Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಇದರಿಂದ ಕಷ್ಟ, ಅವಮಾನವೇ ಜಾಸ್ತಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಇದರಿಂದ ಕಷ್ಟ, ಅವಮಾನವೇ ಜಾಸ್ತಿ

Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಇದರಿಂದ ಕಷ್ಟ, ಅವಮಾನವೇ ಜಾಸ್ತಿ

ಆಚಾರ್ಯ ಚಾಣಕ್ಯರ ನೀತಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರ ನೀತಿಗಳನ್ನು ಅನುಸರಿಸಿದರೆ ಬದುಕಿನಲ್ಲಿ ಸೋಲು ಎಂಬುದೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಚಾಣಕ್ಯರ ಪ್ರಕಾರ ನಾವು ನಮ್ಮ ಬದುಕಿನ ಕುರಿತಾದ ಈ 5 ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ಕಷ್ಟಗಳು ನಮ್ಮನ್ನು ಹಿಂಬಾಲಿಸುತ್ತವೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಚಾಣಕ್ಯರು ಒಬ್ಬ ನುರಿತ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ಮೂಲಕ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಂತಹ ಕಷ್ಟ ಸಂದರ್ಭದಲ್ಲೂ ಚಾಣಕ್ಯರ ಕೆಲವು ನೀತಿಗಳನ್ನು ಅನುಸರಿಸುವ ಮೂಲಕ ಗೆಲುವು ಪಡೆಯಬಹುದು.

ಚಾಣಕ್ಯರು ಸಮಾಜ ಹಾಗೂ ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳ ಮೇಲೂ ಆಳವಾಗಿ ಅಧ್ಯಯನ ಮಾಡಿದ್ದಾರೆ. ಇವರು ತಮ್ಮ ಚಾಣಕ್ಯ ನೀತಿಯಲ್ಲಿ ನಮ್ಮ ವ್ಯಕ್ತಿಗೆ ಜೀವನದಲ್ಲಿ ಯಾವುದು ಹಾನಿ ಮಾಡುತ್ತದೆ, ಯಾವುದು ಒಳಿತು ಮಾಡುತ್ತದೆ ಎಂಬ ವಿಚಾರವನ್ನೂ ತಿಳಿಸಿದ್ದಾರೆ.

ಚಾಣಕ್ಯರ ಪ್ರಕಾರ ಕೆಲವು ವಿಚಾರಗಳನ್ನು ನಾವು ಯಾರ ಮುಂದೆಯೂ ಮಾತನಾಡಬಾರದು, ಯಾರ ಜೊತೆಗೂ ಹೇಳಿಕೊಳ್ಳಬಾರದು. ಇದರಿಂದ ನಮ್ಮ ಬದುಕಿನಲ್ಲಿ ಕಷ್ಟ ಎದುರಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಹಾಗಾದರೆ ಯಾವ ವಿಚಾರ ಹಂಚಿಕೊಳ್ಳಬಾರದು ನೋಡಿ.

ಎಲ್ಲಾ ಸಮಸ್ಯೆಗಳನ್ನೂ ಹಂಚಿಕೊಳ್ಳದಿರಿ

ಚಾಣಕ್ಯರ ಪ್ರಕಾರ ತಮ್ಮ ಬದುಕಿನ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಇತರರೊಂದಿಗೆ ಹಂಚಿಕೊಳ್ಳಬಾರದು. ನಮಗೆ ಭಯ, ಆತಂಕವಾಯಿತು ಎನ್ನುವ ಕಾರಣಕ್ಕೆ ನಮ್ಮ ಕಷ್ಟ, ಸಮಸ್ಯೆಗಳೆಲ್ಲವನ್ನೂ ಬೇರೆಯವರ ಮುಂದೆ ಹೇಳಿಕೊಳ್ಳಬಾರದು. ಇದರಿಂದ ಅವರು ನಮ್ಮನ್ನು ಕೀಳಾಗಿ ನೋಡಬಹುದು ಅಥವಾ ನಮ್ಮನ್ನು ನಿರ್ಲಕ್ಷ್ಯ ಮಾಡಬಹುದು. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳದೇ ಇರಬಹುದು.

ಹದಗೆಟ್ಟ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳದಿರಿ

ಮನುಷ್ಯನ ಆರ್ಥಿಕ ಪರಿಸ್ಥಿತಿ ಯಾವಾಗ ಹದಗೆಡುತ್ತದೆ ಹೇಳಲು ಸಾಧ್ಯವಿಲ್ಲ. ಆದರೆ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ವಿಚಾರವನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ಅವರು ನಮ್ಮನ್ನು ಹೀನಾಯವಾಗಿ ಕಾಣುತ್ತಾರೆ. ನಮ್ಮನ್ನು ಹಿದಿನಿಂದ ಆಡಿಕೊಂಡು ನಗುತ್ತಾರೆ. ಹಾಗಾಗಿ ಸಂದರ್ಭ ಬಂದಾಗ ನಾವು ನಂಬುವವರ ಜೊತೆ ಮಾತ್ರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಂಚಿಕೊಳ್ಳಬೇಕು.

ಸೋಲಿನ ಬಗ್ಗೆ ಹೇಳದಿರಿ

ಬದುಕಿನಲ್ಲಿ ಸೋಲು–ಗೆಲುವು ಸಹಜ. ಇದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾವು ಸೋತಿರುವ ವಿಚಾರವನ್ನು ತಿಳಿದರೆ ಕನಿಕರ ಪಡುವವರಿಗಿಂತ ಆಡಿಕೊಂಡು ನಗುವವರೇ ಹೆಚ್ಚು. ಹಾಗಾಗಿ ಈ ವಿಚಾರದಲ್ಲೂ ನಾವು ಎಚ್ಚರ ವಹಿಸಬೇಕು. ಯಾರ ಮುಂದೆಯೂ ನಾವು ಸೋತಿದ್ದೇವೆ ಎಂಬ ತೋರಿಸಬಾರದು.

ಹೆಂಡತಿಯ ಬಗ್ಗೆ ಮಾತನಾಡಬಾರದು

ನಿಮ್ಮ ಎಷ್ಟೇ ಆತ್ಮೀಯರಾದರೂ ಹೆಂಡತಿಯ ಬಗ್ಗೆ ಅವರ ಮುಂದೆ ಮಾತನಾಡದಿರಿ. ಇದರಿಂದ ಗಂಡನು ಹೆಂಡತಿಯ ಗೌರವವನ್ನು ತಾನೇ ಹಾಳು ಮಾಡಿದಂತೆ. ಹೆಂಡತಿ ಹಾಗೂ ಸಂಸಾರದ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.

ಸಂಸಾರ, ಕುಟುಂಬದ ಸಮಸ್ಯೆ

ಸಂಸಾರ ಹಾಗೂ ಕುಟುಂಬದ ಸಮಸ್ಯೆಯನ್ನು ನಾವು ಬೇರೆಯವರ ಜೊತೆ ಹಂಚಿಕೊಳ್ಳಬಾರದರು. ಇದರಿಂದ ನಮ್ಮ ಗುಟ್ಟನ್ನು ನಾವು ಅವರಿಗೆ ಬಿಟ್ಟು ಕೊಟ್ಟಂತೆ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಹೊರಗಿನವರು ನಿಮ್ಮ ಸಂಸಾರ ಅಥವಾ ಕುಟುಂಬದ ಬಗ್ಗೆ ಆಡಿಕೊಂಡು ನಗುತ್ತಾರೆ ಹೊರತು ಇದರಿಂದ ಖಂಡಿತ ಅವರು ನಿಮಗೆ ಒಳಿತು ಮಾಡುವುದಿಲ್ಲ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner