ಕನ್ನಡ ಸುದ್ದಿ  /  Lifestyle  /  Chaitra Navratri 2023: Let These Dishes Accompany Chaitra Navratri Fasting

Chaitra Navratri 2023: ಚೈತ್ರ ನವರಾತ್ರಿ ಉಪವಾಸಕ್ಕೆ ಜೊತೆಯಾಗಲಿ ಈ ತಿನಿಸುಗಳು; ಇವು ಬಾಯಿಗೂ ಹಿತ, ಆರೋಗ್ಯಕ್ಕೂ ಉತ್ತಮ

Chaitra Navratri 2023: ದೇಶದಾದ್ಯಂತ ದುರ್ಗಾ ಮಾತೆಯ ಭಕ್ತರು ಈ ಚೈತ್ರ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಆ ವೇಳೆ ರಾಜಸಿಕ ಹಾಗೂ ತಾಮಸಿಕ ಆಹಾರವನ್ನು ತಪ್ಪಿಸಿ, ಸಾತ್ವಿಕ ಆಹಾರಗಳ ಸೇವನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಚೈತ್ರನವರಾತ್ರಿ
ಚೈತ್ರನವರಾತ್ರಿ

ಮಾರ್ಚ್‌ 22ರಿಂದ ಮಾರ್ಚ್‌ 30ರವರೆಗೆ 9 ದಿನಗಳ ಕಾಲ ಚೈತ್ರ ನವರಾತ್ರಿ ಆಚರಣೆ ಇರುತ್ತದೆ. ಇದನ್ನು ವಸಂತ ನವರಾತ್ರಿ, ಯುಗಾದಿ ಎಂದೂ ಕೂಡ ಕರೆಯಲಾಗುತ್ತದೆ. ಹಿಂದೂ ಸಮುದಾಯ ಅನುಸರಿಸುವ ಸಾಂಪ್ರದಾಯಿಕ ಕ್ಯಾಲೆಂಡರ್‌ ಪ್ರಕಾರ ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ದೇಶದಾದ್ಯಂತ ದುರ್ಗಾ ಮಾತೆಯ ಭಕ್ತರು ಈ ಚೈತ್ರ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಆ ಸಮಯದಲ್ಲಿ ರಾಜಸಿಕ ಹಾಗೂ ತಾಮಸಿಕ ಆಹಾರವನ್ನು ತಪ್ಪಿಸಿ, ಸಾತ್ವಿಕ ಆಹಾರಗಳ ಸೇವನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ನವರಾತ್ರಿಯ ಉಪವಾಸದ ಸಮಯದಲ್ಲಿ ಹಲವು ಆಹಾರಗಳ ಸೇವನೆಗೆ ಅನುಮತಿಯಿಲ್ಲ. ಆದರೂ ಕೆಲವು ಆಹಾರಗಳನ್ನು ವ್ರತಸ್ನೇಹಿಯಾಗಿ ರುಚಿಕರವಾಗಿ ತಯಾರಿಸಿ ತಿನ್ನಬಹುದು. ಆದರೆ ಆಹಾರದಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ಪೌಷ್ಟಿಕ ತಜ್ಞರು ಅಥವಾ ವೈದ್ಯರ ಜೊತೆ ಸಮಾಲೋಚಿಸಿ ಸಲಹೆ ಪಡೆಯುವುದು ಉತ್ತಮ.

ಈ ನವರಾತ್ರಿಯ ಸಮಯದಲ್ಲಿ ಕಡಿಮೆ ಕಾರ್ಬ್‌ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಯೋಚನೆಯಿದ್ದರೆ ಈ ಪಾಕವಿಧಾನಗಳನ್ನು ಅನುಸರಿಸಬಹುದು.

ಅಲ್ಮಂಡ್‌ ಪೇಸ್ಟ್‌ ಪನೀರ್‌ ಟಿಕ್ಕಾ

ಬೇಕಾಗುವ ಪದಾರ್ಥಗಳು; ಕಾಟೇಜ್‌ ಚೀಸ್‌ - 250ಗ್ರಾಂ, ತಾಜಾ ಅಲ್ಮಂಡ್‌ ಪ್ಲೇಕ್ಸ್‌ - ಕಾಲು ಕಪ್‌, ಕೊತ್ತಂಬರಿ ಸೊಪ್ಪು - ಕಾಲು ಕಪ್‌, ಬಾಸಿಲ್‌ ಸೊಪ್ಪು - 8 ರಿಂದ 10, ಶುಂಠಿ - 2 ಚಮಚ (ಸಣ್ಣಗೆ ಹೆಚ್ಚಿದ್ದು), ಹಸಿಮೆಣಸು - 2 ಚಮಚ (ಸಣ್ಣಗೆ ಹೆಚ್ಚಿದ್ದು), ಉಪ್ಪು - ರುಚಿಗೆ, ಪರ್ಮೆಸನ್‌ ಚೀಸ್‌ - 2 ಚಮಚ (ಹೆಚ್ಚಿದ್ದು), ಚಾಟ್‌ ಮಸಾಲ - ಅರ್ಧ ಚಮಚ.

ನೆನೆಸಿಡಲು: ಫ್ರೆಶ್‌ ಕ್ರೀಮ್‌ - ಅರ್ಧ ಕಪ್‌, ಕೊತ್ತಂಬರಿ ಸೊಪ್ಪಿನ ದಂಟು - ಅರ್ಧ ಚಮಚ, ಏಲಕ್ಕಿ ಪುಡಿ - ಚಿಟಿಕೆ, ಅರಿಸಿನ - ಚಿಟಿಕೆ, ಉಪ್ಪು - ರುಚಿಗೆ, ಎಣ್ಣೆ - 1ಟೇಬಲ್‌ ಚಮಚ

ತಯಾರಿಸುವ ವಿಧಾನ: ಫ್ರಿ ಹೀಟ್‌ ಮಾಡಿದ ಓವೆನ್‌ನಲ್ಲಿ 180ಡಿಗ್ರಿ ಸೆಲ್ಷಿಯಸ್‌ನಲ್ಲಿ 4 ನಿಮಿಷಗಳ ಕಾಲ ಅಲ್ಮಂಡ್ ಪ್ಲೇಕ್ಸ್‌ ಅನ್ನು ಹುರಿದುಕೊಳ್ಳಿ. ಅದು ತಣ್ಣದಾಗ ಮೇಲೆ ಪುಡಿ ಮಾಡಿಕೊಳ್ಳಿ. ನಂತರ ಬಾಸಿಲ್‌ ಸೊಪ್ಪು, ಕೊತ್ತಂಬರಿ ಸೊಪ್ಪು, ಹೆಚ್ಚಿದ ಶುಂಠಿ, ಹಸಿಮೆಣಸು, ಚಾಟ್‌ ಮಸಾಲ ಹಾಗೂ ಉಪ್ಪು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ ಇದಕ್ಕೆ ಹೆಚ್ಚಿದ್ದ ಪಾರ್ಮೆಸನ್‌ ಚೀಸ್‌ ಹಾಗೂ ಪುಡಿ ಮಾಡಿದ ಬಾದಾಮಿ ಫ್ಲೇಕ್ಸ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದು ಬೌಲ್‌ನಲ್ಲಿ ಫ್ರೆಶ್‌ ಕ್ರೀಮ್‌, ಕತ್ತರಿಸಿಕೊಂಡ ಕೊತ್ತಂಬರಿ ದಂಟು, ಏಲಕ್ಕಿ ಪುಡಿ ಹಾಗೂ ಅರಿಸಿನ ಪುಡಿ ಸೇರಿಸಿ ಪೇಸ್ಟ್‌ ತಯಾರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಪನೀರ್‌ ಅನ್ನು ಚೌಕಾಕಾರಕ್ಕೆ ಕತ್ತರಿಸಿಕೊಳ್ಳಿ. ಪನೀರ್‌ನ ಮದ್ಯದಲ್ಲಿ ತೂತು ಮಾಡಿ ಪೇಸ್ಟ್‌ ತುಂಬಿಸಿ. ನಂತರ ಪನೀರ್‌ ಅನ್ನು ಪೇಸ್ಟ್‌ಗೆ ಹಾಕಿ ನೆನೆಸಿಡಿ. ಪಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ನೆನೆಸಿಟ್ಟ ಪನೀರ್‌ ಅನ್ನು ಎರಡೂ ಕಡೆ ಬಣ್ಣ ಬದಲಾಗುವವರೆಗೂ ಕರಿಯಿರಿ. ಇದನ್ನು ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ರೆಸಿಪಿ ಕೃಪೆ: ಮನೀಶ್‌ ಮೆಹೋತ್ರಾ

ಅಲ್ಮಂಡ್‌ ಪೇಸ್ಟ್‌ ಪನೀರ್‌ ಟಿಕ್ಕಾ
ಅಲ್ಮಂಡ್‌ ಪೇಸ್ಟ್‌ ಪನೀರ್‌ ಟಿಕ್ಕಾ

ಸೌತೆಕಾಯಿ ರಾಯಿತ

ಬೇಕಾಗುವ ಪದಾರ್ಥಗಳು: ಸೌತೆಕಾಯಿ- 1, ಮೊಸರು - 1 ಕಪ್‌, ಹುರಿದ ಜೀರಿಗೆ ಪುಡಿ, ಉಪ್ಪು ಹಾಗೂ ಪುದೀನಾ ಸೊಪ್ಪು

ತಯಾರಿಸುವ ವಿಧಾನ: ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ. ಒಂದು ಕಪ್‌ನಲ್ಲಿ ಮೊಸರು ಹಾಕಿ ಅದಕ್ಕೆ ಮೇಲೆ ಹೇಳಿದ ಉಳಿದ ಸಾಮಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ.

ಸಾಬುದಾನ ಕಿಚಡಿ

ಬೇಕಾಗುವ ಪದಾರ್ಥಗಳು: ಸಾಬುದಾನ- 1ಕಪ್‌, ಶೇಂಗಾ - ಕಾಲು ಕಪ್‌, ಎಣ್ಣೆ - 2 ಚಮಚ, ಜೀರಿಗೆ - ಅರ್ಧ ಚಮಚ, ಕರಿಬೇವು -10 ರಿಂದ 12, ಹಸಿಮೆಣಸು - 3ರಿಂದ 4, ಆಲೂಗೆಡ್ಡೆ - 1 ಮಧ್ಯಮ ಗಾತ್ರದ್ದು, ಕೊತ್ತಂಬರಿ ಸೊಪ್ಪು - 2ಚಮಚ, ಉಪ್ಪು - ಅರ್ಧ ಚಮಚ, ನಿಂಬೆಹಣ್ಣು - 1

ತಯಾರಿಸುವ ವಿಧಾನ: ಸಾಬುದಾನವನ್ನು ಚೆನ್ನಾಗಿ ತೊಳೆದು 4ರಿಂದ 5 ಗಂಟೆಗಳ ಕಾಲ ನೆನೆಸಿಡಿ. ಸಾಬುದಾನ ಮೃದುವಾಯಿತು ಎಂದರೆ ಅದು ರೆಡಿಯಾಗಿದೆ ಎಂದರ್ಥ. ಶೇಂಗಾಬೀಜ ಹುರಿದುಕೊಂಡು, ಅದನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಪಾನ್‌ವೊಂದರಲ್ಲಿ ಎಣ್ಣೆ ಹಾಕಿ, ಮದ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ಅದಕ್ಕೆ ಕರಿಬೇವು, ಹಸಿಮೆಣಸು ಸೇರಿಸಿ ಕೈಯಾಡಿಸಿ. ಅದಕ್ಕೆ ಬೇಯಿಸಿದ ಆಲೂಗಡ್ಡೆ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ನೆನೆಸಿಕೊಂಡಿದ್ದ ಸಾಬುದಾನಿ, ಪುಡಿ ಮಾಡಿಟ್ಟುಕೊಂಡು ಶೇಂಗಾ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದರ ಮೇಲೆ ನಿಂಬೆರಸ ಹಿಂಡಿ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸಾಬುದಾನಿ ಕಿಚಡಿ ತಿನ್ನಲು ರೆಡಿ.

ಸಾಬುದಾನ ಕಿಚಡಿ
ಸಾಬುದಾನ ಕಿಚಡಿ

ವಿಭಾಗ