Custard Apple for diabetes: ಡಯಾಬಿಟೀಸ್ ಇರುವವರು ಸೀತಾಫಲ ತಿನ್ನಬಹುದೇ..ವೈದ್ಯರು ಹೇಳೋದೇನು..?
ಸೀತಾಫಲದಲ್ಲಿರುವ ಬಯೋಆಕ್ಟಿವ್ ಅಣುಗಳು ಆಂಟಿ ಒಬೆಸಿಯೋಜೆನಿಕ್, ಮಧುಮೇಹ ವಿರೋಧಿ ಹಾಗೂ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಸೀತಾಫಲವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಮಧುಮೇಹಿಗಳು ಕೂಡಾ ಇದನ್ನು ತಿನ್ನಬಹುದು. ಆದರೆ ಮಿತವಾಗಿ ತಿನ್ನಬೇಕಷ್ಟೇ.
ಈಗಂತೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅಗತ್ಯವಾಗಿದೆ. ವಿವಿಧ ರೀತಿಯ ವೈರಸ್‌ಗಳು ಅಟ್ಯಾಕ್ ಮಾಡುತ್ತಿರುವುದರಿಂದ ಸದಾ ಜಾಗರೂಕತೆಯಿಂದ ಇರಬೇಕಿದೆ. ಜೊತಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡಾ ಮುಖ್ಯವಾಗಿದೆ.
ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಒತ್ತಡ, ಆತಂಕ, ನಿದ್ರೆಯ ಕೊರತೆ ಇತ್ಯಾದಿಗಳಿಂದ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಅಲ್ಲದೆ, ನಾವು ಉಸಿರಾಡುವ ಗಾಳಿಯಿಂದ ವಿವಿಧ ರೋಗಗಳು ಹರಡುತ್ತವೆ. ಪ್ರತಿ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಇವುಗಳು ನಿಮ್ಮನ್ನು ವಿವಿಧ ರೋಗಗಳಿಂದ ರಕ್ಷಿಸಬಲ್ಲವು. ಕೆಲವು ಹಣ್ಣುಗಳು ವರ್ಷವಿಡೀ ಲಭ್ಯವಿರುತ್ತವೆ ಮತ್ತು ಕೆಲವು ಹಣ್ಣುಗಳು ಋತುವಿನಲ್ಲಿ ಮಾತ್ರ ಲಭ್ಯವಿರುತ್ತವೆ. ಇಂತಹ ಹಣ್ಣುಗಳನ್ನು ತಿಂದರೆ ಹಲವಾರು ಲಾಭಗಳಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಈ ಮಳೆಗಾಲದಲ್ಲಿ ಸೀತಾಫಲ ಕೂಡಾ ದೊರೆಯುತ್ತದೆ. ಈ ಹಣ್ಣುಗಳು ಅನೇಕ ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರದ ಅಂಶ ಸಮೃದ್ಧವಾಗಿದೆ. ಸೀತಾಫಲವು ಹುಣ್ಣುಗಳನ್ನು ಗುಣಪಡಿಸಲು ಮತ್ತು ಅಸಿಡಿಟಿಯನ್ನು ತಡೆಯಲು ಬಹಳ ಸಹಾಯಕವಾಗಿದೆ. ಇದಲ್ಲದೆ, ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ.
ಕಣ್ಣಿನ ದೃಷ್ಟಿ ಸುಧಾರಿಸುತ್ತದೆ
ಈ ಹಣ್ಣುಗಳನ್ನು ತಿಂದರೆ ದೃಷ್ಟಿ ಸುಧಾರಿಸುತ್ತದೆ. ಕೂದಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಕೂಡಾ ಉಪಯುಕ್ತವಾಗಿದೆ. ಸೀತಾಫಲದಲ್ಲಿರುವ ಕಬ್ಬಿಣದ ಅಂಶವು ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡುತ್ತದೆ, ಹಿಮೋಗ್ಲೋಬಿನ್ ಸುಧಾರಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.
ಮಧುಮೇಹ ವಿರೋಧಿ ಗುಣ
ಸೀತಾಫಲದಲ್ಲಿರುವ ಬಯೋಆಕ್ಟಿವ್ ಅಣುಗಳು ಆಂಟಿ ಒಬೆಸಿಯೋಜೆನಿಕ್, ಮಧುಮೇಹ ವಿರೋಧಿ ಹಾಗೂ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಸೀತಾಫಲವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಮಧುಮೇಹಿಗಳು ಕೂಡಾ ಇದನ್ನು ತಿನ್ನಬಹುದು. ಆದರೆ ಮಿತವಾಗಿ ತಿನ್ನಬೇಕಷ್ಟೇ.
ತೂಕ ಇಳಿಸಲು ಸಹಾಯಕಾರಿ
ಸೀತಾಫಲದಲ್ಲಿ ಫೈಬರ್ ಸಮೃದ್ಧವಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಔಷಧವಾಗಿದೆ. ಹಾಗೆಂದ ಮಾತ್ರಕ್ಕೆ ಅತಿಯಾಗಿ ತಿನ್ನಬೇಡಿ. ಇದರಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ತಡೆಯುತ್ತದೆ. ಹಾಗೇ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.