Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ಈ 3 ಪರಿಸ್ಥಿತಿ ಇದ್ದರೆ ಅದೃಷ್ಟ ಲಕ್ಷ್ಮೀ ಉಳಿಯೋದಿಲ್ಲ, ಕೌಟಿಲ್ಯನ ನೀತಿದರ್ಪಣದ ಸಾರ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ಈ 3 ಪರಿಸ್ಥಿತಿ ಇದ್ದರೆ ಅದೃಷ್ಟ ಲಕ್ಷ್ಮೀ ಉಳಿಯೋದಿಲ್ಲ, ಕೌಟಿಲ್ಯನ ನೀತಿದರ್ಪಣದ ಸಾರ

Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ಈ 3 ಪರಿಸ್ಥಿತಿ ಇದ್ದರೆ ಅದೃಷ್ಟ ಲಕ್ಷ್ಮೀ ಉಳಿಯೋದಿಲ್ಲ, ಕೌಟಿಲ್ಯನ ನೀತಿದರ್ಪಣದ ಸಾರ

ಕೌಟಿಲ್ಯರ ಚಾಣಕ್ಯ ನೀತಿಶಾಸ್ತ್ರದ ಪ್ರಕಾರ ಮನೆಯಲ್ಲಿ, ಆಫೀಸ್‌ನಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ಅದೃಷ್ಟ ಲಕ್ಷ್ಮಿ, ಭಾಗ್ಯ ಲಕ್ಷ್ಮಿ, ಧನಲಕ್ಷ್ಮಿ ನೆಲೆಸಬೇಕಾದರೆ ಕೆಲವೊಂದು ಉತ್ತಮ ಸಂಗತಿಗಳು ಬೇಕು. ಕೌಟಿಲ್ಯನ ಪ್ರಕಾರ ಎಲ್ಲಿ ಲಕ್ಷ್ಮಿ ನೆಲೆಸಲು ಬಯಸುತ್ತಾಳೆ, ಎಲ್ಲಿ ನೆಲೆಸಲು ಬಯಸುವುದಿಲ್ಲ ಎಂದು ತಿಳಿದುಕೊಳ್ಳೋಣ.

ಕೌಟಿಲ್ಯನ ನೀತಿದರ್ಪಣದ ಸಾರ
ಕೌಟಿಲ್ಯನ ನೀತಿದರ್ಪಣದ ಸಾರ

ಚಾಣಕ್ಯ ನೀತಿ: ಹಣ ಎಂದರೆ ಎಲ್ಲರಿಗೂ ಇಷ್ಟ. ಎಲ್ಲರೂ ಧನಪ್ರಾಪ್ತಿಗಾಗಿ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಲಕ್ಷ್ಮೀಯ ಆಶೀರ್ವಾದ ಪಡೆಯಲು ಬಯಸುತ್ತಾರೆ. ಆದರೆ, ಕೆಲವರ ಪಾಲಿಗೆ ಭಾಗ್ಯ ಲಕ್ಷ್ಮಿ ಆಶೀರ್ವಾದ ದೊರಕಿದರೆ, ಇನ್ನು ಕೆಲವರ ಪಾಲಿಗೆ ದರಿದ್ರ ಲಕ್ಷ್ಮೀಯ ದೃಷ್ಟಿ ಬೀಳುತ್ತಾರೆ. ಕೌಟಿಲ್ಯನ ಚಾಣಕ್ಯ ನೀತಿಯಲ್ಲಿ ಈ ವಿಷಯದ ಕುರಿತೂ ಹೇಳಲಾಗಿದೆ. ಅಂದು ಚಾಣಕ್ಯ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ. ಮೂರ್ಖರಿಗೆ ಗೌರವ ದೊರಕುವ ಸ್ಥಳದಲ್ಲಿ ಲಕ್ಷ್ಮೀಯು ಒಂದು ಕ್ಷಣವೂ ಉಳಿಯುವುದಿಲ್ಲ. ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಇರುವ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಮಹಾನ್ ಅರ್ಥಶಾಸ್ತ್ರಜ್ಞ ಚಾಣಕ್ಯರ ಪ್ರಕಾರ ಲಕ್ಷ್ಮೀ ದೇವಿಯು ನಮ್ಮ ಮನೆಯಲ್ಲಿ ನೆಲೆಸುವಂತಹ ವಾತಾವರಣ ಬೇಕು. ಈ ರೀತಿಯ ವಾತಾವರಣ ಇದ್ದರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಏನು ಮಾಡಬೇಕೆಂದು ಆಚಾರ್ಯ ಚಾಣಕ್ಯರು ಸಲಹೆಗಳನ್ನೂ ನೀಡಿದ್ದಾರೆ.

ಎಲ್ಲಿ ಮೂರ್ಖರನ್ನು ಗೌರವಿಸುವುದಿಲ್ಲವೋ ಅಲ್ಲಿ ಧಾನ್ಯ ಸಮೃದ್ಧಿಯಾಗುತ್ತದೆ. ಪತಿ-ಪತ್ನಿಯರ ನಡುವೆ ಭೇದವಿಲ್ಲವೋ ಅಲ್ಲಿಗೆ ಲಕ್ಷ್ಮಿಯೇ ಬರುತ್ತಾಳೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ಸ್ಥಳದಲ್ಲಿ ಯಾವಾಗಲೂ ಸಂತೋಷ ಮತ್ತು ಸಂಪತ್ತು ಇರುತ್ತದೆ.

ಮೂರ್ಖರನ್ನು ಗೌರವಿಸುವ ಸ್ಥಳಕ್ಕೆ ಲಕ್ಷ್ಮೀ ಬರೋದಿಲ್ಲ

ಮೂರ್ಖರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ಲಕ್ಷ್ಮಿ ಒಂದು ಕ್ಷಣವೂ ಉಳಿಯುವುದಿಲ್ಲ ಎಂದು ಚಾಣಕ್ಯರ ನೀತಿ ದರ್ಪಣ ಹೇಳುತ್ತದೆ. ಮೂರ್ಖನ ಮಾತುಗಳನ್ನು ನಂಬುವವನು ಯಾವಾಗಲೂ ಸೋಲುತ್ತಾನೆ. ಆದ್ದರಿಂದ ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ಮೂರ್ಖರು ಮತ್ತು ಮುಖಸ್ತುತಿ ಮಾಡುವವರ ಮಾತುಗಳನ್ನು ನಂಬಬೇಡಿ. ಮೂರ್ಖರು ಮತ್ತು ಹೊಗಳುವರು ಇಬ್ಬರೂ ಒಳ್ಳೆಯ ಸಲಹೆಯನ್ನು ನೀಡುವುದಿಲ್ಲ. ಈ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋಣ.

ಗಂಡ ಹೆಂಡತಿ ನಡುವೆ ಜಗಳ

ಗಂಡ ಹೆಂಡತಿ ಸದಾ ಜಗಳವಾಡುವ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನೀವು ಲಕ್ಷ್ಮಿಯನ್ನು ಸಂತೋಷವಾಗಿರಿಸಲು ಬಯಸಿದರೆ, ಮನೆಯಲ್ಲಿ ಶಾಂತಿಯ ವಾತಾವರಣ ಇರಲಿ. ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಅತ್ಯಂತ ಅಗತ್ಯವಾಗಿದೆ. ಗಂಡ ಹೆಂಡತಿ ಮಾತ್ರವಲ್ಲ ಯಾರೊಂದಿಗೂ ಜಗಳವಾಡಬೇಡಿ. ಲಕ್ಷ್ಮಿಯ ಕೃಪೆ ಸದಾ ಉಳಿಯುತ್ತದೆ. ಮನೆಯಲ್ಲಿ ಸದಾ ಜಗಳ ಇದ್ದರೆ ಲಕ್ಷ್ಮೀ ಮಾತ್ರವಲ್ಲ ಯಾರೂ ಇರಲು ಇಷ್ಟಪಡುವುದಿಲ್ಲ.

ಆಹಾರ ಸಂಗ್ರಹ ಇರಲಿ

ಎಲ್ಲಿ ಆಹಾರವನ್ನು ಸಂಗ್ರಹಿಸಡಲಾಗುತ್ತಿದೆಯೋ ಅಲ್ಲಿ ಲಕ್ಷ್ಮೀ ಇರುತ್ತಾಳೆ. ಚಾಣಕ್ಯರ ಈ ಮಾತಿನಲ್ಲಿ ಹಲವು ನಿಗೂಢ ಅರ್ಥಗಳು ಇವೆ. ಯಾರು ಬಹಳ ಶ್ರಮದಿಂದ ಆಹಾರವನ್ನು ಸಂಗ್ರಹಿಸುತ್ತಾರೋ ಅಲ್ಲಿ ಲಕ್ಷ್ಮೀ ದೇವಿ ಇರುತ್ತಾಳೆ. ಕಠಿಣ ಪರಿಶ್ರಮದಿಂದ ಆಹಾರ ಸಂಗ್ರಹಿಸುವ ಮಹತ್ವವನ್ನು ಇದು ಹೇಳುತ್ತದೆ. ಕಷ್ಟಪಟ್ಟು ದುಡಿದು ಬದುಕುವವರೆಂದರೆ ಲಕ್ಷ್ಮೀ ದೇವಿಗೆ ಇಷ್ಟ. ಎಲ್ಲಿ ಸೋಮಾರಿಗಳು ಇರುವರೋ ಅಲ್ಲಿಗೆ ಲಕ್ಷ್ಮೀ ದೇವಿಯು ಬರುವುದಿಲ್ಲ, ಅಲ್ಲಿಗೆ ದರಿದ್ರ ಲಕ್ಷ್ಮೀ ಆಗಮಿಸುತ್ತಾಳೆ. ಹೀಗಾಗಿ, ಮನೆಗೆ ಅದೃಷ್ಟ ಲಕ್ಷ್ಮೀ ಬರುವಂತಹ ವಾತಾವರಣ ಮನೆಯಲ್ಲಿ ಇರಲಿ.

Whats_app_banner