Carrot Farming: ಅವಮಾನಿಸಿದ ರೈತನೆದುರೇ ಕ್ಯಾರೆಟ್ ಬೆಳೆದು 1 ಕೋಟಿ ಸಂಪಾದನೆ; ಇದು ಕೋಟ್ಯಾಧಿಪತಿಯಾದ ಫುಮನ್ ಯಶೋಗಾಥೆ!-carrot farming success farmer replaces paddy with carrots to transform his life earns rs 1 crore in year prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Carrot Farming: ಅವಮಾನಿಸಿದ ರೈತನೆದುರೇ ಕ್ಯಾರೆಟ್ ಬೆಳೆದು 1 ಕೋಟಿ ಸಂಪಾದನೆ; ಇದು ಕೋಟ್ಯಾಧಿಪತಿಯಾದ ಫುಮನ್ ಯಶೋಗಾಥೆ!

Carrot Farming: ಅವಮಾನಿಸಿದ ರೈತನೆದುರೇ ಕ್ಯಾರೆಟ್ ಬೆಳೆದು 1 ಕೋಟಿ ಸಂಪಾದನೆ; ಇದು ಕೋಟ್ಯಾಧಿಪತಿಯಾದ ಫುಮನ್ ಯಶೋಗಾಥೆ!

Carrot Farming Success: ಅವಮಾನಿಸಿದ ರೈತನ ಮುಂದೆಯೇ ಕ್ಯಾರೆಟ್ ಬೆಳೆದು ವಾರ್ಷಿಕ 1 ಕೋಟಿ ದುಡಿಯುತ್ತಿದ್ದಾರೆ ಈ ರೈತ. ಕ್ಯಾರೆಟ್ ಬೀಜಗಳ ವಿತರಣೆಯನ್ನೂ ಮಾಡುತ್ತಿದ್ದಾರೆ. ಭತ್ತದ ಬದಲಿಗೆ ಕ್ಯಾರೇಟ್​ ಬೆಳೆದು ಕೋಟ್ಯಾಧಿಪತಿ ಆದವನ ಯಶೋಗಾಥೆ ಇದು.

ಅವಮಾನಿಸಿದ ರೈತನೆದುರೇ ಕ್ಯಾರೆಟ್ ಬೆಳೆದು 1 ಕೋಟಿ ಸಂಪಾದನೆ; ಇದು ಕೋಟ್ಯಾಧಿಪತಿಯಾದ ಫುಮನ್ ಯಶೋಗಾಥೆ!
ಅವಮಾನಿಸಿದ ರೈತನೆದುರೇ ಕ್ಯಾರೆಟ್ ಬೆಳೆದು 1 ಕೋಟಿ ಸಂಪಾದನೆ; ಇದು ಕೋಟ್ಯಾಧಿಪತಿಯಾದ ಫುಮನ್ ಯಶೋಗಾಥೆ!

Carrot Farming Success: ಇತ್ತೀಚೆಗೆ ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕುಸಿದಿದೆ. ಮಳೆಯಿಲ್ಲ, ಬೆಳೆಯಿಲ್ಲ, ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವವರು ನಗರದ ಕಡೆ ಪ್ರಯಾಣ ಬೆಳೆಸಿದ್ದಾರೆ. ಕಷ್ಟಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕೃಷಿ ತೊರೆದು ಬೇರೆ ಬೇರೆ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಎಲ್ಲರಿಗೂ ಮಾದರಿಯಾಗಿದ್ದಾನೆ. ಕ್ಯಾರೇಟ್ ಬೆಳೆದು ವರ್ಷಕ್ಕೆ ಒಂದು ಕೋಟಿ ಲಾಭ ತೆಗೆದಿದ್ದಾನೆ. ಬಂಗಾರದ ಬೆಳೆ ತೆಗೆಯುವಲ್ಲಿ ಯಶಸ್ಸು ಕಂಡಿದ್ದು, ಎಲ್ಲರನ್ನೂ ದಂಗಾಗಿಸಿದ್ದಾರೆ.

ರೈತನ ಹೆಸರು ಫುಮನ್ ಸಿಂಗ್ ಕೌರ್ರಾ. ಈತ ಪಂಜಾಬ್‌ನ ಕಪುರ್ತಲಾ ಗ್ರಾಮವಾದ ಪರಮ್‌ಜಿತ್‌ಪುರದವರು. ಒಡಹುಟ್ಟಿದ 6 ಸಹೋದರರ ಪೈಕಿ ಕೊನೆಯವರು. ಅವರದ್ದು ರೈತ ಕುಟುಂಬ. ಅವರು ತಂದೆ, ಅಜ್ಜರ ಪರಂಪರೆ ಮುಂದುವರೆಸುತ್ತಾ ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ. ಹಾಗಂತ ಫುಮನ್ ಓದಿನಲ್ಲೂ ಹಿಂದೆ ಬಿದ್ದಿರಲಿಲ್ಲ. ಅವರು ಬಿಎ ಓದಿದರು. ಆದರೆ ಬಿಎ 2ನೇ ವರ್ಷಕ್ಕೆ ಶಿಕ್ಷಣ ಕೊನೆಗೊಳಿಸಿದರು. ಅದಕ್ಕೆ ಕಾರಣ ಕಾಲೇಜು ಶುಲ್ಕ ಕಟ್ಟಲು ಸಾಧ್ಯವಾಗದೇ ಇರುವುದು.

ಕಾಲೇಜು ತೊರೆದು ಕುಟುಂಬಕ್ಕೆ ಸಹಾಯ ಹಾಗೂ ಕೃಷಿಯತ್ತ ದಾಪುಗಾಲಿಟ್ಟರು. ಡೈರಿ ಫಾರ್ಮ್​​ ನಡೆಸುವುದರ ಜೊತೆಗೆ ಭತ್ತ ಮತ್ತು ಗೋಧಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಎಷ್ಟೇ ಬೆಳೆದರೂ ತಾವು ಖರ್ಚು ಮಾಡಿದ್ದಕ್ಕೆ ತಕ್ಕಂತೆ ಲಾಭ ಬರುತ್ತಿರಲಿಲ್ಲ. ಅದಕ್ಕಾಗಿ ತುಂಬಾ ಯೋಚಿಸಿದ. ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಯೋಚನೆ ಮಾಡತೊಡಗಿದರು. ಆಗ ಅವರು ಕಂಡುಕೊಂಡಿದ್ದೇ ಕ್ಯಾರೇಟ್ ಕೃಷಿ! ಇದು ಆತನ ನಿರ್ಧಾರ ಮತ್ತು ಜೀವನವನ್ನೇ ಬದಲಿಸಿತು ನೋಡಿ.

ಇದೇನ್ ಚಹನಾ ಹೇಳಿಕೊಡೋಕೆ ಎಂದು ಬೈದಿದ್ದ ರೈತ

ಬೇರೆ ಕೃಷಿ ಮಾಡಬೇಕೆಂದು ಮನಸ್ಸಿನಲ್ಲಿ ಬೀಜ ಬಿತ್ತಿಕೊಂಡಿದ್ದ ಫುಮರ್​​, ಕ್ಯಾರೇಟ್ ಕೃಷಿಗೆ ಪ್ರಸಿದ್ಧವಾದ ಅಲ್ಲುಪುರ್ ಎಂದೂ ಕರೆಯಲ್ಪಡುವ ಪರಮ್ಜಿತ್ಪುರವು ಕಪುರ್ತಲಾ ಜಿಲ್ಲೆಯ ಸುಲ್ತಾನಪುರ ಲೋಧಿ ಬ್ಲಾಕ್​ನಲ್ಲಿ ಕ್ಯಾರೆಟ್ ಬೆಳೆದ ರೈತನ ಸಹಾಯ ಕೋರಿದ್ದರು. ಆದರಿಲ್ಲಿ ಮತ್ತೊಬ್ಬ ಅವಮಾನಿಸಿದ. ಸಹಾಯ ಮಾಡೋಕೆ ಇದೇನು ಚಹಾ ಎಂದುಕೊಂಡಿದ್ದೀಯಾ ಎಂದು ಬೈದಿದ್ದ. ದೂಷಿಸಿದ್ದ. ಆದರೆ ಫುಮಾನ್ ಛಲ ಬಿಡಲಿಲ್ಲ. ಸಂಕಲ್ಪನೆಯೂ ಹೆಚ್ಚಾಯಿತು.

ಇದು ಕ್ಯಾರೆಟ್ ಕೃಷಿಕನಾಗಿ ಹೆಸರು ಮಾಡಬೇಕೆಂಬ ಫುಮಾನ್ ಅವರ ಸಂಕಲ್ಪವನ್ನು ಇನ್ನಷ್ಟು ಬಲಗೊಳಿಸಿತು. ಕಳೆದ 30 ವರ್ಷಗಳಲ್ಲಿ ಈ 65 ವರ್ಷ ವರ್ಷ ತೊಟ್ಟಿದ್ದ ಸಂಕಲ್ಪ ಕೊನೆಗೂ ಈಡೇರಿದೆ. 4.5 ಎಕರೆ ಜಮೀನಿನಲ್ಲಿ ಕ್ಯಾರೆಟ್ ಕೃಷಿ ಪ್ರಾರಂಭಿಸಿ ಅದುನ್ನು ಕೋಟಿಗಳಾಗಿ ಪರಿವರ್ತಿಸಿದ್ದಾರೆ. ಇಂದು, ಅವರ ಇಬ್ಬರು ಸಹೋದರರು ಸೇರಿದಂತೆ ಅವರ ಕುಟುಂಬ 80 ಎಕರೆಗಳಷ್ಟು ಭೂಮಿಯನ್ನು ಹೊಂದಿದೆ. ಪ್ರಸ್ತುತ ಪ್ರಾಥಮಿಕವಾಗಿ ಕ್ಯಾರೆಟ್ ಕೃಷಿಯ ಮೇಲೆ ಕೇಂದ್ರೀಕರಿಸಿದೆ.

ವಾರ್ಷಿಕ 1 ಕೋಟಿ ಆದಾಯ

ಅವರು ಕ್ಯಾರೆಟ್ ಬೆಳೆಯುವುದರ ಜೊತೆಗೆ ಅವುಗಳ ಬೀಜಗಳನ್ನೂ ಪೂರೈಸುತ್ತಾರೆ ಎಂಬುದು ವಿಶೇಷ. ಮಗನೊಂದಿಗೆ ಕೃಷಿ ಮಾಡುತ್ತಿರುವ ಅವರು ಇಂದು ಕ್ಯಾರೆಟ್ ಮತ್ತು ಬೀಜ ಕೃಷಿ ಮೂಲಕ ವರ್ಷಕ್ಕೆ 1 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ದಿ ಬೆಟರ್​ ಇಂಡಿಯಾ ಎಂಬ ವೆಬ್​ಸೈಟ್​ಗೆ ನೀಡಿರುವ ಸಂದರ್ಶನದಲ್ಲಿ ತಾನು ಬೆಳೆದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರು ಏನೆಂದು ಹೇಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಚಿಕ್ಕ ಹುಡುಗನಾಗಿದ್ದಾಗಲೇ, ದೊಡ್ಡ ಮಹತ್ವಾಕಾಂಕ್ಷೆ ಹೊಂದಿದ್ದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿ ದುಡಿಯುವ ಆಸೆಯಿತ್ತು. ಆದರೆ, ಬಡತನದಿಂದಾಗಿ ಅವರ ಕನಸುಗಳು ಮೊಟಕುಗೊಂಡವು. ಹಾಗಾಗಿ ನಾನು ನಮ್ಮ ಗೋಧಿ ಮತ್ತು ಭತ್ತದ ತೋಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ನಾವು ನಮ್ಮ ಡೈರಿಯಿಂದ ಹಾಲನ್ನು ಮಾರಾಟ ಮಾಡುತ್ತಿದ್ದೆವು. ಆದರೆ ನಮ್ಮದು ದೊಡ್ಡ ಕುಟುಂಬ ಆದ ಕಾರಣ ಆದಾಯ ಸಾಕಾಗುತ್ತಿರಲಿಲ್ಲ. ನಾನು ಎರಡು ವರ್ಷಗಳ ಕಾಲ ಕೋಳಿ ಫಾರ್ಮ್‌ನಲ್ಲಿಯೂ ಕೆಲಸ ಮಾಡಿದ್ದೇನೆ ಎನ್ನುತ್ತಾರೆ.

ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಾಭದಾಯಕ ಕ್ಯಾರೆಟ್‌ನತ್ತ ಗಮನ ನೀಡಿದೆ. 1993ರಲ್ಲಿ ಬೆಳೆಯ ಪ್ರಾರಂಭಿಸಿದೆ. ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಪ್ರಕಾರ, ತಮ್ಮ ಜಿಲ್ಲೆಯಲ್ಲಿ 1,200 ಹೆಕ್ಟೇರ್​ಗಿಂತಲೂ ಹೆಚ್ಚು ಭೂಮಿಯಲ್ಲಿ ಕ್ಯಾರೆಟ್ ಬೆಳೆಯಲಾಗುತ್ತದೆ. ಮುಖ್ಯವಾಗಿ ಸುಲ್ತಾನ್‌ಪುರ ಲೋಧಿಗೆ ಸೀಮಿತವಾಗಿದೆ. ಸಹಾಯ ಕೇಳಿದ್ದ ರೈತ ನಿರಾಕರಿಸಿದ್ದು ನನ್ನಲ್ಲಿ ಕಿಡಿ ಹೊತ್ತಿಸಿತು. ಅಂದೇ ನಾನು ಕ್ಯಾರೆಟ್ ಬೆಳೆದು ದೊಡ್ಡ ಹೆಸರು ಮಾಡುತ್ತೇನೆ ಎಂದು ಶಪಥ ಮಾಡಿದ್ದೆ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಆದರೆ ಯಾವತ್ತೂ ಕ್ಯಾರೆಟ್‌ ಬೆಳೆ ನನ್ನನ್ನು ಎಂದಿಗೂ ನಿರಾಸೆ ಮಾಡಲಿಲ್ಲ ಎಂದು ಮುಗುಳ್ನಗುತ್ತಾರೆ 65 ವರ್ಷದ ಫುಮನ್. ನೀವು ಯಶಸ್ಸು ಕಾಣಬೇಕೆಂದರೆ ನಿಮಗೆ ಪದವಿಯೇ ಯಾಕೆ ಬೇಕು? ಎಂದು ಪ್ರಶ್ನಿಸುವ ಫುಮನ್, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಕಾರ್ಯಕ್ರಮಗಳಿಗೆ ಹಾಜರಾದೆ. ಹೊಸ ತಳಿಗಳು, ತಂತ್ರಗಳ ಬಗ್ಗೆ ಕಲಿತೆ. ಆರಂಭದಲ್ಲಿ ಕೈಯಾರೆ ಬೀಜಗಳನ್ನು ಬಿತ್ತಿದೆ. ಉತ್ಪನ್ನಗಳನ್ನು ಮಾರಾಟ ಮಾಡಲು ಜಲಂಧರ್, ಲುಧಿಯಾನ ಮತ್ತು ಅಮೃತಸರದವರೆಗಿನ ಮಾರುಕಟ್ಟೆಗಳಿಗೆ ಪ್ರಯಾಣಿಸಬೇಕಾಗಿತ್ತು ಎಂದು ಹೇಳಿದ್ದಾರೆ.

650 ಎಕರೆಗೆ ನಾಟಿ ಮಾಡುವಷ್ಟು ಬೀಜಗಳು ನಮ್ಮಲ್ಲಿ ಸಿಗುತ್ತವೆ

ಆದಾಗ್ಯೂ, ಕಾಲಾನಂತರದಲ್ಲಿ ಬೀಜಗಳನ್ನು ಬಿತ್ತಲು ಯಂತ್ರಗಳನ್ನು ಖರೀದಿಸಿದೆ. ಕ್ಯಾರೆಟ್‌ ಗುಣಮಟ್ಟ ಅತ್ಯುತ್ತಮವಾಗಿತ್ತು. ಹೀಗಾಗಿ, ಮಾರಾಟಗಾರರೇ ತಮ್ಮ ಜಮೀನಿಗೆ ಬರಲು ಪ್ರಾರಂಭಿಸಿದರು. ತನ್ನ ಉತ್ಪನ್ನಗಳಿಗೆ ನಾನು ಮಾರುಕಟ್ಟೆಗೆ ಹೋಗುತ್ತಿಲ್ಲ, ಮಾರುಕಟ್ಟೆಯೇ ನನ್ನ ಬಳಿಗೆ ಬರುತ್ತಿದೆ ಎನ್ನುತ್ತಾರೆ ಅವರು. 4.5 ಎಕರೆ ಭೂಮಿಯಲ್ಲಿ ಧೈರ್ಯದಿಂದ ಕ್ಯಾರೆಟ್ ಬಿತ್ತನೆ ಮಾಡಿದ ನಂತರ ಅಂದಿನಿಂದ ಹಿಂತಿರುಗಿ ನೋಡಲಿಲ್ಲ. ನಾವು ಮೊದಲು ಪಟಿಯಾಲದಿಂದ ಬೀಜ ಖರೀದಿಸುತ್ತಿದ್ದೆವು. ನಂತರ ನಾವೇ ಬೀಜಗಳ ಉತ್ಪಾದನೆ ಪ್ರಾರಂಭ ನಡೆಸಿದೆವು. ಇಂದು 650 ಎಕರೆ ಪ್ರದೇಶದಲ್ಲಿ ನಾಟಿ ಮಾಡುವಷ್ಟು ಬೀಜಗಳು ನಮ್ಮಲ್ಲಿವೆ ಎಂದು ಹೇಳುತ್ತಾರೆ.

ಕೆಜಿ 1000 ರಿಂದ 1500 ರೂ, ಎಕರೆಗೆ 110 ಕ್ವಿಂಟಾಲ್ ಬೆಳೆ

ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಕೆಜಿಗೆ 1,000-1,500 ರೂಪಾಯಿ ಮಾರಾಟ ಮಾಡುತ್ತಾರೆ. ತನ್ನ ಕುಟುಂಬ ಹೊಂದಿದ್ದು 4.5 ಕೋಟಿ ಜಮೀನು. ಆದರಿಂದು 80 ಎಕರೆ ಹೊಂದಿದೆ. ಈ ಪೈಕಿ 37 ಫುಮನ್​ಗೆ ಸೇರಿದೆ. ಅಲ್ಲದೆ, 13 ಎಕರೆ ಗುತ್ತಿಗೆ ಪಡೆದು ಕ್ಯಾರೆಟ್ ಕೃಷಿ ಮಾಡುತ್ತಿದ್ದಾರೆ. ಕ್ಯಾರೆಟ್ ಅನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15ರ ನಡುವೆ ಬಿತ್ತಲಾಗುತ್ತದೆ. 90-100 ದಿನಗಳ ಕೊಯ್ಲಿಗೆ ಬರುತ್ತದೆ. ಒಂದು ಎಕರೆಗೆ 110 ಕ್ವಿಂಟಾಲ್ ಬೆಳೆಯುತ್ತಾರೆ. ಕ್ಯಾರೆಟ್ ಜೊತೆಗೆ ಭತ್ತ ಮತ್ತು ಜೋಳವನ್ನೂ ಸಹ ಬೆಳೆಯುವ ಅವರು ವಾರ್ಷಿಕ 1 ಕೋಟಿ ಆದಾಯ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.

ತಾನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಅವರೀಗ ತಮ್ಮ ಇಬ್ಬರು ಪುತ್ರರನ್ನು ಶಿಕ್ಷಣಕ್ಕೆಂದು ವಿದೇಶಕ್ಕೆ ಕಳುಹಿಸಲು ಸಿದ್ದರಾಗಿದ್ದಾರೆ. ಇತ್ತೀಚಿನ ಜೊತೆಗೆ ಒಂದು ಮನೆ, 30 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಪ್ರತಿದಿನವೂ ಕಲಿಯಲು ನಾಲ್ವರು ನನ್ನ ಮನೆಗೆ ಬರುತ್ತಾರೆ. ಅವರಿಗಾಗಿ ಎಲ್ಲವನ್ನೂ ವಿವರವಾಗಿ ವಿವರಿಸುತ್ತೇನೆ. ಪ್ರಾಯೋಗಿಕವಾಗಿ ನಾನು ಹೊಲಗಳಿಗೆ ಕರೆಯೊಯ್ದು ಬೆಳೆಯಲು, ಕಲಿಯಲು ಏನೆಲ್ಲಾ ಬೇಕೋ ಅದೆಲ್ಲವನ್ನೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

mysore-dasara_Entry_Point