Chanakya Niti: ಚಾಣಕ್ಯರ ಪ್ರಕಾರ ಜೀವನದಲ್ಲಿ ಈ 3 ವ್ಯಕ್ತಿಗಳ ಸಹವಾಸ ಎಂದಿಗೂ ಮಾಡಬಾರದು, ಪಶ್ಚಾತ್ತಾಪ ಪಡಬೇಕಾಗುತ್ತೆ
ಚಾಣಕ್ಯರ ನೀತಿಗಳು ಎಂದೆಂದಿಗೂ ನಮ್ಮ ಬದುಕಿಗೆ ಪಾಠವಾಗುವಂತಿವೆ. ಆ ಕಾಲದಲ್ಲಿ ಅವರು ನೀಡಿದ್ದ ಸಲಹೆಗಳು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರಕ್ಕೆ ಪಾಠದಂತಿದೆ. ಚಾಣಕ್ಯರ ಪ್ರಕಾರ ಜೀವನದಲ್ಲಿ ನಾವು ಎಂದಿಗೂ ಈ 3 ವ್ಯಕ್ತಿಗಳ ಸಹವಾಸ ಮಾಡಬಾರದು. ಇದರಿಂದ ಜೀವನವಿಡೀ ಪಾಶ್ಚಾತ್ತಾಪ ಪಡಬೇಕಾಗುತ್ತದೆ.
ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ, ಅವರು ಬದುಕಿನ ಕುರಿತ ಎಲ್ಲಾ ವಿಚಾರಗಳನ್ನೂ ತಿಳಿದುಕೊಂಡಿದ್ದರು. ಮನುಕುಲದ ಕಲ್ಯಾಣಕ್ಕಾಗಿ ನೀತಿಗಳನ್ನು ರೂಪಿಸಿದ್ದ ಚಾಣಕ್ಯರು ಅದನ್ನು ಎಲ್ಲಾ ಕಾಲಕ್ಕೂ ಹೊಂದುವಂತೆ ಬರೆದಿದ್ದರು. ಚಾಣಕ್ಯ ನೀತಿಯು ಜೀವನದ ಎಲ್ಲಾ ಅಂಶಗಳಲ್ಲಿ ಸಮತೋಲನದ ಕಲೆಯನ್ನು ಕಲಿಸುತ್ತದೆ. ಚಾಣಕ್ಯರ ಆಲೋಚನೆಗಳು ಇಂದಿಗೂ ನಮಗೆ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಉಪಯುಕ್ತವಾಗಿವೆ.
ಚಾಣಕ್ಯರು ನಾವು ಎಂತಹ ಜನರ ಜೊತೆ ಇರಬೇಕು, ಎಂತಹವರ ಸಹವಾಸ ಮಾಡಬಾರದು ಎಂಬುದನ್ನು ಸ್ವಷ್ಟವಾಗಿ ವಿವರಿಸಿದ್ದಾರೆ. ಚಾಣಕ್ಯರ ಪ್ರಕಾರ ಯಾವುದೇ ಕಾರಣಕ್ಕೂ ಎಂದಿಗೂ ನಾವು ಈ 3 ವ್ಯಕ್ತಿಗಳ ಜೊತೆ ಸಹವಾಸ ಮಾಡಬಾರದು. ಇದರಿಂದ ಜೀವನಪೂರ್ತಿ ತೊಂದರೆ ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಪಾಶ್ಚಾತ್ತಾಪದಲ್ಲೇ ಕೊರಗಬೇಕಾಗುತ್ತದೆ. ಅಂತಹ 3 ವ್ಯಕ್ತಿಗಳು ಯಾರು ನೋಡಿ.
ಮೂರ್ಖರ ಸಹವಾಸ
ಮೂರ್ಖರ ಸಹವಾಸ ಮಾಡಿ ಅವರನ್ನು ಸರಿದಾರಿಗೆ ತರುತ್ತೇನೆ ಎನ್ನುವ ಆಲೋಚನೆಗಳನ್ನು ನಾವು ಎಂದಿಗೂ ಮಾಡಬಾರದು. ಮೂರ್ಖ ಸಹವಾಸ ಮಾಡಿದರೆ ನಾವೂ ಮೂರ್ಖರಾಗುತ್ತೇವೆ. ಮೂರ್ಖರಿಗೆ ಜ್ಞಾನಧಾರೆ ಹರಿಸಿದ ನಂತರವೂ ಅದರಿಂದ ಅವರು ಪ್ರೇರಿತರಾಗುವುದಿಲ್ಲ. ಮೂರ್ಖರಿಗೆ ಶಿಕ್ಷಣ ನೀಡುವುದರಿಂದ ನಮ್ಮ ಸಮಯ, ಶ್ರಮ ಎರಡೂ ವ್ಯರ್ಥ ಹೊರತು, ಇದರಿಂದ ಪ್ರಯೋಜನವಿಲ್ಲ. ಇದರಿಂದ ನಮ್ಮ ಸಮಯ ನಾವೇ ಹಾಳು ಮಾಡಿಕೊಂಡಂತೆ. ಇದರಿಂದ ನಮ್ಮಲ್ಲಿ ಅಸಾಮಾಧಾನ ಉಂಟಾಗುತ್ತಲೇ ಇರುತ್ತದೆ. ಇದರಿಂದ ನಾವು ಪಾಶ್ಚಾತ್ತಾಪ ಪಡಬೇಕಾಗುತ್ತದೆ.
ಅತೃಪ್ತರ ಸಹವಾಸ
ಯಾವುದೇ ಮನುಷ್ಯನಿಗೆ ಆತ್ಮತೃಪ್ತಿ ಬಹಳ ಮುಖ್ಯ. ಆತ್ಮತೃಪ್ತಿ ಇಲ್ಲದ ಮನುಷ್ಯ ಅಸಮಾಧಾನದಿಂದಲೇ ಬದುಕುತ್ತಿರುತ್ತಾನೆ. ಅಂತಹವರ ಸಹವಾಸ ಮಾಡುವುದರಿಂದ ನಾವು ಅಸಮಾಧಾನಿಗಳಾಗುತ್ತವೆ. ನಮಗೂ ಎಲ್ಲ ವಿಚಾರಗಳಲ್ಲಿ ಅತೃಪ್ತಿ ಕಾಡಲು ಪ್ರಾರಂಭವಾಗುತ್ತದೆ. ಇದರಿಂದ ನಮ್ಮ ನೆಮ್ಮದಿ ಹಾಳಾಗುತ್ತದೆ. ಇಂತಹ ವ್ಯಕ್ತಿಗಳ ಸಹವಾಸವು ನಮ್ಮ ಬದುಕನ್ನು ನಾವೇ ಕೈಯಾರೆ ಹಾಳು ಮಾಡಿಕೊಂಡಂತೆ ಮಾಡುವುದು ಖಂಡಿತ.
ಕೆಟ್ಟ ಮಹಿಳೆಯರ ಸಹವಾಸ
ಚಾಣಕ್ಯ ನೀತಿಯ ಪ್ರಕಾರ, ಸಜ್ಜನರು ಎಂದಿಗೂ ಕೆಟ್ಟ ಮಹಿಳೆಯರ ಸಹವಾಸ ಮಾಡಬಾರದು. ಒಬ್ಬ ಬುದ್ಧಿವಂತ ವ್ಯಕ್ತಿಯು ಈ ಮಹಿಳೆಯರೊಂದಿಗೆ ವಾಸಿಸುತ್ತಿದ್ದರೆ ಅದರಿಂದ ಅವನು ಸಾಕಷ್ಟು ನಷ್ಟವನ್ನು ಅನುಭವಿಸುತ್ತಾನೆ. ಇದರಿಂದ ಹೆಸರು, ಹಣದೊಂದಿಗೆ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ಇಂಥವರ ಸಹವಾಸ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ