Chanakya Niti: ಚಾಣಕ್ಯರ ಪ್ರಕಾರ ಈ 5 ಗುಣಗಳೇ ಮನುಷ್ಯನ ವಿನಾಶಕ್ಕೆ ಮೂಲ; ನಿಮ್ಮಲ್ಲೂ ಈ ಗುಣಗಳಿದ್ದರೆ ಬದಲಿಸಿಕೊಳ್ಳಿ
ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಚಾಣಕ್ಯರ ನೀತಿಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಈ ಮಾತು ಖಂಡಿತ ಅತಿಶಯೋಕ್ತಿಯಲ್ಲ. ಚಾಣಕ್ಯರ ಮಾತುಗಳು ಸರ್ವಕಾಲಕ್ಕೂ ಸಲ್ಲುವಂತಿದ್ದು, ಇವು ಬದುಕು ಬದಲಿಸುವ ಸಾಮರ್ಥ್ಯವನ್ನು ಹೊಂದಿವೆ. ಚಾಣಕ್ಯರ ಪ್ರಕಾರ ಮನುಷ್ಯನಲ್ಲಿ ಎಂದಿಗೂ ಈ 5 ಗುಣಗಳು ಇರಬಾರದು, ಇದರಿಂದ ಆತನ ವಿನಾಶವಾಗುತ್ತದೆ.
ಆಚಾರ್ಯ ಚಾಣಕ್ಯರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿ ಮತ್ತು ವಿದ್ವಾಂಸ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ನೀತಿಗಳನ್ನು ರಚಿಸಿದ್ದಾರೆ. ಇವರ ನೀತಿಗಳು ನಂತರ ಚಾಣಕ್ಯ ನೀತಿ ಎಂದೇ ಪ್ರಸಿದ್ಧಿ ಪಡೆಯಿತು. ಯಾವುದೇ ವ್ಯಕ್ತಿಯು ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ ಅವರು ಚಾಣಕ್ಯ ನೀತಿಯಲ್ಲಿ ಹೇಳಿರುವ ಅಂಶಗಳನ್ನು ಖಂಡಿತವಾಗಿಯೂ ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಅದನ್ನು ಪಾಲಿಸಬೇಕು.
ಇಂದಿನ ಚಾಣಕ್ಯ ನೀತಿಯಲ್ಲಿ ಮನುಷ್ಯನನ್ನು ವಿನಾಶದ ಅಂಚಿಗೆ ತಳ್ಳುವ 5 ಗುಣಗಳು ಯಾವುದು ಎಂಬುದರ ಬಗ್ಗೆ ಹೇಳಲಾಗಿದೆ. ಈ ಗುಣಗಳು ನಮ್ಮಲ್ಲೂ ಇದ್ದರೆ ನಾವು ಕೂಡಲೇ ಅದನ್ನು ಬದಲಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ನಮ್ಮನ್ನ ನಾವೇ ಹಳ್ಳಕ್ಕೆ ತಳ್ಳಿಕೊಂಡಂತಾಗುತ್ತದೆ. ಅಂತಹ 5 ಅಂಶಗಳು ಯಾವುವು ಎಂಬುದನ್ನು ನೋಡೋಣ.
ಸೋಮಾರಿತನ
ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ ಮೊದಲನೆಯದಾಗಿ ಸೋಮಾರಿತನದಿಂದ ದೂರವಿರಬೇಕು. ಸೋಮಾರಿತನವು ನಿಮ್ಮನ್ನು ಜೀವನದಲ್ಲಿ ಮುಂದೆ ಹೋಗಲು ಬಿಡುವುದಿಲ್ಲ. ಇದು ವಿನಾಶದತ್ತ ಕರೆದೊಯ್ಯುತ್ತದೆ. ಸೋಮಾರಿತನವನ್ನು ಬಿಟ್ಟು ಮುಂದೆ ಸಾಗಿದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವಿದೆ.
ಅಹಂಕಾರ
ಅಹಂಕಾರಿಯಾಗಿರುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಜೀವನದಲ್ಲಿ ಯಶಸ್ಸು ಸಿಗಬೇಕು ಎಂದರೆ ನಾವು ಅಹಂಕಾರ ಮತ್ತು ನಾನು ಎನ್ನುವ ಅಹಂ, ಎಲ್ಲವೂ ನನ್ನಿಂದಲೇ ಎನ್ನುವ ಭಾವವನ್ನು ಬಿಡಬೇಕು. ಅಹಂಕಾರಿಯಾದ ಮನುಷ್ಯ ಎಲ್ಲದರಿಂದ, ಎಲ್ಲರಿಂದ ದೂರವಾಗುತ್ತಾನೆ. ಅವನು ಯಶಸ್ಸಿನ ಹಾದಿ ಹಿಡಿಯುವುದು ತುಂಬಾ ಕಷ್ಟ.
ದುರಾಸೆ
ಚಾಣಕ್ಯ ನೀತಿ ಪ್ರಕಾರ ದುರಾಸೆಯುಳ್ಳ ವ್ಯಕ್ತಿ ಜೀವನದಲ್ಲಿ ಬಹುಬೇಗ ನಾಶವಾಗುತ್ತಾನೆ. ಜೀವನದಲ್ಲಿ ಯಶಸ್ಸು ಅಥವಾ ಸಂತೋಷ ಬೇಕಾದರೆ ದುರಾಸೆಯಿಂದ ದೂರವಿರಬೇಕು. ಎಲ್ಲರೂ ನಮ್ಮವರು, ಎಲ್ಲರಿಗೂ ಬೇಕು ಎನ್ನುವ ಮನೋಭಾವ ಹೊಂದಿದ್ದರೆ ಮನುಷ್ಯ ಯಶಸ್ವಿಯಾಗಲು ಸಾಧ್ಯ.
ಸುಳ್ಳು ಹೇಳುವ ಅಭ್ಯಾಸ
ಯಶಸ್ಸನ್ನು ಸಾಧಿಸಲು ನೀವು ಸುಳ್ಳನ್ನು ಅವಲಂಬಿಸಬಾರದು. ಸುಳ್ಳು ಹೇಳುವುದು ನಿಮಗೆ ಅಲ್ಪಾವಧಿಯ ಯಶಸ್ಸನ್ನು ಮಾತ್ರ ತರುತ್ತದೆ. ಜೀವನದಲ್ಲಿ ಶಾಶ್ವತ ಯಶಸ್ಸನ್ನು ಬಯಸುವವರು ಸಾಧ್ಯವಾದಷ್ಟು ಸುಳ್ಳು ಹೇಳುವುದನ್ನು ತಪ್ಪಿಸಬೇಕು.
ಆಡಂಬರದ ಅಭ್ಯಾಸ
ಆಚಾರ್ಯ ಚಾಣಕ್ಯರ ಪ್ರಕಾರ, ಯಾವತ್ತೂ ಯಾವುದನ್ನೂ ಪ್ರದರ್ಶನ ಮಾಡಬಾರದು. ಶಾಂತವಾಗಿ ಉಳಿಯುವ ಮತ್ತು ಯಾವುದರ ಮೇಲೂ ಆಡಂಬರ ತೋರಿಸಿಕೊಳ್ಳದ ಜನರು ಜೀವನದಲ್ಲಿ ಬಹಳ ಬೇಗ ಯಶಸ್ಸನ್ನು ಪಡೆಯುತ್ತಾರೆ. ಆಡಂಬರದ ಅಭ್ಯಾಸ ಕೂಡ ಮನುಷ್ಯನನ್ನು ವಿನಾಶದ ಅಂಚಿಗೆ ತಳ್ಳುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ