ನನ್ನ ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ, ಹೆಚ್ಚು ಅಂದ್ರೆ ಎಷ್ಟು ಇರಿಸಿಕೊಳ್ಳಬಹುದು- ಇಲ್ಲಿದೆ-business news personal finance sb account deposit limits explained what happens if i kept rs 1 lakh in account uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನನ್ನ ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ, ಹೆಚ್ಚು ಅಂದ್ರೆ ಎಷ್ಟು ಇರಿಸಿಕೊಳ್ಳಬಹುದು- ಇಲ್ಲಿದೆ

ನನ್ನ ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ, ಹೆಚ್ಚು ಅಂದ್ರೆ ಎಷ್ಟು ಇರಿಸಿಕೊಳ್ಳಬಹುದು- ಇಲ್ಲಿದೆ

ಪ್ರಧಾನ ಮಂತ್ರಿ ಜನಧನ್ ಯೋಜನೆ ಜಾರಿಯಾದ ಬಳಿಕವಂತೂ ಎಸ್‌ಬಿ ಅಕೌಂಟ್ ಅಥವಾ ಉಳಿತಾಯ ಖಾತೆಯನ್ನು ಬಹುತೇಕ ಎಲ್ಲರೂ ತೆರೆದಿದ್ದು, ಬಳಸುತ್ತಲೂ ಇದ್ದಾರೆ. ಈ ಉಳಿತಾಯ ಖಾತೆಯಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ. ಸಮಸ್ಯೆ ಆದೀತಾ? ಹೆಚ್ಚು ಅಂದ್ರೆ ಈ ಖಾತೆಯಲ್ಲಿ ಎಷ್ಟು ಇರಿಸಿಕೊಳ್ಳಬಹುದು ಎಂಬ ಸಂದೇಹ ಅನೇಕರ ಮನಸ್ಸಿನಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿವರ. (ಸಾಂಕೇತಿಕ ಚಿತ್ರ)
ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿವರ. (ಸಾಂಕೇತಿಕ ಚಿತ್ರ) (LM)

ಉಳಿತಾಯ ಖಾತೆ ಅಥವಾ ಎಸ್‌ಬಿ ಅಕೌಂಟ್‌ (ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌) ಎಂದರೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಇದು ವಾಣಿಜ್ಯ ಬ್ಯಾಂಕುಗಳು, ವಾಣಿಜ್ಯೇತರ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಒದಗಿಸುವ ಒಂದು ರೀತಿಯ ಠೇವಣಿ ಖಾತೆ. ಇದರಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ನಿರ್ದಿಷ್ಟ ಬಡ್ಡಿದರವನ್ನು ಈ ಸಂಸ್ಥೆಗಳು ನೀಡುತ್ತವೆ.

ಉಳಿತಾಯ ಖಾತೆಯಲ್ಲಿ ಹಣ ಠೇವಣಿ ಇರಿಸುವುದು, ಸಂಗ್ರಹಿಸುವುದು ಮತ್ತು ಬೇಕಾದ ಹಿಂಪಡೆಯುವುದಕ್ಕೆ ಅವಕಾಶವಿದೆ. ಸ್ವಲ್ಪ ಸಮಯದವರೆಗೆ ಹಣವನ್ನು ಉಳಿಸಲು ವ್ಯಕ್ತಿಗಳನ್ನು ಉತ್ತೇಜಿಸುವುದು, ಅವರ ಹಣವನ್ನು ಇರಿಸಿಕೊಳ್ಳಲು ಅವರಿಗೆ ಸುರಕ್ಷಿತ ಮತ್ತು ದಾಖಲಿಸಲ್ಪಟ್ಟ ವಹಿವಾಟು ನಡೆಸುವುದಕ್ಕೆ ಅವಕಾಶವನ್ನು ಒದಗಿಸುವುದು ಉಳಿತಾಯ ಖಾತೆಯ ಪ್ರಾಥಮಿಕ ಉದ್ದೇಶ.

ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ

ಗಮನಿಸಬೇಕಾದ ಅಂಶ ಎಂದರೆ, ಈ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿಯಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತವೆ. ನಿಮ್ಮ ಉಳಿತಾಯ ಖಾತೆಯ ಬಳಕೆಗೂ ಆರ್‌ಬಿಐ ನಿಯಮಗಳು ಅನ್ವಯ. ಈಗ ವಿಷಯಕ್ಕೆ ಬರೋಣ. ಎಸ್‌ಬಿ ಅಕೌಂಟ್‌ನಲ್ಲಿ 1 ಲಕ್ಷ ರೂಪಾಯಿ ಇಟ್ಕೊಳ್ಳೋಣ ಅಂತಿದ್ದೇನೆ, ಸಮಸ್ಯೆ ಆದೀತಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ಈಗಾಗಲೇ ಹೇಳಿದಂತೆ ಆರ್‌ಬಿಐ ನಿಯಮಗಳಲ್ಲಿ ಈ ವಿಚಾರ ಕುರಿತು ವ್ಯತ್ಯಾಸವಿರುವುದಿಲ್ಲ. ಇಂಡಸ್‌ ಇಂಡ್‌ ಬ್ಯಾಂಕ್ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಗಮನಿಸಬೇಕಾದ ಅಂಶಗಳಿವು.

1) ಎಸ್‌ಬಿ ಅಕೌಂಟ್ ಅಥವಾ ಉಳಿತಾಯ ಖಾತೆಯ ಬಳಕೆಗೆ ಮಿತಿ (ಸೀಲಿಂಗ್‌) ಎಂದು ಬಂದಾಗ ನಗದು ಠೇವಣಿ ಮಿತಿ ಮೊದಲು ಬರುವಂಥದ್ದು. ನಿತ್ಯದ ವಹಿವಾಟಿನಲ್ಲಿ ದಿನಕ್ಕೆ 50,000 ರೂಪಾಯಿ ಒಳಗೆ ನಗದು ಹಣವನ್ನು ಖಾತೆಗೆ ಜಮೆ ಮಾಡಬಹುದು ಮತ್ತು ವಿತ್‌ಡ್ರಾ ಮಾಡಬಹುದು.

2) 50,000 ರೂಪಾಯಿ ಮತ್ತು ಮೇಲ್ಪಟ್ಟು ಹಣವನ್ನು ಉಳಿತಾಯ ಖಾತೆಯಲ್ಲಿ ಜಮೆ ಮಾಡುವಾಗ ಅಥವಾ ವಿತ್‌ಡ್ರಾ ಮಾಡುವಾಗ ಖಾತೆ ಹೊಂದಿರುವವರು ತಮ್ಮ ಪ್ಯಾನ್‌ ವಿವರ ಒದಗಿಸಬೇಕು.

3) ಪ್ಯಾನ್‌ ಕಾರ್ಡ್ ಮಾಡಿಸದೇ ಇದ್ದವರು ಈ ರೀತಿ ಹಣ ಜಮೆ ಮಾಡುವುದಾದರೆ ಅವರು ಫಾರಂ ನಂಬರ್ 60/61ರಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಬ್ಯಾಂಕು/ಹಣಕಾಸು ಸಂಸ್ಥೆಗೆ ನೀಡಬೇಕು.

4) ಇನ್ನು ಉಳಿತಾಯ ಖಾತೆಗೆ ಒಂದೇ ಬಾರಿ 1 ಲಕ್ಷ ರೂಪಾಯಿ ಜಮೆ ಮಾಡುತ್ತೀರಾದರೆ ಅದರ ಮೂಲವನ್ನು ಉಲ್ಲೇಖಿಸಬೇಕು. ತಪ್ಪಿದರೆ, ವಿವರಣೆ ಕೋರಿ ಆದಾಯ ತೆರಿಗೆ ಇಲಾಖೆ ನೋಟಿಸ್‌ ಬರಬಹುದು.

5) ಉಳಿತಾಯ ಖಾತೆ ಅಥವಾ ಎಸ್‌ಬಿ ಅಕೌಂಟ್‌ನಲ್ಲಿ ವಾರ್ಷಿಕ 10 ಲಕ್ಷ ರೂಪಾಯಿ ತನಕ ಉಳಿಸುವುದಕ್ಕೆ ಅವಕಾಶ ಇದೆ. ಈ ಮಿತಿ ಹಣ ಜಮೆ ಮಾಡುವುದಕ್ಕೂ ಮತ್ತು ಹಿಂಪಡೆಯುವುದಕೂ ಅನ್ವಯ.

ಉಳಿತಾಯ ಖಾತೆಯ ಪಾವತಿ ಮತ್ತು ವಿತ್‌ಡ್ರಾವಲ್‌ ಮಿತಿ ವಿವರ

ಉಳಿತಾಯ ಖಾತೆ ಅಥವಾ ಎಸ್‌ಬಿ ಅಕೌಂಟ್‌ನಲ್ಲಿ ಎಷ್ಟು ಹಣ ಉಳಿಸಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ರೀತಿಯಲ್ಲೇ, ಉಳಿತಾಯ ಖಾತೆಯ ಪಾವತಿ ಮತ್ತು ವಿತ್‌ಡ್ರಾವಲ್‌ ಮಿತಿ ವಿವರವನ್ನೂ ಸ್ಪಷ್ಟವಾಗಿ ತಿಳಿದುಕೊಂಡಿರಬೇಕು.

1) ಒಂದು ಉಳಿತಾಯ ಖಾತೆಯಲ್ಲಿ ಗರಿಷ್ಟ 10 ಲಕ್ಷ ರೂಪಾಯಿ ತನಕ ಹಣ ಜಮೆ ಮಾಡುವುದಕ್ಕೂ ವಿತ್‌ ಡ್ರಾ ಮಾಡುವುದಕ್ಕೂ ನಿಯಮ ಅವಕಾಶ ಮಾಡಿಕೊಟ್ಟಿದೆ.

2) ಆನ್‌ಲೈನ್ ಪಾವತಿ ಮಿತಿಯು ಡೆಬಿಟ್ ಕಾರ್ಡ್ ಅಥವಾ ನೀವು ಬಳಸುತ್ತಿರುವ ಪಾವತಿ ಮೋಡ್ ಅನ್ನು ಅವಲಂಬಿಸಿ ಬದಲಾಗುತ್ತದೆ.

ಉದಾಹರಣೆಗೆ, 5 ಲಕ್ಷ ರೂಪಾಯಿವರೆಗಿನ ವಹಿವಾಟುಗಳಿಗೆ ಐಎಂಪಿಎಸ್‌ ಸೂಕ್ತವಾಗಿದೆ ಮತ್ತು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಆರ್‌ಟಿಜಿಎಸ್‌ ಸೂಕ್ತವಾಗಿದೆ. ನೆಫ್ಟ್ (NEFT) ಯಾವುದೇ ಹೆಚ್ಚಿನ ಮಿತಿಯನ್ನು ಹೊಂದಿಲ್ಲ, ಆದರೆ ಬ್ಯಾಂಕಿಂಗ್ ಸಮಯದಲ್ಲಿ ಪಾವತಿಗಳನ್ನು ತೆರವುಗೊಳಿಸಲು 2-4 ಗಂಟೆ ಬೇಕಾಗಬಹುದು.

3) ಎಟಿಎಂ ಮತ್ತು ಪಿಒಎಸ್ ವಹಿವಾಟುಗಳು ಪೂರ್ವನಿರ್ಧರಿತ ಮಿತಿಗೆ ಒಳಪಟ್ಟಿರುತ್ತವೆ. ಇದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಾಗುತ್ತದೆ. ಅಲ್ಲಿ ನೀವು ದೈನಂದಿನ ಬಳಕೆಯ ಮಿತಿಯನ್ನು ಕಾಣಬಹುದು.

ಉದಾಹರಣೆಗೆ, ಇಂಡಸ್‌ ಇಂಡ್‌ ಬ್ಯಾಂಕ್ ಡೆಬಿಟ್ ಕಾರ್ಡ್/ಎಟಿಎಂ ಕಾರ್ಡ್‌ನೊಂದಿಗೆ, ನೀವು ಎಟಿಎಂನಿಂದ 1 ಲಕ್ಷ ರೂಪಾಯಿವರೆಗೆ ಹಿಂಪಡೆಯಬಹುದು. ನೀವು ಹೊಂದಿರುವ ಕಾರ್ಡ್‌ಗೆ ಅನುಗುಣವಾಗಿ 2 ಲಕ್ಷ ರೂಪಾಯಿವರೆಗಿನ ಪಿಒಎಸ್‌ ವಹಿವಾಟುಗಳನ್ನು ಮಾಡಬಹುದು. ಈ ಮಿತಿಯು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಿ.

ಅಂದ ಹಾಗೆ ಈ ಎಲ್ಲ ಮಿತಿಗಳನ್ನೂ ಗ್ರಾಹಕರ ಹಣಕಾಸು ವಹಿವಾಟಿನ ಸುರಕ್ಷೆಗಾಗಿ ರೂಪಿಸಿರುವಂಥದ್ದು. ಆನ್‌ಲೈನ್‌ ಅಪರಾಧ, ಹಣಕಾಸು ವಂಚನೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಹಕರು ಕೂಡ ತುಸು ಹೆಚ್ಚೇ ಎಚ್ಚರಿಕೆ ವಹಿಸಬೇಕಾದ್ದು ಅವಶ್ಯ.

ಗಮನಿಸಿ: ಇದನ್ನು ಇಲ್ಲಿ ವೈಯಕ್ತಿಕ ಹಣಕಾಸು ಮಾಹಿತಿ ದೃಷ್ಟಿಯಿಂದ ಗ್ರಾಹಕ ಜಾಗೃತಿ ದೃಷ್ಟಿಯಿಂದ ಒದಗಿಸಲಾಗಿದೆ. ನಿಖರ ಮತ್ತು ಸ್ಪಷ್ಟ ತಿಳಿವಳಿಕೆಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸುವುದು ಸೂಕ್ತ.

mysore-dasara_Entry_Point