Chanakya Niti: ಜೀವನದಲ‍್ಲಿ ಈ 4 ಕೆಲಸಗಳನ್ನ ನಾಚಿಕೆ ಪಡದೇ ಮಾಡಬೇಕು, ಆಗ ಮಾತ್ರ ಸದಾ ಸಂತೋಷದಿಂದಿರಲು ಸಾಧ್ಯ; ಚಾಣಕ್ಯರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನದಲ‍್ಲಿ ಈ 4 ಕೆಲಸಗಳನ್ನ ನಾಚಿಕೆ ಪಡದೇ ಮಾಡಬೇಕು, ಆಗ ಮಾತ್ರ ಸದಾ ಸಂತೋಷದಿಂದಿರಲು ಸಾಧ್ಯ; ಚಾಣಕ್ಯರ ಸಲಹೆ

Chanakya Niti: ಜೀವನದಲ‍್ಲಿ ಈ 4 ಕೆಲಸಗಳನ್ನ ನಾಚಿಕೆ ಪಡದೇ ಮಾಡಬೇಕು, ಆಗ ಮಾತ್ರ ಸದಾ ಸಂತೋಷದಿಂದಿರಲು ಸಾಧ್ಯ; ಚಾಣಕ್ಯರ ಸಲಹೆ

ಭಾರತ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರು ಚಾಣಕ್ಯ. ಇವರ ಜೀವತಾವಧಿಯಲ್ಲಿ ಮನುಕುಲದ ಕಲ್ಯಾಣಕ್ಕಾಗಿ ಹಲವು ನೀತಿಗಳನ್ನು ರೂಪಿಸಿದ್ದರು. ಚಾಣಕ್ಯರು ರಚಿಸಿದ್ದ ನೀತಿಗಳು ಚಾಣಕ್ಯ ನೀತಿ ಎಂದೇ ಖ್ಯಾತಿ ಪಡೆದಿವೆ. ಚಾಣಕ್ಯರ ಪ್ರಕಾರ ಸಂತೋಷ, ಸಮೃದ್ಧಿಯ ಜೀವನ ಬಯಸುವವರು ಈ 4 ವಿಚಾರಗಳಲ್ಲಿ ಎಂದಿಗೂ ನಾಚಿಕೆ ಪಡಬಾರದು.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಅವರ ಕಾಲದ ಬುದ್ಧಿವಂತ ಹಾಗೂ ಮಹಾನ್ ವಿದ್ವಾಂಸ ಎಂದು ಕರೆಯುತ್ತಿದ್ದರು. ಇವರ ಬುದ್ಧಿವಂತಿಕೆಗೆ ಸಾಟಿಯಿರಲಿಲ್ಲ. ಮಾನವ ಕಲ್ಯಾಣಕ್ಕಾಗಿ ಅವರು ಹಲವಾರು ನೀತಿಗಳನ್ನು ರೂಪಿಸಿದ್ದರು. ಇವು ಎಂದೆಂದಿಗೂ ಪ್ರಸ್ತುತ ಎನ್ನಿಸುವಂತಿವೆ. ನಾವು ಸಂತೋಷ ಹಾಗೂ ಸಮೃದ್ಧ ಜೀವನವನ್ನು ಬಯಸಿದರೆ ಚಾಣಕ್ಯರ ಈ ಕೆಲವು ಮಾತುಗಳನ್ನು ಗಮನದಲ್ಲಿ ಇರಿಸಿಕೊಂಡು ಅದನ್ನು ಪಾಲಿಸಬೇಕು. ಇದರಿಂದ ಜೀವನಪೂರ್ತಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.

ಚಾಣಕ್ಯರ ಪ್ರಕಾರ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಈ 4 ವಿಚಾರಗಳಲ್ಲಿ ನಾವು ನಾಚಿಕೆ ಬಿಡಬೇಕು. ನಿರ್ಲಜ್ಜವಾಗಿ ಈ ಕೆಲಸಗಳನ್ನು ಮಾಡುವುದರಿಂದ ಯಶಸ್ಸಿನೊಂದಿಗೆ ಸಂತೋಷ, ಸಮೃದ್ಧಿಯು ನಮ್ಮನ್ನು ಹುಡುಕಿ ಬರುತ್ತದೆ.

ಕಲಿಕೆಯಲ್ಲಿ ನಾಚಿಕೆ ಬೇಡ

ಚಾಣಕ್ಯ ನೀತಿಯ ಪ್ರಕಾರ ಕಲಿಯುವ ಸಂದರ್ಭ ನಾವು ನಾಚಿಕೆಪಡಬಾರದು. ಗುರುಗಳು ಯಾರೇ ಆಗಿರಲಿ ಅವರಿಂದಲೇ ಕಲಿಯಬೇಕು. ಕಲಿಕೆಯ ವಿಚಾರದಲ್ಲಿ ಹಿರಿಯರು, ಕಿರಿಯರು ಎಂಬ ಭೇದ ಇರಬಾರದು. ಹೊಸ ವಿಷಯಗಳನ್ನು ಕಲಿಯಲು ನಾಚಿಕೆ ಪಡುವುದರಿಂದಲೇ ನಮಗೆ ಸೋಲಾಗುತ್ತದೆ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಯಾವುದೇ ಹಿಂಜರಿಕೆ ಇಲ್ಲದೆ ಕಲಿಕೆಯಲ್ಲಿ ತೊಡಗಬೇಕು.

ಸಾಲ ಮರಳಿ ಕೇಳಲು ನಾಚಿಕೆ ಬೇಡ

ಚಾಣಕ್ಯರ ಪ್ರಕಾರ, ಯಾವು ಯಾರಿಗಾದರೂ ಸಾಲ ಕೊಟ್ಟಿದ್ದರೆ ನಮ್ಮ ಹಣವನ್ನು ಮರಳಿ ಕೇಳಲು ನಾಚಿಕೆ ಪಡಬಾರದು. ನೀವು ಕೊಟ್ಟ ಹಣವನ್ನು ನೀವೇ ಮರಳಿ ಕೇಳಲು ನಾಚಿಕೆ ಪಟ್ಟರೆ ತೆಗೆದುಕೊಂಡವರು ಖಂಡಿತ ಹಣ ಮರಳಿಸಲು ಮನಸ್ಸು ಮಾಡುವುದಿಲ್ಲ. ಇದರಿಂದ ನೀವು ಹಣವನ್ನು ಕಳೆದುಕೊಳ್ಳುವ ಸಂದರ್ಭವೂ ಎದುರಾಗಬಹುದು.

ಹಣ ಸಂಪಾದಿಸುವ ವಿಚಾರದಲ್ಲಿ ನಾಚಿಕೆ ಬೇಡ

ಚಾಣಕ್ಯ ನೀತಿಯ ಪ್ರಕಾರ, ಹಣ ಸಂಪಾದನೆಗೆ ಸಂಬಂಧಿಸಿದ ಕೆಲಸವನ್ನು ಮಾಡಲು ನೀವು ಎಂದಿಗೂ ನಾಚಿಕೆಪಡಬಾರದು. ಹಣ ಗಳಿಸುವ ಸಲುವಾಗಿ ದುಡಿಮೆ ಮಾಡಬೇಕು, ಈ ವಿಚಾರದಲ್ಲಿ ಎಂದಿಗೂ ಎಂದಿಗೂ ನಾಚಿಕೆ, ಮುಜುಗರ ಪಡಬಾರದು. ಆದರೆ ಹಣ ಮಾಡಬೇಕು ಎನ್ನುವ ಉದ್ದೇಶದಿಂದ ಕೆಟ್ಟ ಕೆಲಸಗಳನ್ನು ಮಾಡಬಾರದು. ಅನ್ಯಾಯ ಮಾರ್ಗ ತುಳಿಯಬಾರದು. ನಾಯ್ಯದ ಮಾರ್ಗದಲ್ಲಿ ಸಾಗಿ ಹಣ ಗಳಿಸಬೇಕು. ಈ ವಿಚಾರವನ್ನ ಎಂದಿಗೂ ಮರೆಯುವಂತಿಲ್ಲ.

ತಿನ್ನುವ ವಿಚಾರದಲ್ಲಿ ನಾಚಿಕೆ ಬೇಡ

ಮನುಷ್ಯ ಯಾವಾಗಲೂ ತಿನ್ನುವ ವಿಚಾರದಲ್ಲಿ ನಾಚಿಕೆ ಪಡಬಾರದು. ಹೊಟ್ಟೆ ಹಸಿವಾದಾಗ ತಿಂದು ಬಿಡಬೇಕು. ತಿನ್ನುವಾಗ ಯಾರೋ ನಮ್ಮನ್ನು ನೋಡುತ್ತಾರೆ, ಏನು ಅಂದುಕೊಳ್ಳುತ್ತಾರೆ ಎಂದೆಲ್ಲಾ ಯೋಚಿಸಬಾರದು. ಹೊಟ್ಟೆ ಹಸಿವಿನ ವಿಚಾರದಲ್ಲಿ ನಾಚಿಕೆ ಪಡುವವನು ಎಂದಿಗೂ ಬದುಕಿನಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner