Chanakya Niti: ನಿಮ್ಮ ಸಂಪತ್ತು ದುಪ್ಪಟ್ಟಾಗಬೇಕೆಂದರೆ ಈ ವಿಚಾರಗಳು ಗಮನದಲ್ಲಿ ಇರಲಿ – ಚಾಣಕ್ಯ ನೀತಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ನಿಮ್ಮ ಸಂಪತ್ತು ದುಪ್ಪಟ್ಟಾಗಬೇಕೆಂದರೆ ಈ ವಿಚಾರಗಳು ಗಮನದಲ್ಲಿ ಇರಲಿ – ಚಾಣಕ್ಯ ನೀತಿ

Chanakya Niti: ನಿಮ್ಮ ಸಂಪತ್ತು ದುಪ್ಪಟ್ಟಾಗಬೇಕೆಂದರೆ ಈ ವಿಚಾರಗಳು ಗಮನದಲ್ಲಿ ಇರಲಿ – ಚಾಣಕ್ಯ ನೀತಿ

Chanakya Niti: ಬದುಕಲು ಹಣ ಬಹಳ ಅವಶ್ಯಕ. ಗಳಿಸಿದ ಸಂಪತ್ತನ್ನು ಸರಿಯಾಗಿ ಕಾಪಾಡಿಕೊಂಡು ಹೋಗಬೇಕು ಇಲ್ಲದಿದ್ದರೆ ಬಡವರಾಗಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣ್ಯಕರ ಸಲಹೆ ಹೀಗಿದೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಒಬ್ಬ ಶ್ರೀಮಂತ ವ್ಯಕ್ತಿಯು ಬಡತನದ ಬಲೆಗೆ ಬೀಳುತ್ತಾನೆಂದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ಕೆಲವು ವಿಷಯಗಳಿಗೆ ಗಮನ ಕೊಡದಿದ್ದರೆ ಶ್ರೀಮಂತ ವ್ಯಕ್ತಿಯೂ ಬಡವನಾಗುತ್ತಾನೆ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ, ವ್ಯಕ್ತಿಯ ಸಂಪತ್ತಿನ ನಾಶಕ್ಕೆ ಕಾರಣವಾಗುವ ಕೆಲವು ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ. ಕಷ್ಟಪಟ್ಟು ಗಳಿಸಿದ ಹಣವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವುದು ಜಾಣತನ. ಆಚಾರ್ಯ ಚಾಣಕ್ಯರ ಪ್ರಕಾರ ಮನುಷ್ಯನು ಕೆಲವು ಗುಣಗಳನ್ನು ಹೊಂದಿರಲೇ ಬಾರದು. ಏಕೆಂದರೆ ಅದು ಸಂಪತ್ತಿನ ನಾಶಕ್ಕೆ ಕಾರಣವಾಗುತ್ತದೆ. ಹಣದ ಗಳಿಕೆಗೆ ಹಾಗೂ ಅದರ ನಿರ್ವಹಣೆಗೆ ಚಾಣಕ್ಯರ ಸಲಹೆಗಳು ಈ ರೀತಿಯಾಗಿದೆ.

ಹಣ ಗಳಿಸಲು ಅನ್ಯಾಯದ ಮಾರ್ಗ ಅನುಸರಿಸಬೇಡಿ

ಚಾಣಕ್ಯರ ಪ್ರಕಾರ, ಅಧರ್ಮದ ಮಾರ್ಗವನ್ನು ಅನುಸರಿಸುವ ವ್ಯಕ್ತಿಗೆ ಎಂದಿಗೂ ಹಣವಿರುವುದಿಲ್ಲ. ತಪ್ಪು ದಾರಿಯಲ್ಲಿ ಹೆಚ್ಚು ಹಣ ಸಂಪಾದಿಸಲು ಪ್ರಾರಂಭಿಸಿದರೆ, ಅವರ ನಾಶ ಖಚಿತ ಎಂದು ತಿಳಿಯಿರಿ. ಅವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲ.

ಹಣವನ್ನು ಸರಿಯಾಗಿ ಹೂಡಿಕೆಮಾಡಿ

ಚಾಣಕ್ಯರ ಪ್ರಕಾರ ಗಳಿಸಿದ ಹಣವನ್ನು ಹಾಗೆಯೇ ಇಡಬಾರದು. ಅದನ್ನು ಸರಿಯಾಗಿ ಹೂಡಿಕೆ ಮಾಡಬೇಕು. ಅದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಹಣವನ್ನು ಬಚ್ಚಿಟ್ಟುಕೊಂಡರೆ ಅದರಿಂದ ಹಣದ ಮೌಲ್ಯ ಕಡಿಮೆಯಾಗುತ್ತದೆ. ಅದನ್ನೇ ವ್ಯವಸ್ಥಿತವಾಗಿ ಹೂಡಿಕೆ ಮಾಡಿದರೆ ಸಂಪತ್ತು ಬೆಳೆಯುತ್ತದೆ.

ಮಿತವಾಗಿ ದಾನ ಮಾಡಿ

ಇತರರಿಗೆ ದಾನ ಮಾಡುವುದು ನಿಜವಾಗಿಯೂ ನೀವು ಮಾಡುವ ಒಳ್ಳೆಯ ಕಾರ್ಯವಾಗಿದೆ. ಅಷ್ಟೇ ಅಲ್ಲದೇ ಇದು ಪುಣ್ಯದ ಕಾರ್ಯವೆಂದು ಸಹ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕೆ ಅನುಗುಣವಾಗಿ ಮಾತ್ರ ದಾನ ಮಾಡಬೇಕು. ನಿಮ್ಮ ಆದಾಯಕ್ಕಿಂತ ಹೆಚ್ಚಿನದನ್ನು ದಾನ ಮಾಡುವುದರಿಂದ ನೀವು ಬಡವರಾಗುತ್ತೀರಿ. ಆದ್ದರಿಂದ ಯಾವಾಗಲೂ ನಿಮ್ಮ ಆದಾಯದೊಳಗೆ ಮಾತ್ರ ಖರ್ಚು ಮಾಡಿ. ನೀವು ಗಳಿಸುವ ಹಣವನ್ನು ಉಳಿಸಿ. ಅಗತ್ಯಕ್ಕೆ ತಕ್ಕಂತೆ ಇತರರಿಗೆ ಸಹಾಯ ಮಾಡಿ.

ಸೋಮಾರಿತನ ಬಿಡಿ

ನಿಮ್ಮ ಬಳಿ ಎಷ್ಟೇ ಹಣವಿದ್ದರೂ ಸೋಮಾರಿಯಾಗಬೇಡಿ. ಏಕೆಂದರೆ ನಿಮ್ಮ ಬಳಿ ಎಷ್ಟೇ ಹಣವಿದ್ದರೂ, ಕೆಲಸ ಮಾಡದೆ ಖರ್ಚು ಮಾಡಿದರೆ, ಸ್ವಲ್ಪ ಸಮಯದ ನಂತರ ಬಡತನದ ಬಿಸಿ ನಿಮ್ಮನ್ನು ತಟ್ಟುತ್ತದೆ. ಹಣದ ಅಭಾವ ನಿಮ್ಮನ್ನು ಕಾಡುತ್ತದೆ. ಆದ್ದರಿಂದ ಸೋಮಾರಿತವನ್ನು ಬಿಡಬೇಕು ಹಾಗೂ ದುಂದು ವೆಚ್ಚವನ್ನು ಮಾಡಬಾರದು.

ಖರ್ಚುವೆಚ್ಚಗಳನ್ನು ನಿಯಂತ್ರಿಸಿ

ನಿಮ್ಮ ಖರ್ಚುಗಳನ್ನು ನಿಯಂತ್ರಿಸದಿದ್ದರೆ, ನೀವು ಎಷ್ಟೇ ಹಣ ಸಂಪಾದಿಸಿದರೂ ಅದು ಸಾಕಾಗುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಹೆಚ್ಚು ಹಣ ಸಂಪಾದಿಸುವುದರಿಂದ ಎಂದಿಗೂ ಶ್ರೀಮಂತರಾಗುವುದಿಲ್ಲ. ಅನಗತ್ಯ ವಸ್ತುಗಳಿಗೆ ಅತಿಯಾಗಿ ಖರ್ಚು ಮಾಡುವುದರಿಂದ ಬೇಗನೆ ಬಡತನ ಬರುತ್ತದೆ. ಹಣವನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಸಂಪತ್ತು ಕಡಿಮೆಯಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ಸಂಪತ್ತಿನ ಬಗ್ಗೆ ಅಹಂಕಾರವಿರಬಾರದು

ಚಾಣಕ್ಯರ ಪ್ರಕಾರ ನಿಮ್ಮ ಬಳಿ ಇರುವ ಹಣದ ಬಗ್ಗೆ ಅತಿಯಾದ ಹೆಮ್ಮೆ ಪಡಬಾರದು. ಅದೆಷ್ಟೇ ಸಂಪತ್ತಿದ್ದರೂ ವಿನಯವನ್ನು ಕಳೆದುಕೊಳ್ಳಬಾರದು. ಹಣದ ವಿಷಯ ಬಂದಾಗ ಅಹಂಕಾರ ನಿಮ್ಮ ಮನಸ್ಸಿನಲ್ಲಿ ಪ್ರವೇಶಿಸಲು ಬಿಡಬಾರದು. ದುರಹಂಕಾರವು ನಿಮ್ಮ ಬುದ್ದಿಶಕ್ತಿಯನ್ನು ಹಾಳು ಮಾಡುತ್ತದೆ. ಇದರಿಂದ ಸಂಪತ್ತು ಬೇಗನೆ ನಾಶವಾಗುತ್ತದೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner