Fastag KYC: ಫಾಸ್ಟ್‌ಟ್ಯಾಗ್ ಕೆವೈಸಿಗೆ ಫೆ 29 ಕೊನೆಯ ದಿನ; ನಿಮ್ಮ ಖಾತೆಯ ಅಪ್‌ಡೇಟ್ ತಿಳಿಯಲು ಹೀಗೆ ಮಾಡಿ
ಡೆಡ್‌ಲೈನ್‌ಗೂ ಮುನ್ನವೇ ನೀವು ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಮಾಡಿಸಿದ್ದರೂ ಈ ಕಾರಣಕ್ಕೆ ಅಧಿಕಾರಿಗಳು ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿರುತ್ತಾರೆ. ಖಾತೆ ಪರಿಶೀಲನೆಗೆ ಹೀಗೆ ಮಾಡಿ.
ನೀವೇನಾದರೂ ನಿಮ್ಮ ವಾಹನಕ್ಕೆ ಒಂದಕ್ಕಿಂತ ಹೆಚ್ಚಿನ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಅಥವಾ ನಿಮ್ಮ ಕೆವೈಸಿ ಅಪ್ಡೇಟ್ ಮಾಡಿಸದಿದ್ದರೆ ಎಕ್ಸ್‌ಪ್ರೆಸ್‌ವೇಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು (ಫೆಬ್ರವರಿ 29, ಗುರುವಾರ) ಫಾಸ್ಟ್‌ಟ್ಯಾಗ್ ಕೆವೈಸಿ ಮಾಡಿಸಲು ಕೊನೆಯ ದಿನವಾಗಿದೆ. ಒಂದು ವೇಳೆ ಇವತ್ತಿನ ಡೆಡ್‌ಲೈನ್‌ನೊಳಗೆ ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಮಾಡಿಸದಿದ್ದರೆ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಆಗ ನೀವು ನಿಮ್ಮ ವಾಹನದ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಟೋಲ್‌ಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಅಧಿಕಾರಿಗಳು ಈ ಬಾರಿ ಕೆವೈಸಿ ಅಪ್ಡೇಟ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಜನವರಿ 31 ಕೊನೆಯ ದಿನವಾಗಿತ್ತು. ಆದರೂ ಸುಮಾರು 1 ತಿಂಗಳ ಮಟ್ಟಿಗೆ ಅಂದರೆ ಫೆಬ್ರವರಿ 29 ರವರೆಗೆ ವಿಸ್ತರಿಸಲಾಗಿತ್ತು.
ಒಂದು ತಿಂಗಳು ಹೆಚ್ಚಿನ ಸಮಯವನ್ನು ನೀಡಿದ್ದರೂ ಸಾಕಷ್ಟು ಮಂದಿ ಪಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್ಡೇಟ್ ಮಾಡಿಕೊಂಡಿಲ್ಲ. ಇದು ವಾಹನ ಮಾಲಿಕರ ನಿರ್ಲಕ್ಷ್ಯವನ್ನ ತೋರಿಸುತ್ತದೆ. ಒಂದಕ್ಕಿಂತ ಹೆಚ್ಚಿನ ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿದ್ದರೆ ಟೋಲ್ ಶುಲ್ಕವನ್ನು ಕಡಿತಗೊಳಿಸಲು ಏಜೆನ್ಸಿಗಳಿಗೆ ತೊಂದರೆಯಾಗುತ್ತಿದೆ. ನಿಮಯಗಳ ಪ್ರಕಾರ ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳುವ ವ್ಯಕ್ತಿ ಕೆವೈಸಿ ಅಪ್ಡೇಟ್ ಮಾಡಬೇಕು. ಒಂದು ವೇಳೆ ನೀವು ಈಗಾಗಲೇ ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್ಡೇಟ್ ಮಾಡಿದ್ದರೆ ಅದನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬುದನ್ನು ತಿಳಿಯಿರಿ.
ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್ಡೇಟ್ ಆಗಿದೆಯೇ ಎಂಬುದನ್ನು ತಿಳಿಯಲು ಹಲವಾರು ಮಾರ್ಗಗಳಿವೆ
- ನಿಮಗೆ ಫಾಸ್ಟ್‌ಟ್ಯಾಗ್ ವಿತರಿಸುವ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ ವೆಬ್‌ಸೈಟ್ ಇಲ್ಲವೇ ಮೊಬೈಲ್ ಅಪ್ಲಿಕೇಶನ್ ಮೂಲಕವು ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದು
- ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (ಐಎಚ್‌ಎಂಸಿಎಲ್) ಅಧಿಕೃತ ಫಾಸ್ಟ್‌ಟ್ಯಾಗ್ ಪೋರ್ಟಲ್ https://ihmcl.co.in ಭೇಟಿ ನೀಡಿ
- ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ಎನ್‌ಪಿಸಿಐನ ಅಧಿಕೃತ ವೆಬ್‌ಸೈಟ್ https://www.npci.org.in ಗೆ ಭೇಟಿ ನೀಡಿ ನಿಮ್ಮ ಫಾಸ್ಟ್‌ಟ್ಯಾಗ್ ಸ್ಥಿತಿಯನ್ನು ನೋಡಲು ವಾಹನದ ವಿವರಗಳನ್ನು ನಮೂದಿಸಬೇಕು
ನೀವು ಇನ್ನೂ ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಮಾಡಿಸಿದ್ದರೆ ಹೀಗೆ ಮಾಡಿಸಿ
- ಆನ್‌ಲೈನ್‌ಲ್ಲಿ www.fastag.ihmcl.com ಗೆ ಹೋಗಿ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತ ಒಟಿಪಿ ಸಹಾಯದಿಂದ ಲಾಗಿನ್ ಆಗಿ
- ನಂತರ ಡ್ಯಾಶ್‌ಬೋರ್ಡ್ ಮೆನುವಿನಲ್ಲಿ ನನ್ನ ಪ್ರೊಫೈಲ್ ಆಯ್ಕೆ ಮಾಡಿ ಕೈವೈಸಿ ಸ್ಥಿತಿಯನ್ನು ಪರಿಶೀಲಿಸಿ
- ಕೆವೈಸಿ ಪೂರ್ಣಗೊಳ್ಳದಿದ್ದರೆ ಉಪ-ವಿಭಾಗಕ್ಕೆ ಹೋಗಿ ಐಡಿ ಪುರಾವೆ, ವಿಳಾಸ ಪುರಾವೆ ಮತ್ತು ಫೋಟೊದಂತಹ ಅಗತ್ಯ ಮಾಹಿತಿ ನಮೂದಿಸಿ
- ನಂತರ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ: ಮಾರ್ಚ್ 15 ರಿಂದ ಪೇಟಿಎಂ ಫಾಸ್ಟ್‌ಟ್ಯಾಗ್‌ಗೆ ಬೆಲೆ ಇಲ್ಲ, ಪರ್ಯಾಯ ಏನಿದೆ
ಅಪ್ಲಿಕೇಶನ್ ಮೂಲಕವೂ ಮಾಡಿ
- ನಿಮ್ಮ ಮೊಬೈಲ್‌ನಲ್ಲಿ ನೀವು ಫಾಸ್ಟ್‌ಟ್ಯಾಗ್ ನೀಡಿದ ಯಾವುದೇ ಕಂಪನಿಯ ಫಾಸ್ಟ್‌ಟ್ಯಾಗ್ ವಾಲೆಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಫಾಸ್ಟ್‌ಟ್ಯಾಗ್‌ನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ
- ನಂತರ ಮೈ ಪ್ರೊಫೈಲ್‌ಗೆ ಹೋಗಿ ಅಲ್ಲಿ ಕೆವೈಸಿ ಕ್ಲಿಕ್ ಮಾಡಿ
- ನಿಮ್ಮ ಕೆವೈಸಿ ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಿ
- ಅಪ್ಡೇಟ್ ಆಗದಿದ್ದರೆ ಕೆವೈಸಿ ಫಿಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿಗಿಯನ್ನು ಒದಗಿಸಿ
ಆಫ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ
ಸಂಬಂಧಪಟ್ಟ ಬ್ಯಾಂಕ್ ಅಥವಾ ಟೋಲ್ ಪ್ಲಾಜಾದಲ್ಲಿ ಸಹಾಯ ಕೌಂಟರ್‌ಗಳಿಗೆ ಭೇಟಿ ನೀಡಿ ಕೆವೈಸಿ ನವೀಕರಣಗೊಳಿಸಬಹುದು. ಇದಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆ, ಆಧಾರ್, ಪ್ಯಾನ್ ಹಾಗೂ ವಾಹನದ ಆರ್‌ಸಿ ಬೇಕಾಗುತ್ತದೆ.