Chanakya Niti: ಹಣ ಗಳಿಸುವುದು ಸುಲಭವಲ್ಲ, ನೀವು ಕೋಟ್ಯಾಧಿಪತಿಯಾಗಬೇಕೆಂದಿದ್ದರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಹಣ ಗಳಿಸುವುದು ಸುಲಭವಲ್ಲ, ನೀವು ಕೋಟ್ಯಾಧಿಪತಿಯಾಗಬೇಕೆಂದಿದ್ದರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

Chanakya Niti: ಹಣ ಗಳಿಸುವುದು ಸುಲಭವಲ್ಲ, ನೀವು ಕೋಟ್ಯಾಧಿಪತಿಯಾಗಬೇಕೆಂದಿದ್ದರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಶ್ರೀಮಂತನಾಗಬೇಕು ಎಂದಾದರೆ ಕೆಲವು ಅಭ್ಯಾಸಗಳನ್ನು ಹೊಂದಿರಬೇಕು. ಆಗ ಮಾತ್ರ ಆ ವ್ಯಕ್ತಿಯು ಕೋಟ್ಯಾಧಿಪತಿಯಾಗಬಹುದು. ಹಣಗಳಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಚಾರಗಳು ಇಲ್ಲಿವೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಭಾರತದ ಇತಿಹಾಸದಲ್ಲಿ ಅನೇಕ ಮಹಾನ್‌ ವಿದ್ವಾಂಸರನ್ನು ಕಾಣಬಹುದು. ಅವರ ಮಾತುಗಳು ಎಷ್ಟು ಮಹತ್ವದ್ದಾಗಿದೆಯೆಂದರೆ ಇಂದಿಗೂ ಅಗತ್ಯ ಬಿದ್ದಾಗಲೆಲ್ಲಾ ಜನರು ಅದನ್ನು ಅನುಸರಿಸುತ್ತಾರೆ. ಅಂತಹ ಮಾಹಾನ್‌ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರು ಒಬ್ಬರು. ಅವರು ತತ್ವಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ರಾಜನೀತಿತಜ್ಞರು. ಅವರಿಗೆ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಅದ್ಭುತ ಜ್ಞಾನವಿತ್ತು. ಆ ಜ್ಞಾನವನ್ನು ಅವರು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ತಮ್ಮ ನೀತಿಯನ್ನು ಬರೆದರು. ಅದು ಚಾಣಕ್ಯ ನೀತಿಯೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಜೀವನದಲ್ಲಿ ಹಣ ಗಳಿಸುವುದು ಸುಲಭದ ವಿಷಯವಲ್ಲ. ಹಣ ಗಳಿಸುವುದರಷ್ಟೇ ಮುಖ್ಯ ಅದನ್ನು ಕಾಪಾಡಿಕೊಂಡು ಹೋಗುವುದು. ಹಣ ಎಲ್ಲಿಯೂ ಪೋಲಾಗದಂತೆ ಎಚ್ಚರಿಕೆವಹಿಸುವುದು ಕೂಡಾ ಬಹಳ ಅವಶ್ಯಕವಾದ ಸಂಗತಿಯಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ಹಣ ಗಳಿಸಲು ಏನು ಮಾಡಬೇಕು ಮತ್ತು ಅದರ ಬಗ್ಗೆ ಎಚ್ಚರಿಕೆವಹಿಸುವುದು ಹೇಗೆ ಎಂಬುದನ್ನು ಈ ನೀತಿಗಳಿಂದ ತಿಳಿದುಕೊಳ್ಳಿ.

ಹಣಗಳಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಚಾರಗಳು

ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಜ್ಞಾನವನ್ನು ಗಳಿಸಿದ್ದರೂ, ಅದರ ಬಹುಪಾಲು ಭಾಗವು ಅವನ ಶಿಕ್ಷಕರಿಗೆ ಸೇರಿರುತ್ತದೆ. ಆದ್ದರಿಂದ ಶಿಕ್ಷಕರಿಂದ ಏನನ್ನಾದರೂ ಕಲಿಯುವಾಗ ಯಾವುದೇ ಸಂಕೋಚವಿಲ್ಲದೇ ಪೂರ್ಣವಾಗಿ ಆ ವಿದ್ಯೆಯನ್ನು ಕಲಿಯಬೇಕು. ಸರಿಯಾಗಿ ತಿಳಿದು ಅಧ್ಯಯನ ಮಾಡುವ ವ್ಯಕ್ತಿಯು ಉತ್ತಮ ವಿದ್ಯಾರ್ಥಿಯಾಗುತ್ತಾನೆ. ಅವನೇ ಮುಂದೊಂದು ದಿನ ಜೀವನದಲ್ಲಿ ಶ್ರೀಮಂತನಾಗುತ್ತಾನೆ ಎಂದು ಚಾಣಕ್ಯರು ಹೇಳಿದ್ದಾರೆ.

ನೀವು ಜೀವನದಲ್ಲಿ ಬೇಗನೆ ಯಶಸ್ಸನ್ನು ಸಾಧಿಸಲು ಬಯಸಿದರೆ, ಕೆಲಸವನ್ನು ನಿಮ್ಮ ಯೋಜನೆಯ ಪ್ರಕಾರವೇ ಪೂರ್ಣಗೊಳಿಸಿ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅದಕ್ಕೆ ಒಂದು ಉತ್ತಮ ಯೋಜನೆಯನ್ನು ರೂಪಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಪೂರ್ಣ ಪ್ರಮಾಣದ ಯೋಜನೆಯು ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರ ಮೂಲಕ ನೀವು ಹಣ ಗಳಿಸುವ ಸಾಧ್ಯತೆಯೂ ಹೆಚ್ಚು.

ಚಾಣಕ್ಯರು ಹೇಳುವಂತೆ, ಒಬ್ಬ ವ್ಯಕ್ತಿಯು ತನ್ನನ್ನು ಮತ್ತು ತನ್ನ ಕುಟುಂಬವನ್ನು ಪೋಷಿಸಲು ಸಂಪಾದಿಸುತ್ತಾನೆ. ಹಸಿದುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲೇ ಹೋದರು ಊಟವನ್ನು ಸರಿಯಾಗಿ ತಿನ್ನಬೇಕು. ಆಹಾರವನ್ನು ತ್ಯಜಿಸಬಾರದು. ಏಕೆಂದರೆ ಹಸಿವೆಯಾದಾಗ ಸರಿಯಾಗಿ ಯೋಚಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಆರೋಗ್ಯವು ಹದಗೆಡುತ್ತದೆ. ಅದರಿಂದ ಸಂಪಾದನೆ ಕುಂಠಿತವಾಗುತ್ತದೆ. ಕೆಲಸ ಮಾಡಿ, ಹಣ ಗಳಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಅನೇಕ ಜನರು ಇತರರಿಗೆ ಧನ ಸಹಾಯ ಮಾಡಲು ಮುಂದಾಗುತ್ತಾರೆ. ಇತರರಿಗೆ ಆರ್ಥಿಕವಾಗಿ ನೆರವು ನೀಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಹಾಗೆ ಕೊಟ್ಟ ಹಣವನ್ನು ತಿರುಗಿ ಪಡೆಯಲು ಮುಜುಗರವನ್ನು ಪಡುತ್ತಾರೆ. ಹೀಗೆ ಕೊಟ್ಟ ಹಣವನ್ನು ತಿರುಗಿ ಪಡೆದುಕೊಳ್ಳದಿದ್ದರೆ ಆಗ ನೀವು ಕಷ್ಟ ಪಟ್ಟುಗಳಿಸಿದ ಹಣ ನಿಮಗೆ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಹಣವನ್ನು ನೀವು ಪಡೆದುಕೊಳ್ಳಲು ಯಾವುದೇ ನಾಚಿಕೆ ಪಡಬಾರದು. ಇಲ್ಲದಿದ್ದರೆ ಅದು ಯಾವಾಗಲೂ ಜೀವನದಲ್ಲಿ ಹಣದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವಾಗಲೂ ಒಂದೊಂದು ರೂಪಾಯಿಗೂ ಮಹತ್ವವನು ಕೊಡಬೇಕು. ಆಗ ಮಾತ್ರ ನೀವು ಶ್ರೀಮಂತರಾಗುತ್ತೀರಿ. ಅನಗತ್ಯವಾಗಿ ಇತರರಿಗೆ ಹಣವನ್ನು ಕೊಟ್ಟು ಬಿಡಬೇಡಿ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner