Chanakya Niti: ನಿಮ್ಮ ಸಂಸಾರ ಹಾಲು-ಜೇನಿನಷ್ಟು ಸುಂದರವಾಗಿರಬೇಕೆಂದರೆ, ಮದುವೆಯ ನಂತರ ಪುರುಷರು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
Chanakya Niti: ಮದುವೆಯ ನಂತರ ಪುರುಷ ಮತ್ತು ಮಹಿಳೆ ಇಬ್ಬರ ಜೀವನದಲ್ಲೂ ಕೆಲವು ಬದಲಾವಣೆಗಳು ಆಗುತ್ತವೆ. ಗಂಡ-ಹೆಂಡತಿ ಸಂತೋಷದ ಜೀವನ ನಡೆಸಬೇಕೆಂದರೆ ಪುರುಷರು ಕೆಲವು ಅಂಶಗಳನ್ನು ಪರಿಗಣಿಸಬೇಕು.

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಈ ಸಮಾಜದ ಕಲ್ಯಾಕ್ಕೆ ಸಂಬಂಧಿಸಿದ ಹಲವು ನೀತಿ ಅಥವಾ ಸೂತ್ರಗಳನ್ನು ಬರೆದಿದ್ದಾರೆ. ಆ ತತ್ವಗಳೆಲ್ಲವೂ ಜೀವನದಲ್ಲಿ ಬರುವ ಕಷ್ಟಗಳಿಂದ ಮುಕ್ತಿಪಡೆಯಲು ಇರುವ ಸುಲಭದ ಮಾರ್ಗವಾಗಿದೆ. ಚಾಣಕ್ಯರ ತತ್ವಗಳು ಇಂದಿಗೂ ಜನಪ್ರಿಯ ಮತ್ತು ಅದನ್ನು ಪಾಲಿಸಲಾಗುತ್ತದೆ. ಚಾಣಕ್ಯರ ನೀತಿಶಾಸ್ತ್ರವು ಸ್ನೇಹ, ವೈವಾಹಿಕ ಜೀವನ, ಕೆಲಸ, ಸಂಪತ್ತು ಇವೇ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಅವರು ಹಣ, ಮದುವೆ, ವ್ಯವಹಾರ, ಸ್ನೇಹ, ದ್ವೇಷ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮಾರ್ಗವನ್ನು ತೋರಿಸಿದ್ದಾರೆ. ಮದುವೆಯ ನಂತರ ಪುರುಷ ಮತ್ತು ಮಹಿಳೆ ಇಬ್ಬರ ಜೀವನದಲ್ಲೂ ಕೆಲವು ಬದಲಾವಣೆಗಳು ಆಗುತ್ತವೆ. ಗಂಡ ಹೆಂಡತಿ ಸಂತೋಷದ ಜೀವನ ನಡೆಸಬೇಕೆಂದರೆ ಪುರುಷರು ಕೆಲವು ಅಂಶಗಳನ್ನು ಪರಿಗಣಿಸಬೇಕು. ಅದೇನು ಎಂಬುದನ್ನು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೀಗೆ ವಿವರಿಸುತ್ತಾರೆ.
- ವಿವಾಹಿತ ಪುರುಷನು ಬೇರೆಯವರ ಮಾತುಗಳಿಗೆ ಹೆಚ್ಚು ಗಮನ ಕೊಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಅವನು ವಾಸ್ತವದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮಹಿಳೆಯರು ಪುರುಷರನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಕಷ್ಟವೋ, ಅದೇ ರೀತಿ ಪುರುಷರು ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಕಷ್ಟ. ಪುರುಷರು ಮಹಿಳೆಯರನ್ನು ಗೌರವಿಸಬೇಕು ಮತ್ತು ಅವರ ಮಾತುಗಳಿಗೆ ಬೆಲೆ ನೀಡಬೇಕು. ಹೆಂಡತಿಯನ್ನು ಗೌರವಿಸುವ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ಇರುತ್ತದೆ.
ಇದನ್ನೂ ಓದಿ: Chanakya Niti: ಹಣ ಗಳಿಸುವುದು ಸುಲಭವಲ್ಲ, ನೀವು ಕೋಟ್ಯಾಧಿಪತಿಯಾಗಬೇಕೆಂದಿದ್ದರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ
- ಪುರುಷರು ಯಾವಾಗಲೂ ಬಾಹ್ಯ ವಿಷಯಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇತರ ಮಹಿಳೆಯರ ಸೌಂದರ್ಯ ಅವರನ್ನು ಮೋಡಿ ಮಾಡುತ್ತದೆ. ಅದು ಅವರ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಪುರುಷರು ಮಹಿಳೆಯರನ್ನು ವಸ್ತುಗಳಂತೆ ನೋಡುವುದಕ್ಕೆ ಇದೇ ಕಾರಣ. ಆದರೆ ಇದು ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮತ್ತು ಸಂಬಂಧದಲ್ಲಿ ಬಿರುಕು ಮೂಡುವಂತೆಯೂ ಮಾಡುತ್ತದೆ. ಆದ್ದರಿಂದ ಪುರುಷರು ಯಾವಾಗಲೂ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಮೇಲೆ ಗಮನ ಹರಿಸಬೇಕು. ಅಂತಹ ಜನರು ಜೀವನದಲ್ಲಿ ಯಾವಾಗಲೂ ಶಾಂತಿಯನ್ನು ಕಂಡುಕೊಳ್ಳುತ್ತಾರೆ.
- ಒಬ್ಬ ಪುರುಷ ಯಾವಾಗಲೂ ಸುಂದರ, ಒಳ್ಳೆಯ ಹೆಂಡತಿಯನ್ನು ಪಡೆಯಬೇಕೆಂದು ಬಯಸುತ್ತಾನೆ. ಸುಂದರ ಹೆಂಡತಿಯನ್ನು ಪಡೆದ ನಂತರ, ಪುರುಷರು ಅವಳನ್ನು ತಮ್ಮ ವಸ್ತುವೆಂದು ಪರಿಗಣಿಸುತ್ತಾರೆ ಹಾಗೂ ಅವಳ ಸೌಂದರ್ಯವನ್ನಷ್ಟೇ ಪರಿಗಣಿಸುತ್ತಾರೆ. ಆದರೆ ಮದುವೆಯ ವಿಷಯದಲ್ಲಿ ಹಾಗೆ ಮಾಡುವುದು ತಪ್ಪು. ಹೆಂಡತಿಯ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯದ ಮೇಲೆ ಗಮನ ಹರಿಸಬೇಕು.
- ಹೆಂಡತಿ ಸುಂದರವಾಗಿಲ್ಲ ಎಂದು ಹೇಳಿ ಅವಮಾನಿಸುವ ಪುರುಷನು ಜೀವನದಲ್ಲಿ ಎಂದೂ ಸಂತೋಷದಿಂದಿರುವುದಿಲ್ಲ. ಈ ಒಂದು ಸಣ್ಣ ಆಲೋಚನೆ ಅವರ ಇಡೀ ಕುಟುಂಬದ ಸಂತೋಷವನ್ನು ಹಾಳುಮಾಡಬಹುದು. ಈ ರೀತಿಯ ಚಿಂತನೆಯನ್ನು ಹೊಂದಿರುವ ಪುರುಷರು ಮನೆಯಲ್ಲಿ ಅಥವಾ ಹೊರಗೆ ತಮ್ಮ ಜೀವನದಲ್ಲಿ ಸಂತೋಷವಾಗಿರುವುದಿಲ್ಲ. ನಿಮ್ಮ ಹೆಂಡತಿಯನ್ನು ಎಂದಿಗೂ ಅವಮಾನಿಸಬೇಡಿ ಅಥವಾ ಇತರ ಮಹಿಳೆಯರೊಂದಿಗೆ ಹೋಲಿಸಬೇಡಿ.
ಇದನ್ನೂ ಓದಿ: Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ, ಈ ನಾಲ್ವರು ಮಹಿಳೆಯರನ್ನು ಯಾವಾಗಲೂ ತಾಯಿಯಂತೆ ಕಾಣಬೇಕು
- ಒಬ್ಬ ಮಹಿಳೆ ತನ್ನ ಸೌಂದರ್ಯಕ್ಕಾಗಿ ಅಲ್ಲ, ಬದಲಾಗಿ ತನ್ನ ಸ್ಥಾನ ಮತ್ತು ಪ್ರತಿಭೆಗಾಗಿ ಮೆಚ್ಚುಗೆಯನ್ನು ನಿರೀಕ್ಷಿಸುತ್ತಾಳೆ. ಯಾವುದೇ ಹೆಂಡತಿ ತನ್ನ ಗಂಡನಿಂದ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯಲು ಸದಾ ಬಯಸುತ್ತಾಳೆ. ಗಂಡನು ತನ್ನ ಹೆಂಡತಿಯನ್ನು ಗೌರವಿಸದಿದ್ದರೆ, ಅವನು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಪುರುಷರು ತಮ್ಮ ಹೆಂಡತಿಯಲ್ಲಿ ಎಂದಿಗೂ ತಪ್ಪು ಹುಡುಕಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
