ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದ್ರೆ ಚಾಣಕ್ಯರ ಈ ಸಲಹೆ ಪಾಲಿಸಿ

Chanakya Niti: ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದ್ರೆ ಚಾಣಕ್ಯರ ಈ ಸಲಹೆ ಪಾಲಿಸಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಹಲವು ಪ್ರಮುಖ ಪಾಠಗಳ ಬಗ್ಗೆ ತಿಳಿಸಿದ್ದರು. ಅವರ ಮಾತನ್ನು ಪಾಲಿಸಿದರೆ ನಮ್ಮ ಜೀವನ ಖಂಡಿತ ಸುಂದರವಾಗಿರುತ್ತದೆ. ಜೀವನದಲ್ಲಿ ನೈತಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಂತೋಷದ ಜೀವನಕ್ಕೆ ಇರುವುದರಲ್ಲೇ ತೃಪ್ತಿ ಬೇಕು ಎಂದು ಚಾಣಕ್ಯ ಹೇಳಿದ್ದರು.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಚಾಣಕ್ಯರ ಮಾತುಗಳು ಪ್ರತಿಯೊಬ್ಬರ ಬದುಕನ್ನು ಬೆಳಗಬಲ್ಲವು. ಅವರ ಮಾತು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಬುದ್ಧಿವಂತರ ಮಾತುಗಳು ಸುಂದರ ಬದುಕಿಗೆ ಸ್ಫೂರ್ತಿ ನೀಡುವುದು ಸುಳ್ಳಲ್ಲ. ನಾವು ಜೀವನದಲ್ಲಿ ತಿಳಿದಿರುವವರ ಮಾತನ್ನು ಅನುಸರಿಸುವುದು ಉತ್ತಮ. ಆಚಾರ್ಯ ಚಾಣಕ್ಯರು ಸುಂದರ ಜೀವನವನ್ನು ಅನುಸರಿಸಲು ಕೆಲವು ಮಾರ್ಗಗಳ ಬಗ್ಗೆ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶಿಸ್ತು ಇದ್ದವರಿಗೆ ಯಶಸ್ಸು ಖಂಡಿತ ಎಂದು ಚಾಣಕ್ಯ ಹೇಳಿದ್ದರು. ಹಣದ ವಿಚಾರದಲ್ಲಿ ಎಲ್ಲರೂ ಶಿಸ್ತು ಪಾಲಿಸಬೇಕು. ಚಾಣಕ್ಯರು ತಮ್ಮ ಸೂತ್ರಗಳಲ್ಲಿ ಹಲವು ಬಾರಿ ಇದನ್ನು ಉಲ್ಲೇಖಿಸಿದ್ದಾರೆ. ಅಂದರೆ ಹಣವನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂದು ಮನುಷ್ಯರು ತಿಳಿದಿರುವುದು ಮುಖ್ಯವಾಗಿದೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ಯಾರೂ ನಿಮ್ಮನ್ನು ಇಷ್ಟಪಡುವುದಿಲ್ಲ. ಹಣವಿದ್ದರಷ್ಟೇ ಮನುಷ್ಯರು ನಮಗೆ ಬೆಲೆ ಕೊಡುತ್ತಾರೆ. ಹಾಗಾಗಿ ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ದುಡಿಮೆಯಲ್ಲಿ ಅಲ್ಪ ಹಣವನ್ನು ಉಳಿಸುವುದು ಹೇಗೆ ಎಂಬುದನ್ನು ಕಲಿಯುವುದು ಮುಖ್ಯವಾಗಿದೆ. ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಉಳಿಸಿದರೆ, ನಿಮ್ಮ ವೃದ್ಧಾಪ್ಯದಲ್ಲಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಜೀವನದಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಬಹಳ ಮುಖ್ಯ. ಆಚಾರ್ಯ ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳನ್ನು ಮಾಡುವವರು ಮತ್ತು ತಮ್ಮ ದಿನಚರಿಯನ್ನು ಸರಿಯಾಗಿ ಅನುಸರಿಸುವವರು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ. ಅಂತಹ ಶಿಸ್ತುಬದ್ಧ ಜೀವನ ನಡೆಸುವವರು ತಮ್ಮ ಪ್ರತಿಯೊಂದು ಗುರಿಯನ್ನು ಸಾಧಿಸುತ್ತಾರೆ ಎಂದು ಚಾಣಕ್ಯ ಹೇಳಿದರು. ಅಂದರೆ ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತು, ಊಟ, ನಿದ್ದೆ, ಸಮಯಕ್ಕೆ ಏಳುವುದು, ವ್ಯಾಯಾಮ ಮಾಡಬೇಕು. ಉತ್ತಮ ಆರೋಗ್ಯಕ್ಕೂ ಇದು ಅತ್ಯಗತ್ಯ.

ಚಾಣಕ್ಯರು ಧರ್ಮದ ಮಹತ್ವದ ಕುರಿತು ಮಾತನಾಡಿದ್ದರು. ನಮ್ಮ ಸಂಪಾದನೆಯ ಒಂದು ಭಾಗವನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಅವರು ಹೇಳುತ್ತಾರೆ. ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನಿಸ್ವಾರ್ಥದಿಂದ ಸಹಾಯ ಮಾಡಿದರೆ ಜೀವನದಲ್ಲಿ ಎಂದಿಗೂ ದುಃಖವಿಲ್ಲ ಎಂದು ಚಾಣಕ್ಯ ಹೇಳಿದ್ದರು. ಧರ್ಮ ಮತ್ತು ಕರುಣೆ ಸರ್ವಶ್ರೇಷ್ಠ. ಇಂದಿನ ನಿಮ್ಮ ನಿಸ್ವಾರ್ಥ ಸಹಾಯವು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆಗ ವೃದ್ಧಾಪ್ಯವು ಸಂತೋಷ ಮತ್ತು ಶಾಂತಿಯುತವಾಗಿರುತ್ತದೆ. ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿ ಎಂದ ಚಾಣಕ್ಯ ಹೇಳಿದ್ದರು.

ಮನುಷ್ಯನು ತನ್ನ ಜೀವನದಲ್ಲಿ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಇತರರು ನಿಮಗೆ ಹಾನಿ ಮಾಡಲು ಪರಿಸ್ಥಿತಿಯನ್ನು ಬಳಸಬಹುದು. ಪ್ರಾಮಾಣಿಕವಾಗಿರಬೇಕು. ಆದರೆ ಕೆಲವೊಮ್ಮೆ ಪ್ರಮಾಣಿಕತೆಯೂ ಹಾನಿಕಾರಕವಾಗಿದೆ. ಆಚಾರ್ಯ ಚಾಣಕ್ಯರು ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಬುದ್ಧಿವಂತಿಕೆ ತೋರುವುದು ಬಹಳ ಮುಖ್ಯ, ಪ್ರಾಮಾಣಿಕತೆಯ ಜೊತೆಗೆ ಬುದ್ಧಿವಂತಿಕೆಯೂ ಅವಶ್ಯ ಎಂದಿದ್ದಾರೆ.

ವ್ಯಕ್ತಿಯ ನಡವಳಿಕೆಯು ಅವನ ವ್ಯಕ್ತಿತ್ವದ ಸಂಕೇತವಾಗಿದೆ. ಜೀವನದಲ್ಲಿ ಕೌಶಲ ಬಹಳ ಮುಖ್ಯ. ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿಯೊಬ್ಬರಲ್ಲೂ ಬುದ್ಧಿವಂತಿಕೆ ಬೇಕು. ಇಲ್ಲದಿದ್ದರೆ, ನೀವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಚಾಣಕ್ಯರ ಪ್ರಕಾರ, ಕೆಟ್ಟ ಸಮಯದಲ್ಲೂ ಮನುಷ್ಯನು ತನ್ನ ಸ್ವಭಾವವನ್ನು ಬದಲಾಯಿಸದಿದ್ದರೆ, ಅವನು ಯಾವಾಗಲೂ ನರಳುತ್ತಾನೆ. ಈ ಸ್ವಾರ್ಥ ಜಗತ್ತಿನಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು, ಜೀವನದ ಗುರಿಯನ್ನು ಸಾಧಿಸಲು ಪ್ರತಿಯೊಬ್ಬರೂ ಬುದ್ಧಿವಂತ ಹೆಜ್ಜೆಗಳನ್ನು ಇಡಬೇಕು. ಇದು ತೊಂದರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಪರಿಸ್ಥಿತಿಯನ್ನು ಸರಿಯಾಗಿ ಎದುರಿಸುವ ಧೈರ್ಯವನ್ನು ನೀಡುತ್ತದೆ.

ವಿಭಾಗ