Chanakya Niti: ಮಹಿಳೆಯರಲ್ಲಿ ಈ ಗುಣಗಳಿದ್ದರೆ ಅಪಾಯ, ಇದರಿಂದ ಕುಟುಂಬದ ನೆಮ್ಮದಿ ಹಾಳಾಗಬಹುದು ಎಚ್ಚರ - ಚಾಣಕ್ಯ ನೀತಿ
Chanakya Tips For Life: ಕುಟುಂಬ ವ್ಯವಸ್ಥೆಗೆ ಗೌರವಿಸುವ ನಾವು ಅದನ್ನು ಕಾಪಾಡಿಕೊಂಡು ಹೋಗಬೇಕು. ಅದಕ್ಕೆ ಮನೆಯ ಎಲ್ಲ ಸದಸ್ಯರು ಸಾಮರಸ್ಯದಿಂದ ಬದುಕಬೇಕು ಎಂದು ಚಾಣಕ್ಯರು ಹೇಳುತ್ತಾರೆ.

ಚಾಣಕ್ಯರು ತುಮ್ಮ ಅನುಭವದ ಆಧಾರದ ಮೇಲೆ ಮಾನವ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದು ಚಾಣಕ್ಯರ ನೀತಿಶಾಸ್ತ್ರವೆಂದೇ ಪ್ರಸಿದ್ಧಿಯಾಗಿದೆ. ಅದರಲ್ಲಿ ಚಾಣಕ್ಯರು ಮನುಷ್ಯನ ಜೀವನ ಸುಖದಿಂದ ಕೂಡಿರಲು ಅನೇಕ ವಿಚಾರಗಳನ್ನು ಹೇಳಿದ್ದಾರೆ, ಜೊತೆಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಚಾಣಕ್ಯರ ಪ್ರಕಾರ, ಮನಷ್ಯನಿಗೆ ಸುಖ, ಶಾಂತಿ ಸಿಗಬೇಕೆಂದರೆ ಮೊದಲು ಕುಟುಂಬವು ಸರಿಯಾಗಿರಬೇಕು. ಅಲ್ಲಿರುವ ಎಲ್ಲರೂ ಎಲ್ಲರನ್ನೂ ಅರ್ಥಮಾಡಿಕೊಳ್ಳಬೇಕು. ಕುಟುಂಬ ವ್ಯವಸ್ಥೆಯ ಬೆನ್ನೆಲಬು ಎಂದರೆ ಅದು ಮಹಿಳೆಯರು. ಅವರೇ ಒಂದು ಕುಟುಂಬವನ್ನು ಚೆಂದದಿಂದ ನಡೆಸಿಕೊಂಡು ಹೋಗುವವರು. ಆದರೆ ಕೆಲವು ಮಹಿಳೆಯರು ಕೆಲವು ಕೆಟ್ಟ ಗುಣಗಳನ್ನು ಹೊಂದಿರುತ್ತಾರೆ. ಅದು ಅವರನ್ನು ಹಾಗೂ ಅವರ ಕುಟುಂಬವನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತದೆ. ಈ ಗುಣಲಕ್ಷಣಗಳು ಮಹಿಳೆಯರಿಗೆ ವಿನಾಶಕಾರಿಯಾಗಿದ್ದು ಕುಟುಂಬದ ಶಾಂತಿಯನ್ನು ಹಾಳುಮಾಡುತ್ತದೆ. ಆಚಾರ್ಯ ಚಾಣಕ್ಯರು ಕೆಲವು ಗುಣಗಳನ್ನು ಹೊಂದಿರುವ ಮಹಿಳೆಯರು ಕುಟುಂಬದ ಸಂತೋಷವನ್ನು ಹದಗೆಡುವಂತೆ ಮಾಡುತ್ತಾರೆ. ಅಂತಹವರಿಂದ ಬಹಳ ಎಚ್ಚರದಿಂದಿರಬೇಕು ಎಂದು ಹೇಳುತ್ತಾರೆ. ಹಾಗಾದರೆ, ಮಹಿಳೆಯರ ಯಾವ ರೀತಿಯ ಗುಣಗಳು ವಿನಾಶವನ್ನು ಮಾಡುತ್ತದೆ ಎಂದು ನೋಡೋಣ.
- ಚಾಣಕ್ಯರ ಪ್ರಕಾರ, ಕೆಲವು ಮಹಿಳೆಯರು ಸುಳ್ಳು ಹೇಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದು ಕೇವಲ ಸುಳ್ಳು ಹೇಳುವುದು ಅಥವಾ ಮೋಸ ಮಾಡುವುದರ ಬಗ್ಗೆ ಅಲ್ಲ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಕೂಡ ಒಳ್ಳೆಯದಲ್ಲ. ಈ ಅಭ್ಯಾಸಗಳು ಖಂಡಿತವಾಗಿಯೂ ನಿಮ್ಮ ಜೀವನವನ್ನು ಇನ್ನಷ್ಟು ಹದಗೆಡಿಸುತ್ತದೆ. ಕೆಲವು ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಬಗ್ಗೆಯೇ ಆಡಿಕೊಳ್ಳುತ್ತಾರೆ. ಸಣ್ಣ ಪುಟ್ಟ ವಿಷಯಗಳನ್ನು ಉತ್ಪ್ರೇಕ್ಷೆ ಮಾಡಿ ಹೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರನ್ನು ಯಾರೂ ನಂಬುವುದಿಲ್ಲ. ಈ ಮಹಿಳೆಯರಿಗೆ ಇತರರಿಂದ ಗೌರವ ಸಿಗುವುದಿಲ್ಲ. ಅಂತಹ ಮಹಿಳೆಯರಿರುವ ಮನೆ ಯಾವಾಗಲೂ ತೊಂದರೆಯಿಂದ ಕೂಡಿರುತ್ತದೆ.
- ಕೆಲವು ಮಹಿಳೆಯರು ಅಸಭ್ಯವಾಗಿ ಮಾತನಾಡುತ್ತಾರೆ. ಅವರು ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಾರೆ. ಅಂತಹ ಮಹಿಳೆಯರು ಮನೆಯ ಶಾಂತಿ ಮತ್ತು ಸಂತೋಷಕ್ಕೆ ಭಂಗ ತರುತ್ತಾರೆ. ಅಂತಹ ಮಹಿಳೆಯನ್ನು ಮದುವೆಯಾದ ಪುರುಷ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಿರಿಯರನ್ನು ಗೌರವಿಸದ ಮಹಿಳೆಯರು ಕುಟುಂಬದ ಸಂತೋಷಕ್ಕೆ ಹಾನಿ ಮಾಡುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.
- ಕೋಪ ತೋರಿಸುವುದು ಕೆಲವು ಮಹಿಳೆಯರಿಗೆ ಸಹಜವಾದ ಅಭ್ಯಾಸವಾಗಿರುತ್ತದೆ. ಆದರೆ, ಎಲ್ಲದಕ್ಕೂ ಕೋಪಗೊಳ್ಳುವುದು ಸರಿಯಲ್ಲ. ಆದ್ದರಿಂದ ಇದನ್ನು ನೆನಪಿನಲ್ಲಿಡಿ, ಏಕೆಂದರೆ ಕೆಲವೊಮ್ಮೆ ಮತ್ತೊಬ್ಬ ವ್ಯಕ್ತಿ ನಿಮ್ಮ ಮೇಲೆ ತುಂಬಾ ಕೋಪಗೊಳ್ಳುತ್ತಾನೆ. ನೀವು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೋಪಗೊಂಡ ಮಹಿಳೆಯರು ಮನೆಯ ಶಾಂತಿಯನ್ನು ಕದಡುತ್ತಾರೆ.
- ಕೆಲವು ಮಹಿಳೆಯರಿಗೆ ಹಣದ ದುರಾಸೆಯಿರುತ್ತದೆ. ಅವರು ಈ ದುರಾಸೆಯಿಂದ ತಪ್ಪು ಕೆಲಸಗಳನ್ನು ಮಾಡುತ್ತಾರೆ. ಇದು ನಂತರ ಅವರಿಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ಕುಟುಂಬದ ಇತರ ಸದಸ್ಯರಿಗೂ ತೊಂದರೆಯನ್ನುಂಟು ಮಾಡುತ್ತದೆ. ಹಣಕ್ಕಾಗಿ ಅತಿಯಾಗಿ ಆಸೆಪಡುವ ಮಹಿಳೆಯರು ಕುಟುಂಬಕ್ಕೆ ಕಂಟಕ ಎಂದು ಚಾಣಕ್ಯರು ಹೇಳಿದ್ದಾರೆ. ಹಣ ಮತ್ತು ಆಸ್ತಿಯ ವಿಷಯದಲ್ಲಿ ಕೆಲವರು ಹೆಚ್ಚು ಸ್ವಾರ್ಥಿಗಳಾಗಿರುತ್ತಾರೆ. ಮಹಿಳೆಯರ ಇಂತಹ ನಡವಳಿಕೆಯು ಕುಟುಂಬ ಸದಸ್ಯರಲ್ಲಿ ವಿಭಜನೆಯನ್ನು ಉಂಟುಮಾಡುತ್ತದೆ.
- ಚಾಣಕ್ಯರ ಪ್ರಕಾರ, ಮಹಿಳೆಯರು ಕುಟುಂಬದ ಬೆನ್ನೆಲುಬು. ಒಂದು ಕುಟುಂಬದ ಪರಿಸರ ಮಾತ್ರವಲ್ಲ, ಸಮಾಜದ ಪರಿಸರವೂ ಮಹಿಳೆಯ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ಕುಟುಂಬದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ಕುಟುಂಬಕ್ಕಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಹಿಳೆ ಎಚ್ಚರಿಕೆಯಿಂದ ಯೋಚಿಸಬೇಕು. ಸಮಾಜದ ಎದುರು ತಲೆ ತಗ್ಗಿಸುವಂತಹ ಕೆಲಸಗಳನ್ನು ಮಾಡಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
