PPF: ತಿಂಗಳಿಗೆ 12500 ಉಳಿತಾಯ ಮಾಡಿದರೆ 1 ಕೋಟಿ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಅತ್ಯುತ್ತಮ ಯೋಜನೆ ಇದು-business news investment plan how to make rs 1 crore in ppf tax benefits and other arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ppf: ತಿಂಗಳಿಗೆ 12500 ಉಳಿತಾಯ ಮಾಡಿದರೆ 1 ಕೋಟಿ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಅತ್ಯುತ್ತಮ ಯೋಜನೆ ಇದು

PPF: ತಿಂಗಳಿಗೆ 12500 ಉಳಿತಾಯ ಮಾಡಿದರೆ 1 ಕೋಟಿ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಅತ್ಯುತ್ತಮ ಯೋಜನೆ ಇದು

ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ನೀವು 1 ಕೋಟಿಗಿಂತ ಹೆಚ್ಚಿನ ನಿಧಿಯನ್ನು ಸಂಗ್ರಹಿಸಬಹುದಾಗಿದೆ. ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಪಿಪಿಎಫ್‌ನಲ್ಲಿ ಜಮೆ ಮಾಡುವುದರಿಂದ ಕೋಟ್ಯಾಧಿಪತಿಗಳಾಗಬಹುದು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಪಿಎಫ್‌ನಲ್ಲಿ ಅತ್ಯುತ್ತಮ ಹೂಡಿಕೆಯ ಯೋಜನೆಗಳು ಯಾವುವು ಅನ್ನೋದನ್ನ ತಿಳಿಯಿರಿ.
ಪಿಪಿಎಫ್‌ನಲ್ಲಿ ಅತ್ಯುತ್ತಮ ಹೂಡಿಕೆಯ ಯೋಜನೆಗಳು ಯಾವುವು ಅನ್ನೋದನ್ನ ತಿಳಿಯಿರಿ.

ಬೆಂಗಳೂರು: ಹೊಸ ಹಣಕಾಸು ವರ್ಷ 2024–25 ಪ್ರಾರಂಭವಾಗಿದೆ. ತೆರಿಗೆ ಉಳಿಸಲು ಮತ್ತು ಉಳಿತಾಯ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ ಬಂದಿದೆ. ಹಣಕಾಸಿನ ಯೋಜನೆಗಳನ್ನು ಮುಂಚಿತವಾಗಿಯೇ ಪ್ರಾರಂಭಿಸಿದರೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಕೆಲವು ಹಣಕಾಸಿನ ಯೋಜನೆಗಳು ಅತ್ಯತ್ತಮ ತೆರಿಗೆ ಉಳಿತಾಯ ಯೋಜನೆಗಳೂ ಆಗಿವೆ. ಈಗ ಲಭ್ಯವಿರುವ ಹೂಡಿಕೆಗಳ ಆಯ್ಕೆಯಲ್ಲಿ ಪಿಪಿಎಫ್‌ ಅಂದರೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಸುಲಭದ ಯೋಜನೆಯಾಗಿದೆ. ಇದೊಂದು ಅದ್ಭುತ ಯೋಜನೆಯಾಗಿದ್ದು ಇದರಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಗಳಿಸಬಹುದು. ಬಹಳ ಸುಲಭದ ಹೂಡಿಕೆ ಮಾರ್ಗ ಆಗಿರುವ ಪಿಪಿಎಫ್‌ ನಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿ ವರ್ಷ ತೆರಿಗೆ ವಿನಾಯತಿ ಪಡೆದುಕೊಳ್ಳಲು ಹಣಕಾಸಿನ ಯೋಜನೆಗಳನ್ನು ಮೊದಲೇ ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ. ಇದು ಮುಂದಿನ ಮಾರ್ಚ್‌ ತಿಂಗಳೊಳಗೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಸುಲಭದ ತೆರಿಗೆ ಉಳಿತಾಯ ಯೋಜನೆಯನ್ನು ಹುಡುಕುತ್ತಿದ್ದರೆ ಪಿಪಿಎಫ್ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಜನಸಾಮಾನ್ಯರಿಗಾಗಿಯೇ ಇರುವ ನಿಧಿ ಸಂಗ್ರಹಣಾ ಯೋಜನೆ ಇದಾಗಿದೆ. ಪಿಪಿಎಫ್‌ ಖಾತೆಯನ್ನು ಬಹಳ ಸುಲಭವಾಗಿ ತೆರೆಯಬಹುದು. ಪ್ರಸ್ತುತ ಇದು ಶೇಕಡಾ 7.1 ರಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಜೊತೆಗೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಹೊಂದಿದೆ. ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ನೀವು 1 ಕೋಟಿಗಿಂತ ಹೆಚ್ಚಿನ ನಿಧಿಯನ್ನು ಸಂಗ್ರಹಿಸಬಹುದಾಗಿದೆ. ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಪಿಪಿಎಫ್‌ನಲ್ಲಿ ಜಮೆ ಮಾಡುವುದರಿಂದ ಕೋಟ್ಯಾಧಿಪತಿಗಳಾಗಬಹುದು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಪಿಎಫ್‌ ಖಾತೆ ತೆರೆಯುವುದು ಹೇಗೆ?

  • ಪಿಪಿಎಫ್‌ ಖಾತೆಯನ್ನು ಪೋಸ್ಟ್‌ ಆಫೀಸ್‌ ಅಥವಾ ಎಸ್‌ಬಿಐ ನಂತಹ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೆರಯಬಹುದಾಗಿದೆ
  • ಪಿಪಿಎಫ್‌ ಫಾರ್ಮ್ ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ, ಪಾಸ್‌ಪೋರ್ಟ್‌ ಸೈಜ್‌ನ ಫೋಟೋವನ್ನು ಲಗತ್ತಿಸಿ
  • ಪಿಪಿಎಫ್‌ ಖಾತೆಯನ್ನು ತೆರೆಯಲು ಕನಿಷ್ಠ 500 ರೂ. ಠೇವಣಿ ಅಗತ್ಯವಿರುತ್ತದೆ
  • ನೀವು ವಾರ್ಷಿಕವಾಗಿ ಇದರಲ್ಲಿ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದಾಗಿದೆ

ಇದನ್ನೂ ಓದಿ: PPF-NPS-ELSS: ಮೂರರ ನಡುವೆ ಏನು ವ್ಯತ್ಯಾಸ? ತೆರಿಗೆ ಉಳಿತಾಯ, ಹೂಡಿಕೆಗೆ ಯಾವುದು ಒಳ್ಳೆಯದು

ಮೆಚ್ಯೂರಿಟಿ ಅವಧಿ

ಪಿಪಿಎಫ್‌ ಖಾತೆಯ ಮೆಚ್ಯೂರಿಟಿ ಅವಧಿಯು 15 ವರ್ಷಗಳಾಗಿದೆ. ಇದರಲ್ಲಿ ಪೋಸ್ಟ್‌ ಮೆಚ್ಯೂರಿಟಿ ಎಂಬ ಆಯ್ಕೆಗಳೂ ಇವೆ. ಅದಕ್ಕಾಗಿ 3 ರೀತಿಯ ಆಯ್ಕೆಗಳನ್ನು ನೀಡುತ್ತದೆ.

  • ಸಂಪೂರ್ಣ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುವುದು
  • ಹೊಸ ಠೇವಣಿಯೊಂದಿಗೆ ಖಾತೆಯನ್ನು ವಿಸ್ತರಿಸುವುದು
  • ಹೆಚ್ಚುವರಿ ಠೇವಣಿ ಇಡದೇ ಖಾತೆಯನ್ನು ವಿಸ್ತರಿಸುವುದು

ಲಾಕ್-ಇನ್ ಅವಧಿ

ಖಾತೆಯನ್ನು ತೆರೆದ ನಂತರ ಮೊದಲ 5 ವರ್ಷಗಳವರೆಗೆ ಹಣವನ್ನು ವಿತ್‌ಡ್ರಾ ಮಾಡಲು ಆಗುವುದಿಲ್ಲ. ಆಮೇಲೆ, ಷರತ್ತುಗಳಿಗೆ ಒಳಪಟ್ಟರೆ ವಿತ್‌ಡ್ರಾ ಮಾಡಲು ಅನುಮತಿಸಲಾಗುತ್ತದೆ.

ತೆರಿಗೆ ವಿನಾಯಿತಿ ಪ್ರಯೋಜನಗಳು

ಪಿಪಿಎಫ್‌ಗೆ ಖಚಿತವಾಗಿ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ. ನೀವು ಪಿಪಿಎಫ್‌ನಲ್ಲಿ ಮಾಡಿದ ಸಂಪೂರ್ಣ ಹೂಡಿಕೆ, ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತದ ಮೇಲೆ ಸ್ಪಷ್ಟವಾಗಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ವಾರ್ಷಿಕವಾಗಿ 1.5 ಲಕ್ಷದವರೆಗಿನ ಹೂಡಿಕೆಗಳಿಗೆ ಅರ್ಹತೆಯನ್ನು ಪಡೆಯುತ್ತಾರೆ. ‌ಜೊತೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ.

ಸಂಪತ್ತು ವೃದ್ಧಿಸಲು ಈ ತಂತ್ರ ಬಳಸಿ

  • ಪಿಪಿಎಫ್ ಯೋಜನೆಯ ಮೂಲಕ ರೂ 1 ಕೋಟಿಯನ್ನು ಸಂಗ್ರಹಿಸಬಹುದಾಗಿದೆ.
  • 25 ವರ್ಷಗಳವರೆಗೆ ಪ್ರತಿ ತಿಂಗಳು 12,500 ರೂ ಹೂಡಿಕೆ ಮಾಡಬೇಕಾಗುತ್ತದೆ

ಅರ್ಹತೆ

ಯಾವುದೇ ವ್ಯಕ್ತಿಯು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ಅಪ್ರಾಪ್ತರ ಪರವಾಗಿ ಪೋಷಕರು ಖಾತೆಗಳನ್ನು ತೆರೆಯಬಹುದು.