Chanakya Niti: ಈ 4 ಅಭ್ಯಾಸಗಳಿಂದ ಮನುಷ್ಯ ಬಹಳ ಬೇಗ ವಯಸ್ಸಾದಂತೆ ಕಾಣುತ್ತಾನೆ, ಚಾಣಕ್ಯರು ಹೇಳಿದ ಜೀವನಪಾಠ
ಆಚಾರ್ಯ ಚಾಣಕ್ಯರು ಜೀವನದ ಕುರಿತ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮನುಷ್ಯನ ಬದುಕಿನ ಕಲ್ಯಾಣಕ್ಕಾಗಿ ಅವರು ರೂಪಿಸಿದ್ದ ನೀತಿಗಳು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ ಎನ್ನುವಂತಿದೆ. ಚಾಣಕ್ಯರ ನೀತಿಗಳನ್ನು ಅನುಸರಿಸಿದ್ರೆ ಬದುಕಿನಲ್ಲಿ ಎಂದಿಗೂ ಸೋಲಾಗುವುದಿಲ್ಲ. ಚಾಣಕ್ಯರ ಪ್ರಕಾರ ಮನುಷ್ಯನ 4 ಅಭ್ಯಾಸಗಳು ಬಹಳ ಬೇಗ ವಯಸ್ಸಾದವರಂತೆ ಮಾಡಿ ಬಿಡುತ್ತದೆ.
ಮಹಾನ್ ವಿದ್ವಾಂಸ, ತತ್ವಜ್ಞಾನಿ ಹಾಗೂ ಅರ್ಥಶಾಸ್ತ್ರಜ್ಞನಾಗಿದ್ದ ಆಚಾರ್ಯ ಚಾಣಕ್ಯರು ಮನುಷ್ಯ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ತಮ್ಮ ಅನುಭವದ ಆಧಾರದ ಮೇಲೆ ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಅವರ ನೀತಿಗಳು ಜನರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ. ಚಾಣಕ್ಯರ ನೀತಿಗಳು ಸರ್ವಕಾಲಕ್ಕೂ ಸಲ್ಲುವಂಥದ್ದು. ಇದು ನಮಗೆಲ್ಲರಿಗೂ ಬದುಕಿನ ಪಾಠ ಹೇಳುತ್ತಿರುವುದು ಸುಳ್ಳಲ್ಲ.
ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಮನುಷ್ಯನ ಜೀವನ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ನಮ್ಮ ಈ 4 ಅಭ್ಯಾಸಗಳನ್ನು ನಮ್ಮನ್ನು ವಯಸ್ಸಿಗೆ ಮೀರಿ ಮುದುಕರಾದಂತೆ ಕಾಣುವಂತೆ ಮಾಡುತ್ತದೆ. ಇದರಿಂದ ನಾವು ಚಿಕ್ಕ ವಯಸ್ಸಿನಲ್ಲೇ ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಹಾಗಾದಂತೆ ಆ 4 ಅಭ್ಯಾಸಗಳು ಯಾವುದು ನೋಡಿ.
ಸ್ವತಂತ್ರ್ಯವಾಗಿ ಬದುಕದ ವ್ಯಕ್ತಿ
ಒಬ್ಬ ವ್ಯಕ್ತಿಯು ವಾಸಿಸುವ ಪರಿಸರವು ಅವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಾಣಕ್ಯರ ಪ್ರಕಾರ, ಹಲವಾರು ನಿರ್ಬಂಧಗಳಲ್ಲಿ ವಾಸಿಸುವ ವ್ಯಕ್ತಿಗೆ ಬೇಗನೇ ವಯಸ್ಸಾಗಲು ಪ್ರಾರಂಭವಾಗುತ್ತದೆ. ಮನುಷ್ಯ ನಿರ್ಬಂಧದಲ್ಲಿದ್ದಾಗ ಅವನಿಗೆ ತನ್ನ ಆಲೋಚನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಅವನು ಮಾನಸಿಕವಾಗಿ ಕುಗ್ಗುತ್ತಾನೆ. ಅವನ ಆಲೋಚನೆಗಳೆಲ್ಲಾ ಒಳಗೆ ಉಸಿರುಗಟ್ಟಿದಂತಿರುತ್ತದೆ. ಇದು ಅವನ ಆರೋಗ್ಯದ ಮೇಲೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಇದರಿಂದ ಕೊರಗಿ ಕೊರಗಿ ಅವನು ಬಹಳ ಬೇಗ ವಯಸ್ಸಾದವನಂತೆ ಕಾಣಿಸುತ್ತಾನೆ.
ದೈಹಿಕ, ಮಾನಸಿಕ ಆನಂದದ ಕೊರತೆ
ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಖುಷಿ ಬಹಳ ಮುಖ್ಯ. ಈ ಎರಡರಲ್ಲಿ ಯಾವುದು ದಕ್ಕಿಲ್ಲ ಎಂದರೂ ಅವನು ಒಳಗಿನಿಂದಲೇ ಕೊರಗುತ್ತಾನೆ. ಇದು ಮನುಷ್ಯನ ನೆಮ್ಮದಿಯನ್ನು ಕಸಿಯುತ್ತದೆ. ಇದರಿಂದ ಕೂಡ ಅವನು ತನ್ನ ಅಂತರಂಗದಲ್ಲೇ ಕೊರಗುವಂತಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ, ಅವನು ದೈಹಿಕವಾಗಿ ಸಂತೋಷವಾಗಿರುವುದು ಬಹಳ ಮುಖ್ಯ. ವ್ಯಕ್ತಿಯು ದೈಹಿಕವಾಗಿ ಅತೃಪ್ತನಾಗಿದ್ದಾಗ, ಅವನ ಇಡೀ ಜೀವನವು ಏಕತಾನತೆಯಿಂದ ಕೂಡಿರುತ್ತದೆ. ಇದರಿಂದ ಅವನಲ್ಲಿ ಬಹಳ ಬೇಗ ವಯಸ್ಸಾದಂತೆ ಕಾಣುವ ಲಕ್ಷಣಗಳು ಗೋಚರವಾಗುತ್ತವೆ.
ದಿನಚರಿ ಪಾಲಿಸದ ವ್ಯಕ್ತಿ
ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯು ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿ ಉಳಿಯಲು ದಿನಚರಿಯನ್ನು ನಿರ್ವಹಿಸುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ತಿನ್ನುವುದು, ರಾತ್ರಿ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು, ಬೆಳಿಗ್ಗೆ ನಿಗದಿತ ಸಮಯಕ್ಕೆ ಎಚ್ಚರಗೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ಇದನ್ನು ಪಾಲಿಸದ ವ್ಯಕ್ತಿಯು ಬಹಳ ಬೇಗ ವಯಸ್ಸಾದಂತೆ ಕಾಣುತ್ತಾನೆ. ಇದರಿಂದ ಅವನಿಗೆ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ನಕಾರಾತ್ಮಕ ಮನೋಭಾವ
ಚಾಣಕ್ಯ ನೀತಿಯ ಪ್ರಕಾರ , ನಿರಂತರವಾಗಿ ನಕಾರಾತ್ಮಕ ಭಾವಗಳಿಂದ ಸುತ್ತುವರೆದಿರುವ ವ್ಯಕ್ತಿಯು ಬೇಗನೆ ವೃದ್ಧಾಪ್ಯವನ್ನು ಅನುಭವಿಸುತ್ತಾನೆ. ವಾಸ್ತವವಾಗಿ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಬಹಳಷ್ಟು ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವಾಗ, ಅವನು ಎಲ್ಲದರಲ್ಲೂ ನ್ಯೂನತೆಗಳನ್ನು ಹುಡುಕುತ್ತಲೇ ಇರುತ್ತಾನೆ. ಅಂತಹ ವ್ಯಕ್ತಿಯು ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ ಅಥವಾ ಅವನು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ, ಅವನು ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಾನೆ. ನಕಾರಾತ್ಮಕತೆಯಿಂದ ಸುತ್ತುವರಿದ ಮನುಷ್ಯನನ್ನು ಚಿಂತೆ ಮಾಡುವುದು ಅವನ ಸಮಯಕ್ಕಿಂತ ಮುಂಚೆಯೇ ಅವನನ್ನು ವಯಸ್ಸಾಗಿಸುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ