Chanakya Niti: ಈ ವಿಷಯಗಳ ಬಗ್ಗೆ ತಿಳುವಳಿಕೆ ಇದ್ದರೆ ಯಶಸ್ಸು ನಿಮ್ಮದಾಗುತ್ತೆ –ಚಾಣಕ್ಯ ನೀತಿ
Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಕೆಲವು ವಿಷಯಗಳ ಬಗ್ಗೆ ತಿಳಿದಿರಬೇಕು. ಆಗ ಮಾತ್ರ ನಾವು ಪ್ರಗತಿ ಹೊಂದಲು ಸಾಧ್ಯ. ಯಶಸ್ಸು ಕಾಣಲು ನೀವು ತಿಳಿದಿರಲೇಬೇಕಾದ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ವಿದ್ವಾಂಸ ಮತ್ತು ತತ್ವಜ್ಞಾನಿಗಳು. ಅವರ ನೀತಿಗಳು ಇಂದಿಗೂ ಜನರಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ. ಅನೇಕ ಜನರು ಇನ್ನೂ ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಸಂತೋಷದಿಂದ ಜೀವನ ನಡೆಸಲು ಅಗತ್ಯವಿರುವ ಹಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಆ ಸಲಹೆಗಳ ಮೂಲಕ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಉತ್ತಮಗೊಳಿಸಬಹುದು. ಅವರು ಯಶಸ್ಸು ಕಾಣಲು ಹಲವಾರು ತತ್ವಗಳನ್ನು ವಿವರಿಸಿದ್ದಾರೆ. ನೀವು ಕೂಡ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಆಚಾರ್ಯ ಚಾಣಕ್ಯರ ಈ ಮಾತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಚಾಣಕ್ಯರ ತತ್ವಗಳು ಮತ್ತು ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಬಹಳ ಬೇಗನೆ ಯಶಸ್ಸ ಗಳಿಸಬಹುದು. ಮಾನವನ ಜೀವನದಲ್ಲಿ ಸೋಲು–ಗೆಲುವು ಇದ್ದೇ ಇರುತ್ತದೆ. ನಿರಂತರವಾಗಿ ಸರಿಯಾದ ಹಾದಿಯಲ್ಲಿ ನಡೆಯುವವರು ಮಾತ್ರ ಪ್ರಗತಿ ಹೊಂದಲು ಸಾಧ್ಯ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ನೀವು ಆ ಪಾಠಗಳ ಪ್ರಕಾರ ಬದುಕಿದರೆ, ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಗುರಿ ಸಾಧನೆಗೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಯಶಸ್ಸು ತರುವ ಮೊದಲ ವಿಷಯವೆಂದರೆ ಅದು ನಿಮ್ಮ ಗುರಿಯನ್ನು ಸಾಧಿಸಲು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದಾಗಿದೆ. ಕೆಲಸದ ಸ್ಥಿತಿ, ಸ್ಥಳ, ನಿಮ್ಮ ಸಹೋದ್ಯೋಗಿಗಳು, ಸಹೋದ್ಯೋಗಿಗಳ ವರ್ತನೆ, ಅವಕಾಶಗಳು ಇತ್ಯಾದಿಗಳನ್ನು ತಿಳಿದುಕೊಳ್ಳಬೇಕು. ಇವೆಲ್ಲವುಗಳನ್ನು ತಿಳಿಯದ ವ್ಯಕ್ತಿ ತನ್ನ ಕೆಲಸದಲ್ಲಿ ತಪ್ಪುಗಳನ್ನು ಮಾಡುವುದು ಹೆಚ್ಚು. ಇದರಿಂದ ಆತ ವೈಫಲ್ಯವನ್ನು ಎದುರಿಸಬೇಕಾಗುತ್ತದೆ.
ಮಿತ್ರ ಹಾಗೂ ಶತ್ರುವನ್ನು ಗುರುತಿಸಿ
ಮಿತ್ರ ಮತ್ತು ಶತ್ರುಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಚಾಣಕ್ಯರು ಹೇಳಿದ್ದಾರೆ. ನಿಜವಾದ ಸ್ನೇಹಿತರ ಸಹಾಯದಿಂದ ನೀವು ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಬಹುದು. ಶತ್ರುಗಳ ವೇಷದಲ್ಲಿ ನಿಮಗೆ ಸಹಾಯ ಮಾಡಲು ಬಂದ ಸ್ನೇಹಿತರು ನಿಮ್ಮನ್ನು ಸೋಲಿಸಲು ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಮಿತ್ರರು ಮಾತ್ರ ಎಲ್ಲಾ ತೊಂದರೆಗಳನ್ನು ನಾಶಮಾಡುತ್ತಾರೆ. ಸರಿಯಾದ ಜನರನ್ನು ಗುರುತಿಸಲು ಕಲಿಯಬೇಕು. ಚಾಣಕ್ಯ ನೀತಿಯಲ್ಲಿ ಹೇಳಲಾದ ಈ ತತ್ವಗಳನ್ನು ನೀವು ಅನುಸರಿಸಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸುವಿರಿ.
ಸಮಯದ ಮೌಲ್ಯ ತಿಳಿಯಿರಿ
ಸಮಯದ ಅವಶ್ಯಕತೆಗಳ ಬಗ್ಗೆ ಯಾವಾಗಲೂ ತಿಳಿದಿರಲಿ. ನೀವು ನಿಮ್ಮ ಕೆಲಸವನ್ನು ಅದಕ್ಕೆ ತಕ್ಕಂತೆ ಮಾಡಬೇಕು. ಸಂತೋಷ ಮತ್ತು ದುಃಖವನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು. ಆಚಾರ್ಯ ಚಾಣಕ್ಯರು ಸಂತೋಷದ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡಲು ಮತ್ತು ಸಂದರ್ಭಗಳು ಅನುಕೂಲಕರವಾಗಿಲ್ಲದಿದ್ದರೂ ತಾಳ್ಮೆಯಿಂದ ಕೆಲಸ ಮಾಡುವುದನ್ನು ಮುಂದುವರಿಸಲು ಸಲಹೆ ನೀಡಿದ್ದಾರೆ. ತಾಳ್ಮೆ ಕಳೆದುಕೊಂಡರೆ, ನಿಮ್ಮ ಕೆಲಸವೂ ವ್ಯರ್ಥವಾಗುತ್ತದೆ.
ನಿಮ್ಮ ಸಾಮರ್ಥ್ಯ ಅರಿತುಕೊಳ್ಳಿ
ಜೀವನದಲ್ಲಿ ಪ್ರಗತಿ ಸಾಧಿಸಲು ಪ್ರತಿಯೊಬ್ಬರು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಚಾಣಕ್ಯರ ತತ್ವದ ಪ್ರಕಾರ ಯಾವಾಗಲೂ ಕೆಲಸ ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಯಶಸ್ಸಿನ ಸಾಧ್ಯತೆಗಳು ಕಡಿಮೆ ಇರುತ್ತದೆ. ಪ್ರತಿಯೊಬ್ಬರು ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿರಬೇಕು. ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ನೀವು ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಹುದೇ ಎಂದು ಕಂಡುಕೊಳ್ಳಬೇಕು. ಆಗ ಮಾತ್ರ ಕೈಗೊಂಡ ಕೆಲಸಗಳು ಯಶಸ್ವಿಯಾಗುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ