Chanakya Niti: ಮನೆಯವರ ಮುಂದೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ಚಾಣಕ್ಯರು ಹೇಳಿದ ತಪ್ಪುಗಳು ಯಾವುವು ನೋಡಿ
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಮಹತ್ತರ ವಿಷಯಗಳನ್ನು ತಿಳಿಸಿದ್ದಾರೆ. ಅವರ ಮಾತುಗಳನ್ನು ಪಾಲಿಸುವುದರಿಂದ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕೆಲವು ವಿಷಯಗಳನ್ನು ಕುಟುಂಬದ ಮುಂದೆ ಹೇಳಬಾರದು ಎಂದು ಚಾಣಕ್ಯ ತಿಳಿಸಿದ್ದಾರೆ. ಹಾಗಾದರೆ ಆ ವಿಚಾರಗಳು ಯಾವುವು ನೋಡಿ.
ಚಾಣಕ್ಯರ ಸಲಹೆ ಇಂದಿಗೂ ಉಪಯುಕ್ತವಾಗಿದೆ. ಚಾಣಕ್ಯರ ಅನುಭವಗಳು ಮತ್ತು ಜೀವನದ ಬಗ್ಗೆ ಅವರ ದೃಷ್ಟಿಕೋನಗಳನ್ನು ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆಯಲಾಗಿದೆ. ಈಗಲೂ ನೀತಿಶಾಸ್ತ್ರದ ತತ್ವಗಳನ್ನು ಹಲವರು ಅನುಸರಿಸುತ್ತಾರೆ. ಅವರು ಜೀವನದ ಹಲವು ಅಂಶಗಳ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದರು. ಸಮಾಜದ ಬಗ್ಗೆ ಆಳವಾದ ತಿಳುವಳಿಕೆ ಅವರಲ್ಲಿತ್ತು. ಸಂತೋಷ, ಯಶಸ್ವಿ ಮತ್ತು ಗೌರವಯುತ ಜೀವನದ ಗುಟ್ಟನ್ನು ಚಾಣಕ್ಯ ತಿಳಿಸಿದ್ದರು.
ಚಾಣಕ್ಯರ ತತ್ವಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ವೈಫಲ್ಯವನ್ನು ಎದುರಿಸಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಚಾಣಕ್ಯನು ತಮ್ಮ ನೀತಿ ಶಾಸ್ತ್ರದಲ್ಲಿ ಪುರುಷನು ತನ್ನ ಮಕ್ಕಳು ಮತ್ತು ಹೆಂಡತಿಯ ಮುಂದೆ ಮಾಡಬಾರದ ಕೆಲಸಗಳ ಬಗ್ಗೆ ತಿಳಿಸಿದ್ದಾರೆ. ಅವು ಯಾವುವು ನೋಡೋಣ.
ಚಾಣಕ್ಯರ ಪ್ರಕಾರ, ಪದಗಳನ್ನು ಎಚ್ಚರಿಕೆಯಿಂದ ಬಳಸುವುದು ಯಾವಾಗಲೂ ಉತ್ತಮ. ಪುರುಷನು ಮನೆಯವೆರಲ್ಲರ ಮನಸೂರೆಗೊಳ್ಳುವಂತೆ ಪ್ರೀತಿಯಿಂದ ಮಾತಾಡಬೇಕು. ಜೋರಾಗಿ, ಗದರುವ ಮಾತು ಸಲ್ಲ. ಏಕೆಂದರೆ ಮಾತುಗಳು ಆಯುಧಗಳಿಗಿಂತ ಹೆಚ್ಚು ನೋಯಿಸುತ್ತವೆ. ಇತರರ ಮುಂದೆ ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಿ. ನಮ್ಮ ಶತ್ರುಗಳ ಮುಂದೆಯೂ ನಾವು ನಮ್ಮ ಮಾತುಗಳಲ್ಲಿ ಜಾಗರೂಕರಾಗಿರಬೇಕು. ಕೆಲವೊಮ್ಮೆ ನಮ್ಮ ಮಾತುಗಳೇ ಬಹುದೊಡ್ಡ ವಿನಾಶಕ್ಕೆ ಕಾರಣವಾಗಬಹುದು.
ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ, ಪ್ರತಿಯೊಬ್ಬರೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಏನು ಹೇಳಿದರೂ, ಏನು ಮಾಡಿದರೂ ಮಕ್ಕಳು ಅನುಸರಿಸುತ್ತಾರೆ ಮತ್ತು ಅದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಯಾರ ಮುಂದೆಯೂ ನಿಂದನೀಯ ಪದಗಳನ್ನು ಬಳಸಬಾರದು. ಕುಟುಂಬದಲ್ಲಿ ಅನುಚಿತ ಪದಗಳನ್ನು ಬಳಸಬೇಡಿ. ಏಕೆಂದರೆ ಕುಟುಂಬವು ಸಮಾಜದ ಜೀವನದ ಆಧಾರಸ್ತಂಭವಾಗುತ್ತದೆ. ನಿಮ್ಮ ಮನೆಯವರ ಮುಂದೆ ಅನುಚಿತವಾದ ಮಾತುಗಳನ್ನು ಆಡಿದರೆ ನಿಮ್ಮ ಘನತೆ ಮತ್ತು ಗೌರವವನ್ನು ಕಳೆದುಕೊಳ್ಳುತ್ತೀರಿ.
ಚಾಣಕ್ಯರ ಪ್ರಕಾರ, ನಿಮ್ಮ ಮಕ್ಕಳ ಅಥವಾ ಸಂಗಾತಿಯ ಮುಂದೆ ಸುಳ್ಳು ಮಾತುಗಳನ್ನು ಮಾತನಾಡಬೇಡಿ. ಇದು ಅವರಿಗೆ ನೋವುಂಟು ಮಾಡುತ್ತದೆ. ಏಕೆಂದರೆ ತೀಕ್ಷ್ಣವಾದ, ಕೆಟ್ಟ ಮಾತುಗಳು ಮಕ್ಕಳ ಮತ್ತು ಪ್ರೀತಿಪಾತ್ರರ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದು ಮನೆಯಲ್ಲಿ ಜಗಳಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ನಿಮ್ಮ ಸಂಬಂಧವನ್ನು ಒತ್ತಡ ಮುಕ್ತವಾಗಿಡಲು, ನೀವು ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡಬೇಕು. ಪ್ರೀತಿಪಾತ್ರರ ಕಡೆಗೆ ದಯೆಯು ಕುಟುಂಬದಲ್ಲಿ ಸಾಮರಸ್ಯವನ್ನು ತರುತ್ತದೆ.
ಇದನ್ನೂ ಓದಿ
Chanakya Niti: ಸಮಾಜದಲ್ಲಿ ಎಂದಿಗೂ ನಿಮ್ಮ ಘನತೆಗೆ ಕುಂದು ಬರಬಾರದು ಅಂದ್ರೆ ಈ 4 ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ; ಚಾಣಕ್ಯ ಟಿಪ್ಸ್
ಚಾಣಕ್ಯ ನೀತಿಯ ತತ್ವಗಳನ್ನು ಅನುಸರಿಸಿದರೆ, ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಚಾಣಕ್ಯರ ನೀತಿಯನ್ನು ಇಂದಿಗೂ ಅನುಸರಿಸುವ ಜನರಿದ್ದಾರೆ. ಚಾಣಕ್ಯರ ಮಾತುಗಳ ಅನುಸರಣೆಯಿಂದ ಜೀವನ ಸುಧಾರಿಸುತ್ತದೆ. ಜೀವನದ ಪ್ರತಿ ಹಂತದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ. ಆಚಾರ್ಯ ಚಾಣಕ್ಯ ಬದುಕಿನಲ್ಲಿ ಘನತೆ, ಗೌರವ ಹೆಚ್ಚಲು ಈ 4 ವಿಷಯಗಳನ್ನು ರಹಸ್ಯವಾಗಿಡಬೇಕು ಎಂದು ಹೇಳಿದ್ದಾರೆ. ಈ ವಿಚಾರಗಳು ಬಹಿರಂಗವಾದರೆ ವ್ಯಕ್ತಿಯು ತನ್ನ ಘನತೆಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಜೀವನದ ಪ್ರತಿಯೊಂದು ಹಂತದಲ್ಲೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ರಹಸ್ಯಗಳು ಯಾವುವು ನೋಡಿ.
ವಿಭಾಗ