Chanakya Niti: ಚಾಣಕ್ಯರ ಪ್ರಕಾರ ಈ 3 ವ್ಯಕ್ತಿಗಳ ಜೀವನ ಬಹಳ ಕಷ್ಟಕರವಾಗಿರುತ್ತೆ, ಮನೆಯವರೂ ಇವರಿಗೆ ಬೆಲೆ ಕೊಡುವುದಿಲ್ಲ
ಚಾಣಕ್ಯ ನೀತಿಯಲ್ಲಿ ಬರೆದಿರುವ ವಿಚಾರಗಳು ನಮ್ಮ ಬದುಕಿಗೆ ಮಾರ್ಗದರ್ಶನದಂತಿವೆ. ಇವರ ನೀತಿಪಾಠಗಳು ವೈಯಕ್ತಿಕ ಬದಲಾವಣೆ ಮಾತ್ರವಲ್ಲ, ಸಾಮಾಜಿಕ ಬದಲಾವಣೆಗೂ ದಾರಿಯಾಗುತ್ತವೆ. ಚಾಣಕ್ಯರ ಪ್ರಕಾರ ಈ 3 ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ, ಕುಟುಂಬದವರಿಗೂ ಇವರು ಬೆಲೆ ನೀಡುವುದಿಲ್ಲ. ಅಂತಹ ವ್ಯಕ್ತಿಗಳು ಯಾರು ನೋಡಿ.

ಚಾಣಕ್ಯ ನೀತಿಯು ಮಾನವ ಜೀವನವನ್ನು ಹಸನು ಮಾಡುವ ಮತ್ತು ಯಶಸ್ಸಿನತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದೆ. ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿರುವ ಅಂಶಗಳು ವ್ಯಕ್ತಿತ್ವ ವಿಕಸನದಿಂದ ಸಮಾಜ ಮತ್ತು ರಾಷ್ಟ್ರದ ಜವಾಬ್ದಾರಿಯವರೆಗೆ ಎಲ್ಲವನ್ನೂ ಒಳಗೊಂಡಿದೆ. ಚಾಣಕ್ಯ ನೀತಿಯಲ್ಲಿ ಬರೆದ ವಿಷಯಗಳು ಕಷ್ಟಕರವಾದ ಹಾದಿಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಅದನ್ನು ಸರಿಯಾಗಿ ಓದಿ, ಅರ್ಥ ಮಾಡಿಕೊಂಡು ಜೀವನದಲ್ಲಿ ಅನುಸರಿಸುವ ವ್ಯಕ್ತಿ ಯಶಸ್ಸು ಕಾಣಲು ಸಾಧ್ಯವಿದೆ. ಆಚಾರ್ಯ ಚಾಣಕ್ಯರು ನೈತಿಕತೆಯ ಮೂಲಕ ಮಾನವರ ಸದ್ಗುಣಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನ್ಯೂನತೆಗಳ ಬಗ್ಗೆ ಹೆಚ್ಚು ನಿರರ್ಗಳವಾಗಿ ಮಾತನಾಡುತ್ತಾರೆ.
ಚಾಣಕ್ಯರ ಪ್ರಕಾರ, ಈ 3 ವ್ಯಕ್ತಿಗಳ ಜೀವನ ಅತ್ಯಂತ ನೋವಿನಿಂದ ಕೂಡಿರುತ್ತದೆ. ಈ ವ್ಯಕ್ತಿಗಳಿಗೆ ಮನೆ, ಸಮಾಜದಲ್ಲೂ ಬೆಲೆ ಸಿಗುವುದಿಲ್ಲ. ಇವರಿಂದಾಗಿ ಕುಟುಂಬಸ್ಥರೂ ಕೂಡ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾದರೆ ಚಾಣಕ್ಯರು ಹೇಳಿದ ಆ ಮೂರು ವ್ಯಕ್ತಿಗಳು ಯಾರು, ಅವರ ಜೀವನ ಯಾಕೆ ನೋವಿನಿಂದ ಕೂಡಿರುತ್ತದೆ ಎಂಬುದನ್ನು ನೋಡೋಣ.
ಮೂರ್ಖ ವ್ಯಕ್ತಿಗಳು
ಚಾಣಕ್ಯ ಹೇಳುತ್ತಾರೆ ಮೂರ್ಖನಾದವನು ತನ್ನಿಂದ ಯಾವ ಕೆಲಸವನ್ನೂ ಮಾಡಲಾರ. ಅವನ ಜೀವನ ತುಂಬಾ ನೋವಿನಿಂದ ಕೂಡಿರುತ್ತದೆ. ಅವನು ತನ್ನ ಜೀವನದುದ್ದಕ್ಕೂ ತೊಂದರೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾನೆ. ಅಂತಹ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವ ಜನರ ಬದುಕು ಕೂಡ ನೋವಿನಿಂದ ತುಂಬಿರುತ್ತದೆ. ಮೂರ್ಖನಾದವನು ತನ್ನ ಮೇಲೆ ಬೀರುವ ಪ್ರಭಾವಗಳಷ್ಟೇ ಇತರರ ಮೇಲೂ ಬೀರುತ್ತಾನೆ.
ಯೌವನದಲ್ಲಿ ದಾರಿ ತಪ್ಪಿದವರು
ಚಾಣಕ್ಯ ನೀತಿಯ ಪ್ರಕಾರ, ಯೌವನದಲ್ಲಿ ದಾರಿ ತಪ್ಪಿದವರ ಬದುಕು ಸದಾ ಕಾಲ ನೋವಿನಿಂದ ಕೂಡಿರುತ್ತದೆ. ಏಕೆಂದರೆ ಯೌವನದಲ್ಲಿ ಕಾಮ, ಕ್ರೋಧ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಹಲವರು ಬದುಕು ಹಾಳು ಮಾಡಿಕೊಳ್ಳುತ್ತಾರೆ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಕೆಟ್ಟ ಚಟಗಳಿಗೆ ಬಹಳ ಬೇಗನೆ ಆಕರ್ಷಿತನಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕೆಟ್ಟ ಅಭ್ಯಾಸಗಳಿಂದ ಹೊರಬರಲು ತುಂಬಾ ಕಷ್ಟವಾಗುತ್ತದೆ. ಯೌವನದಲ್ಲಿ ದಾರಿ ತಪ್ಪುವವರು ತನ್ನ ಜೀವನವಿಡೀ ಪಶ್ಚಾತ್ತಾಪ, ನೋವಿನಲ್ಲೇ ಕಳೆಯಬೇಕಾಗುತ್ತದೆ. ಇದರಿಂದ ಆತನ ಮನೆಯವರಿಗೂ, ಆತ್ಮೀಯರಿಗೂ ತೊಂದರೆ ತಪ್ಪಿದ್ದಲ್ಲ.
ಸ್ವಂತ ಮನೆ ಇಲ್ಲದ ವ್ಯಕ್ತಿ
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಅತ್ಯಂತ ನೋವಿನಿಂದ ಕೂಡಿರುವ ಇನ್ನೊಬ್ಬ ವ್ಯಕ್ತಿ ಎಂದರೆ ಸ್ವಂತ ಮನೆ ಇಲ್ಲದವನು. ಸ್ವಂತ ಮನೆ ಇಲ್ಲದ ವ್ಯಕ್ತಿ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಾನೆ. ಇದರಿಂದ ಅವನಿಗೆ ಸ್ವಾತಂತ್ರ್ಯ ಎನ್ನುವುದೇ ಇರುವುದಿಲ್ಲ. ಅವನು ಜೀವನವಿಡೀ ನೋವಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ಅವನು ಮನೆಯಿಲ್ಲ ಎಂಬ ಕೊರಗಿನಲ್ಲೇ ಬದುಕು ಸವೆಸಬೇಕಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ