Chanakya Niti: ಮದುವೆಗೂ ಮುನ್ನ ಪ್ರತಿಯೊಬ್ಬರು ತಮ್ಮ ಸಂಗಾತಿಯಾಗುವವರಲ್ಲಿ ಗಮನಿಸಬೇಕಾದ ಅಂಶಗಳಿವು; ಚಾಣಕ್ಯರ ನೀತಿಪಾಠ
ಚಾಣಕ್ಯರು ಮಹಾನ್ ವಿದ್ವಾಂಸರು. ಅವರು ಆ ಕಾಲದಲ್ಲೇ ಜನರ ಬದುಕಿನ ವಿವಿಧ ಹಂತಗಳ ಬಗ್ಗೆ ಮಾತನಾಡಿದ್ದರು. ಅವರ ಪ್ರಕಾರ ಮದುವೆಯಾಗಲು ಸಂಗಾತಿ ಹುಡುಕುವ ಮುನ್ನ ಪ್ರತಿಯೊಬ್ಬರು ಈ ಕೆಲವು ಅಂಶಗಳನ್ನು ಗಮನಿಸಬೇಕು. ಸಂಗಾತಿಯಾಗುವವರಲ್ಲಿ ಈ ಗುಣಗಳಿಲ್ಲ ಎಂದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಾಗಾದರೆ ಮದುವೆಗೂ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ನೋಡಿ.
ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಹಲವು ನೀತಿಗಳನ್ನು ರೂಪಿಸಿದ್ದಾರೆ. ಅವರು ತೋರಿಸುವ ಮಾರ್ಗವನ್ನು ಅನುಸರಿಸಿದರೆ ಅಥವಾ ಅವರು ಹೇಳಿದ್ದನ್ನು ಪಾಲಿಸಿದರೆ, ಆ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧ ಜೀವನವನ್ನು ಹೊಂದಬಹುದು ಎಂದು ಹೇಳಲಾಗುತ್ತದೆ. ಚಾಣಕ್ಯರು ಸಾಂಸಾರಿಕ ಜೀವನದ ಬಗ್ಗೆಯೂ ಹೇಳಿದ್ದಾರೆ. ಸಾಂಸಾರಿಕ ಜೀವನ ಸುಂದರವಾಗಿ ಇರಬೇಕು ಎಂದರೆ ಮದುವೆಗೂ ಮುನ್ನವೇ ನೀವು ಆರಿಸಿಕೊಳ್ಳ ಬಯಸುವ ಸಂಗಾತಿಯಲ್ಲಿ ಈ ಕೆಲವು ಅಂಶಗಳು ಇರಬೇಕು ಎಂದು ಅವರು ಹೇಳಿದ್ದಾರೆ.
ಮದುವೆಗೂ ಮುನ್ನ ಪ್ರತಿಯೊಬ್ಬರು ತಮ್ಮ ಸಂಗಾತಿಯಾಗುವವರಿಂದ ಈ ಕೆಲವು ಗುಣಗಳನ್ನು ನಿರೀಕ್ಷಿಸಬೇಕು, ಇದರಿಂದ ಸಾಂಸಾರಿಕ ಜೀವನ ಹಾಗೂ ನಿಮ್ಮ ಒಟ್ಟಾರೆ ಬದುಕು ಚೆನ್ನಾಗಿರುತ್ತದೆ. ಇಲ್ಲ ಎಂದರೆ ನೀವು ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಸಂಗಾತಿಯಲ್ಲಿ ಈ ಅಂಶಗಳನ್ನು ಗಮನಿಸಿಲ್ಲ ಎಂದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ
ಚಾಣಕ್ಯ ನೀತಿಯ ಪ್ರಕಾರ, ಮದುವೆಯಾಗಲು ಸಂಗಾತಿಯನ್ನು ಹುಡುಕುತ್ತಿರುವಾಗ ವಿಶೇಷ ಕಾಳಜಿ ವಹಿಸಬೇಕಾದ ಕೆಲವು ವಿಷಯಗಳಿವೆ. ಅದರಲ್ಲಿ ಮುಖ್ಯವಾಗಿ ನಾವು ಮದುವೆಯಾಗುವವರ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಮೇಲಿನ ಹೆಚ್ಚಿನ ಗಮನ ಹರಿಸಿಬೇಕು. ಯಾವುದೇ ಕಾರಣಕ್ಕೂ ಸೌಂದರ್ಯವನ್ನು ಮಾನದಂಡವಾಗಿ ಇರಿಸಿಕೊಂಡು ಮದುವೆಯಾಗುವ ನಿರ್ಧಾರ ಮಾಡದಿರಿ. ಹೊರನೋಟದಲ್ಲಿ ಸುಂದರವಾಗಿರುವ ವ್ಯಕ್ತಿಗಳು ಆಂತರಿಕವಾಗಿಯೂ ಹಾಗೆಯೇ ಇರಬೇಕು ಎಂದೇನಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಹೃದಯ ಮತ್ತು ಮನಸ್ಸಿನಲ್ಲಿ ಸುಂದರವಾಗಿರುವವರನ್ನು ನಿಮ್ಮ ಸಂಗಾತಿಯಾಗಿ ಆರಿಸಿಕೊಳ್ಳಬೇಕು, ಆಗ ಮಾತ್ರ ನಿಮ್ಮ ಜೀವನದ ಸದಾ ಸಂತೋಷದಿಂದ ಕೂಡಿರಲು ಸಾಧ್ಯ.
ತಾಳ್ಮೆ ಅತಿ ಮುಖ್ಯ
ಚಾಣಕ್ಯ ನೀತಿಯ ಪ್ರಕಾರ, ಸಂಗಾತಿಯನ್ನು ಹುಡುಕುತ್ತಿರುವಾಗ ಆ ವ್ಯಕ್ತಿಗೆ ತಾಳ್ಮೆ ಎಷ್ಟಿದೆ ಎಂಬುದನ್ನು ನೀವು ಮೊದಲು ಅರಿಯಬೇಕು. ತಾಳ್ಮೆ ಇಲ್ಲ ಎಂದರೆ ಬದುಕಿನಲ್ಲಿ ಏನಿದ್ದರೂ ಪ್ರಯೋಜನವಿಲ್ಲ. ತಾಳ್ಮೆ ಹಾಗೂ ಸಂಯಮ ಇರುವ ವ್ಯಕ್ತಿ ಬದುಕಿನಲ್ಲಿ ಯಾವುದೇ ಕೆಟ್ಟ ಸಂದರ್ಭ ಬಂದರೂ ಅದನ್ನು ಸುಲಭವಾಗಿ ನಿಭಾಯಿಸುತ್ತಾನೆ, ಅಲ್ಲದೇ ಅಂತಹ ಸಂದರ್ಭಗಳಿಂದ ಸುಲಭವಾಗಿ ಹೊರಬರುತ್ತಾನೆ.
ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ
ಚಾಣಕ್ಯ ನೀತಿಯ ಪ್ರಕಾರ, ನೀವು ಮದುವೆಯಾಗಲು ಯೋಚಿಸುತ್ತಿದ್ದರೆ ಸುಸಂಸ್ಕೃತರಾಗಿರುವ ಸಂಗಾತಿಯನ್ನು ಆರಿಸಿಕೊಳ್ಳಿ. ಒಬ್ಬ ವ್ಯಕ್ತಿಯು ಸಂಸ್ಕಾರವನ್ನು ಹೊಂದಿಲ್ಲದಿದ್ದರೆ, ಆ ವ್ಯಕ್ತಿ ನಿಮ್ಮನ್ನು ಎಂದಿಗೂ ಗೌರವಿಸಲು ಸಾಧ್ಯವಿಲ್ಲ. ಜೀವನದ ಮೌಲ್ಯ ಅರಿತರನ್ನು ಮದುವೆಯಾದರೆ ಬದುಕು ಸುಂದರ.
ಸಂಬಂಧಗಳಿಗೆ ಬೆಲೆ ಕೊಡುವವರು
ಮದುವೆ ಎಂದರೆ ಎರಡು ಮನಸ್ಸುಗಳು ಮಾತ್ರವಲ್ಲ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವಂಥದ್ದು, ನೀವು ಮದುವೆಯಾಗುವ ಸಂಗಾತಿ ನಿಮಗೆ ಮಾತ್ರವಲ್ಲ ನಿಮ್ಮ ಮನೆಯವರಿಗೂ ಬೆಲೆ ಕೊಡಬೇಕು. ಅವರು ಸಂಬಂಧಗಳಿಗೆ ಬೆಲೆ ಕೊಡುವವರಾಗಿರಬೇಕು. ಆಗ ಮಾತ್ರ ಮದುವೆಯಾದ ನಂತರ ನೀವು ಸಂತೋಷದಿಂದ ಇರಲು ಸಾಧ್ಯ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ