Post Office: ಅಂಚೆ ಇಲಾಖೆಯ ಈ ಸ್ಕೀಮ್‌ನಲ್ಲಿ ಹಣಹಾಕಿ; ಪ್ರತಿ ತಿಂಗಳು ಕಿಸೆತುಂಬಾ ಆದಾಯ ಪಡೆಯಿರಿ, ಲಾಭ ಹೆಚ್ಚಿಸಲು ಇಲ್ಲಿದೆ ಟ್ರಿಕ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Post Office: ಅಂಚೆ ಇಲಾಖೆಯ ಈ ಸ್ಕೀಮ್‌ನಲ್ಲಿ ಹಣಹಾಕಿ; ಪ್ರತಿ ತಿಂಗಳು ಕಿಸೆತುಂಬಾ ಆದಾಯ ಪಡೆಯಿರಿ, ಲಾಭ ಹೆಚ್ಚಿಸಲು ಇಲ್ಲಿದೆ ಟ್ರಿಕ್ಸ್‌

Post Office: ಅಂಚೆ ಇಲಾಖೆಯ ಈ ಸ್ಕೀಮ್‌ನಲ್ಲಿ ಹಣಹಾಕಿ; ಪ್ರತಿ ತಿಂಗಳು ಕಿಸೆತುಂಬಾ ಆದಾಯ ಪಡೆಯಿರಿ, ಲಾಭ ಹೆಚ್ಚಿಸಲು ಇಲ್ಲಿದೆ ಟ್ರಿಕ್ಸ್‌

Post Office Monthly Income Scheme: ಪ್ರತಿತಿಂಗಳು ನಿಶ್ಚಿತ ಆದಾಯ ಪಡೆಯಲು ಬಯಸುವವರಿಗೆ ಅನುಕೂಲವಾಗುವಂತೆ ಭಾರತದ ಅಂಚೆ ಇಲಾಖೆಯು ಮಾಸಿಕ ಆದಾಯ ಯೋಜನೆ ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ದೊರಕುವ ಬಡ್ಡಿದರ, ಪಡೆಯುವ ಆದಾಯದ ಲೆಕ್ಕಾಚಾರ ವಿವರ ಇಲ್ಲಿದೆ.

POMIS Scheme: ಅಂಚೆ ಇಲಾಖೆಯ ಈ ಸ್ಕೀಮ್‌ನಲ್ಲಿ ಹಣಹಾಕಿ; ಪ್ರತಿ ತಿಂಗಳು ಹಣ ಪಡೆಯಿರಿ
POMIS Scheme: ಅಂಚೆ ಇಲಾಖೆಯ ಈ ಸ್ಕೀಮ್‌ನಲ್ಲಿ ಹಣಹಾಕಿ; ಪ್ರತಿ ತಿಂಗಳು ಹಣ ಪಡೆಯಿರಿ (Image by vectorjuice on Freepik)

Post Office monthly income scheme calculator: ಪ್ರತಿತಿಂಗಳು ಆಫೀಸ್‌ನ ವೇತನ ಅಥವಾ ಉದ್ಯಮದಲ್ಲಿ ಪಡೆಯುವ ಲಾಭ ಮಾತ್ರವಲ್ಲದೆ ಹೆಚ್ಚುವರಿ ಆದಾಯ ದೊರಕುವುದಾದರೆ ಯಾರಿಗೆ ತಾನೇ ಬೇಡ. ಈ ರೀತಿ ಪ್ಯಾಸಿವ್‌ ಆದಾಯ ಗಳಿಕೆಯು ಕೇವಲ ನಿಮ್ಮ ತಿಂಗಳ ಖರ್ಚು ವೆಚ್ಚಗಳಿಗೆ ಮಾತ್ರ ಬೆಂಬಲ ನೀಡುವುದಲ್ಲ. ಎಲ್ಲಾದರೂ ಕಷ್ಟ ಬಂದಾಗ ಈ ಹಣವು ನಿಮ್ಮ ನೆರವಿಗೆ ಬರುತ್ತದೆ. ಉದ್ಯೋಗ ಇಲ್ಲದೆ ಇದ್ದಾಗಲೂ ತಿಂಗಳ ಖರ್ಚು ವೆಚ್ಚ ಈಡೇರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ನಾವಿಂದು ಇಲ್ಲಿ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆ ಅಥವಾ Post Office Monthly Income Scheme ಕುರಿತು ಹೆಚ್ಚಿನ ವಿವರ ನೀಡುತ್ತಿದ್ದೇವೆ.

ಏನಿದು ಅಂಚೆ ಕಚೇರಿ ಆದಾಯ ಯೋಜನೆ

ಹಣಕಾಸು ಇಲಾಖೆಯ ಬೆಂಬಲದೊಂದಿಗೆ ಅಂಚೆ ಇಲಾಖೆಯು ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಂ ಸ್ಕೀಮ್‌ ಪರಿಚಯಿದೆ. ಇದು ಕಡಿಮೆ ಅಪಾಯದ ಎಂಐಎಸ್‌ ಅಥವಾ ಮಾಸಿಕ ಆದಾಯ ಯೋಜನೆಯಾಗಿದೆ. ಇದು ಸ್ಥಿರವಾದ ಆದಾಯವನ್ನು ಪಡೆಯಲು ನೆರವಾಗುತ್ತದೆ.

ತಿಂಗಳಿಗೆ 5,550 ಆದಾಯ ಪಡೆಯಿರಿ

ನೀವು ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಅಥವಾ ಒಬ್ಬಂಟಿಯಾಗಿ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿಯಾಗಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಇದು 5 ವರ್ಷ ಕಾಲದ ಹೂಡಿಕೆಯಾಗಿದೆ. ಈ ಹೂಡಿಕೆ ಮಾಡಿದ ಮೊತ್ತಕ್ಕೆ ಪ್ರತಿವರ್ಷ (ಈಗಿನ ಲೆಕ್ಕದಂತೆ ಶೇಕಡ 7.40) ಬಡ್ಡಿದರ ಇರುತ್ತದೆ. ಆ ಬಡ್ಡಿ ಮೊತ್ತವನ್ನು ಪ್ರತಿತಿಂಗಳ ಕೆಕ್ಕದಲ್ಲಿ ಪಡೆಯಬಹುದು. ಉದಾಹರಣೆಗೆ ನೀವು ಒಬ್ಬಂಟಿಯಾಗಿ ತಿಂಗಳಿಗೆ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೀರಿ ಎಂದಿರಲಿ. ಐದು ವರ್ಷದ ಈ ಯೋಜನೆಯಲ್ಲಿ ಶೇಕಡ 7.40 ವಾರ್ಷಿಕ ಬಡ್ಡಿದರದಲ್ಲಿ ನಿಮಗೆ ತಿಂಗಳಿಗೆ 5,550 ರೂಪಾಯಿ ಬಡ್ಡಿ ಆದಾಯ ದೊರಕುತ್ತದೆ. ನೀವು ಈ ರೀತಿ ತಿಂಗಳ ಬಡ್ಡಿದರ ಪಡೆಯದೆ ಇದ್ದರೆ ಐದು ವರ್ಷ ಕಳೆದ ಬಳಿಕ ಈ ಒಟ್ಟು ಬಡ್ಡಿದರದ ಮೊತ್ತದ ಜತೆ ನೀವು ಹೂಡಿಕೆ ಮಾಡಿರುವ 9 ಲಕ್ಷ ರೂಪಾಯಿಯನ್ನು ಅಂಚೆ ಕಚೇರಿ ಮೂಲಕ ನಿಮ್ಮ ಉಳಿತಾಯ ಖಾತೆಗೆ ಎಲೆಕ್ಟ್ರಾನಿಕ್‌ ಕ್ಲಿಯರೆನ್ಸ್‌ ಸರ್ವೀಸ್‌ ಮೂಲಕ ವರ್ಗಾವಣೆ ಮಾಡಿಕೊಳ್ಳಬಹುದು. ಐದು ವರ್ಷದ ಬಳಿಕ ಈ ಖಾತೆಯನ್ನು ನವೀಕರಣ ಮಾಡಿಕೊಳ್ಳಲು ಅವಕಾಶವಿದೆ. ಅಂದರೆ, ಹೂಡಿಕೆ ಮೊತ್ತವನ್ನು ತೆಗೆಯದೆ ಬಡ್ಡಿ ಆದಾಯ ಪಡೆಯುವುದನ್ನು ಮುಂದುವರೆಸಬಹುದು.

ತಿಂಗಳಿಗೆ 9250 ಆದಾಯ ಪಡೆಯಿರಿ

ನೀವು ಜಂಟಿಯಾಗಿ ಹೂಡಿಕೆ ಮಾಡಿದರೆ ಒಂದು ಬಾರಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ವಾರ್ಷಿಕ ಬಡ್ಡಿದರ ಶೇಕಡ 7.4 ಇದೆ. ಹೂಡಿಕೆ ಅವಧಿ 5 ವರ್ಷ. ಮಾಸಿಕ ಆದಾಯ ಗಳಿಕೆ 9,250 ರೂಪಾಯಿ ಆಗಿರುತ್ತದೆ. ಹದಿನೈದು ಲಕ್ಷ ರೂಪಾಯಿ ಹೂಡಿಕೆ ಮಾಡಿರುವ ನಿಮಗೆ ಐದು ವರ್ಷ ಕಳೆದಾಗ ಒಟ್ಟು 5,55,000 ಬಡ್ಡಿದರ ಆದಾಯ ದೊರಕುತ್ತದೆ.

ಹೆಚ್ಚು ಆದಾಯ ಗಳಿಕೆಗೆ ಸಲಹೆ

ಪ್ರತಿತಿಂಗಳು ಪಡೆಯುವ ಈ ಆದಾಯವನ್ನು ಖರ್ಚು ಮಾಡದೆ ಮರು ಹೂಡಿಕೆ ಮಾಡಬಹುದು. ಈ ರೀತಿ ತಿಂಗಳ ಗಳಿಕೆಯನ್ನು ಅಂಚೆ ಕಚೇರಿಯಲ್ಲಿ ಆರ್‌ಡಿ ಖಾತೆಗೆ ಹಾಕಿರಿ. ಆರ್‌ಡಿ ಖಾತೆಗೆ ಹಣ ಹಾಕಲು ಕನಿಷ್ಠ ಮೊತ್ತ 100 ರೂಪಾಯಿ. ಗರಿಷ್ಠ ಎಷ್ಟು ಬೇಕಾದರೂ ಹಾಕಬಹುದು. ನೀವು ನಿಮ್ಮ ಮಾಸಿಕ ಆದಾಯ ಯೋಜನೆಯಿಂದ ಬರುವ ಬಡ್ಡಿದರವನ್ನು ಈ ರೀತಿ ಆರ್‌ಡಿಯಲ್ಲಿ ಹಾಕುತ್ತ ಹೋದಾಗ ಐದು ವರ್ಷದಲ್ಲಿ ಅದೂ ದೊಡ್ಡ ಮೊತ್ತ ಆಗುತ್ತದೆ. ಅದಕ್ಕೂ ಬಡ್ಡಿದರ ದೊರಕುತ್ತದೆ. ಈ ಕುರಿತು ಅಂಚೆ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು. ನಿಮ್ಮ ಮಾಸಿಕ ಆದಾಯ ಖಾತೆಯಿಂದ ಆರ್‌ಡಿಗೆ ಸ್ವಯಂಚಾಲಿತವಾಗಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಅವರು ಮಾಡುತ್ತಾರೆ.

ಡಿಸ್ಕ್ಲೈಮರ್‌: ಇದು ನಿಮ್ಮ ಮಾಹಿತಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ನೀಡುವ ಮಾಹಿತಿ. ಹೂಡಿಕೆ ಅಥವಾ ಉಳಿತಾಯ ಸಂಬಂಧಪಟ್ಟ ವಿಚಾರಗಳಿಗೆ ನಿಮ್ಮ ವೈಯಕ್ತಿಕ ಜ್ಞಾನ ಬಳಸಿ ಮುಂದುವರೆಯಿರಿ.

Whats_app_banner