Money Tips: ನಿಮ್ಮ ಹೆಚ್ಚುವರಿ ಹಣವನ್ನು ಹೆಮ್ಮರವಾಗಿ ಬೆಳೆಸಿ, ಈ 3 ಆಯ್ಕೆಗಳ ಮೂಲಕ ಶ್ರೀಮಂತರಾಗಲು ಪ್ರಯತ್ನಿಸಿ
Grow your surplus money: ನಿಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ ಆ ಹಣವನ್ನು ಬೆಳೆಸಬಹುದು. ಮನೆಯ ತಿಜೋರಿಯಲ್ಲಿ ಇಡುವ ಬದಲು ಹಣವನ್ನು ಈ ಮೂರು ಆಯ್ಕೆಗಳ ಮೂಲಕ ಇಟ್ಟರೆ ಒಳ್ಳೆಯ ಲಾಭ ಪಡೆಯಬಹುದು.
ಕಷ್ಟಪಟ್ಟು ಗಳಿಸಿದ ಹಣದಲ್ಲಿ ಪ್ರತಿನಿತ್ಯದ ಖರ್ಚುವೆಚ್ಚಗಳು ಕಳೆದು ಒಂದಿಷ್ಟು ಹಣ ಉಳಿತಾಯವಾಗುತ್ತದೆ. ಮಿಗುತೆ ಹಣ ಎಂದು ಇದನ್ನು ಕರೆಯಲಾಗುತ್ತದೆ. ಈ ರೀತಿ ಹೆಚ್ಚುವರಿ ಹಣವು ಬ್ಯಾಂಕ್ ಖಾತೆಯಲ್ಲಿ ಇದ್ದರೆ ಲಾಭ ಕಡಿಮೆ. ಇದನ್ನುಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು. ಕೆಲವರು ಹೆಚ್ಚುವರಿ ಹಣವನ್ನು ಮನೆಯ ತಿಜೋರಿಯಲ್ಲಿ ಇಡುತ್ತಾರೆ. ಈ ರೀತಿ ಇಟ್ಟರೆ ಆ ಹಣ ಮರಿ ಹಾಕುವುದಿಲ್ಲ. ಇದರ ಬದಲು ಬಡ್ಡಿ ದೊರಕುವಂತಹ ಯಾವುದಾದರೂ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಹೆಚ್ಚುವರಿ ಹಣವನ್ನು ಕೆಲವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆದರೆ, ಬಹುತೇಕರಿಗೆ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಷ್ಟವಿರುವುದಿಲ್ಲ. ಅಂತಹ ಜನರು ಇತರೆ ಆಯ್ಕೆಗಳನ್ನು ಪರಿಶೀಲಿಸಬಹುದು. ಷೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಕೂಡ ಉತ್ತಮ ಆಯ್ಕೆ. ಇವುಗಳ ಕುರಿತು ಕೊಂಚ ಜ್ಞಾನ ಹೊಂದಿರುವುದು ಅಗತ್ಯ.
ಅತ್ಯಲ್ಪ ಪ್ರಮಾಣದಿಂದ ಆರಂಭಿಸಿ
ಷೇರುಪೇಟೆ ಅಥವಾ ಮ್ಯೂಚುಯಲ್ ಫಂಡ್ ಕುರಿತು ಎಷ್ಟು ಓದಿದರೂ ಸರಿಯಾಗಿ ಅರ್ಥವಾಗದು. ಇದರ ಬದಲು ಅತ್ಯಲ್ಪ ಮೊತ್ತವನ್ನು ಷೇರು ಪೇಟೆ ಅಥವಾ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಕಲಿಯುತ್ತ ಬನ್ನಿ.
ಫಂಡ್ ಹೆಸರು | 10- ವರ್ಷದ ರಿಟರ್ನ್ (%) | ತಿಂಗಳ ಹೂಡಿಕೆ (ರೂಪಾಯಿಗಳಲ್ಲಿ) | ಅಂದಾಜು ಗಳಿಕೆ (ರೂಗಳಲ್ಲಿ) | ದೊರಕುವ ರಿಟರ್ನ್ (ರೂಗಳಲ್ಲಿ) |
ಯುಟಿಐ ನಿಫ್ಟಿ ಇಂಡೆಕ್ಸ್ ಫಂಡ್ | 14.15 | 10,000 | 14,45,004 | 26,45,004 |
ಎಚ್‌ಡಿಎಫ್‌ಸಿ ಇಂಡೆಕ್ಸ್ ಫಂಡ್- ಬಿಎಸ್‌ಇ ಸೆನ್ಸೆಕ್ಸ್ ಪ್ಲಾನ್ | 14.23 | 10,000 | 14,57,960 | 26,57,960 |
ಫ್ರಾಂಕ್ಲಿನ್ ಇಂಡಿಯಾ (NSE Nifty 50 Index Fund ) | 13.66 | 10,000 | 13,67,266 | 25,67,266 |
ಸುಂದರಂ ( Nifty 100 Equal Weight Fund) | 12.46 | 10,000 | 11,88,086 | 23,88,086 |
ಮೂಲ MoneyControl (Data as on August 02, 2023) |
ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ (ಬಿಎಎಫ್)
ಪರ್ಯಾಯವಾಗಿ ನೀವು ನಿಮ್ಮ ಹಣವನ್ನು ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ (ಬಿಎಎಫ್) ನಲ್ಲಿ ಇಡಬಹುದು. ಅಥವಾ ಡೈನಾಮಿಕ್ ಅಸೆಟ್ ಅಲೋಕೇಷನ್ ಫಂಡ್‌ನಲ್ಲಿ ಇಡಬಹುದು. ರಿಸ್ಕ್ ಮತ್ತು ರಿಟರ್ನ್ ನಡುವೆ ಸಮತೋಲನ ಹೊಂದಿರುವಂತೆ ಈ ಫಂಡ್‌ಗಳನ್ನು ವಿನ್ಯಾಸ ಮಾಡಲಾಗಿರುತ್ತದೆ. ಮಾರುಕಟ್ಟೆಯ ಚಂಚಲತೆಯ ಅವಧಿಯಲ್ಲಿ, ಬಿಎಎಫ್‌ಗಳು ತುಲನಾತ್ಮಕವಾಗಿ ಸುರಕ್ಷಿತ ಆಸ್ತಿ ವರ್ಗವಾದ ಸಾಲಕ್ಕೆ ಹೆಚ್ಚಿನ ಹಣವನ್ನು ನಿಯೋಜಿಸಲು ಒಲವು ತೋರುತ್ತವೆ. ಮಾರುಕಟ್ಟೆಯು ಕುಸಿತವನ್ನು ಅನುಭವಿಸಿದಾಗ ಹೂಡಿಕೆದಾರರ ಬಂಡವಾಳವನ್ನು ರಕ್ಷಿಸಲು ಇದು ನೆರವಾಗುತ್ತದೆ. ಎಲ್ಲಾದರೂ ಮಾರುಕಟ್ಟೆಯು ಹೆಚ್ಚು ಸ್ಥಿರವಾಗಿರುವ ಸಂದರ್ಭದಲ್ಲಿ ಬಿಎಎಫ್‌ಗಳು ತಮ್ಮ ಈಕ್ವಿಟಿಗೆ ಮಾನ್ಯತೆ ಹೆಚ್ಚಿಸುತ್ತವೆ. ಇದು ಹೆಚ್ಚಿನ ಆದಾಯ ನೀಡುವ ಸಾಮರ್ಥ್ಯ ಹೊಂದಿದೆ. ಈ ರೀತಿ ಹೊಂದಾಣಿಕೆಯ ಆಸ್ತಿ ಹಂಚಿಕೆ ಮೂಲಕ ಬಿಎಎಫ್‌ಗಳು ಹೂಡಿಕೆದಾರರಿಗೆ ಆಕರ್ಷಕವಾದ ಆಯ್ಕೆಯಾಗಿದೆ.
ಬಿಎಎಫ್‌ನಲ್ಲಿ ದೀರ್ಘವಾದ ಹೂಡಿಕೆಯು ನಿಮಗೆ ಆದಾಯ ಗಳಿಸಲು ಹೇಗೆ ನೆರವಾಗುತ್ತದೆ ಎಂದು ಕೆಳಗಿನ ಕೋಷ್ಟಕದಿಂದ ಕಂಡುಕೊಳ್ಳಬಹುದು.
ಫಂಡ್ ಹೆಸರು | 10- ವರ್ಷದ ರಿಟರ್ನ್ | ತಿಂಗಳ ಹೂಡಿಕೆ | ಅಂದಾಜು ರಿಟರ್ನ್ ರೂಗಳಲ್ಲಿ | ಒಟ್ಟು ರಿಟರ್ನ್ ಮೌಲ್ಯ |
ಎಚ್‌ಡಿಎಫ್‌ಸಿ ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ | 17.03 | 10,000 | 19,62,320 | 31,62,320 |
ಐಸಿಐಸಿಐ ಪ್ರುಡೆನ್ಷಿಯಲ್ ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ | 14.03 | 10,000 | 14,25,711 | 26,25,711 |
ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ | 13.07 | 10,000 | 12,77,236 | 24,77,236 |
ಎಚ್‌ಎಸ್‌ಬಿಸಿ ಬ್ಯಾಲೆನ್ಸಡ್ ಅಡ್ವಂಟೇಜ್ ಫಂಡ್ | 13.04 | 10,000 | 12,72,760 | 24,72,760 |
ಮೂಲ: ಮನಿ ಕಂಟ್ರೋಲ್( ಆಗಸ್ಟ್ 2ರ ಅಂಕಿಅಂಶ) |
ಚಿನ್ನದ ಮೇಲೆ ಹೂಡಿಕೆ
ಚಿನ್ನದ ಮೇಲಿನ ಹೂಡಿಕೆ ಕುರಿತು ಸಾಕಷ್ಟು ಜನರು ಯೋಚನೆ ಮಾಡುತ್ತಾರೆ. ಚಿನ್ನಕ್ಕಿಂತ ಈಕ್ವಿಟಿ ಷೇರುಗಳಲ್ಲಿ ಹೆಚ್ಚು ಲಾಭ ಬರುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಈಕ್ವಿಟಿ ಹೂಡಿಕೆ ರಿಸ್ಕ್ ಜಾಸ್ತಿ ಎಂದು ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಜನರು ಆದ್ಯತೆ ನೀಡುತ್ತಾರೆ. ನಿಮ್ಮ ಕೊಂಚ ಹಣವನ್ನು ಸಾವರಿನ್ ಗೋಲ್ಡ್ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು. ಆದರೆ, ಇನ್ನಷ್ಟು ಆದಾಯ ಬಯಸಿದರೆ ನೀವು ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ ಅಥವಾ ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್‌ಗಳು ಈಗ ಫಿಸಿಕಲ್ ಗೋಲ್ಡ್‌ಗಿಂತ ಹೆಚ್ಚು ಅಚ್ಚುಮೆಚ್ಚಿನ ಆಯ್ಕೆಯಾಗುತ್ತಿದೆ.
ಎಫ್ ಡಿ ಹೂಡಿಕೆ
ಹೈ ಎಲ್ಡ್ ಫಿಕ್ಸೆಡ್ ಡೆಪೊಸಿಟ್‌ಗಳಲ್ಲಿಯೂ ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಪಡೆಯಬಹುದು. ಆದರೆ, ಹೈ ಎಲ್ಡ್ಸ್ ಹೂಡಿಕೆ ಮೇಲೆ ಬರುವ ಲಾಭವು ಆರ್‌ಬಿಐ ನಿರ್ಧಾರವನ್ನು ಅವಲಂಬಿಸಿರುತ್ತದೆ. ಆರ್‌ಬಿಐಯು ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಮಾಡುತ್ತ ಇರುತ್ತದೆ.
ಒಂದಿಷ್ಟು ರಿಟರ್ನ್ ತಂದುಕೊಂಡಲು ಗವರ್ನ್‌ಮೆಂಟ್ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು. ಈಗ ಸರಕಾರಿ ಬಾಂಡ್‌ಗಳನ್ನು ಯಾರು ಬೇಕಾದರೂ ಖರೀದಿಸಬಹುದು.