ಆನ್‌ಲೈನ್‌ನಲ್ಲಿ ಎಸ್‌ಬಿಐ ಡೆಬಿಟ್ ಕಾರ್ಡ್ ಆಕ್ಟಿವೇಶನ್ ಮಾಡಿಕೊಳ್ಳಬೇಕಾ; ಈ ಸರಳ ವಿಧಾನ ಅನುಸರಿಸಿ
SBI Debit Card Activation: ನೀವು ಇರುವ ಸ್ಥಳದಲ್ಲೇ ಆನ್‌ಲೈನ್ ಮೂಲಕ ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್ ಅನ್ನು ಆಕ್ಟಿವೇಶನ್ ಮಾಡಿಕೊಳ್ಳಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ.
ಬೆಂಗಳೂರು: ನೀವೇನಾದರೂ ಹೊಸದಾಗಿ ಎಸ್‌ಬಿಐ ಡೆಬಿಟ್ ಕಾರ್ಡ್ (SBI Debit Card) ಪಡೆದಿದ್ದರೆ, ಇಲ್ಲವೇ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಮತ್ತೊಂದು ಹೊಸ ಕಾರ್ಡ್ ಪಡೆದಿದ್ದರೆ ನಿಮಗಾಗಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-ಎಸ್‌ಬಿಐ ಡೆಬಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಇದನ್ನು ಬಳಸುವ ಮುನ್ನ ಆಕ್ಟಿವೇಶನ್ ಮಾಡಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಎಸ್‌ಬಿಐ ಡೇಬಿಟ್ ಕಾರ್ಡ್ ಸಕ್ರಿಯಗೊಳಿಸೋದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.
ಡೆಬಿಟ್ ಕಾರ್ಡ್ ಆಕ್ಟಿವೇಷನ್‌ಗೂ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ನಿರ್ದಿಷ್ಟವಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು. ಬ್ಯಾಂಕ್ ಖಾತೆಗೆ ಆಧಾರ್, ಪಾನ್ ಹಾಗೂ ಮೊಬೈಲ್ ಸಂಖ್ಯೆ ನೋಂದಣಿ ಕಡ್ಡಾಯವಾಗಿದೆ. ಸುಗಮ ವಹಿವಾಟಿಗೆ ಈ ಮೂರು ದಾಖಲೆಗಳು ತುಂಬಾ ಅಗತ್ಯವಾಗಿವೆ.
ಆನ್‌ಲೈನ್‌ನಲ್ಲಿ ಎಸ್‌ಬಿಐ ಡೆಬಿಟ್ ಕಾರ್ಡ್ ಸಕ್ರಿಯಗೊಳಿಸುವ ವಿಧಾನ
ಇದನ್ನೂ ಓದಿ: ವಿದೇಶಕ್ಕೆ ಪ್ರವಾಸ ಹೋಗ್ತಾ ಇದ್ದೀರಾ; ಹೊರ ದೇಶದಲ್ಲಿ ಯುಪಿಐ ಪೇಮೆಂಟ್ ಆಕ್ಟಿವೇಶನ್ ಮಾಡಿಕೊಳ್ಳುವ ವಿಧಾನ ತಿಳಿಯಿರಿ
ಹಂತ 1: ಆನ್‌ಲೈನ್ ಎಸ್‌ಬಿಐ ವೆಬ್ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ನಿಮ್ಮ ಇಂಟರ್‌ನೆಟ್ ಬ್ಯಾಂಕಿಂಗ್ ಕಸ್ಟಮರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಇ-ಸರ್ವೀಸ್‌ಗೆ ಹೋಗಿ ಅಲ್ಲಿ ಎಟಿಎಂ ಕಾರ್ಡ್ ಸರ್ವೀಸ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಹೊಸ ಪೇಜ್ ಓಪನ್ ಆದ ನಂತರ ನ್ಯೂ ಎಟಿಎಂ ಕಾರ್ಡ್ ಆಕ್ಟಿವೇಶನ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ಖಾತೆಗೆ ನೀವು ಹೊಸ ಎಟಿಎಂ ಕಾರ್ಡ್ ಅನ್ನು ಪಡೆದಿದ್ದೀರಿ ಅನ್ನೋದನ್ನ ತಿಳಿಸಬೇಕು. ಒಂದೇ ಖಾತೆ ಹೊಂದಿದ್ದರೆ ಅದೇ ಆಯ್ಕೆ ಮಾಡಿಕೊಂಡಿರುತ್ತದೆ
ಹಂತ 4: ಅಲ್ಲಿ ತೋರಿಸಲಾಗಿರುವ ಬಾಕ್ಸ್‌ನಲ್ಲಿ ನಿಮ್ಮ ಎಟಿಎಂ ಕಾರ್ಡ್‌ನ 16 ಸಂಖ್ಯೆಯನ್ನು ನಮೂದಿಸಿ. ಮುಂದಿನ ಬಾಕ್ಸ್‌ನಲ್ಲಿ ಇದೇ ಸಂಖ್ಯೆಗಳನ್ನು ಮತ್ತೆ ನಮೂದಿಸಿದ ನಂತರ ಆಕ್ಟಿವೇಶನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಹೊಸ ಪೇಜ್ ಓಪನ್ ಕೇಳಲಾಗುವ ಎಲ್ಲಾ ಮಾಹಿತಿಯನ್ನು ನಮೂದಿಸಿದ ಬಳಿಕ ಕನ್ಫರ್ಮ್ ಅನ್ನು ಆಯ್ಕೆ ಮಾಡಿ
ಹಂತ 5: ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಹೈ ಸೆಕ್ಯುರಿಟಿ ಪಾಸ್‌ವರ್ಡ್ ಸಂದೇಶ ಬರುತ್ತದೆ. ಆ ಹೈ ಸೆಕ್ಯುರಿಟಿ ಪಾಸ್‌ವರ್ಡ್ ನಮೂದಿಸಿದ ಬಳಿಕ ದೃಢೀಕರಿಸುವ ಆಯ್ಕೆಯನ್ನ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಎಟಿಎಂ ಕಾರ್ಡ್ ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ ಎಂದು ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com )