Chanakya Niti: ಚಾಣಕ್ಯರ ಪ್ರಕಾರ ಬದುಕಿನಲ್ಲಿ ಏಳಿಗೆ ಕಾಣಲು ಈ 4 ವಿಚಾರಗಳಿಂದ ದೂರವಿರಬೇಕು, ನಮ್ಮ ಭವಿಷ್ಯ ಉಜ್ವಲವಾಗುತ್ತೆ
ಜಗತ್ತು ಕಂಡ ಮಹಾನ್ ವಿದ್ವಾಂಸ ಚಾಣಕ್ಯ. ಇವರು ರೂಪಿಸಿದ ನೀತಿಗಳು ಇಂದಿಗೂ ಪ್ರಸ್ತುತ ಎನ್ನಿಸಿವೆ. ಬದುಕಿನ ಕುರಿತ ವಿವಿಧ ವಿಚಾರಗಳ ಬಗ್ಗೆ ಚಾಣಕ್ಯ ವಿವರವಾಗಿ ಬರೆದಿದ್ದಾರೆ. ಚಾಣಕ್ಯರು ರೂಪಿಸಿದ ನೀತಿಗಳನ್ನು ಅನುಸರಿಸಿದ್ರೆ ಸೋಲಾಗಲು ಸಾಧ್ಯವೇ ಇಲ್ಲ. ಚಾಣಕ್ಯರ ಪ್ರಕಾರ ನಾವು ಬದುಕಿನಲ್ಲಿ ಏಳಿಗೆ ಕಾಣಬೇಕು ಎಂದರೆ ಈ ಅಂಶಗಳಿಂದ ದೂರವಿರಬೇಕು.
2025ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದಲ್ಲಿ ಹೊಸ ಆರಂಭಗಳನ್ನು ಮಾಡಲು ಬಯಸುವವರೇ ಹೆಚ್ಚು. ಜೀವನದಲ್ಲಿ ಹೊಸತನವನ್ನು ಕಾಣಲು ಚಾಣಕ್ಯ ನೀತಿಗಳು ನಮಗೆ ಸಹಾಯ ಮಾಡುತ್ತವೆ. ಆಚಾರ್ಯ ಚಾಣಕ್ಯರು ನೀತಿಶಾಸ್ತ್ರ ಎಂಬ ಪುಸ್ತಕ ಬರೆದಿದ್ದಾರೆ. ಇವರ ಪುಸ್ತಕ ಚಾಣಕ್ಯ ನೀತಿ ಎಂದೇ ಖ್ಯಾತಿ ಪಡೆದಿದೆ. ಈ ಪುಸ್ತಕದಲ್ಲಿ ಅವರು ಬದುಕಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಬರೆದಿದ್ದಾರೆ. ಈ ವಿಚಾರಗಳು ಸರ್ವಕಾಲಕ್ಕೂ ಸಲ್ಲುವಂತಿದೆ. ಆ ಕಾರಣಕ್ಕೆ ಇಂದಿಗೂ ಜನ ಚಾಣಕ್ಯರ ನೀತಿಗಳನ್ನು ಅನುಸರಿಸುತ್ತಾರೆ.
ಬದುಕಿನಲ್ಲಿ ನಾವು ಏಳಿಗೆ ಕಾಣಬೇಕು ಅಥವಾ ಯಶಸ್ಸು ಗಳಿಸಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಚಾಣಕ್ಯರು ವಿವರವಾಗಿ ತಿಳಿಸಿದ್ದಾರೆ. ಅವರ ಪ್ರಕಾರ ಈ 4 ವಿಚಾರಗಳಿಂದ ನಾವು ದೂರ ಇದ್ದರೆ ಸುಲಭವಾಗಿ ಏಳಿಗೆ ಕಾಣಲು ಸಾಧ್ಯವಿದೆ. ಇವರೊಂದಿಗೆ ಮುಂದುವರಿದರೆ ಬದುಕಿನಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾದರೆ ಚಾಣಕ್ಯರ ಪ್ರಕಾರ ನಾವು ಯಾವ ವಿಚಾರಗಳಿಂದ ದೂರವಿರಬೇಕು ನೋಡಿ.
ಜ್ಞಾನವಿಲ್ಲದ ಗುರು
ಆಚಾರ್ಯ ಚಾಣಕ್ಯರು ಹೇಳುವಂತೆ ಜ್ಞಾನವಿಲ್ಲದ ಗುರುವನ್ನು ಹೊಂದಿದ್ದೂ ಪ್ರಯೋಜನವಿಲ್ಲ. ಅಂತಹವರಿಂದ ನಾವು ಕಲಿಯುವುದು ಏನೂ ಇಲ್ಲ. ಗುರುವಾದವನು ತಮ್ಮ ಶಿಷ್ಯರಿಗೆ ಜ್ಞಾನ ನೀಡಬೇಕು, ಆದರೆ ಆ ವ್ಯಕ್ತಿಯಲ್ಲೇ ಜ್ಞಾನ ಇಲ್ಲ ಎಂದರೆ ಅವನು ಬೇರೆಯವರಿಗೆ ಹೇಗೆ ತಿಳುವಳಿಕೆ ನೀಡಲು ಸಾಧ್ಯ. ಹೀಗಾಗಿ ಮೂರ್ಖ ಗುರುವನ್ನು ನಾವು ಎಂದಿಗೂ ಹೊಂದಿರಬಾರದು. ಹೊಂದಿದ್ದರೂ ಅವರಿಂದ ದೂರಾಗಬೇಕು.
ಸುಳ್ಳು ಹೇಳುವ ಪ್ರವೃತ್ತಿಯವರು
ಚಾಣಕ್ಯ ನೀತಿಯ ಪ್ರಕಾರ, ನಾವು ಯಾವುದೇ ಪರಿಸ್ಥಿತಿಯಲ್ಲೂ ಸತ್ಯವನ್ನೇ ಮಾತನಾಡಬೇಕು. ಜೊತೆಗೆ ತಾಳ್ಮೆ ಕಾಪಾಡಿಕೊಳ್ಳಬೇಕು. ನಮ್ಮ ಪರಿಸ್ಥಿತಿಯನ್ನು ನಿಭಾಯಿಸಲೂ ಕೂಡ ಸುಳ್ಳು ಹೇಳಬಾರದು. ನಮ್ಮ ಸುಳ್ಳು ಒಂದು ನಿರ್ದಿಷ್ಟ ಸಮಯದವರೆಗೆ ನಮ್ಮನ್ನು ಕಾಪಾಡಬಹುದು. ಆದರೆ ಸುಳ್ಳಿಗೆ ಆಯಸ್ಸು ಕಡಿಮೆ ಎನ್ನುವುದನ್ನು ಮರೆಯುವಂತಿಲ್ಲ. ನೀವು ಹೇಳಿದ್ದು ಸುಳ್ಳು ಎಂದು ತಿಳಿದರೆ ನಂತರ ಬಹಳ ನೋವು ಅನುಭವಿಸಬೇಕಾಗುತ್ತದೆ. ಸುಳ್ಳಿನಿಂದ ಹಲವು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಒಮ್ಮೆ ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ಮತ್ತೆ ಸತ್ಯ ಹೇಳಿದರೂ ನಿಮ್ಮನ್ನು ನಂಬುವುದಿಲ್ಲ. ಸುಳ್ಳು ನಿಮ್ಮನ್ನು ಮುಂದೆ ಬರಲು ಬಿಡುವುದಿಲ್ಲ.
ಆತ್ಮೀಯತೆಯ ನಾಟಕವಾಡುವವರು
ನಮ್ಮ ಜೊತೆ ಇರುವವರು ಹೇಗಿರಬೇಕು ಎಂದರೆ ಅವರು ಸದಾ ನಮ್ಮ ಸಂತೋಷ, ಒಳಿತನ್ನು ಬಯಸುವಂತವರಾಗಬೇಕು. ಅದು ಸಂಬಂಧಿಕರು, ಸ್ನೇಹಿತರು, ಅಣ್ಣ–ತಮ್ಮ ಕೂಡ ಆಗಿರಬಹುದು. ಆದರೆ ಅವರು ನಿಮ್ಮ ಬಗ್ಗೆ ಕಪಟ ಪ್ರೀತಿ, ವ್ಯಾತ್ಸಲ್ಯ ತೋರುತ್ತಿದ್ದರೆ ಅಂತವರಿಂದ ದೂರವಿರಿ. ಇಂತಹವರು ನಮ್ಮ ಜೊತೆ ಇದ್ದರೆ ನಮ್ಮ ಏಳಿಗೆ ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ.
ಕರುಣೆ ಮತ್ತು ಪ್ರೀತಿ ಇಲ್ಲದ ಧರ್ಮ
ಜಗತ್ತಿನಲ್ಲಿ ಕರುಣಿ, ಪ್ರೀತಿ ಇಲ್ಲದ ಯಾವ ಧರ್ಮದಲ್ಲೂ ನಾವು ಇರಬಾರದು. ಕರುಣೆ ಜಗತ್ತಿನ ಸರ್ವ ಜೀವಿಗಳಲ್ಲೂ ಇರಬೇಕಾದ ಅಂಶ. ಕರುಣಿ, ಪ್ರೀತಿ ಇಲ್ಲದ ಧರ್ಮದಲ್ಲಿ ನೀವಿದ್ದರೆ ಆ ಧರ್ಮವನ್ನೇ ತ್ಯಜಿಸಬೇಕು ಎಂದು ಚಾಣಕ್ಯ ಸಲಹೆ ನೀಡುತ್ತಾರೆ. ಏಕೆಂದರೆ ಧರ್ಮದ ಕಾರ್ಯವು ಕರುಣೆ, ಅಹಿಂಸೆ ಮತ್ತು ಪ್ರೀತಿಯನ್ನು ಬೋಧಿಸುವುದಾಗಿದೆ. ಅಂತಹ ಧರ್ಮದಲ್ಲಿ ಇದ್ದವರೂ ಕೂಡ ಏಳಿಗೆ ಕಾಣಲು ಸಾಧ್ಯವಿಲ್ಲ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ