PPF Calculator: ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ ನೀವೂ ಆಗಬಹುದು ಕೋಟ್ಯಾಧಿಪತಿ; ಹೇಗೆ ಅಂತೀರಾ, ಉತ್ತರ ಇಲ್ಲಿದೆ
ನಿವೃತ್ತಿ ಜೀವನದ ನಂತರ ನಮ್ಮ ಬಳಿ ಒಂದಿಷ್ಟು ಉಳಿತಾಯ ಹಣ ಇರಬೇಕು ಎಂದು ಅನ್ನಿಸುವುದು ಸಹಜ. ನಿಮ್ಮ ನಿವೃತ್ತಿಯ ನಂತರ ನೀವು ಕೋಟ್ಯಾಧಿಪತಿಯಾಗಲು ಬಯಸಿದರೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಪಿಪಿಎಫ್‌ನಲ್ಲಿ ಹಣ ಹೂಡಿಕೆಮಾಡೋದ್ರಿಂದ ಕೋಟ್ಯಾಧಿಪತಿ ಆಗೋದು ಹೇಗೆ ಎಂಬ ವಿವರ ಇಲ್ಲಿದೆ.
ಹಣ ಉಳಿತಾಯ ಮಾಡಿಲ್ಲ ಅಂದ್ರೆ ಭವಿಷ್ಯದಲ್ಲಿ ತೊಂದರೆ ಅನುಭವಿಸೋದು ಖಂಡಿತ. ಭವಿಷ್ಯದ ದೃಷ್ಟಿಯಿಂದಲಾದ್ರೂ ನಾವು ಉಳಿತಾಯದ ಮೇಲೆ ಗಮನ ಹರಿಸಬೇಕು. ಉಳಿತಾಯದ ಸ್ಕೀಮ್‌ನಲ್ಲಿ ಪಿಎಫ್ ಕೂಡ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಬಹುತೇಕರಿಗೆ ತಮ್ಮ ಸಂಬಳದಿಂದ ಪಿಎಫ್ ಕಡಿತ ಮಾಡಿಕೊಳ್ಳಲಾಗುತ್ತದೆ. ಈ ಪಿಎಫ್‌ನಿಂದ ನಾವು ಉದ್ಯೋಗ ಬಿಡುವ ಹೊತ್ತಿಗೆ ಒಂದಿಷ್ಟು ಉಳಿತಾಯ ಹಣ ನಮ್ಮ ಕೈ ಸೇರುತ್ತದೆ. ಪಿಎಫ್‌ಗಿಂತ ನಮಗೆ ಹೆಚ್ಚು ಲಾಭ ನೀಡುವುದು ಪಿಪಿಎಫ್.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎನ್ನುವುದು ದೀರ್ಘವಧಿಯ ಹೂಡಿಕೆ ವಿಧಾನವಾಗಿದೆ. ಇದು ಹೂಡಿಕೆದಾರರಿಗೆ ನಿವೃತ್ತಿಯ ನಂತರ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.
ಪಿಪಿಎಫ್ ನಿಯಮಗಳ ಪ್ರಕಾರ ಹೂಡಿಕೆದಾರರು ತಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ 100 ರೂ. ಠೇವಣಿ ಇರಿಸುವ ಮೂಲಕ ಪಿಪಿಎಫ್ ಖಾತೆಯನ್ನು ತೆರಯಬಹುದು. ಆದರೆ ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 500ರೂ ಠೇವಣೆ ಇಡಬೇಕಾಗುತ್ತದೆ.
ಇದನ್ನೂ ಓದಿ: Money Saving Tips: ನೀವು ಕಾಲೇಜ್ ಸ್ಟೂಡೆಂಟ್ ಆಗಿದ್ದು, ಹಣ ಉಳಿತಾಯದ ಬಗ್ಗೆ ಯೋಚಿಸ್ತಿದ್ರೆ ನಿಮಗಾಗಿ ಇಲ್ಲಿದೆ 7 ಟಿಪ್ಸ್
ಈ ಖಾತೆಯು 15 ವರ್ಷದ ಲಾಕ್ ಇನ್ ಅವಧಿಯನ್ನು ಹೊಂದಿರುತ್ತದೆ. ಇದರಲ್ಲಿ ಗಳಿಕೆ ಮಾಡಲು ಇಚ್ಛಿಸುವ ವ್ಯಕ್ತಿಯು ಒಂದು ವರ್ಷದಲ್ಲಿ 1.5 ಲಕ್ಷದವರೆಗೆ ಒಂದೇ ಕಂತಿಯಲ್ಲಿ ಠೇವಣಿ ಇಡಬಹುದು ಅಥವಾ ಗರಿಷ್ಠ 12 ಕಂತುಗಳಲ್ಲಿ ಠೇವಣಿ ಇರಿಸಬಹುದು.
ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ ಪಿಪಿಎಫ್ ಖಾತೆಯು ಇಇಇ ವರ್ಗದ ಅಡಿಯಲ್ಲಿ ಬರುತ್ತದೆ. ಇದರಲ್ಲಿ ವರ್ಷಕ್ಕೆ 1.5 ಲಕ್ಷದವರೆಗೆ ವಾರ್ಷಿಕ ಠೇವಣಿಯಲ್ಲಿ ಇರಿಸಿದವರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನ ಕೂಡ ಲಭಿಸುತ್ತದೆ. ಇದರೊಂದಿಗೆ ಪಿಪಿಎಫ್ ಮೆಚುರಿಟಿ ಮೊತ್ತಕ್ಕೂ ತೆರಿಗೆ ವಿನಾಯಿತಿ ಇದೆ. ಪಿಪಿಎಫ್ ಮೇಲೆ ವರ್ಷಕ್ಕೆ 7.1ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ವ್ಯಕ್ತಿಯೊಬ್ಬ ಪಿಪಿಎಫ್‌ನಲ್ಲಿ ಹಣ ಹೂಡಿಕೆಯ ಬಗ್ಗೆ ಶಿಸ್ತು ಪಾಲಿಸಿದರೆ ಮುಕ್ತಾಯದ ವೇಳೆಗೆ ಕೋಟ್ಯಾಧಿಪತಿಯಾಗಬಹುದು.
ಹೂಡಿಕೆದಾರರು ಪಿಪಿಎಫ್ ಖಾತೆಯ ಮೂಲಕ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಬಗ್ಗೆ ಮಾತನಾಡಿದ ಲೈವ್ ಮಿಂಟ್ ಜೊತೆ ಮಾತನಾಡಿದ ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ, ʼಪಿಪಿಎಫ್ ಖಾತೆಯು 15 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ. ಆದರೆ ಪಿಪಿಎಫ್ ಖಾತೆಯ ಮೆಚ್ಯೂರಿಟಿ ಅವಧಿಯನ್ನು ನಂತರ 5 ವರ್ಷಗಳವರೆಗೆ ವಿಸ್ತರಿಸಬಹುದು. ಇದರಿಂದ ಹೂಡಿಕೆದಾರರಿಗೆ ಲಾಭ ಹೆಚ್ಚು.
ಪಿಪಿಎಫ್ ಕ್ಯಾಲ್ಕುಲೇಟರ್
ಒಬ್ಬ ದುಡಿಯುತ್ತಿರುವ ವ್ಯಕ್ತಿಯು ತನಗೆ 30 ವರ್ಷವಾದಾಗ ಪಿಪಿಎಫ್ ಖಾತೆ ತೆರೆಯುತ್ತಾನೆ. ಇದನ್ನು ಮೂರು ಅವಧಿಯಲ್ಲಿ ವಿಸ್ತರಿಸುತ್ತಾನೆ. ಈಗ ಪಿಪಿಎಫ್ ಖಾತೆದಾರನು 30 ವರ್ಷಗಳ ಕಾಲ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದಂತಾಗುತ್ತದೆ. ಒಂದು ವೇಳೆ ಹೂಡಿಕೆದಾರ 1.50 ಲಕ್ಷ ಹೂಡಿಕೆ ಮಾಡಿದರೆ 30 ವರ್ಷಗಳ ಪಿಪಿಎಫ್ ಮೆಚುರಿಟಿ ಮೊತ್ತವು 1.54 ಕೋಟಿ ಆಗಿರುತ್ತದೆ. ಸಂಪೂರ್ಣ ಅವಧಿಗೆ ಶೇ 7.10 ರಷ್ಟು ಬಡ್ಡಿದರ ಎಂದುಕೊಳ್ಳಿ. ಆ ನಿಮ್ಮ ಕೈಗೆ 1 ಕೋಟಿಗೂ ಅಧಿಕ ಹಣ ಸಿಗುವುದು ಪಕ್ಕಾ.
ಸರಿ ಇನ್ಯಾಕೆ ತಡ, ನೀವು ಕೋಟ್ಯಾಧಿಪತಿ ಆಗಬೇಕು ಅಂತಿದ್ರೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ. ಹೆಚ್ಚಿನ ಮಾಹಿತಿ ಹತ್ತಿರದ ಬ್ಯಾಂಕ್ ಅಥವಾ ಅಂಚೆಕಚೇರಿ ಸಂಪರ್ಕಿಸಿ.