7000 ಕೋಟಿ ರೂನ ಸಾಮ್ರಾಜ್ಯ ಕಟ್ಟಿದ ಮಹಿಳೆ, ತಾನೇ ಕಟ್ಟಿ ಬೆಳೆಸಿದ ಕಂಪನಿಯೇ ಕೆಲಸದಿಂದ ಕಿತ್ತು ಹಾಕ್ತು; ನೀನೇ ಸಾಕಿದ ಗಿಣಿ...-business news woman built rs 7000 crore empire got fired from her own company ankiti bose story pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  7000 ಕೋಟಿ ರೂನ ಸಾಮ್ರಾಜ್ಯ ಕಟ್ಟಿದ ಮಹಿಳೆ, ತಾನೇ ಕಟ್ಟಿ ಬೆಳೆಸಿದ ಕಂಪನಿಯೇ ಕೆಲಸದಿಂದ ಕಿತ್ತು ಹಾಕ್ತು; ನೀನೇ ಸಾಕಿದ ಗಿಣಿ...

7000 ಕೋಟಿ ರೂನ ಸಾಮ್ರಾಜ್ಯ ಕಟ್ಟಿದ ಮಹಿಳೆ, ತಾನೇ ಕಟ್ಟಿ ಬೆಳೆಸಿದ ಕಂಪನಿಯೇ ಕೆಲಸದಿಂದ ಕಿತ್ತು ಹಾಕ್ತು; ನೀನೇ ಸಾಕಿದ ಗಿಣಿ...

ಅಂಕಿತಿ ಬೋಸ್‌ ಫೋರ್ಬ್ಸ್‌ ಏಷ್ಯಾದ 30 ವರ್ಷದೊಳಗಿನ ಪ್ರಮುಖ 30 ಸಾಧಕಿಯರ ಪಟ್ಟಿಯಲ್ಲಿ 2018ರಲ್ಲಿ ಸ್ಥಾನ ಪಡೆದಿದ್ದರು. ಫಾರ್ಚ್ಯೂನ್‌ನ 40 ಅಂಡರ್‌ 40 ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. 2019ರಲ್ಲಿ ಬ್ಲೂಮ್‌ಬರ್ಗ್‌ನ ಅಗ್ರ 50 ಸಾಧಕಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.

ತಾನೇ ಕಟ್ಟಿ ಬೆಳೆಸಿದ ಕಂಪನಿಯಿಂದ ಉದ್ಯೋಗ ಕಡಿತಕ್ಕೆ ಒಳಗಾದ ಅಪರೂಪದ ಭಾರತೀಯ ಉದ್ಯಮಿಗಳಲ್ಲಿ ಅಂಕಿತಿ ಬೋಸ್‌ ಒಬ್ಬರು.
ತಾನೇ ಕಟ್ಟಿ ಬೆಳೆಸಿದ ಕಂಪನಿಯಿಂದ ಉದ್ಯೋಗ ಕಡಿತಕ್ಕೆ ಒಳಗಾದ ಅಪರೂಪದ ಭಾರತೀಯ ಉದ್ಯಮಿಗಳಲ್ಲಿ ಅಂಕಿತಿ ಬೋಸ್‌ ಒಬ್ಬರು.

ಭಾರತದ ನವೋದ್ಯಮ ಕ್ಷೇತ್ರದಲ್ಲಿ ಅಂಕಿತಿ ಬೋಸ್‌ ಜನಪ್ರಿಯ ಹೆಸರು. ತನ್ನ ಆನ್‌ಲೈನ್‌ ಬಿಸ್ನೆಸ್‌ ಅನ್ನು ದೊಡ್ಡಮಟ್ಟಕ್ಕೆ ಬೆಳೆಸಿದ ಬಳಿಕ ಈ ಭಾರತೀಯ ಯುವ ಉದ್ಯಮಿ ಎಲ್ಲರ ಗಮನ ಸೆಳೆದಿದ್ದರು. ಈ ಹಿಂದಿನ ಕಂಪನಿಯ ಜತೆಗಿನ ಇವರ ಕಾನೂನು ಹೋರಾಟ ಇತ್ತೀಚೆಗೆ ಸುದ್ದಿಯಾಗಿತ್ತು. ಇವರು ಜಿಲ್ಲಿಂಗೋ ಎಂಬ ಸ್ಟಾರ್ಟಪ್‌ ಕಟ್ಟಿದ್ದರು. 2019ರಲ್ಲಿ ಕಂಪನಿಯ ಮೌಲ್ಯ 7000 ಕೋಟಿ ರೂಪಾಯಿಗೆ ತಲುಪಿತ್ತು. ಕಂಪನಿಯು ಈ ಮಟ್ಟಕ್ಕೆ ಬೆಳಯಲು ಅಕಿಂತಿ ಕೊಡುಗೆ ಅಷ್ಟಿಷ್ಟಲ್ಲ. ಆದರೆ, ತಾನೇ ಕಟ್ಟಿ ಬೆಳೆಸಿದ ಕಂಪನಿಯಿಂದ ಉದ್ಯೋಗ ಕಡಿತಕ್ಕೆ ಒಳಗಾದ ಅಪರೂಪದ ಭಾರತೀಯ ಉದ್ಯಮಿಗಳಲ್ಲಿ ಅಂಕಿತಿ ಬೋಸ್‌ ಒಬ್ಬರು.

ಜಿಲ್ಲಿಂಗೋ ಕಂಪನಿಯ ಕುರಿತು

ಅಂಕಿತಿ ಬೋಸ್‌ ಅವರು ಡೆಹಡ್ರೂನ್‌ನಲ್ಲಿ ಜನಿಸಿದ್ದು, ಮುಂಬೈನ ಕೇಂಬ್ರಿಡ್ಜ್‌ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇದಾದ ಬಲಿಕ ಸೇಂಟ್‌ ಕ್ಷೇವಿಯರ್‌ ಕಾಲೇಜಿನಲ್ಲಿ ಪದವಿ ಪಡೆದರು. ಇದಾದ ಬಳಿಕ ಮಕ್‌ಕಿನ್ಸೆಲಿ ಆಂಡ್‌ ಕಂಪನಿಯಲ್ಲಿ ಉದ್ಯೋಗ ಮಾಡಿದ್ದರು. ಬಳಿಕ ಬೆಂಗಳೂರಿನ ಸೀಕೊಲಿಯಾ ಕ್ಯಾಪಿಟಲ್‌ನಲ್ಲಿ ಉದ್ಯೋಗ ಪಡೆದರು. ವಾರಾಂತ್ಯದಲ್ಲಿ ಬೆಂಗಳೂರು ಮಾರುಕಟ್ಟೆಯಲ್ಲಿ ಸುತ್ತಾಡುತ್ತಿರುವ ಸಂದ್ಭದಲ್ಲಿ ಸ್ಥಳೀಯ ಅಂಗಡಿಗಳು ಆನ್‌ಲೈನ್‌ನಲ್ಲಿ ಅಸ್ಥಿತ್ವ ಇಲ್ಲದೆ ಇರುವುದನ್ನು ಗಮನಿಸಿದರು. ಇದು ಝಿಲ್ಲೊಂಗೊ ಎಂಬ ಕಂಪನಿ ಸ್ಥಾಪಿಸಲು ಇವರಿಗೆ ಪ್ರೇರಣೆಯಾಯಿತು. ಧ್ರುವ ಕಪೂರ್‌ ಎಂಬ ವ್ಯಕ್ತಿಯ ಜತೆ ಸೇರಿ ಇವರು ಸ್ವಂತ ಬಿಸ್ನೆಸ್‌ ಆರಂಭಿಸಿದರು. ಈ ಕಂಪನಿ ನೋಡುನೋಡುತ್ತಿದ್ದಂತೆ ದೊಡ್ಡಮಟ್ಟಕ್ಕೆ ಬೆಳೆಯಿತು. ಅಂಕಿತಿ ಬೋಸ್‌ ಫೋರ್ಬ್ಸ್‌ ಏಷ್ಯಾದ 30 ವರ್ಷದೊಳಗಿನ ಪ್ರಮುಖ 30 ಸಾಧಕಿಯರ ಪಟ್ಟಿಯಲ್ಲಿ 2018ರಲ್ಲಿ ಸ್ಥಾನ ಪಡೆದಿದ್ದರು. ಫಾರ್ಚ್ಯೂನ್‌ನ 40 ಅಂಡರ್‌ 40 ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. 2019ರಲ್ಲಿ ಬ್ಲೂಮ್‌ಬರ್ಗ್‌ನ ಅಗ್ರ 50 ಸಾಧಕಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.

ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತ್ತಲ್ಲೋ

2022ರಲ್ಲಿ ತಾನು ಸ್ಥಾಪಿಸಿದ ಕಂಪನಿಯಿಂದಲೇ ಉದ್ಯೋಗ ಕಡಿತಕ್ಕೆ ಅಂಕಿತಿ ಬೋಸ್‌ ಒಳಗಾದರು. ಅಂಕಿತಿ ಬೋಸ್ ಅವರನ್ನು 2022 ರಲ್ಲಿ ಅವರು ಸ್ಥಾಪಿಸಿದ ಜಿಲ್ಲಿಂಗೋ ಕಂಪನಿಯಿಂದ ವಜಾಗೊಳಿಸಲಾಯಿತು. ಅಧಿಕಾರ ದುರುಪಯೋಗ ಮತ್ತು ಆರ್ಥಿಕ ತಪ್ಪು ನಿರೂಪಣೆಯ ಆರೋಪದ ನಂತರ ಅವರನ್ನು ಕಂಪನಿಯ ಸಿಇಒ ಸ್ಥಾನದಿಂದ ತೆಗೆಯಲಾಯಿತು. ವಿವಿಧ ಮಾರಾಟಗಾರರಿಗೆ 10 ಮಿಲಿಯನ್ ಡಾಲರ್ ಮೌಲ್ಯದ "ವಿವರಿಸಲಾಗದ ಪಾವತಿಗಳ" ಕುರಿತಾದ ಆರೋಪವನ್ನು ಹೊಂದಿದ್ದಾರೆ. ಹೂಡಿಕೆದಾರ ಮಹೇಶ್ ಮೂರ್ತಿ ವಿರುದ್ಧ 738 ಕೋಟಿ ರೂ. ಮೊತ್ತದ ವಂಚನೆ ಆರೋಪ ಮಾಡಿದ್ದಾರೆ.

mysore-dasara_Entry_Point