Bank Holidays: ಮುಂದಿನ ತಿಂಗಳ ನೇರ ವಹಿವಾಟಿಗೆ ಮೊದಲೇ ಮಾಡಿ ಪ್ಲಾನ್; ಫೆಬ್ರವರಿಯಲ್ಲಿ 11 ದಿನ ಬ್ಯಾಂಕ್‌ಗಳಿಗೆ ರಜೆ
ಕನ್ನಡ ಸುದ್ದಿ  /  ಜೀವನಶೈಲಿ  /  Bank Holidays: ಮುಂದಿನ ತಿಂಗಳ ನೇರ ವಹಿವಾಟಿಗೆ ಮೊದಲೇ ಮಾಡಿ ಪ್ಲಾನ್; ಫೆಬ್ರವರಿಯಲ್ಲಿ 11 ದಿನ ಬ್ಯಾಂಕ್‌ಗಳಿಗೆ ರಜೆ

Bank Holidays: ಮುಂದಿನ ತಿಂಗಳ ನೇರ ವಹಿವಾಟಿಗೆ ಮೊದಲೇ ಮಾಡಿ ಪ್ಲಾನ್; ಫೆಬ್ರವರಿಯಲ್ಲಿ 11 ದಿನ ಬ್ಯಾಂಕ್‌ಗಳಿಗೆ ರಜೆ

2024ರ ಫೆಬ್ರವರಿಯಲ್ಲಿ ಬ್ಯಾಂಕ್‌ಗಳು ಕೇವಲ 18 ದಿನ ಮಾತ್ರ ತೆರೆದಿರುತ್ತವೆ. ಉಳಿದ 11 ದಿನ ರಜೆಗಳಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.

2024ರ ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ 11 ರಜೆಗಳಿವೆ.
2024ರ ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ 11 ರಜೆಗಳಿವೆ.

ಬೆಂಗಳೂರು: 2024ರ ಜನವರಿ ಮುಗಿಯುತ್ತಾ ಬಂತು. ವರ್ಷದ ಎರಡೇ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದೆವೆ. ಪ್ರತಿ ವರ್ಷ ಫೆಬ್ರವರಿಯಲ್ಲಿ 28 ಅಥವಾ 29 ದಿನಗಳು ಮಾತ್ರ ಬರುತ್ತವೆ. ಈ ಬಾರಿಯ ಫೆಬ್ರವರಿಯಲ್ಲಿ 29 ದಿನಗಳಿವೆ. ಇದರಲ್ಲಿ 18 ದಿನಗಳು ಮಾತ್ರ ಬ್ಯಾಂಕ್‌ಗಳು ತರೆದಿರುತ್ತವೆ. ಉಳಿದ 11 ದಿನ ರಜೆಗಳಿವೆ.

ಫೆಬ್ರವರಿಯಲ್ಲಿ ನೀವೇನಾದರೂ ಬ್ಯಾಂಕ್‌ ತೆರೆಳಿ ವ್ಯವಹಾರ ನಡೆಸುವ ಪ್ಲಾನ್ ಮಾಡಿಕೊಂಡಿದ್ದರೆ ಯಾವ ದಿನ ಬ್ಯಾಂಕ್ ತೆರೆದಿರುತ್ತದೆ. ಯಾವ ದಿನ ಮುಚ್ಚಿರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳು, ಪ್ರಾದೇಶಿಕ ರಜಾ ದಿನಗಳ ಹೊರತಾಗಿ ಬ್ಯಾಂಕ್‌ಗಳಿಗೆ ನಿಯಮಿತ ರಜೆಗಳಿವೆ. ಪ್ರತಿ ಭಾನುವಾರ, ತಿಂಗಳ 2ನೇ ಹಾಗೂ 4ನೇ ಶನಿವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ ತಿಂಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಬ್ಬಗಳು, ಜನ್ಮದಿನಗಳು, ಭಾನುವಾರ, 2 ಮತ್ತು 4ನೇ ಶನಿವಾರ ಸೇರಿ ಒಟ್ಟು 11 ರಜಾ ದಿನಗಳಿವೆ. ಆದರೆ ಡಿಜಿಟಲ್ ಸೇವೆಗಳು ಎಂದಿನಂತೆ ಇರಲಿವೆ. ಬ್ಯಾಂಕ್‌ಗಳು ಮುಚ್ಚಿದ್ದರೂ ಆನ್‌ಲೈನ್ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಖಾತೆಗಳಿಗೆ ಹಣ ತುಂಬುವುದು, ಎಟಿಎಂ ಮೂಲಕ ಹಣ ಡ್ರಾ ಮಾಡುವುದು, ಯುಪಿಐ ಪೇಮೆಂಟ್‌ಗಳಿಗೆ ಯಾವುದೇ ರೀತಿಯ ರಜೆಗಳು ಅನ್ವಯಿಸುವುದಿಲ್ಲ. ಬ್ಯಾಂಕಿಗೆ ರಜೆ ಇಲ್ಲದ ದಿನಗಳಲ್ಲಿ ಮಾತ್ರ ನೇರ ವಹಿವಾಟಿಗೆ ಅವಕಾಶ ಇರುತ್ತದೆ.

2024ರ ಫೆಬ್ರವರಿಯಲ್ಲಿ ಬ್ಯಾಂಕ್‌ಗಳ ರಜೆ ದಿನಗಳ ಪಟ್ಟಿ ಇಲ್ಲಿದೆ

  1. ಫೆಬ್ರವರಿ 4, ಭಾನುವಾರ- ದೇಶಾದ್ಯಂತ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
  2. ಫೆಬ್ರವರಿ 10, ಶನಿವಾರ - ಎರಡನೇ ಶನಿವಾರ ಆಗಿರುವ ಕಾರಣ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
  3. ಫೆಬ್ರವರಿ 11, ಭಾನುವಾರ - ದೇಶಾದ್ಯಂತ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
  4. ಫೆಬ್ರವರಿ 14, ಬುಧವಾರ - ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆ ಕಾರಣ ತ್ರಿಪುರಾ, ಒರಿಸ್ಸಾ, ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ
  5. ಫೆಬ್ರವರಿ 15, ಗುರುವಾರ - ಲುಯಿ-ನ್ಗೈ-ನಿ ಕಾರಣ ಮಣಿಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ
  6. ಫೆಬ್ರವರಿ 18, ಭಾನುವಾರ- ದೇಶಾದ್ಯಂತ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
  7. ಫೆಬ್ರವರಿ 19, ಸೋಮವಾರ - ಛತ್ರಪತಿ ಶಿವಾಜಿ ಜಯಂತಿಯಿಂದಾಗಿ ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳಿಗೆ ರಜೆ
  8. ಫೆಬ್ರವರಿ 20, ಮಂಗಳವಾರ - ಮಿಜೋರಾ, ಅರುಣಾಚಲ ಪ್ರದೇಶ ರಾಜ್ಯಗಳ ಸಂಸ್ಥಾಪನಾ ದಿನ ಕಾರಣ 2 ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ
  9. ಫೆಬ್ರವರಿ 24, ಶನಿವಾರ - ನಾಲ್ಕನೇ ಶನಿವಾರ ಆಗಿರುವ ಕಾರಣ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
  10. ಫೆಬ್ರವರಿ 25, ಭಾನುವಾರ- ದೇಶಾದ್ಯಂತ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
  11. ಫೆಬ್ರವರಿ 26, ಸೋಮವಾರ - ನ್ಯೋಕಮ್ ಕಾರಣ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ

ಆಯಾ ರಾಜ್ಯಗಳಿಗೆ ಅನ್ವಯವಾಗುವಂತೆ ಈ ಮೇಲಿನ ದಿನಗಳಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner