Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ನಿಮಗೆ ತಿಳಿದಿರಬೇಕಾದ 11 ಮಹತ್ವದ ಅಂಶಗಳಿವು
ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹಣ ಠೇವಣಿ ಇಡುವ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನೀವು ತಿಳಿಯಬೇಕಾದ 11 ಮಹತ್ವದ ಮಾಹಿತಿಗಳು ಇಲ್ಲಿದೆ.

ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದು. ಇದು ಹೆಣ್ಣುಮಕ್ಕಳಿಗಾಗಿ ಇರುವ ಯೋಜನೆ. ಇದರಿಂದ ಹೆಣ್ಣುಮಕ್ಕಳು ವಯಸ್ಸಿಗೆ ಬಂದ ನಂತರ ಅಥವಾ ಕಾಲೇಜು ಓದುವ ಸಮಯದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಲವರಿಗೆ ಸುಕನ್ಯಾ ಸಮೃದ್ಧಿಯ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾದ್ರೆ ಏನಿದು ಸುಕನ್ಯಾ ಸಮೃದ್ಧಿ ಯೋಜನೆ, ಇದನ್ನು ಮಾಡುವುದು ಹೇಗೆ, ಬ್ಯಾಂಕ್ ಖಾತೆ ತೆರೆಯಲು ಇರುವ ನಿಯಮಗಳೇನು, ವಿತ್ ಡ್ರಾವಲ್ ನಿಯಮಗಳು ಹೇಗಿರುತ್ತವೆ ಈ ಎಲ್ಲದರ ಕುರಿತು ಮಾಹಿತಿ ಇಲ್ಲಿದೆ.
- ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಯು ಹೆಣ್ಣುಮಕ್ಕಳಿಗಾಗಿ ಇರುವ ಸರ್ಕಾರ ರೂಪಿಸಿರುವ ಮಹತ್ವದ ಯೋಜನೆಯಾಗಿದೆ. ಇದು ಸರ್ಕಾರಿ ಬೆಂಬಲಿತ ಸಣ್ಣ ಠೇವಣಿ ಯೋಜನೆಯಾಗಿದೆ. ಇದು ಹೆಣ್ಣುಮಕ್ಕಳ ಆರ್ಥಿಕ ಅಗತ್ಯಕ್ಕಾಗಿ ರೂಪಿಸುವ ಯೋಜನೆ. ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 800 ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳನ್ನೂ ಹೊಂದಿದೆ. ರಿಟರ್ನ್ಸ್ ಕೂಡ ತೆರಿಗೆ ಮುಕ್ತವಾಗಿದೆ.
2. ಯಾವಾಗ ಖಾತೆ ತೆರೆಯಬಹುದು?
ಯಾವುದೇ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನದ ನಂತರ ಆಕೆಗೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಖಾತೆಗೆ ಕನಿಷ್ಠ 250 ರೂ. ಠೇವಣಿ ಇಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಠೇವಣಿ ಇಡಬೇಕಾಗುತ್ತದೆ. ಖಾತೆಯು ಪ್ರಾರಂಭವಾದ ದಿನಾಂಕದಿಂದ 21 ವರ್ಷಗಳವರೆಗೆ ಅಥವಾ ಹುಡುಗಿಗೆ 18 ವರ್ಷ ತುಂಬಿದ ನಂತರ ಅವಳ ಮದುವೆಯವರೆಗೆ ಚಾಲ್ತಿಯಲ್ಲಿ ಇರುತ್ತದೆ. ಮಗುವಿನ ಉನ್ನತ ಶಿಕ್ಷಣದ ವೆಚ್ಚಗಳ ಅಗತ್ಯವನ್ನು ಪೂರೈಸಲು ಶೇ 50 ರಷ್ಟು ಉಪಯೋಗಿಸಬಹುದು. ನಂತರ ಆಕೆ 18 ವರ್ಷಕ್ಕೆ ತಲುಪಿದ ನಂತರ ಉಳಿದ ಶೇ 50 ರಷ್ಟು ಹಣ ಅವರ ಕೈ ಸೇರುತ್ತದೆ.
3. ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ನಿಯಮಗಳು
ಒಂದು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಒಬ್ಬ ಮಗಳ ಹೆಸರಿನಲ್ಲಿ ಎರಡು ಖಾತೆ ತೆರೆಯಲು ಆಗುವುದಿಲ್ಲ. ಹೆಣ್ಣುಮಗುವಿನ ಪೋಷಕರು ಹಾಗೂ ಲೀಗಲ್ ಗಾರ್ಡಿಯನ್ಸ್ ಈ ಖಾತೆಯನ್ನು ಅಧಿಸೂಚಿತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಆ ಹುಡುಗಿಯ ಹೆಸರಿನಲ್ಲಿ ತೆರೆಯಬಹುದು.
ಫೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಾಗ ಯಾರ ಹೆಸರಿನಲ್ಲಿ ಖಾತೆ ತೆರೆಯುತ್ತಾರೋ ಅವರ ಹೆಸರಿನಲ್ಲಿ ಆ ಹುಡುಗಿಯ ಜನನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಇದರೊಂದಿಗೆ ಇತರ ಅಗತ್ಯ ಪ್ರಮಾಣ ಪತ್ರಗಳು ಹಾಗೂ ಠೇವಣಿದಾರರ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ನೀಡಬೇಕಾಗುತ್ತದೆ.
4. ಎಷ್ಟು ಠೇವಣಿ ಇಡಬಹುದು?
ಒಮ್ಮೆ ಖಾತೆ ತೆರೆದ ಮೇಲೆ ಆ ಖಾತೆಯನ್ನು ಸಕ್ರಿಯವಾಗಿರಿಸಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ. ಕಡ್ಡಾಯವಾಗಿ ಠೇವಣಿ ಇಡಬೇಕಾಗುತ್ತದೆ.
5. ನೀವು ಕನಿಷ್ಠ ಮೊತ್ತವನ್ನು ಖಾತೆಗೆ ಜಮಾ ಮಾಡದಿದ್ದರೆ ಏನಾಗುತ್ತದೆ?
ಆರ್ಥಿಕ ವರ್ಷದಲ್ಲಿ ಕನಿಷ್ಠ ಠೇವಣಿ ಮಾಡದೇ ಇದ್ದರೆ ಸುಕನ್ಯಾ ಸಮೃದ್ಧಿ ಖಾತೆಯು ಡೀಫಾಲ್ಟ್ ಖಾತೆಯಾಗಬಹುದು. ಕನಿಷ್ಠ ಠೇವಣಿ ಮೊತ್ತವನ್ನು ಪಾವತಿಸುವ ಮೂಲಕ ಖಾತೆಯನ್ನು ತೆರೆಯುವ ದಿನಾಂಕದಿಂದ 15 ವರ್ಷಗಳು ಪೂರ್ಣಗೊಳ್ಳುವ ಮೊದಲು ಡಿಫಾಲ್ಟ್‌ನಲ್ಲಿರುವ ಖಾತೆಯನ್ನು ಪುನಶ್ಚೇತನಗೊಳಿಸಬಹುದು, ಅಂದರೆ, ಡೀಫಾಲ್ಟ್‌ನ ಪ್ರತಿ ವರ್ಷಕ್ಕೆ ರೂ 250 ಮತ್ತು ರೂ 50 ದಂಡದ ಮೊತ್ತವನ್ನು ಪಾವತಿಸಬಹುದು. ಈ ಮೊತ್ತವನ್ನು ಪಾವತಿಸಿ ಡೀಫಾಲ್ಟ್ ಸರಿ ಪಡಿಸಿಕೊಳ್ಳಬಹುದು.
ದಂಡವನ್ನು ಪಾವತಿಸದಿದ್ದರೆ, ಡೀಫಾಲ್ಟ್ ದಿನಾಂಕದ ಮೊದಲು ಮಾಡಿದ ಠೇವಣಿ ಸೇರಿದಂತೆ ಸಂಪೂರ್ಣ ಠೇವಣಿ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆ ದರದಲ್ಲಿ ಬಡ್ಡಿಯನ್ನು ಪಡೆಯುತ್ತದೆ.
6. ಬಡ್ಡಿದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಉಳಿತಾಯ ಮತ್ತು ಅಂಚೆ ಕಚೇರಿ ಯೋಜನೆಗಳ ಮೇಲೆ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ. ಸುಕನ್ಯಾ ಸಮೃದ್ಧಿ ಈ ವರ್ಗದ ಅಡಿಯಲ್ಲಿ ಬರುತ್ತದೆ. ಈ ಹೀಗಾಗಿ ಸರ್ಕಾರಿ ಭದ್ರತೆಗಳ ಇಳುವರಿಗಳ ಆಧಾರದ ಮೇಲೆ ಬಡ್ಡಿದರಗಳನ್ನು ತ್ರೈಮಾಸಿಕವಾಗಿ ಘೋಷಿಸಲಾಗುತ್ತದೆ.
7. ಈ ಯೋಜನೆಯ ತೆರಿಗೆ ವಿನಾಯಿತಿ
ಸುಕನ್ಯಾ ಸಮೃದ್ಧಿ ಯೋಜನೆಯು ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ಸ್ಥಿತಿಯಲ್ಲಿ ಇರುತ್ತದೆ. ವಾರ್ಷಿಕ ಠೇವಣಿ ಸೆಕ್ಷನ್ 80ಸಿ ಪ್ರಯೋಜನಕ್ಕೆ ಅರ್ಹತೆ ಪಡೆಯುತ್ತದೆ. ಮೆಚುರಿಟಿ ಪ್ರಯೋಜನಗಳು ತೆರಿಗೆಗೆ ಒಳಪಡುವುದಿಲ್ಲ.
8. ಖಾತೆ ಹೇಗೆ ಕಾರ್ಯನಿರ್ವಹಿಸುತ್ತದೆ
ಹೆಣ್ಣುಮಗುವಿಗೆ 10 ವರ್ಷ ವಯಸ್ಸಾದಾಗ ಆಕೆ ತಾನೇ ಸ್ವತಃ ಖಾತೆಯನ್ನು ನಿರ್ವಹಿಸಬಹುದು.
ಸುಕನ್ಯಾ ಸಮೃದ್ಧಿ ಖಾತೆಯು ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಅಥವಾ 18 ವರ್ಷ ವಯಸ್ಸಿನ ನಂತರ ಹೆಣ್ಣು ಮಗುವಿನ ಮದುವೆಯ ಸಮಯದಲ್ಲಿ (1 ತಿಂಗಳ ಮೊದಲು ಅಥವಾ ಮದುವೆಯ ದಿನಾಂಕದ ನಂತರ 3 ತಿಂಗಳ ನಂತರ ಪಕ್ವವಾಗುತ್ತದೆ.
9. ಮೆಚ್ಯೂರಿಟಿ ಮುಗಿಯುವ ಮೊದಲೇ ಖಾತೆಯನ್ನು ಮುಚ್ಚಬಹುದೇ?
ಆಕಸ್ಮಿಕ ಕಾರಣಗಳಿಂದ ಖಾತೆದಾರರು ಮರಣ ಹೊಂದಿದರೆ, ಅವರ ಮರಣ ಪ್ರಮಾಣವನ್ನು ಸಲ್ಲಿಸಿದ ತಕ್ಷಣ ಖಾತೆಯಲ್ಲಿ ಮುಚ್ಚಲಾಗುತ್ತದೆ. ಖಾತೆಯಲ್ಲಿನ ಬಾಕಿ ಮೊತ್ತವನ್ನು ಖಾತೆಯು ಅಕಾಲಿಕವಾಗಿ ಮುಚ್ಚುವ ತಿಂಗಳ ಹಿಂದಿನ ತಿಂಗಳಿನವರೆಗೆ ಬಡ್ಡಿ ಸಮೇತ ಖಾತೆದಾರರ ಪೋಷಕರಿಗೆ ನೀಡಲಾಗುತ್ತದೆ.ಯಾವುದೇ ಸಂದರ್ಭದಲ್ಲಿ, ಖಾತೆಯನ್ನು ತೆರೆಯುವ ಐದು ವರ್ಷಗಳು ಪೂರ್ಣಗೊಂಡ ನಂತರ SSY ಖಾತೆಯನ್ನು ಅಕಾಲಿಕವಾಗಿ ಮುಚ್ಚುವ ವಿನಂತಿಯನ್ನು ಮುಂದಿಡಬಹುದು. ಮಾರಣಾಂತಿಕ ಕಾಯಿಲೆಗಳಲ್ಲಿ ವೈದ್ಯಕೀಯ ಬೆಂಬಲದಂತಹ ತೀವ್ರ ಸಹಾನುಭೂತಿಯ ಆಧಾರದ ಮೇಲೆ ನಿಯಮಗಳ ಪ್ರಕಾರ ಇದನ್ನು ಸಹ ಅನುಮತಿಸಲಾಗುತ್ತದೆ.
10. ಖಾತೆಯನ್ನು ವರ್ಗಾಯಿಸಬಹುದೇ?
ಖಾತೆಯನ್ನು ತೆರೆದಿರುವ ಹೆಣ್ಣು ಮಗು ನಗರವನ್ನು ಹೊರತುಪಡಿಸಿ ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡರೆ ಭಾರತದಲ್ಲಿ ಎಲ್ಲಿಯಾದರೂ ಖಾತೆಯನ್ನು ವರ್ಗಾಯಿಸಬಹುದು. ವರ್ಗಾವಣೆ ವಿನಂತಿಯನ್ನು ಭರ್ತಿ ಮಾಡಬೇಕು ಮತ್ತು ಒಬ್ಬರು ತಮ್ಮ ಬ್ಯಾಂಕ್/ಪೋಸ್ಟ್ ಆಫೀಸ್ ಶಾಖೆಯನ್ನು ಪಾಸ್‌ಬುಕ್‌ನೊಂದಿಗೆ ಭೇಟಿ ಮಾಡಬೇಕಾಗುತ್ತದೆ.
11. ಭಾಗಶಃ ವಾಪಾಸಾತಿಗೆ ನಿಯಮಗಳು
ಉನ್ನತ ಶಿಕ್ಷಣ ಮತ್ತು ಮದುವೆಯ ಉದ್ದೇಶಕ್ಕಾಗಿ ಖಾತೆದಾರರ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು, ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ಕ್ರೆಡಿಟ್‌ನಲ್ಲಿ 50 ಪ್ರತಿಶತದವರೆಗೆ ಬಾಕಿ ಹಣವನ್ನು ಹಿಂಪಡೆಯಲು ಅನುಮತಿಸಲಾಗಿದೆ. ಆದಾಗ್ಯೂ, ಖಾತೆದಾರರಿಗೆ 18 ವರ್ಷ ತುಂಬಿದಾಗ ಮಾತ್ರ ಹಿಂಪಡೆಯುವಿಕೆಯನ್ನು ಅನುಮತಿಸಲಾಗುತ್ತದೆ.
ಇದಕ್ಕಾಗಿ ಕೇವಲ ಲಿಖಿತ ಅರ್ಜಿ ಮಾತ್ರ, ಜೊತೆಗೆ ಶೈಕ್ಷಣಿಕ ಸಂಸ್ಥೆಯಲ್ಲಿ ದೃಢಪಡಿಸಿದ ದಾಖಲಾತಿ ವಿವರ, ಹಣಕಾಸಿನ ಅಗತ್ಯ ಸ್ಪಷ್ಟಪಡಿಸುವ ಸಂಸ್ಥೆಯಿಂದ ಪಡೆದ ಶುಲ್ಕದ ಸ್ಲಿಪ್ ಕೂಡ ಅಗತ್ಯವಾಗುತ್ತದೆ.
ಇದನ್ನೂ ಓದಿ: Savings: ಭಾರತದ ಅತ್ಯುತ್ತಮ ಉಳಿತಾಯ ಹೂಡಿಕೆ ಯೋಜನೆಗಳಿವು; ನಿಮ್ಮ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ಯಾವುದು
Post Office Savings: ರಿಸ್ಕ್ ಇಲ್ಲದ ಹೂಡಿಕೆ ಮಾಡಲು ಬಯಸುವಿರಾ, ಅಂಚೆ ಕಚೇರಿ ಇಲಾಖೆಯ ಅತ್ಯುತ್ತಮ ಉಳಿತಾಯ ಯೋಜನೆಗಳ ಕುರಿತು ಇಲ್ಲಿದೆ ವಿವರ
Small savings schemes: ಪಿಪಿಎಫ್, ಸುಕನ್ಯಾ ಸಮೃದ್ಧಿ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಆಧಾರ್-ಪ್ಯಾನ್ ಸಲ್ಲಿಕೆ ಕಡ್ಡಾಯ
