Chanakya Neeti: ಯಶಸ್ವಿ ಜೀವನ ನಿಮ್ಮದಾಗಲು ಈ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ; ಚಾಣಕ್ಯ ನೀತಿ
Chanakya Neeti: ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಕೆಲವು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಚಾಣಕ್ಯ ನೀತಿ ಕೂಡ ಇಂಥದ್ದೇ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಜೀವನದಲ್ಲಿ ಈ ವಿಷಯಗಳಿಗೆ ಮಹತ್ವ ನೀಡುವವರು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
Chanakya Neeti: ಆಚಾರ್ಯ ಚಾಣಕ್ಯ ಮಹಾನ್ ವಿದ್ವಾಂಸರಾಗಿದ್ದವರು. ಚಾಣಕ್ಯರು ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಾವೆಲ್ಲ ನೀತಿ ನಿಯಮಗಳನ್ನು ಪಾಲಿಸಿದಾಗ ಮಾತ್ರ ಒಬ್ಬ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಹೇಗೆ ಯಶಸ್ವಿ ಜೀವನಕ್ಕಾಗಿ ವಿವಿಧ ನಿಯಮಗಳನ್ನು ಹಾಕಿಕೊಟ್ಟಿದ್ದಾರೋ ಅದೇ ರೀತಿ ಯಾವೆಲ್ಲ ವಿಷಯಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಮನುಷ್ಯ ಮಾಡುವ ಸಣ್ಣ ತಪ್ಪುಗಳೇ ಆತನ ಸೋಲಿಗೆ ಕಾರಣವಾಗಿಬಿಡುತ್ತದೆ. ಹೀಗಾಗಿ ನಾವು ನಮ್ಮ ಪ್ರತಿ ಹೆಜ್ಜೆಯಲ್ಲಿಯೂ ಜಾಗ್ರತರಾಗಿ ಇರಬೇಕು. ಹಾಗಾದರೆ ಚಾಣಕ್ಯ ನೀತಿಯು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಆದರೂ ಸಹ ಅವರಿಗೆ ಒಳ್ಳೆಯ ಫಲಿತಾಂಶ ಸಿಗುವುದೇ ಇಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಸಹ ದೈನಂದಿನ ಜೀವನದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ನಮಗೆ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಾನವ ಜೀವನದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳ ಬಗ್ಗೆ ನೀತಿಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಸಣ್ಣ ಸಣ್ಣ ತಪ್ಪುಗಳೇ ಮನುಷ್ಯನನ್ನು ಯಶಸ್ಸಿನ ಹಾದಿಯಿಂದ ದಾರಿ ತಪ್ಪುವಂತೆ ಮಾಡಿಬಿಡುತ್ತದೆ.
ಉದ್ದೇಶವಿಲ್ಲದ ಜೀವನ ನಿರರ್ಥಕ
ಚಾಣಕ್ಯ ಹೇಳುವ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಗುರಿ ಇರಬೇಕು. ಮುಂದೆ ಗುರಿಯಿದ್ದಾಗ ಮಾತ್ರ ನಮಗೆ ಜೀವನದಲ್ಲಿ ಛಲ ಎನ್ನುವುದು ಇರುತ್ತದೆ. ಅಂದುಕೊಂಡ ಗುರಿಯನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆದರೆ ಗುರಿಯಿಲ್ಲದ ಮನುಷ್ಯ ಕೇವಲ ಶಕ್ತಿ ಹಾಗೂ ಸಮಯ ಹಾಳು ಮಾಡುತ್ತಿರುತ್ತಾನೆ. ಹೀಗಾಗಿ ಗುರಿಯಲ್ಲದ ಜೀವನ ವ್ಯರ್ಥ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
ದುಶ್ಚಟಗಳಿಂದ ಜೀವನ ನಾಶ
ಯಾವ ವ್ಯಕ್ತಿಯು ದುಶ್ಚಟಗಳನ್ನು ಹೊಂದಿರುತ್ತಾನೋ ಆತ ಎಂದಿಗೂ ಜೀವನದಲ್ಲಿ ಉದ್ಧಾರವಾಗಲಾರ. ಸುಳ್ಳು ಹೇಳುವುದು, ಧೂಮಪಾನ ಮಾಡುವುದು, ಮದ್ಯಪಾನ , ಡ್ರಗ್ಸ್ ಸೇವನೆ ಹಾಗೂ ಹಣ ವ್ಯರ್ಥ ಮಾಡುವುದು ಈ ಎಲ್ಲಾ ಅಭ್ಯಾಸಗಳು ನಿಮ್ಮನ್ನು ಅವನತಿಯ ದಾರಿಗೆ ಕೊಂಡೊಯ್ಯುತ್ತದೆ. ಹೀಗಾಗಿ ಕೆಟ್ಟ ಚಟಗಳನ್ನು ಮಾಡಬೇಡಿ.ಈ ರೀತಿ ಅಭ್ಯಾಸ ಹೊಂದಿರುವವರ ಸಂಘವನ್ನೂ ಸೇರಬೇಡಿ.
ದಾನ ಮುಖ್ಯ
ಸಂತೋಷ ಹಾಗೂ ಶಾಂತಿಯಿಂದ ಇರಬೇಕು ಎಂದರೆ ಹಣ ಸಂಪಾದನೆ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಇದರ ಜೊತೆಯಲ್ಲಿ ನಮ್ಮ ಕೈಲಾದಷ್ಟು ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದುಕೊಳ್ಳಬೇಕು. ನಮ್ಮ ಶಕ್ತಿಗೆ ಅನುಸಾರವಾಗಿ ನಾವು ದಾನ ಧರ್ಮಗಳನ್ನು ಮಾಡಬಹುದು. ನೀವು ದಾನ ಮಾಡಿದಾಗ ನಿಮಗೆ ಸಿಗುವ ಆಶಿರ್ವಾದವು ನಿಮಗೆ ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ. ಇಲ್ಲವಾದಲ್ಲಿ ನಿಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ.
ಸಮಯದ ಮಹತ್ವ
ಚಾಣಕ್ಯನ ನೀತಿ ಶಾಸ್ತ್ರ ನೀಡುವ ಮಾಹಿತಿಯ ಪ್ರಕಾರ , ಯಾರು ಸಮಯಕ್ಕೆ ಬೆಲೆ ನೀಡುವುದಿಲ್ಲವೋ ಅವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಲಕ್ಷ್ಮೀ ದೇವಿಯ ಕೃಪೆ ಇಂಥವರ ಮೇಲೆ ಇರುವುದಿಲ್ಲ. ಹೀಗಾಗಿ ಇವರ ಇಡೀ ಜೀವನದಲ್ಲಿ ದಾರಿದ್ರ್ಯವೇ ಇರಲಿದೆ.
ಮಹಿಳೆಯರು ಮತ್ತು ಹಿರಿಯರಿಗೆ ಗೌರವ
ಯಾರು ಮಹಿಳೆಯರು ಹಾಗೂ ಹಿರಿಯರನ್ನು ಅವಮಾನಿಸುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಎಂದು ಅಚಾರ್ಯ ಚಾಣಕ್ಯರು ನುಡಿದಿದ್ದಾರೆ. ತಂದೆ - ತಾಯಿಯೊಂದಿಗೆ ಗೌರವವಯುತವಾಗಿ ನಡೆದುಕೊಳ್ಳಬೇಕು. ಯಾರು ಸುಮ್ಮನೇ ಮನೆಯಲ್ಲಿ ಹಿರಿಯರು ಹಾಗೂ ಮಹಿಳೆಯರ ಜೊತೆ ಜಗಳ ಮಾಡುತ್ತಾರೋ ಅಂಥವರಿಗೆ ಹಣದ ಕೊರತೆ ಉಂಟಾಗಲಿದೆ. ಅಲ್ಲದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಲಿದೆ.
ಜೀವನದಲ್ಲಿ ಯಶಸ್ಸು ನಿಮ್ಮದಾಗಬೇಕು ಹಾಗೂ ನೀವು ಎಂದುಕೊಂಡಿದ್ದನ್ನು ಸಾಧಿಸಬೇಕು ಎಂದಿದ್ದರೆ ಆಚಾರ್ಯ ಚಾಣಕ್ಯರು ಹೇಳಿರುವ ಈ ನಿಯಮಗಳನ್ನು ಪಾಲಿಸಬೇಕು. ಆಗ ನಿಮ್ಮ ಜೀವನ ಸಂತಸದಾಯಕವಾಗಿ ಇರಲಿದೆ. ಜೀವನದಲ್ಲಿ ಯಶಸ್ವಿಯಾಗಲು ಚಾಣಕ್ಯನ ತತ್ವಗಳನ್ನು ಪಾಲಿಸುವುದು ಮುಖ್ಯವಾಗಿದೆ.