ನಿಮ್ಮ ಜೀವನ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿರಬೇಕಾ? ಚಾಣಕ್ಯರ ಈ 4 ಸೂತ್ರಗಳನ್ನು ಅಳವಡಿಸಿಕೊಳ್ಳಿ
Chanakya Niti: ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷವಾಗಿರಬೇಕೆಂದು ಬಯಸುತ್ತಾರೆ. ಆದರೆ ಅದಕ್ಕೆ ಪ್ರಯತ್ನಿಸುವುದಿಲ್ಲ. ಆಚಾರ್ಯ ಚಾಣಕ್ಯ ಹೇಳಿರುವ ಈ 4 ನೀತಿಪಾಠಗಳನ್ನು ಅಳವಡಿಸಿಕೊಂಡರೆ ಎಲ್ಲರ ಜೀವನ ಸ್ವರ್ಗದಂತಿರುತ್ತದೆ.

Chanakya Niti: ಪ್ರತಿಯೊಬ್ಬರ ಜೀವನವೂ ಏರಿಳಿತಗಳಿಂದ ಕೂಡಿದೆ. ಈಗ ದುಃಖವಿದ್ದರೆ ಸ್ವಲ್ಪ ಸಮಯದ ನಂತರ ಸಂತೋಷದ ದಿನಗಳು ಬರುತ್ತವೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಲ್ಲದೆ ಸುಖಮಯ ಜೀವನ ನಡೆದಲು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ. ಚಾಣಕ್ಯ ತಮ್ಮ ಆಲೋಚನೆಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದ್ದಾರೆ. ಸಂತೋಷದ ಜೀವನಕ್ಕೆ ಚಾಣಕ್ಯರ ಆಲೋಚನೆಗಳು ಬಹಳ ಮೌಲ್ಯಯುತವಾಗಿವೆ.
ಟ್ರೆಂಡಿಂಗ್ ಸುದ್ದಿ
ಆಚಾರ್ಯ ಚಾಣಕ್ಯ ಹೇಳುವಂತೆ ಜೀವನದಲ್ಲಿ ಅತ್ಯಂತ ದೊಡ್ಡ ಸಂತೋಷವು ನಾಲ್ಕು ವಿಷಯಗಳಲ್ಲಿ ಅಡಗಿದೆ, ಅದನ್ನು ಅನುಸರಿಸುವವರ ಪ್ರತಿಯೊಬ್ಬರ ಮನೆ ಸ್ವರ್ಗದಂತೆ ಆಗುತ್ತದೆ. ಆ ನಾಲ್ಕೂ ವಿಚಾರಗಳು ಯಾವುವು ನೋಡೋಣ.
ಇದ್ದದ್ದರಲ್ಲಿ ತೃಪ್ತಿ ಇರಲಿ
ಮನುಷ್ಯನ ಜೀವನದಲ್ಲಿ ಸಂತೃಪ್ತಿಯೇ ಅದರ ಶ್ರೇಷ್ಠ ಸಂಪತ್ತು ಎಂದು ಚಾಣಕ್ಯ ಹೇಳುತ್ತಾರೆ. ಯಶಸ್ಸನ್ನು ಯಾವಾಗಲೂ ಇತರರು ಮೌಲ್ಯಮಾಪನ ಮಾಡುತ್ತಾರೆ ಆದರೆ ಒಬ್ಬರ ಸ್ವಂತ ಮನಸ್ಸು ಮತ್ತು ಮೆದುಳಿನ ಮೂಲಕ ತೃಪ್ತಿಯನ್ನು ಅನುಭವಿಸಲಾಗುತ್ತದೆ. ಆದ್ದರಿಂದ ನಿಮಗೆ ದೊರೆತಿದ್ದನ್ನು ಅನುಭವಿಸಿ, ಖುಷಿ ಪಡಿ, ಅದರಿಂದ ನೀವು ತೃಪ್ತಿಪಟ್ಟಲ್ಲಿ ನಿಮ್ಮ ಮನೆ, ಮನಸ್ಸು ಎರಡೂ ಖುಷಿಯಿಂದ ಇರುತ್ತದೆ.
ದಯೆ ಇರಲಿ
ದಯೆಯೇ ಧರ್ಮದ ಮೂಲವಯ್ಯ ಎಂಬ ಮಾತನ್ನು ಕೇಳಿದ್ದೀರಿ, ಆಚಾರ್ಯ ಚಾಣಕ್ಯರು ಕೂಡಾ ಅದನ್ನೇ ಹೇಳುತ್ತಾರೆ. ದಯೆಯ ಪ್ರಜ್ಞೆಯು ಮನುಷ್ಯನನ್ನು ಸಮರ್ಥನನ್ನಾಗಿ ಮಾಡುತ್ತದೆ. ದಯೆಯ ಭಾವನೆಯು ವ್ಯಕ್ತಿಯನ್ನು ಕೆಟ್ಟದ್ದನ್ನು ಮಾಡದಂತೆ ತಡೆಯುತ್ತದೆ. ದುಶ್ಚಟಗಳಿಗೆ ಬೀಳದಂತೆ ಅಡ್ಡಿಯಾಗುತ್ತದೆ. ಅಂತಹ ಜನರು ಪಾಪ ಕರ್ಮಗಳಲ್ಲಿ ಭಾಗಿಯಾಗುವುದಿಲ್ಲ. ಆದ್ದಿರಂದ ಪ್ರತಿ ಮನುಷ್ಯನೂ ದಯೆಯನ್ನು ಹೊಂದಿರಬೇಕು.
ಶಾಂತ ಮನಸ್ಸು
ಎಷ್ಟೇ ದೊಡ್ಡ ಸಮಸ್ಯೆಯಾದರೂ ಶಾಂತಿಯೇ ಪರಿಹಾರ ಎಂದು ಚಾಣಕ್ಯ ಹೇಳುತ್ತಾರೆ. ಶಾಂತಿಗಿಂತ ದೊಡ್ಡ ತಪಸ್ಸು ಇಲ್ಲ. ಇಷ್ಟೆಲ್ಲಾ ಸುಖ-ಸಂತೋಷಗಳಿದ್ದರೂ ಜನರಿಗೆ ನೆಮ್ಮದಿ ಸಿಗುತ್ತಿಲ್ಲ. ಯಾರ ಮನಸ್ಸು ಚಂಚಲವಾಗಿದೆಯೋ ಅವರು ಎಲ್ಲಾ ಸೌಕರ್ಯಗಳಿಂದಲೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ಮನಸ್ಸು ಸದಾ ಶಾಂತವಾಗಿರಬೇಕು. ನೀವು ಶಾಂತ ಮನಸ್ಸನ್ನು ಹೊಂದಿದ್ದರೆ, ನೀವು ಸುಲಭವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಹಾಗೂ ನಿಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ದುರಾಸೆ ಬಿಡಿ
ದುರಾಸೆ ಬೇಡ, ಸಿಕ್ಕಿದ್ದನ್ನು ಗೌರವಿಸಿ. ಇಲ್ಲದಿದ್ದರೆ ಸಂತೋಷದ ಮನೆಗೂ ಬೆಂಕಿ ಬೀಳುತ್ತದೆ. ಕಡುಬಯಕೆ ಒಂದು ರೋಗವಾಗಿದ್ದು, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಜೀವಮಾನದ ದುಃಖವನ್ನು ಉಂಟುಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಏನನ್ನಾದರೂ ಸಾಧಿಸುವ ಬಯಕೆಯು ಮನುಷ್ಯನನ್ನು ತಪ್ಪು ದಾರಿಗೆ ಕರೆದೊಯ್ಯುತ್ತದೆ, ಅದು ಅವನ ಎಲ್ಲಾ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳುತ್ತದೆ. ದುರಾಸೆಯು ವ್ಯಕ್ತಿಯ ಆಲೋಚನಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದನ್ನು ಜಯಿಸಿದವನಿಗೆ ಸ್ವರ್ಗಕ್ಕಿಂತ ಶ್ರೇಷ್ಠವಾದ ಜೀವನವಿದೆ. ಎಷ್ಟು ದೊರೆತರೂ ಸಾಲು ಎಂಬ ದುರಾಸೆಯನ್ನು ಬಿಟ್ಟರೆ ಸಂತೃಪ್ತಿ ದೊರೆಯುತ್ತದೆ.
ಚಾಣಕ್ಯ ಹೇಳಿರುವ ಈ ಎಲ್ಲಾ ಅಂಶಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷದಿಂದ ಬಾಳಿ
ವಿಭಾಗ