Chanakya Neeti: 100 ಕಾಲ ಆರೋಗ್ಯವಾಗಿ ಬದುಕಲು ಏನು ಮಾಡಬೇಕು? ಚಾಣಕ್ಯರು ನೀಡಿರುವ ಉಪಯುಕ್ತ ಸಲಹೆ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Neeti: 100 ಕಾಲ ಆರೋಗ್ಯವಾಗಿ ಬದುಕಲು ಏನು ಮಾಡಬೇಕು? ಚಾಣಕ್ಯರು ನೀಡಿರುವ ಉಪಯುಕ್ತ ಸಲಹೆ ಹೀಗಿದೆ

Chanakya Neeti: 100 ಕಾಲ ಆರೋಗ್ಯವಾಗಿ ಬದುಕಲು ಏನು ಮಾಡಬೇಕು? ಚಾಣಕ್ಯರು ನೀಡಿರುವ ಉಪಯುಕ್ತ ಸಲಹೆ ಹೀಗಿದೆ

Chanakya Neeti: ಚಾಣಕ್ಯ ನೀತಿಯ ಪ್ರಕಾರ ಹೆಚ್ಚು ಕಾಲ ಬದುಕಲು ನಮ್ಮ ದೈನಂದಿನ ಅಭ್ಯಾಸಗಳೇ ಕಾರಣ. 100 ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಲು ಚಾಣಕ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಆರೋಗ್ಯದ ಬಗ್ಗೆ ಚಾಣಕ್ಯರು ನೀಡಿರುವ ಸಲಹೆಗಳು
ಆರೋಗ್ಯದ ಬಗ್ಗೆ ಚಾಣಕ್ಯರು ನೀಡಿರುವ ಸಲಹೆಗಳು (HT File Photo)

Chanakya Neeti: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತದಲ್ಲಿ ಅನೇಕ ತತ್ವಗಳನ್ನು ಹೇಳಿದ್ದಾರೆ. ಅವೆಲ್ಲವೂ ಜನರ ಹಿತಕ್ಕಾಗಿ ಇರುವ ವಿಷಯಗಳೇ ಆಗಿವೆ. ಅವುಗಳನ್ನು ಅನುಸರಿಸುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ವರ್ಷಗಳೇ ಕಳೆದರೂ ಸಹ ಅವರ ಮಾತುಗಳನ್ನು ಇಂದಿಗೂ ಪಾಲಿಸಲಾಗುತ್ತದೆ.

ಚಾಣಕ್ಯರು ಆರೋಗ್ಯದ ಬಗ್ಗೆ ಕೆಲವು ನಿರ್ದಿಷ್ಟ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಆರೋಗ್ಯವೇ ಮನುಷ್ಯನ ಅತಿ ದೊಡ್ಡ ಸಂಪತ್ತು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಮನುಷ್ಯನು ಆರೋಗ್ಯವಂತನಾಗಿದ್ದರೆ ಅವನು ತನ್ನ ಜೀವನದಲ್ಲಿ ಎಲ್ಲಾ ಯಶಸ್ಸನ್ನು ಸಾಧಿಸಬಹುದು. ಹಾಗಾಗಿ ನಾವು ಯಾವಾಗಲೂ ನಮ್ಮ ಆರೋಗ್ಯವನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಆಚಾರ್ಯರು ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಹೆಚ್ಚು ಕಾಲ ಬದುಕಲು ನಾವು ರೂಢಿಸಿಕೊಂಡ ದೈನಂದಿನ ಅಭ್ಯಾಸಗಳೇ ಕಾರಣ. ಆರೋಗ್ಯದಿಂದ ಹೆಚ್ಚು ಕಾಲ ಬದುಕಲು ಕೆಲವು ಸೂತ್ರಗಳನ್ನು ಅವರು ಹೇಳಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ

ಈಗ ದಿನೇ ದಿನೇ ಅನೇಕ ರೋಗಗಳು ಹರಡುತ್ತಿವೆ. ಮಾನವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆಚಾರ್ಯ ಚಾಣಕ್ಯರು ಹೇಳಿದ ಕೆಲವು ವಿಷಯಗಳನ್ನು ನೆನಪಿಸಿಕೊಂಡರೆ ಖಂಡಿತ ಆರೋಗ್ಯವಾಗಿರಬಹುದು. ಚಾಣಕ್ಯರು ಹೇಳಿದ ಮಾತುಗಳನ್ನು ಈಗಲೂ ಅನುಸರಿಸಲಾಗುತ್ತಿದೆ. ಚಾಣಕ್ಯರು ಜೀವನ ಮತ್ತು ಸಮಾಜದ ಬಗ್ಗೆ ಮಹತ್ತರವಾದ ವಿಷಯಗಳನ್ನು ಹೇಳಿದ್ದಾರೆ. ಅವುಗಳನ್ನು ಅನುಸರಿಸಿದರೆ ಜೀವನದಲ್ಲಿ ಸಮಸ್ಯೆಗಳಿಲ್ಲದೆ ಬದುಕಬಹುದು. ಯಶಸ್ಸನ್ನು ಸಾಧಿಸಬಹುದು. ಮನುಷ್ಯನು ಹಲವು ವರ್ಷಗಳ ಕಾಲ ಆರೋಗ್ಯವಾಗಿರಲು ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ಅವುಗಳನ್ನು ಪಾಲಿಸುವುದರ ಮೂಲಕ ನೀವು ಆರೋಗ್ಯವಾಗಿರಲು ಸಾಧ್ಯ.

ಇದನ್ನೂ ಓದಿ: Chanakya Neeti: ಸಂಬಂಧಗಳನ್ನು ಬಲಪಡಿಸಲು ಚಾಣಕ್ಯ ನೀಡಿರುವ ಸಲಹೆಗಳಿವು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ

ಸರಿಯಾಗಿ ನೀರು ಕುಡಿಯುವುದು ತುಂಬಾ ಒಳ್ಳೆಯದು

ಕೆಲವರಿಗೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಅತಿ ಮುಖ್ಯ ಕಾರಣ ಕುಡಿಯುವ ನೀರು. ಆಹಾರ ಜೀರ್ಣವಾಗದಿದ್ದಾಗ ಕುಡಿಯುವ ನೀರು ಔಷಧದಂತೆ ಕೆಲಸ ಮಾಡುತ್ತದೆ. ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಊಟದ ನಡುವೆ ಅತಿ ಕಡಿಮೆ ನೀರು ಕುಡಿಯುವುದು ಅಮೃತದಂತೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ತಿಂದ ತಕ್ಷಣ ನೀರು ಕುಡಿಯುವುದು ವಿಷ. ತಿನ್ನುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಒಣ ಆಹಾರ ಸೇವಿಸಬೇಡಿ

ಹೆಚ್ಚು ಒಣ ಆಹಾರವನ್ನು ಸೇವಿಸಬೇಡಿ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆಹಾರವು ಶುಷ್ಕವಾಗಿದ್ದರೆ ಅದಕ್ಕೆ ದ್ರವ ಪದಾರ್ಥಗಳನ್ನು ಸೇರಿಸಿ. ಆಗ ಅದನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಒಣ ಬೀಜಗಳಿಗಿಂತ ಹಾಲು 10 ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಲಿಗಿಂತ ಮಾಂಸವು 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಮಾಂಸಕ್ಕಿಂತ ತುಪ್ಪ 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ ಎಂದು ಚಾಣಕ್ಯ ಹೇಳಿದ್ದಾರೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಾಗಿಯೇ ಚಾಣಕ್ಯರು ಅದನ್ನು ಅನುಸರಿಸಲು ಹೇಳಿದ್ದಾರೆ.

ಈ ಎರಡು ಅಂಗಗಳು ಬಹಳ ಮುಖ್ಯ

ಮನುಷ್ಯನು ಆರೋಗ್ಯವಂತನಾಗಿರಲು ಒಳ್ಳೆಯ ಆಹಾರ ಸೇವಿಸಬೇಕು. ಇದರಿಂದ ಮನುಷ್ಯ ಸಂತೋಷವಾಗಿರಬಹುದು. ದೇಹದಲ್ಲಿರುವ ಎಲ್ಲಾ 5 ಇಂದ್ರಿಯಗಳಲ್ಲಿ ಕಣ್ಣುಗಳು ಅತ್ಯಂತ ಮುಖ್ಯವಾದವುಗಳಾಗಿವೆ. ಹಾಗೆಯೇ ಎಲ್ಲಾ ಅಂಗಗಳಲ್ಲಿ ಮೆದುಳು ಅತ್ಯಂತ ಮುಖ್ಯವಾದುದು ಎಂದು ಚಾಣಕ್ಯ ಹೇಳಿದ್ದಾನೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಸರಿಯಾದ ವಿಶ್ರಾಂತಿ ಇದ್ದಾಗ ಕಣ್ಣು ಮತ್ತು ಮಿದುಳಿನ ಆರೋಗ್ಯಕ್ಕೆ ಕಾಪಾಡಿಕೊಳ್ಳಬಹುದು. ಉತ್ತಮ ಆಹಾರ ಪದ್ಧತಿ ಅನುಸರಿಸುವುದರಿಂದ ಅವುಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಆಗ ಮಾತ್ರ ಆರೋಗ್ಯವಂತರಾಗಿ ಬಾಳಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ವಾರಕ್ಕೊಮ್ಮೆ ಮಸಾಜ್‌ ಮಾಡಿಕೊಳ್ಳಬೇಕು

ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ದೇಹಕ್ಕಾಗಿ ವಾರಕ್ಕೊಮ್ಮೆ ಪೂರ್ಣ ದೇಹದ ಮಸಾಜ್ ಮಾಡಬೇಕು. ಇದು ಚರ್ಮದ ಮೇಲಿರುವ ರಂಧ್ರಗಳನ್ನು ತೆರೆಯುತ್ತದೆ. ಒಳಗಿರುವ ಕೊಳೆಯನ್ನು ಹೊರಹಾಕುತ್ತದೆ. ಮಸಾಜ್ ಮಾಡಿದ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ ಚಾಣಕ್ಯರು.

ಧಾನ್ಯಗಳನ್ನು ತಿನ್ನಿರಿ

ಚಾಣಕ್ಯರ ನೀತಿ ಶಾಸ್ತ್ರವು ಮನುಷ್ಯನು ಆರೋಗ್ಯವಾಗಿರಲು ಸಿರಿಧಾನ್ಯಗಳನ್ನು ಸೇವಿಸಬೇಕು ಎಂದು ಹೇಳುತ್ತದೆ. ಧಾನ್ಯಗಳನ್ನು ತಿನ್ನುವುದರಿಂದ ಮನುಷ್ಯನು ಬಲಶಾಲಿಯಾಗುವುದರ ಜೊತೆಗೆ ಅವನ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಸದೃಢವಾಗಿರುವ ವ್ಯಕ್ತಿ ಆರೋಗ್ಯವಾಗಿರುತ್ತಾನೆ ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿದ್ದನ್ನು ಪಾಲಿಸಿದರೆ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಆಗ ಮಾತ್ರ 100 ವರ್ಷಗಳ ಕಾಲ ನೆಮ್ಮದಿಯಿಂದ ಬಾಳಲು ಸಾಧ್ಯ.

Whats_app_banner