Kannada News  /  Lifestyle  /  Chaitra Navratri 2023 Is Chaitra Navratri Beginning On March 21 Or 22 Find The Correct Date Details Of The Hindu Festival
ಚೈತ್ರ ನವರಾತ್ರಿ 2023
ಚೈತ್ರ ನವರಾತ್ರಿ 2023 (HT )

Chaitra Navratri 2023: ಚೈತ್ರ ನವರಾತ್ರಿ ಯಾವಾಗ ಶುರು 21ಕ್ಕಾ 22ಕ್ಕಾ?; ಚೈತ್ರ ನವರಾತ್ರಿಗೆ ಯಾವ ದಿನ ಯಾವ ಬಣ್ಣದ ಸೀರೆ ಎಂಬಿತ್ಯಾದಿ ವಿವರ

18 March 2023, 7:00 ISTHT Kannada Desk
18 March 2023, 7:00 IST

Chaitra Navratri 2023: ಚೈತ್ರ ನವರಾತ್ರಿಯು ಅತ್ಯಂತ ಮಂಗಳಕರವಾದ ಹಿಂದು ಹಬ್ಬಗಳಲ್ಲಿ ಒಂದಾಗಿದೆ. ಇದು ಈ ಸಲ ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ. ಹಬ್ಬದ ಸರಿಯಾದ ದಿನಾಂಕಗಳು ಮತ್ತು ಇತರೆ ವಿವರ ಇಲ್ಲಿದೆ ಗಮನಿಸಿ.

ವಸಂತ ನವರಾತ್ರಿ ಎಂದೂ ಕರೆಯಲ್ಪಡುವ ಚೈತ್ರ ನವರಾತ್ರಿಯು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ದುರ್ಗಾ ದೇವಿಯ ಭಕ್ತರಿಂದ ಹೆಚ್ಚು ವೈಭವದಿಂದ ಗುರುತಿಸಲ್ಪಟ್ಟ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಒಂಬತ್ತು ದಿನಗಳ ಅವಧಿಯ ಆಚರಣೆಯಾಗಿದ್ದು, ದೇವಿ ದುರ್ಗೆಯ ಒಂಬತ್ತು ಅವತಾರಗಳ ಆರಾಧನೆಗೆ ಸಮರ್ಪಿತವಾಗಿದೆ. ಈ ದಿನಗಳಲ್ಲಿ ಜನರು ಉಪವಾಸವನ್ನು ಆಚರಿಸುತ್ತ ದೇವಿಯನ್ನು ಪೂಜಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಚೈತ್ರ ನವರಾತ್ರಿಯ ಕೊನೆಯ ದಿನದಂದು, ಹಿಂದೂಗಳು ರಾಮನ ಜನ್ಮವನ್ನು ಗುರುತಿಸಲು ರಾಮ ನವಮಿಯನ್ನು ಆಚರಿಸುತ್ತಾರೆ. ಆಚರಣೆಗಳು ಹಿಂದು ಚಾಂದ್ರ-ಸೌರ ಮಾನ ಕ್ಯಾಲೆಂಡರ್‌ನ ಮೊದಲ ದಿನದಂದು ಪ್ರಾರಂಭವಾಗುತ್ತದೆ. ಹೆಚ್ಚುವರಿಯಾಗಿ, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬರುವ ಶಾರದೀಯ ನವರಾತ್ರಿಯ ಸಮಯದಲ್ಲಿ ಅನುಸರಿಸುವ ಹೆಚ್ಚಿನ ಆಚರಣೆಗಳನ್ನು ಚೈತ್ರ ನವರಾತ್ರಿಯ ಸಮಯದಲ್ಲಿಯೂ ಅನುಸರಿಸಲಾಗುತ್ತದೆ.

ಈ ವರ್ಷ ಚೈತ್ರ ನವರಾತ್ರಿಯ ಆರಂಭದ ದಿನಾಂಕದ ಬಗ್ಗೆ ಗೊಂದಲವಿದೆ. ಇದು ಮಾರ್ಚ್ 21 ರಂದು ಬರುತ್ತದೆ ಎಂದು ಕೆಲವರು ನಂಬಿದರೆ, ಇತರರು ಮಾರ್ಚ್ 22 ರಂದು ಅದನ್ನು ಕಾಣುತ್ತಿದ್ದಾರೆ. ನಿಮಗೂ ಅದೇ ಗೊಂದಲವಿದ್ದರೆ, ನಿಮ್ಮ ನೆರವಿಗೆ ನಾವಿದ್ದೇವೆ. ಇಲ್ಲಿದೆ ನಮಗೆ ತಿಳಿದ ಸರಿಯಾದ ವಿವರಗಳು.

ಚೈತ್ರ ನವರಾತ್ರಿ 2023 ದಿನಾಂಕ: ಮಾರ್ಚ್ 21 ಅಥವಾ 22 ರಂದು ಚೈತ್ರ ನವರಾತ್ರಿಯೇ?

ಈ ವರ್ಷ, ಚೈತ್ರ ನವರಾತ್ರಿಯ ಒಂಬತ್ತು ದಿನಗಳ ಉತ್ಸವವು ಈ ವರ್ಷ ಮಾರ್ಚ್ 22 ರಂದು ಪ್ರಾರಂಭವಾಗಿ ಮಾರ್ಚ್ 30 ರಂದು ಕೊನೆಗೊಳ್ಳುತ್ತದೆ. ದೃಕ್ ಪಂಚಾಂಗದ ಪ್ರಕಾರ, ಚೈತ್ರ ಮಾಸದ ಪ್ರತಿಪದ ತಿಥಿಯು ಮಾರ್ಚ್ 21 ರಂದು ರಾತ್ರಿ 10:52 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 22ರ ರಾತ್ರಿ 8:20 ಕ್ಕೆ ಕೊನೆಗೊಳ್ಳುತ್ತದೆ. ಮೀನ ಲಗ್ನವು ಮಾರ್ಚ್ 22 ರಂದು ಬೆಳಗ್ಗೆ 6:23 ರಿಂದ 7:32 ರವರೆಗೆ ಇರುತ್ತದೆ. ಕಲಶ ಸ್ಥಾಪನೆ ಎಂದೂ ಕರೆಯಲ್ಪಡುವ ಘಟ ಸ್ಥಾಪನೆಯು ಮಾರ್ಚ್ 22 ರಂದು ನಡೆಯಲಿದೆ. ಮುಹೂರ್ತವು ಬೆಳಗ್ಗೆ 6:23 ರಿಂದ ಬೆಳಗ್ಗೆ 7:32 ರವರೆಗೆ ಇರುತ್ತದೆ. ಘಟಸ್ಥಾಪನೆಯು ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಒಂಬತ್ತು ದಿನಗಳ ಉತ್ಸವದ ಆರಂಭವನ್ನು ಸೂಚಿಸುತ್ತದೆ.

ಚೈತ್ರ ನವರಾತ್ರಿ ದಿನಾಂಕಗಳು ಮತ್ತು ಬಣ್ಣ

ಮಾರ್ಚ್ 22 - ಘಟಸ್ಥಾಪನ, ರಾಯಲ್ ಬ್ಲೂ

ಮಾರ್ಚ್ 23 - ತಾಯಿ ಬ್ರಹ್ಮಚಾರಿಣಿ ಪೂಜೆ, ಹಳದಿ

ಮಾರ್ಚ್ 24 - ತಾಯಿ ಚಂದ್ರಘಂಟಾ ಪೂಜೆ, ಹಸಿರು

ಮಾರ್ಚ್ 25 - ಲಕ್ಷ್ಮಿ ಪಂಚಮಿ ಪೂಜೆ, ಬೂದು

ಮಾರ್ಚ್ 26 - ಸ್ಕಂದ ಷಷ್ಠಿ, ಕಿತ್ತಳೆ

ಮಾರ್ಚ್ 27 - ತಾಯಿ ಕಾತ್ಯಾಯನಿ ಪೂಜೆ, ಬಿಳಿ

ಮಾರ್ಚ್ 28 - ಮಹಾ ಸಪ್ತಮಿ, ಕೆಂಪು

ಮಾರ್ಚ್ 29 - ದುರ್ಗಾ ಅಷ್ಟಮಿ ಅಥವಾ ಮಹಾಗೌರಿ ಪೂಜೆ, ನೀಲಿ

ಮಾರ್ಚ್ 30 - ರಾಮ ನವಮಿ, ಗುಲಾಬಿ

ಚೈತ್ರ ನವರಾತ್ರಿಯ ಹಬ್ಬವು ದುರ್ಗಾದೇವಿಯ ಒಂಬತ್ತು ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಗಳನ್ನು ಪೂಜಿಸಲು ಮೀಸಲಾಗಿದೆ.