SIP Investment: ಸಿಪ್‌ ಹೂಡಿಕೆ ಮಾಡುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  Sip Investment: ಸಿಪ್‌ ಹೂಡಿಕೆ ಮಾಡುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

SIP Investment: ಸಿಪ್‌ ಹೂಡಿಕೆ ಮಾಡುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು

ಮೂಚ್ಯುವಲ್‌ ಫಂಡ್‌ ವಿಚಾರಕ್ಕೆ ಬಂದಾಗ ಸಿಪ್‌ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂಬದು ಹಲವರಿಗೆ ತಿಳಿದಿರುವ ವಿಚಾರ. ಆದರೆ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ, ನೀವು ಹಣ ಗಳಿಸುವುದಕ್ಕಿಂತ ಕಳೆದುಕೊಳ್ಳಬಹುದು.

ಸಿಪ್‌ ಹೂಡಿಕೆ
ಸಿಪ್‌ ಹೂಡಿಕೆ

ಇತ್ತೀಚಿನ ದಿನಗಳಲ್ಲಿ ಹೂಡಿಕೆಯ ವಿಚಾರಕ್ಕೆ ಬಂದರೆ ಮೊದಲು ತಲೆಯಲ್ಲಿ ಬರುವುದು ಮ್ಯೂಚುವಲ್‌ ಫಂಡ್‌. ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ಈ ಮ್ಯೂಚುವಲ್‌ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಸಿಸ್ಟಾಮ್ಯಾಟಿಕ್‌ ಇನ್ವೆವಸ್ಟ್‌ ಪ್ಲಾನ್‌ (ಸಿಪ್‌) ಹೆಚ್ಚು ಜನಪ್ರಿಯವಾಗುತ್ತಿದೆ. ಸಿಪ್‌ಗಳು ಹೂಡಿಕೆದಾರರಿಗೆ ದೀರ್ಘಾವಧಿಯವರೆಗೆ ತಮ್ಮ ಹಣವನ್ನು ಸ್ಥಿರವಾಗಿ ಇರಿಸಲು ಹಾಗೂ ಆದಾಯ ಹೆಚ್ಚಲು ಸಹಾಯ ಮಾಡುತ್ತವೆ. ಮಾರುಕಟ್ಟೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ಸಿಪ್‌ಗಳು ಹೂಡಿಕೆದಾರರಿಗೆ ಪ್ರಯೋಜನವನ್ನು ನೀಡುತ್ತವೆ.

ಮಾರುಕಟ್ಟೆಯ ಮೌಲ್ಯ ಕಡಿಮೆಯಾದಾಗ ಹೆಚ್ಚು ನಿವ್ವಳ ಆಸ್ತಿ ಮೌಲ್ಯ ಮತ್ತು ಘಟಕಗಳನ್ನು ಖರೀದಿಸುವಂತೆ ಮಾಡುತ್ತದೆ. ಸಿಪ್‌ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಏನು ಕ್ರಮ ಅನುಸರಿಸಬೇಕು, ಏನು ಮಾಡಬಾರದು ಎಂಬ ವಿವರ ಇಲ್ಲಿದೆ.

ಸಿಪ್‌ನಲ್ಲಿ, ನೀವು ಪ್ರತಿ ಹಣಕಾಸು ಚಕ್ರದಲ್ಲಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತೀರಿ ಮತ್ತು ಅವುಗಳ ಮೂಲಕ ನಿವ್ವಳ ಆಸ್ತಿ ಮೌಲ್ಯಗಳನ್ನು (NAV) ಖರೀದಿಸುತ್ತೀರಿ. ಎನ್‌ಎವಿಯ ಬೆಲೆ ಪ್ರತಿದಿನ ಬದಲಾಗುವುದರಿಂದ, ಹೂಡಿಕೆದಾರರು ವಿವಿಧ ಹಣಕಾಸು ಚಕ್ರಗಳಿಗೆ ವಿವಿಧ ಪ್ರಮಾಣದಲ್ಲಿ ಎನ್‌ಎವಿಗಳನ್ನು ಖರೀದಿಸುತ್ತಾರೆ.

ತಮ್ಮ ಎನ್‌ಎವಿ ಬೆಲೆ ಹೆಚ್ಚಿರುವಾಗ ಮಾರಾಟ ಮಾಡಿದರೆ ಲಾಭವಾಗುತ್ತದೆ. ಅಂತೆಯೇ ಬೆಲೆ ಕಡಿಮೆಯಾದಾಗ ಹೆಚ್ಚಿನ ಎನ್‌ಎವಿಗಳನ್ನು ಖರೀದಿಸಿ ಮಾರಾಟ ಮಾಡುವುದರಿಂದ ಲಾಭ ಗಳಿಸಬಹುದು. ಮಾರುಕಟ್ಟೆಯು ಚೇತರಿಸಿಕೊಂಡ ನಂತರ, ಅವರು ಸಾಮಾನ್ಯ ಸಮಯಕ್ಕಿಂತ ಹೆಚ್ಚಿನ ಎನ್‌ಎವಿಗಳನ್ನು ಹೊಂದಿರುತ್ತಾರೆ ಮತ್ತು ಅವರ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.

ಹಾಗಾದ್ರೆ ಸಿಪ್‌ನಲ್ಲಿ ಹೂಡಿಕೆ ಮಾಡಿದಾಗ ನಷ್ಟ ಉಂಟಾಗಲು ಕಾರಣಗಳೇನು? ಎಂಬುದಕ್ಕೆ ಇಲ್ಲಿದೆ ಉತ್ತರ.

ಅನುಸರಿಸಬೇಕಾದ ಅಭ್ಯಾಸಗಳು

ಫೆಕ್ಸಿಬಿಲಿಟಿ: ಸಿಪ್‌ನ ಮೊದಲ ಪ್ರಯೋಜನವೆಂದರೆ ಹೂಡಿಕೆಯ ಅವಧಿ ಮತ್ತು ಮೊತ್ತಕ್ಕೆ ಸಂಬಂಧಿಸಿದಂತೆ ಸಿಪ್‌ ಮೂಲಕ ಹೂಡಿಕೆಯಲ್ಲಿ ನಮ್ಯತೆ ಇರುತ್ತದೆ. ಅಂದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಹೂಡಿಕೆ ಅವಧಿಯ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಹೊರತಾಗಿ, ನಿಮಗೆ ಬೇಕಾದಾಗ, ನೀವು ನಿಮ್ಮ ಸಿಪ್‌ ಅನ್ನು ನಿಲ್ಲಿಸಬಹುದು ಮತ್ತು ಹಣವನ್ನು ಹಿಂಪಡೆಯಬಹುದು. ನಿಮ್ಮ ಆದಾಯ ಹೆಚ್ಚಾದಂತೆ, ಅದರಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸಬಹುದು.

ಕಂಪೌಂಡಿಂಗ್‌: ಸಿಪ್‌ ಮೂಲಕ ಹೂಡಿಕೆ ಮಾಡುವ ಪ್ರಮುಖ ಪ್ರಯೋಜನವೆಂದರೆ ಅದು ಸಂಯೋಜನೆಯ ಪ್ರಯೋಜನವನ್ನು ನೀಡುತ್ತದೆ, ಅಂದರೆ ನೀವು ಒಟ್ಟಾರೆ ಹೂಡಿಕೆಯ ಮೇಲೆ ಆದಾಯವನ್ನು ಪಡೆಯುತ್ತೀರಿ. ಆದರೆ ಒಂದು ವರ್ಷಕ್ಕೆ ಹೂಡಿಕೆ ಮಾಡಬಾರದು. ಇದರಲ್ಲಿ ದೀರ್ಘಾವಧಿಯ ಹೂಡಿಕೆ ಉತ್ತಮ. ಇದರಿಂದ ಹೆಚ್ಚು ಲಾಭ ಪಡೆಯಬಹುದು.

ರೂಪಾಯಿ ವೆಚ್ಚ ಸರಾಸರಿ: ಸಿಪ್‌ನಲ್ಲಿ, ನೀವು ರೂಪಾಯಿ ವೆಚ್ಚದ ಸರಾಸರಿ ಲಾಭವನ್ನು ಪಡೆಯುತ್ತೀರಿ. ಅಂದರೆ, ಮಾರುಕಟ್ಟೆಯು ಕುಸಿತದಲ್ಲಿದ್ದರೆ ಮತ್ತು ನೀವು ಹಣವನ್ನು ಹೂಡಿಕೆ ಮಾಡಿದ್ದರೆ, ನಿಮಗೆ ಹೆಚ್ಚಿನ ಎನ್‌ವಿಎಗಳನ್ನು ಹಂಚಿಕೆ ಮಾಡಲಾಗುತ್ತದೆ. ಮಾರುಕಟ್ಟೆಯು ಏರುತ್ತಿದ್ದರೆ, ಹಂಚಿಕೆಯಾದ ಘಟಕಗಳ ಸಂಖ್ಯೆಯು ಕಡಿಮೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆಯ ಏರಿಳಿತಗಳ ಸಂದರ್ಭದಲ್ಲಿಯೂ ನಿಮ್ಮ ವೆಚ್ಚಗಳು ಸರಾಸರಿಯಾಗಿ ಉಳಿಯುತ್ತವೆ. ಅಂದರೆ ಮಾರುಕಟ್ಟೆ ಕುಸಿದರೂ ನೀವು ನಷ್ಟವನ್ನು ಅನುಭವಿಸುವುದಿಲ್ಲ. ಮಾರುಕಟ್ಟೆಯು ಏರಿದಾಗ, ನಿಮ್ಮ ಸರಾಸರಿ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ಪಡೆಯುವ ಅವಕಾಶವನ್ನು ಪಡೆಯುತ್ತೀರಿ.

ಶಿಸ್ತುಬದ್ಧ ಹೂಡಿಕೆ: ಸಿಪ್‌ ಮೂಲಕ, ನೀವು ನಿಗದಿತ ಅವಧಿಗೆ ಉಳಿಸಲು ಕಲಿಯುತ್ತೀರಿ. ಅಂದರೆ, ನೀವು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಹೂಡಿಕೆ ಮಾಡಬೇಕಾದ ಯಾವುದೇ ಹಣವನ್ನು ನೀವು ಉಳಿಸಿ, ನಂತರ ನಿಮ್ಮಲ್ಲಿ ಉಳಿದ ಹಣವನ್ನು ಖರ್ಚು ಮಾಡುತ್ತೀರಿ. ಈ ರೀತಿಯಾಗಿ, ನೀವು ಶಿಸ್ತುಬದ್ಧ ಹೂಡಿಕೆಯ ಅಭ್ಯಾಸವನ್ನು ರೂಢಿಸಿಕೊಳ್ಳುತ್ತೀರಿ.

ಈ 5 ತಪ್ಪುಗಳನ್ನು ಎಂದಿಗೂ ಮಾಡದಿರಿ

1. ಸಿಪ್‌ ಅನ್ನು ಪ್ರಾರಂಭಿಸಿದಾಗ ಸರಿಯಾದ ಮಾರ್ಗದರ್ಶನ ಪಡೆಯುವುದು ಮುಖ್ಯವಾಗುತ್ತದೆ. ನಾವು ಹೂಡಿಕೆ ಮಾಡುವುದು ದೀರ್ಘಾವಧಿಯವರೆಗೆ ಲಾಭ ನೀಡಬೇಕು ಎಂಬ ಮನೋಭಾವ ನಮ್ಮಲ್ಲಿ ಇರಬೇಕು. ಹಾಗಾಗಿ ಈ ಬಗ್ಗೆ ತಜ್ಞರು ಅಭಿಪ್ರಾಯ ಪಡೆಯುವುದು ಉತ್ತಮ.

2. ಕೆಲವೊಮ್ಮೆ, ಮ್ಯೂಚುಯಲ್ ಫಂಡ್ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ಹೂಡಿಕೆದಾರರು ತಮ್ಮ ಸಿಪ್‌ಗಳನ್ನು ನಿಲ್ಲಿಸುತ್ತಾರೆ, ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಾರೆ ಅಥವಾ ಹೊಸ ನಿಧಿಗೆ ಬದಲಾಯಿಸುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಸಿಪ್‌ ಅನ್ನು ಮಧ್ಯಕ್ಕೆ ನಿಲ್ಲಿಸುವುದು ಪರಿಹಾರವಲ್ಲ. ರೂಪಾಯಿ ವೆಚ್ಚದ ಸರಾಸರಿಯು ದೀರ್ಘಾವಧಿಯಲ್ಲಿ ನಷ್ಟವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಅವರ ನಿಧಿಯ ಕಾರ್ಯಕ್ಷಮತೆಯ ಕುಸಿತದ ಬಗ್ಗೆ ಒಬ್ಬರು ಭಯಪಡುವ ಅಗತ್ಯವಿಲ್ಲ.

3. ಕೆಲವರು ಅಲ್ಪಾವಧಿಗೆ ದೊಡ್ಡ ಹೂಡಿಕೆ ಮಾಡುತ್ತಾರೆ. ಅದನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಇದು ಉತ್ತಮ ಕ್ರಮವಲ್ಲ. ಕಡಿಮೆ ಅಥವಾ ಜಾಸ್ತಿ ಮೊತ್ತವಾದರೂ ದೀರ್ಘವಧಿಯವರೆಗೆ ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ದೊಡ್ಡ ಪ್ರಮಾಣದ ಹಣ ಇಲ್ಲ ಎಂದರೂ ಸಹ, ಸಿಪ್‌ಗಳ ಮೂಲಕ ಪ್ರತಿ ಚಕ್ರದಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಪ್ರಯತ್ನಿಸಿ. ಇದನ್ನು ದೀರ್ಘಾವಧಿಯವರೆಗೆ ಇರಿಸಿ.

4. ಮಾರುಕಟ್ಟೆಯು ಹಿಂಜರಿತ ಅಥವಾ ತಾತ್ಕಾಲಿಕ ಕುಸಿತಕ್ಕೆ ಭಯಪಡಬೇಡಿ. ದೀರ್ಘಕಾಲೀನ ತಂತ್ರದ ಬಗ್ಗೆ ಯೋಚಿಸಿ ಮತ್ತು ಮಾರುಕಟ್ಟೆಯ ಏರಿಳಿತಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

5. ಹಲವು ನಿಧಿಗಳ ಮೇಲೆ ಇನ್ವೆಸ್ಟ್‌ ಮಾಡಿ. ಒಂದಕ್ಕೆ ಸೀಮಿತರಾಗಬೇಡಿ.

Whats_app_banner