ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ ಹೇಗೆ? ಆದಾಯ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಸೈಡ್‌ ಬಿಸ್ನೆಸ್‌ ಐಡಿಯಾಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ ಹೇಗೆ? ಆದಾಯ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಸೈಡ್‌ ಬಿಸ್ನೆಸ್‌ ಐಡಿಯಾಗಳು

ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ ಹೇಗೆ? ಆದಾಯ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಸೈಡ್‌ ಬಿಸ್ನೆಸ್‌ ಐಡಿಯಾಗಳು

Business Idea: ಕೆಲವರು ತಮ್ಮ ವೇತನ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದುಕೊಳ್ಳುತ್ತಾರೆ. ಈ ಸಮಯದಲ್ಲಿ ಒಂದಿಷ್ಟು ಸೈಡ್‌ ಬಿಸ್ನೆಸ್‌ ಮೂಲಕ ಹೆಚ್ಚು ಆದಾಯ ಗಳಿಸಲು ಬಯಸುತ್ತಾರೆ. ಈ ರೀತಿ ಸೈಡ್‌ ಬಿಸ್ನೆಸ್‌ ಮಾಡಲು ಬಯಸುವವರಿಗೆ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ
ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ

Business Idea: ಈಗ ಹಣ ಎಷ್ಟಿದರೂ ಸಾಕಾಗುವುದಿಲ್ಲ. ಕಡಿಮೆ ಸಂಬಳ ಪಡೆಯುವರು ಬದುಕಿನಲ್ಲಿ ಹೆಚ್ಚು ಆದಾಯ ತರುವ ಮೂಲಗಳತ್ತ ಗಮನ ಹರಿಸುತ್ತಾ ಇರುತ್ತಾರೆ. ಕೆಲವು ಕಂಪನಿಗಳಲ್ಲಿ ಕೆಲಸ ಮಾಡುವಾಗ ಬೇರೆ ಉದ್ಯೋಗ ಮಾಡುವಂತೆ ಇಲ್ಲ. ಈ ರೀತಿ ಮಾಡಿದರೆ ಇರುವ ಕೆಲಸಕ್ಕೆ ಕುತ್ತಾಗಬಹುದು. ಆದರೆ, ಇನ್ನು ಕೆಲವು ಉದ್ಯೋಗಗಳಲ್ಲಿ ಅಂತಹ ನಿಯಮ ಇರುವುದಿಲ್ಲ. ಈ ರೀತಿ ಸೈಡ್‌ ಬಿಸ್ನೆಸ್‌ ಮಾಡುವವರಿಗೆ ಸಾಕಷ್ಟು ಅವಕಾಶವಿದೆ. ಈ ರೀತಿ ಸೈಡ್‌ ಬಿಸ್ನೆಸ್‌ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಕೆ ಮಾಡಬಹುದು.

ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಸೈಡ್‌ ಬಿಸ್ನೆಸ್‌ಗಳು

ಆದಾಯ ಹೆಚ್ಚಿಸಲು ಬಯಸಿದರೆ ಹಲವು ಅರೆಕಾಲಿಕ ಉದ್ಯೋಗಗಳು ಇರುತ್ತವೆ. ಬಿಡುವಿನ ವೇಳೆಯಲ್ಲಿ ಇಂತಹ ಕೆಲಸ ಮಾಡುವ ಮೂಲಕ ಆದಾಯ ಗಳಿಸಬಹುದು. ಕಾಯಂ ಉದ್ಯೋಗ ಇಲ್ಲದೆ ಇರುವವರಿಗೂ ಇವು ಸೂಕ್ತವಾಗಿದೆ. ಈ ರೀತಿ ಹೆಚ್ಚುವರಿ ಗಳಿಕೆ ಮಾಡಿದರೆ ಖರ್ಚು ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತದೆ. ಒಂದಿಷ್ಟು ಹಣ ಉಳಿತಾಯ ಮಾಡಲು ಕೂಡ ಹೆಚ್ಚುವರಿ ಆದಾಯ ನೆರವಾಗುತ್ತದೆ. ಈ ರೀತಿ ಮಾಡಬಹುದಾದ ಕೆಲವು ಸೈಡ್‌ ಬಿಸ್ನೆಸ್‌ಗಳ ಐಡಿಯಾಗಳನ್ನು ಈ ಮುಂದೆ ನೀಡಲಾಗಿದೆ.

ಪ್ರಿಂಟ್‌ ಆನ್‌ ಡಿಮ್ಯಾಂಡ್‌: ಜವಳಿ ಉದ್ಯಮದಲ್ಲಿಯೂ ನೀವು ಹೆಚ್ಚುವರಿ ಆದಾಯ ಗಳಿಸಬಹುದು. ಟೀಶರ್ಟ್‌ ಮೇಲೆ ಡಿಸೈನ್‌ ಹಾಕುವ, ನುಡಿಮುತ್ತುಗಳನ್ನು ಪ್ರಿಂಟ್‌ ಹಾಕಿಸಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು. ಪ್ರಿಂಟ್‌ ಆನ್‌ ಡಿಮ್ಯಾಂಡ್‌ ಮಾದರಿಯನ್ನು ಬಳಸಿಕೊಂಡು ಹೆಚ್ಚುವರಿ ಹಣ ಸಂಪಾದಿಸಬಹುದು. ಇದಕ್ಕೆ ಹೆಚ್ಚು ಹೂಡಿಕೆ ಬೇಕಿಲ್ಲ. ವಹಿವಾಟುಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪನ್ನವನ್ನು ಒದಗಿಸಬಹುದು. ಪ್ರಿಂಟ್‌ ಆನ್‌ ಡಿಮ್ಯಾಂಡ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.

ಫೋಟೋಗ್ರಫಿ: ನಿಮ್ಮ ಫೋಟೋಗ್ರಫಿ ಕುರಿತು ಆಸಕ್ತಿ ಇದ್ದರೆ ಇದನ್ನೇ ಸೈಡ್‌ ಬಿಸ್ನೆಸ್‌ ಮಾಡಿಕೊಳ್ಳಬಹುದು. ನಿಮ್ಮ ಸ್ಥಳೀಯ ಪ್ರದೇಶದಲ್ಲಿ ನೀವು ಛಾಯಾಗ್ರಾಹಕರಾಗಿ ಕೆಲಸ ಮಾಡಬಹುದು. ಒಂದು ಫೋಟೋಶೂಟ್ ಗೆ 2-5 ಸಾವಿರ ರೂಪಾಯಿ ಆದಾಯ ಗಳಿಸಬಹುದು. ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಯಾರಾದರೂ ನಿಮ್ಮ ಫೋಟೋಗಳನ್ನು ಡೌನ್‌ಲೋಡ್ ಮಾಡಿದಾಗ ನೀವು ಕಮಿಷನ್ ಪಡೆಯುವಿರಿ. ಮದುವೆ, ನಾಮಕರಣ ಇತ್ಯಾದಿ ಕಾರ್ಯಕ್ರಮಗಳ ಫೋಟೋಗ್ರಫಿಯನ್ನೂ ಮಾಡಬಹುದು. ಕೆಲವೊಂದು ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ದೊಡ್ಡ ಸ್ಟುಡಿಯೋದವರನ್ನು ಕರೆಯಲು ಕೆಲವರು ಹಿಂಜರಿಯುತ್ತಾರೆ. ಇಂತಹ ಫಂಕ್ಷನ್‌ಗಳಿಗೆ ಸಣ್ಣಪುಟ್ಟ ಫೋಟೋಗ್ರಫರ್‌ಗಳಿಗೆ ಬೇಡಿಕೆ ಇರುತ್ತದೆ. ನೀವು ಒಂದು ಟೀಮ್‌ ಹೊಂದಿದ್ದರೆ ಇನ್ನಷ್ಟು ದೊಡ್ಡ ಆರ್ಡರ್‌ ಪಡೆಯಬಹುದು.

ಇವೆಂಟ್‌ ಮ್ಯಾನೇಜ್‌ಮೆಂಟ್‌: ಇತ್ತೀಚಿನ ದಿನಗಳಲ್ಲಿ ಈವೆಂಟ್ ಪ್ಲಾನರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈವೆಂಟ್ ಮ್ಯಾನೇಜ್ಮೆಂಟ್ ದೊಡ್ಡ ಉದ್ಯಮವಾಗಿ ಮುಂದುವರಿಯುತ್ತದೆ. ಆದಾಯ ಗಳಿಸಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಜನ್ಮದಿನ, ಮದುವೆ, ವಾರ್ಷಿಕೋತ್ಸವ, ಯಾವುದೇ ಇತರ ಸಂದರ್ಭಗಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಮಾಡುವವರು ಬೇಕಾಗಿರುತ್ತಾರೆ. ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ನೀವು ತಂಡವನ್ನು ಹೊಂದಿದ್ದರೆ ನೀವು ಹೆಚ್ಚು ಮುಕ್ತವಾಗಿ ಕೆಲಸ ಮಾಡಬಹುದು.

ಇದನ್ನೂ ಓದಿ: Village Business Ideas: ಹಳ್ಳಿಯಾದರೇನು ಶಿವ, ಹಳ್ಳಿಯಲ್ಲಿದ್ದುಕೊಂಡು ಈ ಬಿಸ್ನೆಸ್‌ ಮಾಡಿದರೆ ಕೈತುಂಬಾ ಸಂಪಾದನೆ, ಇಲ್ಲಿದೆ 40 ಐಡಿಯಾ

ನಿಮ್ಮಲ್ಲಿರುವ ಕೌಶಲ ಬಳಸಿ ಆದಾಯ ಗಳಿಸಿ: ನೀವು ಯಾವುದೇ ಕೌಶಲ್ಯವನ್ನು ಹೊಂದಿದ್ದರೆ ಆ ಕೌಶಲ್ಯವನ್ನು ಬಳಸಿಕೊಂಡು ನೀವು ಸ್ವತಂತ್ರ ಕೆಲಸವನ್ನು ಮಾಡಬಹುದು. ಬರವಣಿಗೆ, ಎಡಿಟಿಂಗ್‌, ವೆಬ್‌ಸೈಟ್ ವಿನ್ಯಾಸ ಇತರರ ಮೂಲಕ ಕೆಲಸ ಮಾಡಬಹುದು. ನೀವು ಗಂಟೆಗೆ ಇಂತಿಷ್ಟು ಎಂದು ಚಾರ್ಜ್ ಮಾಡಬಹುದು.

ರೈಡರ್‌ಗಳಾಗಿ: ಓಲಾ, ಉಬೆರ್‌, ರಾಪಿಡೊ ಮುಂತಾದ ಸಾರಿಗೆ ವ್ಯವಸ್ಥೆಗಳಲ್ಲಿಯೂ ಪಾರ್ಟ್‌ಟೈಮ್‌ ಕೆಲಸ ಮಾಡಬಹುದು. ಝೊಮಾಟೊ, ಸ್ವಿಗ್ಗಿ ಮುಂತಾದ ಆಹಾರ ವಿತರಣಾ ಕಂಪನಿಗಳಲ್ಲಿಯೂ ಕೆಲಸ ಮಾಡಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಸಾಕಷ್ಟು ಜನರು ಈ ರೀತಿ ಸೈಡ್‌ ಬಿಸ್ನೆಸ್‌ ಮಾಡುತ್ತಾರೆ. ಆಫೀಸ್‌ ಕೆಲಸ ಮುಗಿದ ಬಳಿಕ ಸಾಕಷ್ಟು ಜನರು ಈ ರೀತಿಯ ಕೆಲಸ ಮಾಡುತ್ತಾರೆ.

ಇನ್ನಷ್ಟು ಸೈಡ್‌ ಬಿಸ್ನೆಸ್‌ ಐಡಿಯಾಗಳು: ಟ್ಯೂಷನ್‌, ಟ್ಯೂಟರ್‌, ಬ್ಲಾಗಿಂಗ್‌, ಆನ್‌ಲೈನ್‌ ಕೋರ್ಸ್‌, ಇ-ಕಾಮರ್ಸ್‌ನಲ್ಲಿ ಪ್ರಾಡಕ್ಟ್‌ಗಳ ಮಾರಾಟ, ಫ್ರೀಲ್ಯಾನ್ಸ್‌ ರೈಟಿಂಗ್‌, ಫ್ರಿಲ್ಯಾನ್ಸಿಂಗ್‌ ಕೆಲಸಗಳು, ಉತ್ಪನ್ನಗಳ ಮರುಮಾರಾಟ ಮಾಡುವ ರಿಸೆಲ್ಲರ್‌ ಬಿಸ್ನೆಸ್‌ ಇತ್ಯಾದಿಗಳನ್ನೂ ಮಾಡಬಹುದು. ನೆನಪಿಡಿ, ನೀವು ಕೆಲಸ ಮಾಡುವ ಕಂಪನಿಯು ಸೈಡ್‌ ಬಿಸ್ನೆಸ್‌ಗೆ ಅವಕಾಶ ನೀಡದೆ ಇರುವ ಕಂಪನಿಯಾಗಿದ್ದರೆ ಸೈಡ್‌ ಬಿಸ್ನೆಸ್‌ ಮಾಡಬೇಡಿ.

Whats_app_banner