Cello World IPO: ಇಂದಿನಿಂದ ಸೆಲ್ಲೊ ವರ್ಲ್ಡ್ ಐಪಿಒಗೆ ಅರ್ಜಿ ಸಲ್ಲಿಸಲು ಅವಕಾಶ, ಖರೀದಿಗೆ ಅರ್ಜಿ ಸಲ್ಲಿಸುವ ಮುನ್ನ ಈ 10 ಅಂಶ ಗಮನಿಸಿ
Cello World IPO GMP today: ಇಂದು ಸೆಲ್ಲೊ ವರ್ಲ್ಡ್ ಕಂಪನಿಯ ಷೇರುಗಳು ಗ್ರೇ ಮಾರುಕಟ್ಟೆಯಲ್ಲಿ 90 ರೂಪಾಯಿ ಪ್ರೀಮಿಯಂಗೆ ಲಭ್ಯವಿದೆ. ಆಸಕ್ತರು ಪ್ರತಿಷೇರಿಗೆ 617-648 ರೂಪಾಯಿಯಂತೆ ಲಾಟ್ ಖರೀದಿಸಬಹುದು. ಈ ಐಪಿಒಗೆ ಚಂದಾದಾರಿಕೆ ಮಾಡಬಹುದೇ? ಖರೀದಿಸಿದರೆ ನಷ್ಟವಿದೆಯೇ? ಇತ್ಯಾದಿ ವಿವರ ಇಲ್ಲಿದೆ.
Cello World IPO: ಸೆಲ್ಲೊ ವರ್ಲ್ಡ್ ಕಂಪನಿಯ ಆರಂಭಿಕ ಷೇರು ವಿತರಣೆಯು ಇಂದು ಚಂದಾದಾರಿಕೆಗೆ ಮುಕ್ತವಾಗಿದೆ. ಈ ಐಪಿಒಗೆ ನವೆಂಬರ್ 1ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರತಿ ಈಕ್ವಿಟಿ ಷೇರಿಗೆ 617-688 ರೂಪಾಯಿಯಂತೆ ಈ ಷೇರು ಆಫರ್ ಮಾಡಲಾಗಿದೆ. ಈ ಷೇರುಗಳನ್ನು ಎನ್‌ಎಸ್‌ಇ ಮತ್ತು ಬಿಎಸ್‌ಇ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲು ಉದ್ದೇಶಿಸಲಾಗಿದೆ. ಇದು ಒಎಫ್‌ಎಸ್ ಅಥವಾ ಆಫರ್ ಫಾರ್ ಸೇಲ್ ಷೇರಾಗಿದೆ. ಈ ಷೇರು ವಿತರಣೆ ಮೂಲಕ ಕಂಪನಿಯ ಪ್ರವರ್ತಕರು 1900 ಕೋಟಿ ರೂಪಾಯಿ ಸಂಗ್ರಹಿಸಲು ಉದ್ದೇಶಿಸಿದ್ದಾರೆ. ಅಂದಹಾಗೆ, ಲಿಸ್ಟ್ ಮಾಡದ ಷೇರುಪೇಟೆಯಲ್ಲಿ ಈಗಾಗಲೇ ಸೆಲ್ಲೊ ವರ್ಲ್ಡ್ ಷೇರುಗಳು ವಹಿವಾಟು ನಡೆಸುತ್ತಿವೆ. ಮಾರುಕಟ್ಟೆ ಅವಲೋಕನ ಮಾಡುವ ತಜ್ಞರ ಪ್ರಕಾರ ಸೆಲ್ಲೊ ವರ್ಲ್ಡ್ ಲಿಮಿಟೆಡ್ ಷೇರುಗಳು ಗ್ರೇ ಮಾರುಕಟ್ಟೆಯಲ್ಲಿ ಇಂದು ಪ್ರತಿಷೇರಿಗೆ 90 ರೂಪಾಯಿಗೆ ಲಭ್ಯವಿದೆ. ಈ ಐಪಿಒಗೆ ಚಂದಾದಾರಿಕೆ ಮಾಡಬಹುದೇ? ಖರೀದಿಸಿದರೆ ನಷ್ಟವಿದೆಯೇ? ಷೇರು ವಿಶ್ಲೇಷಕರ ಅಭಿಪ್ರಾಯವೇನು? ಸೆಲ್ಲೊ ವರ್ಲ್ಡ್ ಐಪಿಒದ ಜಿಎಂಪಿ ಎಷ್ಟಿದೆ? ಸೆಲ್ಲೊ ವರ್ಲ್ಡ್ ಐಪಿಒದ ವಿಮರ್ಶೆ ಹೇಗಿದೆ ಇತ್ಯಾದಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಸೆಲ್ಲೊ ವರ್ಲ್ಡ್ ಐಪಿಒ ಮಾಹಿತಿ (Cello World IPO)
ಸೆಲ್ಲೊ ವರ್ಲ್ಡ್ ಐಪಿಒದ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ವೆಬ್‌ಸೈಟ್ ದಿ ಮಿಂಟ್ ವಿಶ್ಲೇಷಣೆ ಮಾಡಿದೆ. ಅದರ ಪ್ರಕಾರ ಸೆಲ್ಲೊ ವರ್ಲ್ಡ್ ಐಪಿಒ ಖರೀದಿಸುವವರು ಈ ಮುಂದಿನ ಹತ್ತು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1] ಇಂದು ಸೆಲ್ಲೊ ವರ್ಲ್ಡ್ ಐಪಿಒ ಜಿಎಂಪಿ( Cello World IPO GMP today): ಕಂಪನಿಯ ಷೇರುಗಳು ಇಂದು ಗ್ರೇ ಮಾರುಕಟ್ಟೆಯಲ್ಲಿ 90 ರೂಪಾಯಿ ಪ್ರೀಮಿಯಂನಲ್ಲಿ ಲಭ್ಯವಿದೆ ಎಂದು ಮಾರುಕಟ್ಟೆ ವೀಕ್ಷಕರು ಮಾಹಿತಿ ನೀಡಿದ್ದಾರೆ.
2] ಸೆಲ್ಲೋ ವರ್ಲ್ಡ್ ಐಪಿಒ ದರವೆಷ್ಟು?: ಕಂಪನಿಯು ಪ್ರತಿ ಇಕ್ವಿಟಿ ಷೇರಿಗೆ 617 ರೂಪಾಯಿಯಿಂದ 648 ರೂ ದರ ನಿಗದಿಪಡಿಸಿದೆ.
3] ಸೆಲ್ಲೋ ವರ್ಲ್ಡ್ ಐಪಿಒ ಚಂದಾದಾರಿಕೆ ದಿನಾಂಕ: ಇಂದು ಐಪಿಒ ಖರೀದಿಗೆ ಲಭ್ಯವಿದೆ. ನವೆಂಬರ್ 1, 2023 ರವರೆಗೆ ತೆರೆದಿರುತ್ತದೆ.
4] ಸೆಲ್ಲೋ ವರ್ಲ್ಡ್ ಐಪಿಒ ಗಾತ್ರ: ಕಂಪನಿಯು 1,900 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ.
5] ಸೆಲ್ಲೋ ವರ್ಲ್ಡ್ ಐಪಿಒ ಲಾಟ್ ಗಾತ್ರ: ಕನಿಷ್ಠ ಒಂದು ಲಾಟ್‌ನಲ್ಲಿ 23 ಷೇರುಗಳು ಲಭ್ಯ ಇರುತ್ತವೆ.
6] ಹೂಡಿಕೆಯ ಮಿತಿ: ಒಂದು ಲಾಟ್‌ನಲ್ಲಿ ಕಂಪನಿಯ 23 ಷೇರುಗಳು ಇವೆ. ಕನಿಷ್ಠ 14,904 ರೂಪಾಯಿ (ರೂ. 648 x 23) ಷೇರು ಖರೀದಿಸಬಹುದು.
7] ಸೆಲ್ಲೋ ವರ್ಲ್ಡ್ ಐಪಿಒ ಹಂಚಿಕೆ ದಿನಾಂಕ: T+3ವೇಳಾಪಟ್ಟಿಯ ಹಿನ್ನೆಲೆಯಲ್ಲಿ, ಸೆಲ್ಲೋ ವರ್ಲ್ಡ್ ಐಪಿಒ ಹಂಚಿಕೆ ದಿನಾಂಕವು ನವೆಂಬರ್ 2, 2023 ಅಥವಾ ನವೆಂಬರ್ 3, 2023 ರಂದು ಐಪಿಒ ಹಂಚಿಕೆಯಾಗಬಹುದು.
8] ಸೆಲ್ಲೋ ವರ್ಲ್ಡ್ ಐಪಿಒ ಲಿಸ್ಟಿಂಗ್: ಬಿಎಸ್‌ಇ ಮತ್ತು ಎನ್‌ಎಸ್‌ಇ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಉದ್ದೇಶಿಸಲಾಗಿದೆ.
9] ಸೆಲ್ಲೋ ವರ್ಲ್ಡ್ ಐಪಿಒ ಲಿಸ್ಟಿಂಗ್ ದಿನಾಂಕ: T+3 ವೇಳಾಪಟ್ಟಿಯ ಹಿನ್ನೆಲೆಯಲ್ಲಿ, ಸೆಲ್ಲೋ ವರ್ಲ್ಡ್ ಐಪಿಒ ಲಿಸ್ಟಿಂಗ್ ನವೆಂಬರ್ 6, 2023 ರಂದು ಇರುವ ಸಾಧ್ಯತೆಯಿದೆ.
10] ಸೆಲ್ಲೋ ವರ್ಲ್ಡ್ ಐಪಿಒ ವಿಮರ್ಶೆ: ಸೆಲ್ಲೋ ವರ್ಲ್ಡ್ ಐಪಿಒಗೆ ಬಿಪಿ ಈಕ್ವಿಟಿಸ್ ಸಬ್‌ಸ್ಕ್ರೈಬ್ ಟ್ಯಾಗ್ ನೀಡಿದೆ. ರಿಲಯೆನ್ಸ್ ಸೆಕ್ಯುರಿಟೀಸ್ ಕೂಡ ಈ ಐಪಿಒಗೆ ಚಂದಾದಾರರಾಬಹುದು ಎಂಬ ಟ್ಯಾಗ್ ನೀಡಿದೆ.
Disclaimer: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಚಿತ್ತೊರ್‌ಗರ್ ವೆಬ್ ತಾಣದ ವಿಶ್ಲೇಷಕರು “ಮಧ್ಯಮದಿಂದ ದೀರ್ಘಕಾಲದ ಹೂಡಿಕೆ ಯೋಜನೆ ಹೊಂದಿರುವವರು, ಷೇರುಪೇಟೆಯ ಕುರಿತು ತಿಳಿದಿರುವವರು ಮಾತ್ರ ಹೂಡಿಕೆ ಮಾಡಬಹುದು” ಎಂದು ತಿಳಿಸಿದೆ.