Chanakya Niti: ಚಾಣಕ್ಯರ ಪ್ರಕಾರ ಈ 5 ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು, ಇದರಿಂದ ಬದುಕು ಬದಲಾಗುತ್ತೆ
ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಚಾಣಕ್ಯರ ನೀತಿಗಳನ್ನು ಅನುಸರಿಸಬೇಕು. ಅವರು ರೂಪಿಸಿದ್ದ ನೀತಿಗಳು ನಮ್ಮೆಲ್ಲರ ಬಾಳಿಗೆ ದಾರಿದೀಪದಂತಿದೆ. ಚಾಣಕ್ಯರ ಪ್ರಕಾರ ನಮ್ಮ ಜೀವನದಲ್ಲಿ ನಾವು ಈ 5 ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ನಮ್ಮ ಬದುಕು ಬದಲಾಗೋದು ಖಂಡಿತ.
ಆಚಾರ್ಯ ಚಾಣಕ್ಯರ ಬಗ್ಗೆ ತಿಳಿಯದವರು ಇಲ್ಲವೇ ಇಲ್ಲ. ಅವರು 20ನೇ ಶತಮಾನದಲ್ಲಿದ್ದ ಮಹಾನ್ ವಿದ್ವಾಂಸ, ಜ್ಞಾನಿ. ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಹಲವು ನೀತಿಗಳನ್ನು ರೂಪಿಸಿದರು. ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಲು ಬಯಸಿದರೆ ಚಾಣಕ್ಯರು ನೀಡಿದ ಸಲಹೆಗಳನ್ನು ಅನುಸರಿಸಬೇಕು, ಅವುಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಚಾಣಕ್ಯರ ನೀತಿಗಳನ್ನು ಅಲ್ಲಗೆಳೆದರೆ ಸೋಲು ಖಚಿತ.
ಇಂದಿನ ಚಾಣಕ್ಯ ನೀತಿಯಲ್ಲಿ ಮನುಷ್ಯ 5 ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾರೆ. ಈ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಾಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಅಂತಹ 5 ಅವಕಾಶಗಳು ಯಾವುವು, ಅದರಿಂದ ನಾವು ಏನನ್ನು ಕಲಿಯಬೇಕಿದೆ ಎಂಬ ವಿವರ ಇಲ್ಲಿದೆ.
ಹೊಸ ವಿಷಯಗಳನ್ನು ಕಲಿಯುವ ಅವಕಾಶ
ಚಾಣಕ್ಯ ನೀತಿಯ ಪ್ರಕಾರ , ಜೀವನದಲ್ಲಿ ಹೊಸದನ್ನು ಕಲಿಯಲು ಅವಕಾಶ ಸಿಕ್ಕಾಗ, ತಕ್ಷಣ ಅದನ್ನು ಕಲಿಯುವ ಮನಸ್ಸು ಮಾಡಬೇಕು. ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ. ನೀವು ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಿದ್ದರೆ ಮಾತ್ರ ಜೀವನದಲ್ಲಿ ಸಾಕಷ್ಟು ಪ್ರಗತಿ ಅಥವಾ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.
ಹೊಸ ಜನರನ್ನು ಭೇಟಿ ಮಾಡುವ ಅವಕಾಶ
ಚಾಣಕ್ಯ ನೀತಿಯ ಪ್ರಕಾರ, ನಾವು ಹೊಸ ಜನರನ್ನು ಭೇಟಿಯಾದಾಗ ಮಾತ್ರ ನಮ್ಮ ಮನದಲ್ಲಿ ಹೊಸ ಕಲ್ಪನೆಗಳು ಮೂಡಲು, ನಮಗೆ ಹೊಸ ಹೊಸ ಅವಕಾಶಗಳು ಎದುರಾಗಲು ಸಾಧ್ಯ. ಹೊಸ ಹೊಸ ಜನರನ್ನು ಭೇಟಿಯಾದಾಗ ನಮ್ಮ ಸಂಪರ್ಕ ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಹಾಗಾಗಿ ಚಾಣಕ್ಯರು ಹೊಸಬರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗಲೆಲ್ಲ ಸಂಕೋಚವಿಲ್ಲದೆ ಭೇಟಿಯಾಗಬೇಕು ಎಂದಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ
ಚಾಣಕ್ಯ ನೀತಿಯು, ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ವಿವರಿಸುತ್ತದೆ. ಸಮಾಜ ಸೇವೆಗೆ ಅವಕಾಶ ಸಿಕ್ಕರೆ ಬೇಡ ಎನ್ನಬೇಡಿ. ಸಮಾಜಕಾರ್ಯದಲ್ಲಿ ಭಾಗವಹಿಸಿದಾಗ ಎಲ್ಲರಿಗೂ ಹೆಚ್ಚಿನ ಲಾಭವಾಗುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ವ್ಯಕ್ತಿತ್ವವನ್ನು ಉನ್ನತಿಗೇರಿಸುತ್ತದೆ.
ಸರಿಯಾದ ಹೂಡಿಕೆ ಅವಕಾಶ
ಚಾಣಕ್ಯ ನೀತಿಯ ಪ್ರಕಾರ, ಸೂಕ್ತವಾದ ಹೂಡಿಕೆಯನ್ನು ಮಾಡಲು ನಿಮಗೆ ಅವಕಾಶ ಸಿಕ್ಕಾಗ, ವಿಳಂಬ ಮಾಡದೇ ಹೂಡಿಕೆ ಮಾಡಬೇಕು. ಇದು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಇಡುವ ಬಹಳ ಮುಖ್ಯವಾದ ಹೆಜ್ಜೆ. ಹೂಡಿಕೆಯ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದರೆ ಇದು ನಿಮಗೆ ಸೂಕ್ತವೇ, ಇದರಿಂದ ಭವಿಷ್ಯಕ್ಕೆ ಲಾಭವಿದೆಯೇ ಎಂಬುದನ್ನು ನೋಡಲು ಮರೆಯಬೇಡಿ.
ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಅವಕಾಶ
ಚಾಣಕ್ಯ ನೀತಿಯ ಪ್ರಕಾರ, ನಿಮಗೆ ಹೊಸ ಜವಾಬ್ದಾರಿಗಳನ್ನು ನಿಯೋಜಿಸಿದಾಗ, ನೀವು ಯಾವುದೇ ಹಿಂಜರಿಕೆಯಿಲ್ಲದೆ ಅವುಗಳನ್ನು ಸ್ವೀಕರಿಸಬೇಕು. ಜವಾಬ್ದಾರಿಗಳನ್ನು ವಹಿಸಿಕೊಂಡಾಗ, ಹೊಸ ಕೌಶಲಗಳನ್ನು ಕಲಿಯಲು ಸಾಧ್ಯ. ಇದರಿಂದ ನಮ್ಮಲ್ಲಿ ನಾಯಕತ್ವದ ಗುಣ ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಎಂದಿಗೂ ಹಿಂಜರಿಕೆ ಮಾಡಬಾರದು.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ