Chanakya Niti: ಇಂತಹ ಸ್ಥಳದಲ್ಲಿ ಎಂದಿಗೂ ಮನೆ ಕಟ್ಟದಿರಿ, ಇದರಿಂದ ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತೆ; ಚಾಣಕ್ಯರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಇಂತಹ ಸ್ಥಳದಲ್ಲಿ ಎಂದಿಗೂ ಮನೆ ಕಟ್ಟದಿರಿ, ಇದರಿಂದ ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತೆ; ಚಾಣಕ್ಯರ ಸಲಹೆ

Chanakya Niti: ಇಂತಹ ಸ್ಥಳದಲ್ಲಿ ಎಂದಿಗೂ ಮನೆ ಕಟ್ಟದಿರಿ, ಇದರಿಂದ ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತೆ; ಚಾಣಕ್ಯರ ಸಲಹೆ

ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಸೋಲಾಗುವುದಿಲ್ಲ. ಅಂಥವರು ಸದಾ ಸಂತೋಷದಿಂದ ಇರುತ್ತಾರೆ. ಚಾಣಕ್ಯರ ಪ್ರಕಾರ ನಾವು ಮನೆ ಕಟ್ಟುವ ಜಾಗವು ಇಂತಹ ಕೆಲವು ಅಂಶಗಳನ್ನು ಹೊಂದಿರಬೇಕು, ಅದಿಲ್ಲ ಎಂದರೆ ಜೀವನದುದ್ದಕ್ಕೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಚಾಣಕ್ಯರು ಹೇಳಿದ ಆ ಸಲಹೆಗಳು ಯಾವುವು ನೋಡಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರ ಬಗ್ಗೆ ತಿಳಿಯದವರು ಇಲ್ಲವೇ ಇಲ್ಲ. ಚಾಣಕ್ಯರು ಅವರ ಕಾಲದ ಶ್ರೇಷ್ಠ ವಿದ್ವಾಂಸರೆಂದೇ ಹೆಸರಾಗಿದ್ದರು. ಚಾಣಕ್ಯರು ತನ್ನ ಜೀವಿತಾವಧಿಯಲ್ಲಿ ಮಾನವಕುಲದ ಕಲ್ಯಾಣಕ್ಕಾಗಿ ಬಹಳ ಮುಖ್ಯವಾದ ಹಲವು ನೀತಿಗಳನ್ನು ರೂಪಿಸಿದ್ದರು. ಚಾಣಕ್ಯರ ನೀತಿಗಳನ್ನು ಅನುಸರಿಸಿದರೆ, ಅವರು ಸಂತೋಷ ಮತ್ತು ಸಮೃದ್ಧ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ವ್ಯಕ್ತಿಯ ಮಾಡಬೇಕಾದುದು ಮತ್ತು ಮಾಡಬಾರದ ವಿಷಯಗಳ ಬಗ್ಗೆ ಅನೇಕ ವಿಷಯಗಳನ್ನು ಹಾಕಿದ್ದಾರೆ.

ಚಾಣಕ್ಯರು ಮನುಷ್ಯ ವರ್ತನೆ, ನಡತೆ ಬಗ್ಗೆ ಮಾತ್ರವಲ್ಲ ಮನೆ ಕಟ್ಟುವ ವಿಚಾರದಲ್ಲೂ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಚಾಣಕ್ಯರ ಪ್ರಕಾರ ಕೆಲವು ಜಾಗದಲ್ಲಿ ನಾವು ಮನೆಕಟ್ಟಬಾರದು. ಅಂತಹ ಜಾಗದಲ್ಲಿ ಮನೆ ಕಟ್ಟಿ ವಾಸಿಸುವುದರಿಂದ ನಾವು ಜೀವನವಿಡಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಇದರಿಂದ ತೊಂದರೆಗಳ ಮೇಲೆ ತೊಂದರೆ ಬರುತ್ತದೆ ಎಂಬುದು ಚಾಣಕ್ಯರ ಮಾತು. ಹಾಗಾದರೆ ಯಾವ ಜಾಗದಲ್ಲಿ ನಾವು ಮನೆ ಕಟ್ಟಬಾರದು ನೋಡಿ.

ಉದ್ಯೋಗದ ಮೂಲಗಳು ಇಲ್ಲದೇ ಇರುವ ಕಡೆ

ಚಾಣಕ್ಯ ನೀತಿಯ ಪ್ರಕಾರ , ಉತ್ತಮ ಉದ್ಯೋಗವಿಲ್ಲದ ಸ್ಥಳದಲ್ಲಿ ನೀವು ಎಂದಿಗೂ ಮನೆಯನ್ನು ಖರೀದಿಸಬಾರದು. ಅಂತಹ ಜಾಗದಲ್ಲಿ ಮನೆ ಖರೀದಿಸಿದರೆ ಉದ್ಯೋಗವೂ ಸಿಗುವುದಿಲ್ಲ, ವ್ಯಾಪಾರದ ಅವಕಾಶವೂ ಸಿಗುವುದಿಲ್ಲ. ಅಂತಹ ಜಾಗದಲ್ಲಿ ಮನೆ ಖರೀದಿಸಿದರೆ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ಇಂತಹ ಜಾಗದಲ್ಲಿ ಮನೆ ಖರೀದಿಸಿದರೆ ಜೀವನ ಪರ್ಯಂತ ಬಡತನವನ್ನು ಎದುರಿಸಬೇಕಾಗುತ್ತದೆ. ಮನೆ ಕಟ್ಟುವ ಜಾಗವು ಎಂದಿಗೂ ನಾವು ಉದ್ಯೋಗ, ವ್ಯವಹಾರ ಮಾಡಲು ಸೂಕ್ತವಾಗಿರುವಂತಿರಬೇಕು.

ಕಾನೂನಿನ ಭಯವಿಲ್ಲದ ಜಾಗ

ಆಚಾರ್ಯ ಚಾಣಕ್ಯರ ಪ್ರಕಾರ , ಜನರು ಕಾನೂನಿಗೆ ಅಥವಾ ಸಾರ್ವಜನಿಕ ಅವಮಾನಕ್ಕೆ ಹೆದರದ ಸ್ಥಳದಲ್ಲಿ ನೀವು ಎಂದಿಗೂ ಮನೆ ಖರೀದಿಸಬಾರದು. ಕಾನೂನಿನ ಭಯವಿಲ್ಲದ ಜಾಗದಲ್ಲಿ ಅನಾಚಾರಗಳು ಹೆಚ್ಚಿರುತ್ತವೆ. ಇಂತಹ ಜಾಗದಲ್ಲಿ ಒಳ್ಳೆಯತನಕ್ಕೆ ಬೆಲೆ ಇರುವುದಿಲ್ಲ. ಈ ಜಾಗದಲ್ಲಿ ಮನೆ ಕಟ್ಟಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ನೆಮ್ಮದಿ ಕೆಡುತ್ತದೆ.

ಕೆಟ್ಟ ಜನರು ವಾಸಿಸುವ ಕಡೆ

ಆಚಾರ್ಯ ಚಾಣಕ್ಯರ ಪ್ರಕಾರ ದುಷ್ಟರು ಅಥವಾ ಕೆಟ್ಟ ಜನರು ವಾಸಿಸುವ ಸ್ಥಳದಲ್ಲಿ ಮನೆಯನ್ನು ಖರೀದಿಸಬಾರದು. ಅಂತಹ ಸ್ಥಳಗಳಲ್ಲಿ ವಾಸಿಸುವ ಜನರು ಯಾವುದೇ ಸಮಯದಲ್ಲಿ ತೊಂದರೆ ಅನುಭವಿಸಬಹುದು. ಅಂತಹ ಜನರ ಬಳಿ ಇರುವುದು ನಿಮಗೆ ಯಾವಾಗಲೂ ತೊಂದರೆಯಾಗಿರಬಹುದು. ಇದರಿಂದ ನಿಮ್ಮ ವರ್ತನೆಯು ಕೆಟ್ಟದಾಗಬಹುದು.

ಈ ಕಾರಣಕ್ಕೆ ಮನೆ ಕಟ್ಟುವ ಮೊದಲು ನೀವು ವಾಸ್ತು ನೋಡುವ ಜೊತೆಗೆ ಸುತ್ತಲಿನ ಪರಿಸರವನ್ನೂ ಗಮನಿಸಬೇಕು. ಈ ಜಾಗವು ನಿಮಗೆ ಉದ್ಯೋಗ, ವ್ಯವಹಾರದ ದೃಷ್ಟಿಯಿಂದ ಎಲ್ಲ ರೀತಿಯಿಂದಲೂ ಅನುಕೂಲವಿದೆಯೇ ಎಂಬುದನ್ನು ನೋಡಿಕೊಂಡು ನಂತರ ಮನೆ ಕಟ್ಟಬೇಕು ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner