Chanakya Niti: ಚಾಣಕ್ಯನ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯನ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ

Chanakya Niti: ಚಾಣಕ್ಯನ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ

ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸಮತೋಲವನ್ನು ಕಾಪಾಡಿಕೊಳ್ಳಲು ಚಾಣಕ್ಯನ ಆಲೋಚನೆಗಳು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತವೆ. ಚಾಣಕ್ಯನ ಪ್ರಕಾರ ಯಾವ 10 ನಿಯಮಗಳನ್ನು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.

Chanakya Niti: ಚಾಣಕ್ಯನ ಪ್ರಕಾರ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು.
Chanakya Niti: ಚಾಣಕ್ಯನ ಪ್ರಕಾರ ಈ 10 ಪ್ರಮುಖ ನಿಯಮಗಳು ತಿಳಿದುಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು.

Chanakya Niti: ಇತಿಹಾಸದಲ್ಲಿ ಅನೇಕ ಮಹಾನ್ ವಿದ್ವಾಂಸರು ಬಂದು ಹೋಗಿದ್ದಾರೆ. ಈಗಲೂ ಕೆಲವರು ಇದ್ದಾರೆ. ಇವರ ಅನುಭವದ ಮಾತುಗಳು, ಸಂದೇಶಗಳು ಇಂದಿನಗೂ ಪ್ರಸ್ತುತ ಎನಿಸುತ್ತವೆ. ಹಿಂದೆ ಇದ್ದ ವಿದ್ವಾಂಸರ ಪೈಕಿ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಗಳಲ್ಲಿ ಜೀವನದ ಪ್ರತಿಯೊಂದು ಅಂಶದ ಬಗ್ಗೆ ತಮ್ಮ ಸ್ಪಷ್ಟ ದೃಷ್ಟಿಕೋನಗಳನ್ನು ನೀಡಿದ್ದಾರೆ. ಆಚಾರ್ಯರ ನೀತಿಗಳನ್ನು ಇಂದಿಗೂ ಜನರು ತಮ್ಮ ಜೀವನದಲ್ಲಿ ಕಾರ್ಯಗತಗೊಳಿಸಿ ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆಚಾರ್ಯ ಚಾಣಕ್ಯನು ತನ್ನ ನೀತಿಗಳಲ್ಲಿ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಒಬ್ಬ ಮನುಷ್ಯನಲ್ಲಿ ಏನೆಲ್ಲಾ ಗುಣಗಳಿರಬೇಕು, ಯಾವ ನಿಮಯಗಳನ್ನು ಪಾಲಿಸಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಚಾಣಕ್ಯರ ನೀತಿಗಳು ಯಾವಾಗಲೂ ನಮಗೆ ಸ್ಪೂರ್ತಿ ನೀಡುತ್ತದೆ. ಅವರ ನೀತಿಗಳು ಕೇವಲ ರಾಜಕೀಯ ಮತ್ತು ಸಮಾಜಕ್ಕೆ ಸಂಬಂಧಿಸಿಲ್ಲ. ಜೀವನದ ಪ್ರತಿಯೊಂದು ಅಂಶವನ್ನು ಸುಧಾರಿಸಲು ಮಾರ್ಗದರ್ಶನ ನೀಡುತ್ತವೆ. ಚಾಣಕ್ಯನ ಪ್ರಮುಖ ನೀತಿಗಳನ್ನು ತಿಳಿಯೋಣ.

ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ
ಚಾಣಕ್ಯನ ಪ್ರಕಾರ, ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಜನರು ನಿಮ್ಮ ದೌರ್ಬಲದ ಲಾಭವನ್ನು ಪಡೆದುಕೊಳ್ಳುತ್ತಾರೆ

ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ
ನಿಮ್ಮ ಆಲೋಚನೆಗಳು ಮತ್ತು ಅಭ್ಯಾಸಗಳನ್ನು ಸುಧಾರಿಸಿಕೊಂಡಾಗ ನೀವು ಅಂದುಕೊಂಡಂತೆ ಆಗುತ್ತೀರಿ. ಆಗ ಮಾತ್ರ ನೀವು ಜೀವನದಲ್ಲಿ ಯಶಸ್ಸಿಯಾಗಬಹುದು

ಸಮಯವನ್ನು ಸದುಪಯೋಗಪಡಿಸಿಕೊಳ್ಳಿ
ಸಮಯ ಅಮೂಲ್ಯವಾಗಿದೆ. ಅದನ್ನು ವ್ಯರ್ಥ ಮಾಡಬೇಡಿ. ಸಮಯದ ಸರಿಯಾದ ಬಳಕೆಯು ಯಶಸ್ಸಿನ ಕೀಲಿಯಾಗಿದೆ.

ಸ್ನೇಹಿತರೊಂದಿಗೆ ಜಾಕರೂಕರಾಗಿರಿ
ಸ್ನೇಹಿತರು ಯಾವಾಗಲೂ ನಿಮ್ಮೊಂದಿಗೆ ಇರುವುದಿಲ್ಲ, ಆದ್ದರಿಂದ ಎಚ್ಚರಿಕೆಯಿಂದ ಸ್ನೇಹವನ್ನು ಮಾಡಿ.

ಸಂಪತ್ತು ಮತ್ತು ಅಧಿಕಾರಕ್ಕಿಂತ ಶಿಕ್ಷಣ ಮುಖ್ಯ
ಚಾಣಕ್ಯ ಹೇಳುವ ಪ್ರಕಾರ, ಸಂಪತ್ತು ಮತ್ತು ಅಧಿಕಾರವು ಸ್ವಲ್ಪ ದಿನಗಳವರೆಗೆ ಮಾತ್ರ ಇರುತ್ತದೆ. ಆದರೆ ಶಿಕ್ಷಣ ನಿಮ್ಮೊಂದಿಗೆ ಜೀವನಪೂರ್ತಿ ಇರುತ್ತದೆ.

ನಿಮ್ಮನ್ನು ದುರ್ಬಲರಂತೆ ಭಾವಿಸಬೇಡಿ
ತನ್ನನ್ನು ನಂಬುವವರು ಜಗತ್ತನ್ನು ಗೆಲ್ಲುತ್ತಾನೆ. ಹೀಗಾಗಿ ಮೊದಲು ನಿಮ್ಮನ್ನು ನಂಬಿ. ಆಗ ಮಾತ್ರ ಮುಂದೆ ಸಾಗಲು ಸಾಧ್ಯವಾಗುತ್ತದೆ.

ಶತ್ರುವನ್ನು ಕಡಿಮೆ ಅಂದಾಜು ಮಾಡಬೇಡಿ
ಶತ್ರುಗಳನ್ನು ಎಂದಿಗೂ ಸರಳವಾಗಿ ಪರಿಗಣಿಸಬೇಡಿ, ಅವರು ದುರ್ಬಲರಾಗಿರುವುದಿಲ್ಲ. ಶತ್ರುಗಳನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಿ

ಒಳ್ಳೆಯ ಜನರ ಸಹವಾಸ ಮಾಡಿ
ಗ್ರಹಗಳ ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವಂತೆಯೇ, ಒಳ್ಳೆಯ ಜನರ ಸಹವಾಸವು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ

ಸರಳ ಜೀವನ ನಡೆಸಬೇಕು
ಸರಳ ಜೀವನ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ

ಮೌನಕ್ಕಿಂತ ದೊಡ್ಡ ಶಕ್ತಿ ಇಲ್ಲ
ಮನಸ್ಸಿನ ಶಾಂತಿ ಮನುಷ್ಯನಿಗೆ ತಿಳುವಳಿಕೆ ನೀಡುವ ಶಕ್ತಿಯಾಗಿದೆ. ಮೌನವಾಗಿದ್ದಕ್ಕೂ ನಿಮ್ಮ ಗೌರವ ಹೆಚ್ಚಾಗುತ್ತದೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner