ಕನ್ನಡ ಸುದ್ದಿ  /  Lifestyle  /  Business News State Bank Of India How To Register Sbi Yono App Using Atm Here Is Simple Steps Rmy

SBI Mobile Banking: ಎಟಿಎಂ ಬಳಸಿ ಯೋನೋ ಆ್ಯಪ್ ನೋಂದಣಿ ಮಾಡಿಕೊಳ್ಳುವುದು ಹೇಗೆ; ಸರಳ ವಿಧಾನ ಇಲ್ಲಿದೆ

SBI YONO Register: ಎಸ್‌ಬಿಐ ಯೋನೋ ಆಪ್ ನೋಂದಣಿಗೆ ಹಲವಾರು ಮಾರ್ಗಗಳಿವೆ. ಯಾವುದೇ ರೀತಿಯ ಗೊಂದಲ ಆಗದಂತೆ ನೋಂದಣಿಗೆ ಸರಳ ವಿಧಾನವನ್ನ ಇಲ್ಲಿ ನೀಡಲಾಗಿದೆ.

ಎಸ್‌ಬಿಐನ ಯೋನೋ ಆಪ್ ನೋಂದಣಿ ಮಾಡಿಕೊಳ್ಳುವ ಸರಳ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಎಸ್‌ಬಿಐನ ಯೋನೋ ಆಪ್ ನೋಂದಣಿ ಮಾಡಿಕೊಳ್ಳುವ ಸರಳ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರ ಸುಲಭ ವಹಿವಾಟಿಗಾಗಿ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದೆ. ಅದರ ಹೆಸರು ಎಸ್‌ಬಿಐ ಯೋನೋ (SBI YONO). ಎಸ್‌ಬಿಐನ ಎಲ್ಲಾ ರಿಟೇಲ್ ಗ್ರಾಹಕರು ಈ ಮೊಬೈಲ್ ಆ್ಯಪ್ ಅನ್ನು ಬಳಸಬಹುದು. ಹಣ ವರ್ಗಾವಣೆ, ಖಾತೆಯ ಸ್ಟೇಟ್ಮೆಂಟ್ ಪರಿಶೀಲನೆ, ಚೆಕ್ ಬುಕ್ ಪಡೆಯಲು, ಚೆಕ್ ಬುಕ್ ನಿಲ್ಲಿಸಲು, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ಆನ್‌ಲೈನ್ ರಿಚಾರ್ಜ್, ಖಾತೆಯ ವಹಿವಾಟುಗಳ ಮೇಲ್ವಿಚಾರಣೆ ಹೀಗಿ ಹಲವಾರು ಪ್ರಯೋಜನಗಳನ್ನು ಈ ಯೋನೋ ಆಪ್ ಮೂಲಕವೇ ಪಡೆಯಬಹುದು. ಆಪ್ ಬಳಸಿದರೆ ಶೇಕಡಾ 50 ರಷ್ಟು ಬ್ಯಾಂಕಿಂಗ್‌ಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ.

ಒಂದು ವೇಳೆ ನೀವೇನಾದರೂ ಎಸ್‌ಬಿಐನ ಯೋನೋ ಆಪ್ ಅನ್ನು ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದರೆ ಅದನ್ನು ಹೇಗೆ ನೋಂದಣಿ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈವರೆಗೆ ನೀವು ಎಸ್‌ಬಿಐ ಇಂಟರ್‌ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸೇ ಇಲ್ಲ ಎಂದಾದರೆ ಆಪ್ ಡೌನ್‌ಲೋಡ್ ಮಾಡಿಕೊಂಡು ಸುಲಭವಾಗಿ ಆನ್‌ಲೈನ್ ವಹಿವಾಟುಗಳನ್ನು ನಡೆಸಿ. ಎಸ್‌ಬಿಐ ಎಟಿಎಂ ಕಾರ್ಡ್ ಬಳಸಿ ಯೋನೋ ಆಪ್ ನೋಂದಣಿ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ಎಟಿಎಂ ಮೂಲಕ ಯೋನೋ ಆಪ್ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಹೀಗಿದೆ

ಹಂತ 1: ನಿಮ್ಮ ಸಮೀಪದ ಎಸ್‌ಬಿಐ ಎಟಿಎಂಗೆ ಭೇಟಿ ನೀಡಿ

ಹಂತ 2: ಎಟಿಎಂ ಪರದೆ ಮೇಲೆ ತೋರಿಸುವ ಮೊಬೈಲ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ

ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 4: ಖಾತ್ರಿಯಾದ ಮೇಲೆ ಎಸ್‌ಎಂಎಸ್‌ ನೋಟಿಫಿಕೇಶನ್ ಬರುತ್ತೆ

ಹಂತ 5: ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ಎಸ್‌ಬಿಐ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಬಳಸಿ

ಎಸ್‌ಬಿಐ ಯೋನೋ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ

  • ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ಗೆ ಗೂಗಲ್ ಪ್ಲೇ ಸ್ಟೋರ್‌ ಅಥವಾ ಆಪಲ್ ಆಪ್ ಸ್ಟೋರ್‌ನಲ್ಲಿ ಯೋನೋ ಸರ್ಚ್ ಮಾಡಿ
  • ಎಸ್‌ಬಿಐ ಯೋನೋ ಲೈಫ್‌ಸ್ಟೈಲ್ ಮತ್ತು ಬ್ಯಾಂಕಿಂಗ್ ಅಪ್ಲಿಕೇಶನ್ ಎಂದು ಲೇಬಲ್ ಇರುವ ಆಪ್ ಅನ್ನು ಡೌನ್‌ಲೋಡ್ ಮಾಡಿ
  • ಆಪ್ ಡೌನ್‌ಲೋಡ್ ಆದ ನಂತರ ಓಪನ್ ಮಾಡಿ ಅದರಲ್ಲಿ ಕೇಳಲಾಗುವ ಭಾಷೆ ಹಾಗೂ ಇತರೆ ವಿವರಗಳನ್ನು ನಮೂದಿಸಿ
  • ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ಅಸ್ತಿತ್ವದಲ್ಲಿರುವ ಗ್ರಾಹಕ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇಲ್ಲದಿದ್ರೆ ಎಸ್‌ಬಿಐಗೆ ಹೊಸ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ನೀವೇನಾದರೂ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್‌ಗಾಗಿ ನೋಂದಾಯಿತ ಎಟಿಎಂ ಕಾರ್ಡ್ ಬಳಸಿ ಲಾಗ್ ಇನ್ ಆಗಿ. ಅಲ್ಲಿ ಕೇಳಲಾಗಿರುವ ಸಂಪೂರ್ಣ ಖಾತಿಯ ವಿವರಗಳನ್ನು ನೀಡಿ ಯೋನೋಗೆ ನೋಂದಣಿ ಮಾಡಿಕೊಳ್ಳಬಹುದು.

ವಿಭಾಗ