Chanakya Niti: ಚಾಣಕ್ಯರ ಪ್ರಕಾರ ಈ 5 ಅಭ್ಯಾಸಗಳಿಂದ ದೂರ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತೆ
Chanakya Niti: ಚಾಣಕ್ಯ ನೀತಿಯ ಪ್ರಕಾರ 5 ಕೆಟ್ಟ ಅಭ್ಯಾಸಗಳಿಂದ ವ್ಯಕ್ತಿ ಜೀವನದಲ್ಲಿ ವಿಫಲನಾಗುತ್ತಾನೆ. ಈ ಅಭ್ಯಾಸಗಳು ವ್ಯಕ್ತಿಯನ್ನ ದುಃಖ ಮತ್ತು ವಿನಾಶದ ಹಾದಿಗೆ ಕರೆದೊಯ್ಯುತ್ತವೆ. ಯಶಸ್ಸನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಈ ಅಭ್ಯಾಸಗಳನ್ನು ಗುರುತಿಸಿದ ಕೂಡಲೇ ಅವುಗಳನ್ನು ದೂರವಿಡಬೇಕು. ಯಾವುವು ಆ ಅಭ್ಯಾಸಗಳು ಎಂಬುದನ್ನು ಇಲ್ಲಿ ನೀಡಲಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಅಥವಾ ವಿಫಲನಾಗಿದ್ದರೆ ಆತನಲ್ಲಿರುವ ಕೆಲವು ಅಭ್ಯಾಸಗಳು ಪ್ರಮುಖ ಕಾರಣವಾಗಿರುತ್ತವೆ. ಯಶಸ್ವಿ ವ್ಯಕ್ತಿಯ ಆಲೋಚನೆ ಯಾವಾಗಲೂ ವಿಫಲ ವ್ಯಕ್ತಿಯ ಆಲೋಚನೆಗಿಂತ ಭಿನ್ನವಾಗಿರುತ್ತದೆ. ಅದರ ಆಧಾರದ ಮೇಲೆ ಅವನು ಸುಲಭವಾಗಿ ಹೋರಾಟಗಳ ಹಾದಿಯನ್ನು ದಾಟುತ್ತಾನೆ ಮತ್ತು ಪ್ರಗತಿಯ ಏಣಿಯನ್ನು ಏರುತ್ತಾನೆ. ಆದರೆ ನಾವು ಒಬ್ಬ ವ್ಯಕ್ತಿಯನ್ನು ಯಶಸ್ವಿಗೊಳಿಸುವ ಅಭ್ಯಾಸಗಳ ಬಗ್ಗೆ ಹೇಳುತ್ತಿಲ್ಲ, ಒಬ್ಬ ವ್ಯಕ್ತಿ ವಿಫಲವಾಗುವುದಕ್ಕೆ ಕಾರಣವಾಗುವ ಕೆಲವು ಅಭ್ಯಾಸಗಳ ಬಗ್ಗೆ ಇಲ್ಲಿ ವಿವರಿಸಲಾಗುತ್ತಿದೆ. ಇದು ತಿಳಿದೋ ಅಥವಾ ತಿಳಿಯದೆಯೋ ಪ್ರಗತಿಯ ಹಾದಿಯಿಂದ ಬೇರೆಡೆಗೆ ತಿರುಗಿಸುವಂತಹ ಅಭ್ಯಾಸಗಳು. ಚಾಣಕ್ಯ ನೀತಿಯ ಪ್ರಕಾರ ಒಬ್ಬ ವ್ಯಕ್ತಿಯನ್ನು ವಿಫಲಗೊಳಿಸುವ ಮತ್ತು ಅವನನ್ನು ದುಃಖ ಹಾಗೂ ವಿನಾಶದ ಹಾದಿಗೆ ಕರೆದೊಯ್ಯುವ 5 ಕೆಟ್ಟ ಅಭ್ಯಾಸಗಳು ಯಾವುವು ಎಂದು ತಿಳಿಯೋಣ. ಯಶಸ್ಸನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಈ ಅಭ್ಯಾಸಗಳನ್ನು ಗುರುತಿಸಿದ ಕೂಡಲೇ ಅವುಗಳಿಂದ ದೂರವಿದ್ದರೆ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
- ಚಾಣಕ್ಯ ನೀತಿಯ ಪ್ರಕಾರ, ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ, ಮೊದಲು ನಿಮ್ಮಲ್ಲಿರುವ ಸೋಮಾರಿ ಸ್ವಭಾವವನ್ನು ಬದಲಾಯಿಸಬೇಕು. ಸೋಮಾರಿತನವು ಒಬ್ಬ ವ್ಯಕ್ತಿಯನ್ನು ಜೀವನದಲ್ಲಿ ಮುಂದೆ ಸಾಗಲು ಎಂದಿಗೂ ಬಿಡದ ಒಂದು ನ್ಯೂನತೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ಮೊದಲನೆಯದಾಗಿ, ನಿಮ್ಮಿಂದ ಸೋಮಾರಿತನವನ್ನು ತೆಗೆದುಹಾಕಿ.
- ಆಚಾರ್ಯ ಚಾಣಕ್ಯನ ಪ್ರಕಾರ, ಯಾವಾಗಲೂ ನಾನೇ ಎಂಬ ಅಹಂ ಇದ್ದರೆ ಆ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಯಶಸ್ಸನ್ನು ಸವಿಯಲು, ಒಬ್ಬ ವ್ಯಕ್ತಿಯು ತನ್ನೊಳಗೆ ಅಡಗಿರುವ ನಾನು, ನಾನೇ ಎಂಬ ಅಹಂಕಾರವನ್ನು ತ್ಯಜಿಸಬೇಕು.
ಇದನ್ನೂ ಓದಿ: ಈ ವಿಷಯಗಳಲ್ಲಿ ಕಾಳಜಿ ವಹಿಸಿದರೆ ಎಂದಿಗೂ ಆರ್ಥಿಕ ಸಮಸ್ಯೆ ಇರುವುದಿಲ್ಲ -ಚಾಣಕ್ಯ ನೀತಿ
- ಚಾಣಕ್ಯರು ಹೇಳುವ ಪ್ರಕಾರ, ದುರಾಸೆಯು ವ್ಯಕ್ತಿಯು ತನ್ನ ಜೀವನದಲ್ಲಿ ಎಂದಿಗೂ ಯಶಸ್ಸನ್ನು ಪಡೆಯುವುದಿಲ್ಲ. ಅಂತಹ ವ್ಯಕ್ತಿಯು ಸರಿಯಾದ ಮಾರ್ಗದಿಂದ ವಿಮುಖನಾಗುತ್ತಾನೆ ಮತ್ತು ತಪ್ಪು ಕಾರ್ಯಗಳಲ್ಲಿ ತೊಡಗುತ್ತಾನೆ. ಈ ಕಾರಣದಿಂದಾಗಿ ಪ್ರಗತಿಯ ಹಾದಿ ಅವನಿಂದ ಬಹಳ ದೂರದಲ್ಲಿದೆ.
ಇದನ್ನೂ ಓದಿ: ಚಾಣಕ್ಯ ನೀತಿ: ಮನೆಯಲ್ಲಿ ಈ ಪ್ರಮಾದಗಳು ಉಂಟಾದರೆ ಮುಂದೆ ಇನ್ನಷ್ಟು ಜಾಗ್ರತೆ ವಹಿಸಿ, ಇಲ್ಲದಿದ್ರೆ ಸಮಸ್ಯೆ
- ಬಾರಿ ಜನರು ಯಶಸ್ಸನ್ನು ಪಡೆಯಲು ಕೆಲವರು ಸುಳ್ಳುಗಳನ್ನು ಆಶ್ರಯಿಸುತ್ತಾರೆ. ಆದರೆ ಅಂತಹ ಯಶಸ್ಸು ಹೆಚ್ಚು ಕಾಲ ಉಳಿಯುವುದಿಲ್ಲ. ಸುಳ್ಳುಗಳು ನಿಮಗೆ ಸ್ವಲ್ಪ ಸಮಯದವರೆಗೆ ಯಶಸ್ಸನ್ನು ನೀಡಬಹುದು. ಆದರೆ ನಿಮ್ಮ ಜೀವನದುದ್ದಕ್ಕೂ ಯಶಸ್ವಿ ಸ್ನೇಹವನ್ನು ಮಾಡಲು, ಸತ್ಯದ ಮಾರ್ಗವನ್ನು ಅನುಸರಿಸಬೇಕು.
ಇದನ್ನೂ ಓದಿ: ಈ ಆಲೋಚನೆಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ; ಚಾಣಕ್ಯ ನೀತಿಯಲ್ಲಿನ ಅರ್ಥ ಹೀಗಿದೆ
- ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮ ಜೀವನದಲ್ಲಿ ಸದಾ ಕೋಪಗೊಳ್ಳುವವರನ್ನು ಯಾರೂ ಇಷ್ಟಪಡುವುದಿಲ್ಲ. ಅಂತಹ ಜನರು ತಮಗಾಗಿ ಶತ್ರುಗಳನ್ನು ಹೆಚ್ಚಿಸಿಕೊಳ್ಳುತ್ತಾರೆ, ತಮ್ಮ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ಶಾಂತವಾಗಿರುವ ಮತ್ತು ಇನ್ನೊಬ್ಬರ ಬಗ್ಗೆ ಕಾಳಜಿ ಹೊಂದಿರುವವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
