Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಎಂದಿಗೂ ಮಾಡಬಾರದಂತಹ ತಪ್ಪುಗಳಿವು, ಇದರಿಂದ ಸಂಸಾರದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಎಂದಿಗೂ ಮಾಡಬಾರದಂತಹ ತಪ್ಪುಗಳಿವು, ಇದರಿಂದ ಸಂಸಾರದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ

Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಎಂದಿಗೂ ಮಾಡಬಾರದಂತಹ ತಪ್ಪುಗಳಿವು, ಇದರಿಂದ ಸಂಸಾರದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ

ಚಾಣಕ್ಯರು ಮಹಾನ್ ವಿದ್ವಾಂಸರು. ಅವರ ಯೋಚನೆ, ಮಾತುಗಳು ಸರ್ವಕಾಲಕ್ಕೂ ಸಲ್ಲುವಂತಿತ್ತು. ಅವರು ಸಂಬಂಧಗಳ ಬಗ್ಗೆ ಬಹಳ ಅರ್ಥಪೂರ್ಣ ಮಾತುಗಳನ್ನು ಹೇಳಿದ್ದರು. ಅವರ ಪ್ರಕಾರ ಹೆಂಡತಿಯಾದವಳು ಎಂದಿಗೂ ಈ ಕೆಲವು ತಪ್ಪುಗಳನ್ನು ಮಾಡಬಾರದು, ವರ್ತನೆಗಳನ್ನು ತೋರಬಾರದು. ಇದರಿಂದ ಸಂಸಾರದಲ್ಲಿ ನೆಮ್ಮದಿ ಕೆಡುವುದು ಖಚಿತ. ಅಂತಹ 10 ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಮಹಾನ್‌ ವಿದ್ವಾಂಸ, ಅರ್ಥಶಾಸ್ತ್ರಜ್ಞರಾಗಿರುವ ಚಾಣಕ್ಯರು ಜೀವನದ ಹಲವು ಅಂಶಗಳ ಬಗ್ಗೆ ಗಹನವಾದ ವಿಚಾರಗಳನ್ನು ಹಂಚಿಕೊಂಡಿದ್ದರು. ತಮ್ಮ ನೀತಿಶಾಸ್ತ್ರದಲ್ಲಿ ಅವರು ಬದುಕಿನ ವಿವಿಧ ಹಂತಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಅವರು ಗಂಡ–ಹೆಂಡತಿ ಸಂಬಂಧದ ಬಗ್ಗೆಯೂ ತಮ್ಮ ಚಾಣಕ್ಯ ನೀತಿಯಲ್ಲಿ ಬರೆದಿದ್ದಾರೆ. ಹೆಂಡತಿಯಾದವಳ ವರ್ತನೆ ಹೇಗಿರಬೇಕು ಎಂಬುದನ್ನು ಚಾಣಕ್ಯ ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ. ಚಾಣಕ್ಯರ ಪ್ರಕಾರ ಹೆಂಡತಿಯಾದವಳಲ್ಲಿ ಈ ಗುಣಗಳು, ವರ್ತನೆ ಎಂದಿಗೂ ಇರಬಾರದು. ಅಂತಹ ವರ್ತನೆಗಳು ಯಾವುವು ನೋಡಿ. 

ಹೆಂಡತಿಯಾದವಳಲ್ಲಿ ಇರಬಾರದಂತಹ ಗುಣಗಳಿವು 

  • ಹೆಂಡತಿಯಾದವಳು ತನ್ನ ಗಂಡನ ಮಾತುಗಳನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಇದು ಸಂಬಂಧವನ್ನು ಹಾಳುಮಾಡುತ್ತದೆ.
  • ಗಂಡನನ್ನು ಗೌರವಿಸದ ಮಹಿಳೆ ಎಂದಿಗೂ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ.
  • ಹೆಂಡತಿಯು ತನ್ನ ಗಂಡನ ಟೀಕೆ ಮಾಡುತ್ತಾ ಸಮಯ ಕಳೆಯುವುದಕ್ಕಿಂತ ಪ್ರತಿಯೊಂದು ಸಂದರ್ಭದಲ್ಲೂ ಬೆಂಬಲವಾಗಿ ನಿಂತು ಸಂಸಾರ ಹಾಗೂ ವೈಯಕ್ತಿಕ ಬದುಕಿನ ಅಭಿವೃದ್ಧಿಯತ್ತ ಗಮನ ಹರಿಸಬೇಕು.

    ಇದನ್ನೂ ಓದಿ: Chanakya Niti: ಮದುವೆಗೂ ಮುನ್ನ ಪ್ರತಿಯೊಬ್ಬರು ತಮ್ಮ ಸಂಗಾತಿಯಾಗುವವರಲ್ಲಿ ಗಮನಿಸಬೇಕಾದ ಅಂಶಗಳಿವು; ಚಾಣಕ್ಯರ ನೀತಿಪಾಠ
  • ಹೆಂಡತಿಯು ತನ್ನ ಗಂಡನಿಗೆ ಸುಳ್ಳು ಹೇಳುವ ಅಭ್ಯಾಸವನ್ನು ಎಂದಿಗೂ ಮಾಡಬಾರದು. ಏಕೆಂದರೆ ಸುಳ್ಳು ಸಂಬಂಧವನ್ನು ದುರ್ಬಲಗೊಳಿಸುತ್ತದೆ.
  • ತನ್ನ ಕುಟುಂಬವನ್ನು ನಿಜವಾಗಿಯೂ ಪ್ರೀತಿಸುವ ಮಹಿಳೆ ತನ್ನ ಗಂಡನ ಸಂಪತ್ತು ಮತ್ತು ಗೌರವವನ್ನು ಎಂದಿಗೂ ಹಾಳು ಮಾಡಲು ಬಯಸುವುದಿಲ್ಲ .
  • ಹೆಂಡತಿಯಾದವಳು ತನ್ನ ಮನೆಯ ಆಂತರಿಕ ವಿಚಾರಗಳನ್ನು ಹೊರಗೆ ಹೇಳಬಾರದು, ಅದು ಕುಟುಂಬದ ಗೌರವದ ಮೇಲೆ ಪರಿಣಾಮ ಬೀರುತ್ತದೆ.
  • ಹೆಂಡತಿಯಾದವಳು ತನ್ನ ಗಂಡನನ್ನು ಪದೇ ಪದೇ ಪದೇ ದೂಷಿಸುವುದು, ಹೀಯಾಳಿಸುವುದು ಮಾಡಬಾರದು.
  • ಪತಿಯೊಂದಿಗೆ ಶಾಂತಿಯುತವಾಗಿ ಬಾಳದ ಮತ್ತು ಪದೇ ಪದೇ ಜಗಳವಾಡುವ ಮಹಿಳೆ ಜೀವನವು ಶೋಚನೀಯವಾಗುತ್ತದೆ. ಇದರಿಂದ ಅವಳಿಗೂ ಮನೆಯವರಿಗೂ ನೆಮ್ಮದಿ ಇರುವುದಿಲ್ಲ.
  • ಹೆಂಡತಿ ತನ್ನ ಕುಟುಂಬದ ಸಮಸ್ಯೆಗಳನ್ನು ತನ್ನ ಗಂಡನ ಮುಂದೆ ಬಹಿರಂಗವಾಗಿ ಚರ್ಚಿಸಬಾರದು.

    ಇದನ್ನೂ ಓದಿ: Chanakya Niti: ಚಾಣಕ್ಯರ ಪ್ರಕಾರ ಈ 5 ಸ್ಥಳಗಳಲ್ಲಿ ಹಣ ಖರ್ಚು ಮಾಡಿದ್ರೆ ಸಂಪತ್ತು ದುಪ್ಪಟ್ಟಾಗುತ್ತೆ, ದೇವರ ಆಶೀರ್ವಾದವೂ ಲಭಿಸುತ್ತೆ
  • ಹೆಂಡತಿಯು ತನ್ನ ಪತಿಯೊಂದಿಗೆ ನಂಬಿಕೆ ಮತ್ತು ಗೌರವದ ಸಂಬಂಧವನ್ನು ಕಾಪಾಡಿಕೊಳ್ಳಬೇಕು, ಏಕೆಂದರೆ ಅದು ಸಂಬಂಧದ ಅಡಿಪಾಯವಾಗಿದೆ. ನಂಬಿಕೆ ಹಾಗೂ ಗೌರವ ಕಳೆದುಕೊಂಡರೆ ಮತ್ತೆ ಸಂಪಾದಿಸುವುದು ಕಷ್ಟವಾಗುತ್ತದೆ. ಇದರಿಂದ ಬದುಕು ದುಸ್ತರವಾಗುವುದು ಖಂಡಿತ.

ಈ ಎಲ್ಲಾ ಸೂತ್ರಗಳನ್ನು ಅನುಸರಿಸುವ ಹೆಂಡತಿಯು ಗಂಡನಿಗೆ ತಕ್ಕಂತೆ ಬಾಳುವ ಮೂಲಕ ಸುಖ ಸಂಸಾರವನ್ನು ನಡೆಸಲು ಸಾಧ್ಯ, ಇಲ್ಲವೆಂದರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವೇ ಇಲ್ಲ.

ಆಚಾರ್ಯ ಚಾಣಕ್ಯ ಯಾರು?

ಆಚಾರ್ಯ ಚಾಣಕ್ಯ ಚಂದ್ರಗುಪ್ತ ಮೌರ್ಯನ ಗುರು. ಅವರನ್ನು ಮಹಾನ್ ಜ್ಞಾನಿ ಮತ್ತು ವಿದ್ವಾಂಸ ಎಂದು ಹೇಳಲಾಗುತ್ತದೆ. ಚಾಣಕ್ಯರು ‘ಚಾಣಕ್ಯ ನೀತಿ’ ಎಂಬ ನೀತಿ ಗ್ರಂಥವನ್ನು ರಚಿಸಿದ್ದಾರೆ. ಚಾಣಕ್ಯ ನೀತಿ ಎಂದರೆ ಬದುಕಿನ ಸರ್ವವನ್ನೂ ಒಳಗೊಂಡಿರುವ ಮನುಷ್ಯರು ಅನುಸರಿಸಬೇಕಾದ ಪಾಠಗಳ ಸಂಗ್ರಹ. ನಾವು ಚಾಣಕ್ಯ ನೀತಿಯನ್ನು ಸಂಪೂರ್ಣವಾಗಿ ಓದಿ, ಅದನ್ನು ಅನುಸರಿಸಿದರೆ ನಾವು ಯಶಸ್ಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

 

Whats_app_banner