ್‌ 25ರಿಂದ ಅಕ್ಟೋಬರ್‌ 27, 2023ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೆರಡು ದಿನದೊಳಗೆ ಅರ್ಜಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಈ ಐಪಿಒ ವಿತರಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಐಪಿಒ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಿದೆ.

ಷೇರುಪೇಟೆಯಲ್ಲಿ ಹೊಸ ಐಪಿಒ ಖರೀದಿಗೆ ಸಾಕಷ್ಟು ಹೂಡಿಕೆದಾರರು ಮುಂದಾಗುತ್ತಾರೆ. ಕೆಲವೊಂದು ಐಪಿಒಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಡುತ್ತವೆ. ಇನ್ನು ಕೆಲವು ಐಪಿಒಗಳು ಖರೀದಿ ಮೊತ್ತಕ್ಕಿಂತ ಕಡಿಮೆ ದರದಲ್ಲಿ ಲಿಸ್ಟ್‌ ಆಗಿ ಹೂಡಿಕೆದಾರರಿಗೆ ಆಘಾತ ಉಂಟುಮಾಡುತ್ತವೆ. ಇಂತಹ ರಿಸ್ಕ್‌ಗಳ ನಡುವೆಯೂ ಹೂಡಿಕೆದಾರರಿಗೆ ಅಲ್ಪಾವಧಿ ಅಥವಾ ದೀರ್ಘಾವಧಿಯಲ್ಲಿ ಒಂದಿಷ್ಟು ಆದಾಯ ಗಳಿಸಲು ಐಪಿಒಗಳು ನೆರವಾಗುತ್ತವೆ. ಹಾಗಾದರೆ, ಇಂದು ಸಬ್‌ಸ್ಕ್ರಿಪ್ಷನ್‌ ತೆರೆದಿರುವ ಬ್ಲೂ ಜೆಟ್‌ ಹೆಲ್ತ್‌ಕೇರ್‌ ಐಪಿಒ ಖರೀದಿಸಬೇಕೆ? ಬೇಡವೇ? ಎಂಬ ಕುರಿತು ನಿಮ್ಮಲ್ಲಿ ಸಂದಿಗ್ಧತೆ ಇರಬಹುದು.

ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒ ದಿನಾಂಕಗಳು ಮತ್ತು ವಿವರಗಳು

  1. ಅಕ್ಟೋಬರ್‌ 25-27ರವರೆಗೆ ಬ್ಲೂ ಜೆಟ್‌ ಹೆಲ್ತ್‌ಕೇರ್‌ ಐಪಿಒ ಚಂದಾದಾರಿಕೆ ಪ್ರಕ್ರಿಯೆ ಮುಗಿದ ಬಳಿಕ ನವೆಂಬರ್‌ 1 ಕನ್ನಡ ರಾಜ್ಯೋತ್ಸವದಂದು ಐಪಿಒ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯಲಿದೆ. ನವೆಂಬರ್‌ 6ರಂದು ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ ಇದು ಲಿಸ್ಟಿಂಗ್‌ ಆಗುವ ಸೂಚನೆಯಿದೆ.
  2. ಬ್ಲೂ ಜೆಟ್‌ ಹೆಲ್ತ್‌ ಕೇರ್‌ ಐಪಿಒನ ಜಿಎಂಪಿ (Blue Jet Healthcare IPO GMP) ಪ್ರತಿಷೇರಿಗೆ ಸೋಮವಾರ 85 ರೂಪಾಯಿ ಪ್ರೀಮಿಯಂನಲ್ಲಿ ಲಭ್ಯವಿತ್ತು.
  3. ಬ್ಲೂ ಜೆಟ್‌ ಹೆಲ್ತ್‌ ಕೇರ್‌ ಐಪಿಒ ದರ 329 ರೂಪಾಯಿಯಿಂದ 346 ರೂಪಾಯಿವರೆಗಿದೆ. ಪ್ರತಿಷೇರಿಗೆ ಇಷ್ಟು ದರವಿದೆ. ಕನಿಷ್ಠ ಒಂದು ಲಾಟ್‌ ಅಂದರೆ 43 ಷೇರು ಖರೀದಿಸಲು ಅವಕಾಶವಿದೆ. ಕನಿಷ್ಠ 14,878 ರೂಪಾಯಿ ಇರುವವರು ಈ ಐಪಿಒಗೆ ಅರ್ಜಿ ಸಲ್ಲಿಸಬಹುದು. ನಿಮಗೆ ಆರಂಭಿಕ ಷೇರು ವಿತರಣೆಯಾಗದೆ ಇದ್ದರೆ ಈ ಹಣ ಕಡಿತವಾಗದು. ಗರಿಷ್ಠ 14 ಲಾಟ್‌ ಅಥವಾ ಗುಚ್ಛ (602 ಷೇರು) ಖರೀದಿಸಲು ಅವಕಾಶವಿದೆ. ಇಷ್ಟು ಲಾಟ್‌ ಖರೀದಿಸಬೇಕೆಂದರೆ ನಿಮ್ಮ ಖಾತೆಯಲ್ಲಿ 208,292 ರೂಪಾಯಿ ಹಣವಿರಬೇಕು. ಬಿಎನ್‌ಐಐ ಹೂಡಿಕೆದಾರರು 68 ಲಾಟ್‌ ಅಂದರೆ 10,11,704 ರೂಪಾಯಿ ನೀಡಿ 2,924 ಷೇರುಗಳನ್ನು ಖರೀದಿಸಬಹುದು.

ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒ ಖರೀದಿಸಬಹುದೇ?

ಬಹುತೇಕ ಷೇರು ತಜ್ಞರು ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒಗೆ "ಸಬ್‌ಸ್ಕ್ರೈಬ್‌" ಟ್ಯಾಗ್‌ ನೀಡಿದ್ದಾರೆ. ಅಂದರೆ, ಇದು ಖರೀದಿಸಬಹುದಾದ ಐಪಿಒ, ಖರೀದಿಸಿದರೆ ನಷ್ಟವಿಲ್ಲ.

ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒ ವಿಮರ್ಶೆ

ಬ್ಲೂಜೆಟ್‌ ಹೆಲ್ತ್‌ಕೇರ್‌ ಐಪಿಒ ಖರೀದಿಸಬೇಕೆ ಅಥವಾ ಬೇಡವೆ ಎಂಬ ಸಂದಿಗ್ಧತೆಯಲ್ಲಿ ಇರುವವರಿಗೆ ಮಾರುಕಟ್ಟೆ ತಜ್ಞರು ಹೀಗೆ ಹೇಳುತ್ತಾರೆ.

"ಬಿಜೆಎಚ್‌ಎಲ್‌ ಎನ್ನುವುದ ಮುಖ್ಯವಾಗಿ ಕಾಂಟ್ರಾಕ್ಟ್ ಡೆವಲಪ್‌ಮೆಂಟ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಆರ್ಗನೈಸೇಶನ್ (ಸಿಡಿಎಂಒ) ಆಗಿದೆ. ಅಂದ್ರೆ, ಇದರ ಶೇಕಡ 75ರಷ್ಟು ವ್ಯವಹಾರ ಸಿಡಿಎಂಒ ಕಾರ್ಯಾಚರಣೆಯಿಂದ ನಡೆಯುತ್ತದೆ. ಈ ಹಿಂದಿನ ಇದರ ಇತಿಹಾಸ ಗಮನಿಸಿದರೆ ಗ್ರಾಹಕರ ಜತೆ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿತ್ತು. 2020-23ರಲ್ಲಿ ಈ ಕಂಪನಿಯ ವ್ಯವಹಾರದಲ್ಲಿ ಸದೃಢ ಪ್ರಗತಿ ದಾಖಲಾಗಿದೆ. ಆದರೆ, ಕಚ್ಚಾ ವಸ್ತುಗಳ ದರ ಹೆಚ್ಚಳವು ಕಂಪನಿಯ ಲಾಭದ ಮೇಲೆ ಪರಿಣಾಮ ಬೀರಿದೆ. ನಿವ್ವಳ ಮೌಲ್ಯ 3 ಪಟ್ಟು ಹೆಚ್ಚಾಗಿದ್ದರೂ, ಆರ್‌ಒಒ ಆರೋಗ್ಯಕರವಾಗಿದೆ. ಕಂಪನಿಯು ತನ್ನ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಹೊಂದಿದೆ. ಬ್ರೌನ್‌ಫೀಲ್ಡ್ ಮತ್ತು ಗ್ರೀನ್‌ಫೀಲ್ಡ್ ವಿಸ್ತರಣೆಗಳನ್ನು ಕಂಪನಿ ಯೋಜಿಸಿದೆ. ಮುಂದಿನ ದಿನಗಳಲ್ಲಿ ಕಂಪನಿಯ ಪ್ರಗತಿಯು ಅತ್ಯುತ್ತಮವಾಗಿರುವ ನಿರೀಕ್ಷೆಯಿದೆ. ಹೀಗಾಗಿ, ಈ ಆರಂಭಿಕ ಷೇರು ವಿತರಣೆಗೆ ಚಂದಾದಾರರಾಗಬಹುದು" ಎಂದು ರಿಲಯನ್ಸ್ ಸೆಕ್ಯುರಿಟೀಸ್ ಈ ಐಪಿಒಗೆ ಸಬ್‌ಸ್ಕ್ರೈಬ್‌ ಟ್ಯಾಗ್‌ ನೀಡಿದೆ.

"ಕಂಪನಿಯ ಆಡಳಿತದ ಪ್ರಕಾರ ಕಂಪನಿಯು ಶೇಕಡ 85ರಷ್ಟು ಜಾಗತಿಕ ಆದಾಯ ಮತ್ತು ಶೇಕಡ 15ರಷ್ಟು ದೇಶೀಯ ಆದಾಯ ಹೊಂದಿದೆ. ವಿಸ್ತರಣೆ ಬಳಿಕ ಕಂಪನಿಯ ಆಮದು ವ್ಯವಹಾರ ಇನ್ನಷ್ಟು ಪ್ರಗತಿ ಕಾಣಲಿದೆ. ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಇಳಿಕೆ ಕಂಪನಿಗೆ ಕೊಂಚ ಅಡ್ಡಿಯಾಗಬಹುದು. ಆದರೆ, ಹೆಚ್ಚು ಲಾಭ ಸಾಧಿಸುವ ಭರವಸೆಯನ್ನು ಕಂಪನಿಯ ಆಡಳಿತ ಮಂಡಳಿ ಹೊಂದಿದೆ" ಎಂದು ಚಿತ್ತೋರ್‌ಗರ್‌ನ ವಿಶ್ಲೇಷಕರು ಹೇಳಿ "ಅರ್ಜಿ ಸಲ್ಲಿಸಬಹುದು" ಎಂದು ಷರಾ ಬರೆದಿದ್ದಾರೆ.

Disclaimer: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

Whats_app_banner