Paytm FASTag: ಮಾರ್ಚ್ 15ಕ್ಕೆ ಪೇಟಿಎಂ ಫಾಸ್ಟ್ಯಾಗ್ ಸ್ಥಗಿತ; ನಿಮ್ಮ ಖಾತೆಯ ಸ್ಟೇಟಸ್ ಹೀಗೆ ಪರಿಶೀಲಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Paytm Fastag: ಮಾರ್ಚ್ 15ಕ್ಕೆ ಪೇಟಿಎಂ ಫಾಸ್ಟ್ಯಾಗ್ ಸ್ಥಗಿತ; ನಿಮ್ಮ ಖಾತೆಯ ಸ್ಟೇಟಸ್ ಹೀಗೆ ಪರಿಶೀಲಿಸಿಕೊಳ್ಳಿ

Paytm FASTag: ಮಾರ್ಚ್ 15ಕ್ಕೆ ಪೇಟಿಎಂ ಫಾಸ್ಟ್ಯಾಗ್ ಸ್ಥಗಿತ; ನಿಮ್ಮ ಖಾತೆಯ ಸ್ಟೇಟಸ್ ಹೀಗೆ ಪರಿಶೀಲಿಸಿಕೊಳ್ಳಿ

ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಇಂದು (ಮಾರ್ಚ್ 15) ಸಂಜೆಯೊಳಗೆ ತಮ್ಮ ಖಾತೆಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಳ್ಳಬೇಕು. ಅಧಿಕೃತ ವಿತರಕರಿಂದ ಹೊಸ ಫಾಸ್ಟ್ಯಾಗ್ ಪಡೆಯಬೇಕೆಂದು ಎನ್ಎಚ್ಎಐ ಹೇಳಿದೆ.

ಮಾರ್ಚ್ 15 ಕ್ಕೆ ಮೊದಲವೇ ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಪೇಟಿಎಂನಿಂದ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.
ಮಾರ್ಚ್ 15 ಕ್ಕೆ ಮೊದಲವೇ ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಪೇಟಿಎಂನಿಂದ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.

ದೆಹಲಿ: ಇಂದು (ಮಾರ್ಚ್ 15, ಶುಕ್ರವಾರ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಪಾವತಿಗಳು ಸಂಪೂರ್ಣವಾಗಿ ಸ್ಥಗಿತಗೆೊಳ್ಳಲಿವೆ. ನೀವೇನಾದರೂ ಪೇಟಿಎಂ ಫಾಸ್ಟ್ಯಾಗ್ ಹೊಂದಿದ್ದರೆ, ಇವತ್ತು ಸಂಜೆಯೊಳಗೆ ಬೇರೊಂದು ಖಾತೆೆಗೆ ನಿಮ್ಮ ಪಾಸ್ಟ್ಯಾಗ್ (FASTag) ಅನ್ನು ವರ್ಗಾಯಿಸಿಕೊಳ್ಳಬೇಕು. ಇಲ್ಲದೆ, ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ದುಪ್ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಹೊಸ ಗ್ರಾಹಕರನ್ನು ಹೊಂದದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಷೇಧಿಸಿದ್ದು, ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಕಾರ್ಡ್‌ಗಳು, ಪೇಟಿಎಂ ವ್ಯಾಲೆಟ್‌ಗಳು, ಫಾಸ್ಟ್ಯಾಗ್‌ಗಳು, ಕ್ರೆಡಿಟ್ ವಹಿವಾಟು, ಟಾಪ್-ಅಪ್‌ಗಳನ್ನು ಸ್ವೀಕರಿಸುವುದಿಲ್ಲ. ಇದರರ್ಥ ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 15 ರೊಳಗೆ ತಮ್ಮ ಖಾತೆಯನ್ನು ಮುಚ್ಚಬೇಕಾಗುತ್ತದೆ. ಎನ್ಎಚ್ಎಐ ಅಧಿಕೃತ ವಿತರಕರಿಂದ ಹೊಸ ಫಾಸ್ಟ್ಯಾಗ್‌ ಪಡೆಯಬೇಕಾಗುತ್ತದೆ.

ಫಾಸ್ಟ್ಯಾಗ್‌ಗೆ ಪೇಟಿಎಂ ಅಮಾನ್ಯ: ನೀವು ಬಳಸಬಹುದಾದ 32 ಅಧಿಕೃತ ಬ್ಯಾಂಕುಗಳು ಇವೇ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) "ತಡೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆಯನ್ನು ತಪ್ಪಿಸಲು 2024ರ ಮಾರ್ಚ್ 15 ರೊಳಗೆ ಪೇಟಿಎಂ ಫಾಸ್ಟ್ಯಾಗ್‌ಗಳನ್ನು ಹೊಂದಿರುವ ಗ್ರಾಹಕರು ಮತ್ತೊಂದು ಬ್ಯಾಂಕ್‌ನಲ್ಲಿ ಹೊಸ ಫಾಸ್ಟ್ಯಾಗ್‌ಗಳನ್ನು ಖರೀದಿಸಬೇಕೆಂದು ಎನ್‌ಎಚ್‌ಎಐ ಸಲಹೆ ನೀಡಿದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಯಾವುದೇ ದುಪ್ಪಟ್ಟು ಶುಲ್ಕಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಪೇಟಿಎಂ ಫಾಸ್ಟ್ಯಾಗ್‌ ಬಳಕೆದಾರರು 2024ರ ಮಾರ್ಚ್ 15 ರ ನಂತರ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಲು ಅಥವಾ ಟಾಪ್-ಅಪ್ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈಗಾಗಲೇ ಉಳಿದಿರು ಬ್ಯಾಲೆನ್ಸ್ ಅನ್ನು ನಿಗದಿತ ದಿನಾಂಕದ ನಂತರ ಟೋಲ್ ಪಾವತಿಗಳಲ್ಲಿ ಬಳಸಬಹುದು.

ಪೇಟಿಎಂ ಫಾಸ್ಟ್ಯಾಗ್‌ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

  1. ಪೇಟಿಎಂ ಟೋಲ್ ಫ್ರೀ ಸಂಖ್ಯೆ: 1800-120-4210 ಗೆ ಕರೆ ಮಾಡಿ ಮತ್ತು ವಾಹನ ನೋಂದಣಿ ಸಂಖ್ಯೆ (ವಿಆರ್‌ಎನ್) ಅಥವಾ ಟ್ಯಾಗ್ ಐಡಿಯೊಂದಿಗೆ ಟ್ಯಾಗ್‌ಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  2. ಫಾಸ್ಟ್ಯಾಗ್‌ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಪೇಟಿಎಂ ಪೇಮೆಂಟ್ ಬ್ಯಾಂಕ್‌ಗಳ ಗ್ರಾಹಕ ಬೆಂಬಲ ಏಜೆಂಟ್ ನಿಮ್ಮನ್ನು ಸಂಪರ್ಕಿಸುತ್ತಾರೆ.

ಎನ್ಇಟಿಸಿ ಫಾಸ್ಟ್ಯಾಗ್ ಸ್ಥಿತಿ ಪರಿಶೀಲಿಸುವುದು ಹೇಗೆ

  1. ಲಿಂಕ್‌ಗೆ ಭೇಟಿ ನೀಡಿ: https://www.npci.org.in/what-we-do/netc-fastag/check-your-netc-fastag-status
  2. 'ಫಾಸ್ಟ್ಯಾಗ್ ಐಡಿ ಅಥವಾ ವಾಹನ ಹಾಗೂ ಕ್ಯಾಪ್ಚಾ ನಮೂದಿಸಿ ಸರ್ಚ್ ಮಾಡಿ.
  3. 'ಚೆಕ್ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ನೀವಿನ್ನೂ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಿಲ್ವಾ, ಜ 31 ಕೊನೇ ದಿನ; ಇಂದೇ ಮಾಡೋದು ಮರಿಬೇಡಿ

ಪೇಟಿಎಂ ಫಾಸ್ಟ್ಯಾಗ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ?

ನಿಮ್ಮ ಫಾಸ್ಟ್ಯಾಗ್ ಸಬ್ ವ್ಯಾಲೆಟ್‌ ವಿಭಾಗದ ಮ್ಯಾನೇಜ್ ಟ್ಯಾಗ್‌ನಲ್ಲಿ ಪರಿಶೀಲಿಸಬಹುದು.

ಆನ್‌ಲೈನ್‌ನಲ್ಲಿ ಪಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?

  1. ನಿಮ್ಮ ವಾಹನದ ಫಾಸ್ಟ್ಯಾಹ್ ವಿತರಕರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ನಿಮ್ಮ ಫಾಸ್ಟ್ಯಾಗ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವ ಆಯ್ಕೆಯನ್ನು ನೋಡಿ
  3. ಹಿಂದಿನ ಪಾವತಿಗಳ ಬಗ್ಗೆ ಇನ್ನಷ್ಟು ತಿಳಿಯಲು ನೀವು ಫಾಸ್ಟ್ಯಾಗ್ ಖಾತೆ ಹೇಳಿಕೆಯನ್ನು ವೀಕ್ಷಿಸಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner