ಕನ್ನಡ ಸುದ್ದಿ  /  ಜೀವನಶೈಲಿ  /  2024ರಲ್ಲಿ ಪಾಸ್‌ಪೋರ್ಟ್ ರಿನಿವಲ್ ಮಾಡಬೇಕಾ; ಶುಲ್ಕ, ದಾಖಲೆಗಳೊಂದಿಗೆ ಈ ಸುಲಭ ವಿಧಾನ ಅನುಸರಿಸಿ -Passport Renewal

2024ರಲ್ಲಿ ಪಾಸ್‌ಪೋರ್ಟ್ ರಿನಿವಲ್ ಮಾಡಬೇಕಾ; ಶುಲ್ಕ, ದಾಖಲೆಗಳೊಂದಿಗೆ ಈ ಸುಲಭ ವಿಧಾನ ಅನುಸರಿಸಿ -Passport Renewal

Passport Renewal: ಪಾಸ್‌ಪೋರ್ಟ್ ವಿತರಿಸಿದ ದಿನಾಂಕದಿಂದ 10 ವರ್ಷಗಳ ವರೆಗೆ ಮಾನ್ಯವಾಗಿರುತ್ತದೆ. ಆ ಬಳಿಕ ನಿಮ್ಮ ಪಾಸ್‌ಪೋರ್ಟ್‌ ಮಾನ್ಯವಾಗಿರಬೇಕಾದರೆ ರಿನಿವಲ್ ಮಾಡಿಸಬೇಕು. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.

2024ರಲ್ಲಿ ಪಾಸ್‌ಪೋರ್ಟ್ ರಿನಿವಲ್ ಮಾಡಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ. ಶುಲ್ಕ, ದಾಖಲೆಗಳೊಂದಿಗೆ ಈ ಸುಲಭ ವಿಧಾನ ಅನುಸರಿಸಿ.
2024ರಲ್ಲಿ ಪಾಸ್‌ಪೋರ್ಟ್ ರಿನಿವಲ್ ಮಾಡಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ. ಶುಲ್ಕ, ದಾಖಲೆಗಳೊಂದಿಗೆ ಈ ಸುಲಭ ವಿಧಾನ ಅನುಸರಿಸಿ.

ರಾಷ್ಟ್ರೀಯತೆಯನ್ನು ದೃಢೀಕರಿಸುವ ಅಧಿಕೃತ ದಾಖಲೆ ಪಾಸ್‌ಪೋರ್ಟ್. ಒಂದಷ್ಟು ದೇಶಗಳನ್ನು ಹೊರತುಪಡಿಸಿದರೆ ಬಹುತೇಕ ದೇಶಗಳಿಗೆ ಹೋಗಬೇಕಾದರೆ ಪಾಸ್‌ಪೋರ್ಟ್ ಬೇಕೇ ಬೇಕು. ಭಾರತದಿಂದ ಪ್ರವಾಸ, ಬ್ಯುಸಿನೆಸ್ ಹಾಗೂ ವ್ಯಾಸಂಗದಂತಹ ವಿವಿಧ ಉದ್ದೇಶಗಳಿಗಾಗಿ ವಿದೇಶಗಳಿಗೆ ಹೋಗಲು ಇದರ ಅವಶ್ಯಕತೆ ಇರುತ್ತದೆ.

ಭಾರತದ ಪಾಸ್‌ಪೋರ್ಟ್ ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕು. ವಿತರಿಸಿದ ದಿನಾಂಕದಿಂದ 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆ ನಂತರ ಅವಧಿ ಮುಗಿಯುತ್ತದೆ. ಒಂದು ವೇಳೆ ನಿಮ್ಮ ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೆ ನವೀಕರಿಸಲು ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ.

ಟ್ರೆಂಡಿಂಗ್​ ಸುದ್ದಿ

ಅವಧಿ ಮುಗಿದ ನಂತರ ಮೂರು ವರ್ಷಗಳವರೆಗೆ ಅಥವಾ ಅವಧಿ ಮುಗಿಯುವ ಒಂದು ವರ್ಷದ ಮೊದಲೇ ರಿನಿವಲ್ ಮಾಡಿಸಿಕೊಳ್ಳಬಹುದು. ಅವಧಿ ಮುಗಿಯುವ ಕನಿಷ್ಠ 9 ತಿಂಗಳ ಮೊದಲು ನವೀಕರಣ ಪ್ರಕ್ರಿಯೆ ಪ್ರಾರಂಭಿಸುವುದು ಯಾವುದೇ ತೊಂದರೆಯನ್ನು ತಪ್ಪಿಸಬಹುದು. ಇನ್ನು ಅಪ್ರಾಪ್ತರ ವಿಷಯದಲ್ಲಿ ಪಾಸ್‌ಪೋರ್ಟ್ 5 ವರ್ಷಗಳವರೆಗೆ ಇಲ್ಲವೇ 18 ವರ್ಷ ತುಂಬವವರೆಗೆ ಯಾವುದೇ ಮೊದಲು ಸಂಭವಿಸುತ್ತದೆಯೋ ಅದನ್ನು ಮಾನ್ಯವಾಗಿ ಪರಿಗಣಿಸಲಾಗುತ್ತದೆ. 15 ರಿಂದ 18 ವರ್ಷ ವಯಸ್ಸಿನ ಅಪ್ರಾಪ್ತರು 10 ವರ್ಷಗಳ ಅವಧಿಯ ಪೂರ್ಣ ಸಿಂಧುತ್ವದ ಪಾಸ್‌ಪೋರ್ಟ್ ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ನವೀಕರಿಸುವ ಸುಲಭ ಹಂತಗಳು

 • ಪಾಸ್‌ಪೋರ್ಟ್ ಸೇವಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ
 • ಈಗಾಗಲೇ ನಿಮ್ಮ ನೋಂದಣಿಯಾಗಿದ್ದರೆ ಲಾಗಿನ್ ಆಗಿ
 • ಪಾಸ್‌ಪೋರ್ಟ್‌ ಮರು-ವಿತರಣೆ ಮೇಲೆ ಕ್ಲಿಕ್ ಮಾಡಿ
 • ಅರ್ಜಿ ನಮೂನೆಯನ್ನು ತುಂಬಲು ಇಲ್ಲಿ ಕ್ಲಿಕ್ ಮಾಡಿ ಎಂಬುದರ ಮೇಲೆ ಕ್ಲಿಕ್ ಮಾಡಿ
 • ಅರ್ಜಿದಾರರು, ಕುಟುಂಬ ಮತ್ತು ವಿಳಾಸ ಮಾಹಿತಿ ಸೇರಿ ಅಗತ್ಯ ವಿವರ ಭರ್ತಿ ಮಾಡಿ
 • ತುರ್ತು ಸಂಪರ್ಕ ವಿವರಗಳು, ಹಿಂದಿನ ಪಾಸ್‌ಪೋರ್ಟ್‌ ವಿವರಗಳನ್ನ ನಮೂದಿಸಿ
 • ಸ್ವಯಂ ಘೋಷಣೆಗೆ ಸಮ್ಮತಿಸಿ ಮತ್ತು ಫಾರ್ಮ್ ಸಲ್ಲಿಸಿ
 • ಫಾರ್ಮ್‌ ಸಸಲ್ಲಿಸಿದ ನಂತರ ಪಾಸ್‌ಪೋರ್ಟ್ ನವೀಕರಣ ಶುಲ್ಕ ಪಾವತಿಸಿ
 • ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ಮುಂದುವರಿಯಿರಿ

ಇದನ್ನೂ ಓದಿ: ಆಧಾರ್‌ ಕಾರ್ಡ್‌ಗೆ ಹೊಸ ರೂಲ್ಸ್‌; ದಾಖಲಾತಿಯಿಂದ ನವೀಕರಣದವರೆಗೆ ಬದಲಾದ ನಿಯಮಗಳಿವು

ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಹೀಗೆ ಮಾಡಿ

 • ಪಾಸ್‌ಫೋರ್ಟ್ ಸೇವಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ
 • ವೀವ್ ಸೇವ್ಡ್ ಮತ್ತು ಅರ್ಜಿಯಅರ್ಜಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ
 • ಪಾವತಿ ಮತ್ತು ಅಪಾಯಿಂಟ್‌ಮೆಂಟ್ ಶೆಡ್ಯೂಲ್ ಮಾಡಿ
 • ಶುಲ್ಕ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆಯ್ಕೆ ಮಾಡಿ
 • ಕಾಪ್ಚಾ ಕೋಡ್ ನಮೂದಿಸುವ ಮೂಲಕ ನಿಮ್ಮ ಪಾಸ್‌ಪೋರ್ಟ್ ಕೇಂದ್ರಯವನ್ನು ಖಾತ್ರಿಪಡಿಸಿ
 • ಲಭ್ಯವಿರುವ ದಿನಾಂಕಗಳನ್ನು ನಿಮಗೆ ಅನುಕೂಲವಾದ ಸ್ಲಾಟ್‌ಗಳನ್ನು ಆಯ್ಕೆ ಮಾಡಿ
 • ಶುಲ್ಕಪಾವತಿಸಿ ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಿ

ಪಾಸ್‌ಪೋರ್ಟ್ ನವೀಕರಣ ನಿಮ್ಮ ವಯಸ್ಸು, ನಿಮಗೆ ಎಷ್ಟು ಬುಕ್ಲೆಟ್‌ಗಳ ಅಗತ್ಯವಿದೆ ಹಾಗೂ ಇತರೆ ಯೋಜನೆಗಳ ಮೇಲೆ ಅವಲಂಬಿಸಿರುತ್ತದೆ. ರಿನಿವಲ್‌ಗೆ ಅಗತ್ಯವಿರುವ ದಾಖಲೆಗಳು, ಮೂಲ ಪಾಸ್‌ಪೋರ್ಟ್, ಅರ್ಜಿ ರಶೀದಿಸ ವಿಳಾಸದ ಪುರಾವೆ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ನಿಮ್ಮ ಬಳಿಯೇ ಇರಿಸಿಕೊಳ್ಳುವುದು ಒಳ್ಳೆಯದು. (This copy first appeared in Hindustan Times Kannada website. To read more like this please logon to kannada.hindustantime.com )