Investment: ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು? ಭವಿಷ್ಯಕ್ಕೆ ಹಣ ಉಳಿತಾಯ ಮಾಡಲು ಬಯಸುವವರಿಗೆ ಇಲ್ಲಿದೆ ಟಿಪ್ಸ್
ಹಣ ಉಳಿತಾಯ ಮಾಡೋಕೆ ಯಾವುದು ಸರಿಯಾದ ಸಮಯ ಅಂತ ಯೋಚನೆ ಮಾಡುವುದರಲ್ಲೇ ಹಲವರು ಕಾಲ ಕಳೆಯುತ್ತಾರೆ. ಹಣ ಎಲ್ಲಿ ಹೂಡಿಕೆ ಮಾಡೋದು, ಯಾವ ಸಮಯದಲ್ಲಿ ಹೂಡಿಕೆ ಮಾಡೋದು ಬೆಸ್ಟ್, ಫಸ್ಟ್ ಟೈಮ್ ಹೂಡಿಕೆ ಮಾಡೋಕೆ ಯೋಚ್ನೇ ಮಾಡ್ತಾ ಇದ್ರೆ ನಾವು ಏನು ಮಾಡ್ಬೇಕು.. ಈ ರೀತಿ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಉಳಿತಾಯ ಯೋಜನೆ ಆರಂಭಿಸಬೇಕು. ಆ ಮೂಲಕ ಭವಿಷ್ಯಕ್ಕೆ ಹಣ ಉಳಿತಾಯ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೆಲವರು ಕಾಲೇಜಿ ದಿನಗಳಿಂದಲೇ ಉಳಿತಾಯ ಮಾಡಲು ಅಥವಾ ಉಳಿತಾಯ ಯೋಜನಗಳಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸುತ್ತಾರೆ. ಇನ್ನೂ ಕೆಲವರು ದುಡಿಯಲು ಆರಂಭಿಸಿದಾಗ ಉಳಿತಾಯ ಯೋಜನೆಯ ಬಗ್ಗೆ ಯೋಚಿಸುತ್ತಾರೆ. ಅದೇನೆ ಇರ್ಲಿ, ಹಾಗಾದ್ರೆ ಉಳಿತಾಯಕ್ಕೆ ಸರಿಯಾದ ಸಮಯ ಅಥವಾ ರೈಟ್ ಟೈಮ್ ಯಾವುದು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಉಳಿತಾಯಕ್ಕೆ ಸರಿಯಾದ ಸಮಯ ಎಂಬುದು ಖಂಡಿತ ಇಲ್ಲ. ಇಂತಹದ್ದೇ ದಿನ, ಇಂತಹದ್ದೇ ವರ್ಷ ಎಂದುಕೊಂಡು ಉಳಿತಾಯ ಮಾಡುವುದು ಸರಿಯಲ್ಲ. ನಮ್ಮ ಬಳಿ ಹಣ ಇದ್ದಾಗಲೆಲ್ಲಾ ಉಳಿತಾಯ ಮಾಡಬೇಕು, ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅದರಲ್ಲಿ ಹಣ ಹೂಡಿಕೆ ಮಾಡಬೇಕು.
ಮಾರುಕಟ್ಟೆ ಯಾವಾಗ ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಾ ವ್ಯರ್ಥ ಮಾಡುವುದು ಸರಿಯಲ್ಲ. ಇನ್ನೂ ಮ್ಯೂಚುವಲ್ ಫಂಡ್‌ನ ಸಿಪ್ ವಿಚಾರಕ್ಕೆ ಬಂದರೆ ಮಾರುಕಟ್ಟೆಗಳ ಸಮಯಕ್ಕೆ ಗಮನ ಇಲ್ಲ.
ಹೀಗಿರಲಿ ಹೂಡಿಕೆ
ವಿವಿಧ ಮ್ಯೂಚುವಲ್ ಫಂಡ್ ವಿಭಾಗಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಲಾರ್ಜ್ ಕ್ಯಾಪ್ ಫಂಡ್, ಮಲ್ಟಿ ಕ್ಯಾಪ್ ಫಂಡ್, ಮಿಡ್ ಕ್ಯಾಪ್ ಫಂಡ್ ಹಾಗೂ ಸ್ಮಾಲ್ ಕ್ಯಾಪ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು.
ಲಾರ್ಜ್ ಕ್ಯಾಪ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು. ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಒಂದೇ ಫಂಡ್‌ನಲ್ಲಿ ಹೂಡಿಕೆ ಮಾಡುವ ಬದಲು 2-3 ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
ನಿಮ್ಮ ಆದಾಯ ಅಥವಾ ಸಂಬಳಕ್ಕೆ ಅನುಗುಣವಾಗಿ 6 ತಿಂಗಳಿಗೆ ಸಮಾನವಾದ ತುರ್ತು ಕಾರ್ಪಸ್ ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಧಿಯನ್ನು ಲಿಕ್ವಿಡ್ ಅಥವಾ ಅಲ್ಟ್ರಾ ಶಾರ್ಟ್ ಮ್ಯೂಚುಯಲ್ ಫಂಡ್‌ಗಳಲ್ಲಿ ಇರಿಸಬಹುದು. ಇದರೊಂದಿಗೆ ನಿಮ್ಮ ಕುಟುಂಬಕ್ಕೆ ಅಗತ್ಯವಿರುವ ವೈದ್ಯಕೀಯ ಹಾಗೂ ಜೀವವಿಮೆಯನ್ನು ತೆಗೆದುಕೊಳ್ಳಬಹುದು. ಇದು ಕೂಡ ಮುಖ್ಯವಾಗುತ್ತದೆ.
ಬೆಳ್ಳಿ ಇಟಿಎಫ್‌ಗಳಿಂದ ಪ್ರಯೋಜನವೇನು?
ಸದ್ಯ ಚಿನ್ನ ಹಾಗೂ ಬೆಳ್ಳಿ ಎರಡೂ ಅಮೂಲ್ಯ ಲೋಹಗಳಾಗಿವೆ. ಇವು ಈಕ್ವಿಟಿ ಹಾಗೂ ಸಾಲದಂತಹ ಇತರ ಆಸ್ತಿ ವರ್ಗಗಳಿಗೆ ಬಹಳ ಕಡಿಮೆ ಸಂಬಂಧವನ್ನು ಹೊಂದಿವೆ. ಬೆಳಿಗ್ಗೆ ಹೆಚ್ಚಿನ ಕೈಗಾರಿಕೆ ಬೇಡಿಕೆ ಇದೆ. ಚಿನ್ನವನ್ನು ಆಭರಣ ಮತ್ತು ಹೂಡಿಕೆಗಳಲ್ಲಿ ಬಳಸಲಾಗುತ್ತದೆ. ಇದು ಉಳಿತಾಯಕ್ಕೆ ಬೆಸ್ಟ್ ಅಂತಲೇ ಹೇಳಬಹುದು. ಅದರಂತೆ ಬೆಲೆಬಾಳುವ ಲೋಹದಗಳ ಮೇಲೆ ಶೇ 5 ರಿಂದ 10 ರಷ್ಟು ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ದ್ರವ್ಯತೆ, ಹೆಚ್ಚಿನ ಬೇಡಿಕೆ, ಕೇಂದ್ರೀಯ ಬ್ಯಾಂಕ್‌ಗಳಿಂದ ಬೇಡಿಕೆಯಂತಹ ವಿವಿಧ ಅಂಶಗಳಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ.
ಚಿನ್ನದ ಹೂಡಿಕೆಗಾಗಿ, ಇಟಿಎಫ್ (ವಿನಿಮಯ ವಹಿವಾಟು ನಿಧಿಗಳು) ಅಥವಾ ಭೌತಿಕ ಮಾರ್ಗಕ್ಕಿಂತ ಹೆಚ್ಚಾಗಿ ಸಾರ್ವಭೌಮ ಚಿನ್ನದ ಬಾಂಡ್‌ಗಳ (ಎಸ್‌ಜಿಬಿ) ಮೂಲಕ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದಾಗಿದೆ.