ಝೇರೊದಾ ಸಿಇಒ ನಿತಿನ್ ಕಾಮತ್‌ಗೆ ಲಘು ಪಾರ್ಶ್ವವಾಯು; ಫಿಟ್ನೆಸ್ ಇದ್ರೂ ಸ್ಟ್ರೋಕ್, ವೈದ್ಯರು ಹೇಳುವುದೇನು
ಕನ್ನಡ ಸುದ್ದಿ  /  ಜೀವನಶೈಲಿ  /  ಝೇರೊದಾ ಸಿಇಒ ನಿತಿನ್ ಕಾಮತ್‌ಗೆ ಲಘು ಪಾರ್ಶ್ವವಾಯು; ಫಿಟ್ನೆಸ್ ಇದ್ರೂ ಸ್ಟ್ರೋಕ್, ವೈದ್ಯರು ಹೇಳುವುದೇನು

ಝೇರೊದಾ ಸಿಇಒ ನಿತಿನ್ ಕಾಮತ್‌ಗೆ ಲಘು ಪಾರ್ಶ್ವವಾಯು; ಫಿಟ್ನೆಸ್ ಇದ್ರೂ ಸ್ಟ್ರೋಕ್, ವೈದ್ಯರು ಹೇಳುವುದೇನು

Nithin Kamath: ಝೋರೊದಾ ಸಿಇಒ ನಿತಿನ್ ಕಾಮತ್ ಅವರು ಒಂದೂವರೆ ತಿಂಗಳ ಹಿಂದೆ ಲಘು ಸ್ಟ್ರೋಕ್‌ಗೆ ಒಳಗಾಗಿದ್ದಾರೆ. ಈ ವಿಚಾರವನ್ನ ಖುದ್ದು ಅವರೇ ಬಹಿರಂಗ ಪಡಿಸಿದ್ದಾರೆ. ವೈದ್ಯರು ಪಾರ್ಶ್ವವಾಯುಗೆ ಕಾರಣಗಳನ್ನ ತಿಳಿಸಿದ್ದಾರೆ.

ಝೋರೊದಾ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ಒಂದೂವರೆ ತಿಂಗಳ ಹಿಂದೆ ಲಘು ಪಾರ್ಶ್ವವಾಯುಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ತುಂಬಾ ಫಿಟ್ನೆಸ್ ಇದ್ರೂ ಸ್ಟ್ರೋಕ್ ಬರಲು ಕಾರಣವೇನು ಅನ್ನೋದನ್ನ ವೈದ್ಯರು ತಿಳಿಸಿದ್ದಾರೆ.
ಝೋರೊದಾ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ಒಂದೂವರೆ ತಿಂಗಳ ಹಿಂದೆ ಲಘು ಪಾರ್ಶ್ವವಾಯುಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ತುಂಬಾ ಫಿಟ್ನೆಸ್ ಇದ್ರೂ ಸ್ಟ್ರೋಕ್ ಬರಲು ಕಾರಣವೇನು ಅನ್ನೋದನ್ನ ವೈದ್ಯರು ತಿಳಿಸಿದ್ದಾರೆ.

ದೆಹಲಿ: ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಝೋರೊದಾ ಸಿಇಒ ಹಾಗೂ ಕರ್ನಾಟಕ ಮೂಲದ ನಿತಿನ್ ಕಾಮತ್ ಅವರು 6 ವಾರಗಳ ಹಿಂದೆ ಪಾರ್ಶ್ವವಾಯುಗೆ ಒಳಗಾಗಿದ್ದರು ಎಂದು ಗೊತ್ತಾಗಿದೆ. ಸೋಮವಾರ (ಫೆಬ್ರವರಿ 26) ಕಾಮತ್ ಅವರೇ ವಿಚಾರವನ್ನು ಹಂಚಿಕೊಂಡಿದ್ದಾರೆ.

ಮುಖದಲ್ಲಿ ಎಳೆಯುವಂತ ಅನುಭವ, ಓದಲು, ಬರೆಯುವುದಕ್ಕೆ ಆಗದಂತ ಲಕ್ಷಣಗಳನ್ನು ಗಮನಿಸುತ್ತಿದ್ದಂತೆ ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ 3 ರಿಂದ 6 ತಿಂಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ನಿತಿನ್ ಕಾಮತ್ ಅವರು ಇತ್ತೀಚೆಗಷ್ಟೇ ಅವರ ತಂದೆಯನ್ನು ಕಳೆದುಕೊಂಡಿದ್ದರು. ಜೊತೆಗೆ ಬ್ಯುಸಿ ಲೈಫ್‌ನಲ್ಲಿ ಕಡಿಮೆ ನಿದ್ದೆ, ಬಳಲಿಕೆ, ನಿರ್ಜಲೀಕರಣ, ಅತಿಯಾದ ವ್ಯಾಯಾಮ ಪಾರ್ಶ್ವವಾಯುಗೆ ಕಾರಣವಾಗಿದೆ. ಉದ್ಯಮದ ಜೊತೆಗೆ ತಮ್ಮ ಫಿಟ್ನೆಸ್ ಮೂಲಕ ಮಾದರಿಯಾಗಿದ್ದ 44 ವರ್ಷದ ನಿತಿನ್ ಅವರಿಗೆ ಲಘು ಸ್ಟ್ರೋಕ್ ಕಾಣಿಸಿಕೊಂಡಿರುವುದು ಕೆಲಸ ಮತ್ತು ಜೀವನದ ಬ್ಯಾಲೆನ್ಸ್ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ತುಂಬಾ ಫಿಟ್ನೆಸ್ ಕಾಯ್ದುಕೊಂಡಿದ್ದರೂ ನಿತಿನ್ ಅವರಿಕೆ ಸ್ಟ್ರೋಕ್ ಬರಲು ಕಾರಣವೇನು ಎಂಬುದನ್ನು ಹೈದರಾಬಾದ್ ಮೂಲದ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಬಹಿರಂಗ ಪಡಿಸಿದ್ದಾರೆ. ಅವರು ಹೇಳಿರುವ ಐದು ಅಪಾಯಕಾರಿ ಅಂಶಗಳನ್ನ ಇಲ್ಲಿ ತಿಳಿಯೋಣ.

ಒತ್ತಡ, ನಿದ್ರಾಹೀನತೆ, ಅತಿಯಾದ ವ್ಯಾಯಾಮ, ಬಳಲಿಕೆ ಹಾಗೂ ನಿರ್ಜಲೀಕರಣ ಸ್ಟ್ರೋಕ್‌ಗೆ ಪ್ರಮುಖ ಕಾರಣ ಎಂದಿದ್ದಾರೆ. 2021ರಲ್ಲಿ ನಿತಿನ್ ಕಾಮತ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಟ್ವೀಟ್‌ವೊಂದನ್ನ ಮಾಡಿದ್ರು. ನನ್ನ ವಲಯದಲ್ಲಿ ಹೃದಯ ಸಮಸ್ಯೆಗಳಿರುವ ಜನರು ಸಾಕಷ್ಟು ಮಂದಿ ಇದ್ದಾರೆ. ಸಾಮಾನ್ಯವಾಗಿ ಇದಕ್ಕೆ ನಿದ್ದೆಯ ಕೊರತೆ ಇರುವಂತೆ ಕಾಣುತ್ತದೆ ಎಂದಿದ್ದರು. ಅಷ್ಟೇ ಅಲ್ಲ ನನ್ನ ಹಾಗೆ ನಿಮಗೂ ನಿರಂತರವಾಗಿ ಕೆಲಸದ ಗೊಂದಲಗಳು, ಇಮೇಲ್, ಸುದ್ದಿ ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮಗಳು, ಚಾಟ್‌ಗಳು ನಿದ್ದೆಗೆ ಅಡ್ಡಿಯಾಗುತ್ತಿದ್ದರೇ, ನಿದ್ದೆ ಮಾಡುವ ಕೆಲವು ಗಂಟೆಗಳಿಗೂ ಮುನ್ನ ಈ ಎಲ್ಲಾ ಸಂಪರ್ಕಗಳನ್ನ ಕಡಿತ ಮಾಡುವುದು ನಿದ್ದೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದರು.

ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ದೀಪಕ್ ಕೃಷ್ಣಮೂರ್ತಿ ಕೂಡ ನಿತಿನ್ ಕಾಮತ್ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ, ಕೆಲವು ದಿನಗಳ ಹಿಂದೆ ನಾನು 72 ಗಂಟೆಗಳ ಕೆಲಸದ ವಿರುದ್ಧ ಮಾತನಾಡಿದಾಗ ಪರ ವಿರೋಧಗಳು ವ್ಯಕ್ತವಾದವು. ವಾಸ್ತವದಲ್ಲಿ ಕೆಲಸ ಮತ್ತು ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ವಿಶ್ರಾಂತಿ ಮತ್ತು ನಿದ್ದೆಗೆ ಸಮಯಬೇಕು ಎಂದು ಸಲಹೆ ನೀಡಿದ್ದಾರೆ.

ಹೃದ್ರೋಗ ತಜ್ಞ ಡಾ ಡಿವಿಜ್ ಖೇತನ್, ಫಿಟ್ ಆಗಿರುವುದು ಮತ್ತು ಆರೋಗ್ಯವಾಗಿರುವು ಎರಡೂ ಒಂದೇ ಅಲ್ಲ. ಮೈಲಿಗಳಷ್ಟು ದೂರ ಓಡಿದರೂ ಹೃದಯಾಘಾತವಾಗುತ್ತದೆ ಎಂದು ಅತಿಯಾದ ವ್ಯಾಯಾಮದ ಅಪಾಯವನ್ನು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ ಕಡಿಮೆ ನಿದ್ದೆ, ಅತಿಯಾದ ವರ್ಕೌಟ್, ಒತ್ತಡ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ವೈದ್ಯರು ಒತ್ತಿ ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner