Chanakya Neeti: ಸಂಬಂಧಗಳನ್ನು ಬಲಪಡಿಸಲು ಚಾಣಕ್ಯ ನೀಡಿರುವ ಸಲಹೆಗಳಿವು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Neeti: ಸಂಬಂಧಗಳನ್ನು ಬಲಪಡಿಸಲು ಚಾಣಕ್ಯ ನೀಡಿರುವ ಸಲಹೆಗಳಿವು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ

Chanakya Neeti: ಸಂಬಂಧಗಳನ್ನು ಬಲಪಡಿಸಲು ಚಾಣಕ್ಯ ನೀಡಿರುವ ಸಲಹೆಗಳಿವು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ

Chanakya Neeti: ಜೀವನದಲ್ಲಿ ಇತರರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದುವುದು ಬಹಳ ಮುಖ್ಯ. ಆದ್ದರಿಂದ ಆಚಾರ್ಯ ಚಾಣಕ್ಯರು ಸಂಬಂಧಗಳು ಹೇಗಿರಬೇಕು, ಅವುಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಕೆಲವೊಂದು ವಿಚಾರಗಳನ್ನು ಹೇಳುತ್ತಾರೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

Chanakya Neeti: ಆಚಾರ್ಯ ಚಾಣಕ್ಯರ ತತ್ವಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ವರ್ಷಗಳೇ ಕಳೆದರೂ ಚಾಣಕ್ಯರ ಮಾತು ಶಾಶ್ವತವಾಗಿ ಉಳಿದಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಚಾಣಕ್ಯ ಸೂತ್ರಗಳನ್ನು ಅನುಸರಿಸಿದರೆ ಸಮಸ್ಯೆಗಳಿಂದ ಸುಲಭವಾಗಿ ಹೊರ ಬರಬಹುದು. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿಯು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಜಯಿಸುತ್ತಾನೆ.

ಯಾವುದೇ ವ್ಯಕ್ತಿಯ ಜೀವನದಲ್ಲಿ ಉತ್ತಮ ಸಂಬಂಧಗಳು ಬಹಳ ಮುಖ್ಯ. ಒಳ್ಳೆಯ ಜನರೊಂದಿಗಿನ ಸಂಬಂಧವನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡಿ ಎನ್ನುವುದು ಚಾಣಕ್ಯರ ವಾಕ್ಯಗಳು. ಸಂಬಂಧಗಳ ಬಗ್ಗೆ ಚಾಣಕ್ಯ ಹೇಳಿರುವ ಇನ್ನಷ್ಟು ವಿಚಾರಗಳು ಹೀಗಿವೆ. ಎಲ್ಲರನ್ನೂ ಮೆಚ್ಚಿಸುವುದು ಸುಲಭವಲ್ಲ. ಒಂದು ವೇಳೆ ನೀವು ಯಾರನ್ನಾದರೂ ಮೆಚ್ಚಿಸಬೇಕು ಎಂದು ಕಾಯುತ್ತಿದ್ದರೆ ಅದನ್ನು ಎಂದಿಗೂ ಕುತಂತ್ರದಿಂದ ಮಾಡಬಾರದು. ಸುಳ್ಳು ಮತ್ತು ಮೋಸದಿಂದ ನಿರ್ಮಿಸಲಾದ ಸಂಬಂಧಗಳು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಶೀಘ್ರದಲ್ಲೇ ಅಂತಹ ಸಂಬಂಧದಲ್ಲಿ ಸತ್ಯ ಹೊರಬರುತ್ತದೆ. ಇದರಿಂದಾಗಿ ಸಂಬಂಧ ಹಾಳಾಗುತ್ತದೆ. ಆದ್ದರಿಂದ, ಯಾವಾಗಲೂ ಪ್ರೀತಿ, ವಿಶ್ವಾಸದ ಮೇಲೆ 'ಸಂಬಂಧ'ವನ್ನು ನಿರ್ಮಿಸಬೇಕು.

  • ಚಾಣಕ್ಯ ಸೂತ್ರಗಳ ಪ್ರಕಾರ, ಮಾತಿನಲ್ಲಿ ಸಿಹಿ ಮತ್ತು ಸೌಮ್ಯ ನಡವಳಿಕೆಯು ಎಲ್ಲರಿಗೂ ಪ್ರಿಯವಾಗಿರುತ್ತದೆ. ಮಧುರವಾದ ಮಾತುಗಳಿಗೆ ಗಟ್ಟಿಯಾದ ಮನಸ್ಸನ್ನೂ ಬದಲಾಯಿಸುವ ಶಕ್ತಿಯಿದೆ. ನಡವಳಿಕೆ ಯಾವಾಗಲೂ ಸರಿಯಾಗಿರಬೇಕು.
  • ಅಹಂಕಾರವು ತುಂಬಾ ಕೆಟ್ಟದು. ಇದು ಉತ್ತಮ ಸಂಬಂಧವನ್ನು ಸಹ ಮುರಿಯಬಹುದು. ಇದು ಮಾತ್ರ ಅನೇಕ ಸಂಬಂಧಗಳನ್ನು ಕೊನೆಗೊಳಿಸಲು ಕಾರಣವಾಗುತ್ತದೆ. ಚಾಣಕ್ಯ ಸೂತ್ರಗಳ ಪ್ರಕಾರ, ಒಬ್ಬನು ಎಂದಿಗೂ ಅಹಂಕಾರ ಪಡಬಾರದು. ಇದು ಸಂಬಂಧವನ್ನು ಮುರಿಯುತ್ತದೆ.
  • ಯಾವುದೇ ಸಂಬಂಧ ಆಗಲೀ ಪರಸ್ಪರ ಗೌರವ ಇರುವವರೆಗೆ ಸುಖ ಸಂತೋಷದಿಂದ ಇರುತ್ತದೆ. ಪ್ರತಿ ಸಂಬಂಧದಲ್ಲೂ ಗೌರವ ಮುಖ್ಯ. ಯಾರೊಬ್ಬರ ಭಾವನೆಗಳನ್ನು ಕೋಪದಿಂದ ಎಂದಿಗೂ ನೋಯಿಸಬೇಡಿ. ತನ್ನ ಅಹಂಕಾರವನ್ನು ಬಿಟ್ಟು ಎಲ್ಲರನ್ನೂ ಗೌರವಿಸುವ ವ್ಯಕ್ತಿಗೆ ಸಕಾಲದಲ್ಲಿ ಎಲ್ಲ ಜನರ ಬೆಂಬಲ ಸಿಗುತ್ತದೆ.
  • ಆಚಾರ್ಯ ಚಾಣಕ್ಯರ ಪ್ರಕಾರ, ಕೋಪಗೊಂಡ ಜನರು ತಮ್ಮ ಸುತ್ತಲಿನ ಸಂತೋಷವನ್ನು ನಿರ್ಲಕ್ಷಿಸುತ್ತಾರೆ. ಅಂತಹ ವ್ಯಕ್ತಿಯೊಂದಿಗೆ ನೀವು ಪ್ರೀತಿಯ ಸಂಬಂಧವನ್ನು ಬೆಳೆಸಿದರೆ ಜೀವನದಲ್ಲಿ ಯಾವುದೇ ಸಂತೋಷವಿರುವುದಿಲ್ಲ. ಅಂತಹ ಜನರು ಕೋಪದಿಂದ ಸಂಬಂಧಗಳನ್ನು ಕಡಿದುಕೊಳ್ಳುತ್ತಾರೆ.
  • ತಾಳ್ಮೆಯಿಂದಿರುವ ವ್ಯಕ್ತಿಯು ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಬಹುದು. ಪ್ರೇಮ ಸಂಬಂಧವನ್ನು ತಾಳ್ಮೆಯಿಂದ ಬೆಳೆಸಿಕೊಳ್ಳಬೇಕು. ಮದುವೆಗೂ ಮುನ್ನ ಸಂಗಾತಿಯ ತಾಳ್ಮೆ ಪರೀಕ್ಷಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಏಕೆಂದರೆ ಸಂಗಾತಿಯು ತಾಳ್ಮೆಯಿಂದ ಇದ್ದರೆ ಕಷ್ಟದ ಸಂದರ್ಭಗಳಲ್ಲಿಯೂ ಅವರು ನಿಮ್ಮನ್ನು ಬಿಡುವುದಿಲ್ಲ. ಅಂತಹ ಜನರು ನಿಮ್ಮನ್ನು ಎಂದಿಗೂ ಮೋಸ ಮಾಡುವುದಿಲ್ಲ.

ಚಾಣಕ್ಯರ ಈ ನೀತಿಗಳನ್ನು ನಿಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಿ, ಸಂತೋಷದಿಂದ ಜೀವನ ಸಾಗಿಸಿ.

Whats_app_banner