Chanakya Niti: ಚಾಣಕ್ಯರ ಪ್ರಕಾರ ಇಂತಹ ಜನರನ್ನು ಎಂದಿಗೂ ಮನೆಗೆ ಆಹ್ವಾನಿಸಬಾರದು, ಅವರು ನಮ್ಮ ನೆಮ್ಮದಿ ಕಸಿಯುತ್ತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಇಂತಹ ಜನರನ್ನು ಎಂದಿಗೂ ಮನೆಗೆ ಆಹ್ವಾನಿಸಬಾರದು, ಅವರು ನಮ್ಮ ನೆಮ್ಮದಿ ಕಸಿಯುತ್ತಾರೆ

Chanakya Niti: ಚಾಣಕ್ಯರ ಪ್ರಕಾರ ಇಂತಹ ಜನರನ್ನು ಎಂದಿಗೂ ಮನೆಗೆ ಆಹ್ವಾನಿಸಬಾರದು, ಅವರು ನಮ್ಮ ನೆಮ್ಮದಿ ಕಸಿಯುತ್ತಾರೆ

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಮನುಷ್ಯರ ಕುರಿತ ಹಲವು ವಿಚಾರಗಳನ್ನು ವಿವರಿಸಿದ್ದಾರೆ. ಅವರು ಜಗತ್ತಿನಲ್ಲಿರುವ ವಿವಿಧ ಮನೋಭಾವದ ಜನರ ಬಗ್ಗೆ ಬಹಳ ಸ್ವಷ್ಟವಾಗಿ ಬರೆದಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಇಂತಹ ಗುಣ, ಸ್ವಭಾವ ಇರುವ ಜನರನ್ನು ನಾವು ಎಂದಿಗೂ ಮನೆಗೆ ಆಹ್ವಾನಿಸಬಾರದು, ಹತ್ತಿರ ಬಿಟ್ಟುಕೊಳ್ಳಬಾರದು. ಇದರಿಂದ ನಮ್ಮ ನೆಮ್ಮದಿ ಕೆಡುತ್ತದೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯ ಜಗತ್ತು ಕಂಡ ಮಹಾನ್ ಪ್ರತಿಭಾವಂತ. ಅವರು ಖ್ಯಾತ ಚಿಂತಕ, ಅರ್ಥಶಾಸ್ತ್ರಜ್ಞ. ಬದುಕಿನ ಹಲವಾರು ಅಂಶಗಳ ಬಗ್ಗೆ ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾರೆ. ಅವರ ನೀತಿಸೂತ್ರಗಳನ್ನು ಅನುಸರಿಸುವ ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಅವರು ಬದುಕಿನ ವಿವಿಧ ಸ್ತರಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿವರಿಸಿದ್ದಾರೆ.  ಅವರ ಮಾತುಗಳು ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು.  

ಚಾಣಕ್ಯ ನೀತಿಯನ್ನು ಓದಿ, ಅದನ್ನು ಸರಿಯಾಗಿ ಪಾಲಿಸಿದರೆ ಜೀವನದಲ್ಲಿ ಯಶಸ್ಸು ನಮ್ಮದಾಗುತ್ತದೆ.  ಚಾಣಕ್ಯ ನೀತಿಗಳನ್ನು ಪಾಲಿಸುವುದರಿಂದ ನಾವು ಒತ್ತಡ ಮುಕ್ತರಾಗಬಹುದು. ಚಾಣಕ್ಯರು ತಮ್ಮ ನೀತಿಗಳಲ್ಲಿ ಹಲವು ರೀತಿಯ ಜನರ ಬಗ್ಗೆ ಉಲ್ಲೇಖಿಸಿದ್ದಾರೆ.  ಚಾಣಕ್ಯರ ಪ್ರಕಾರ ಇಂತಹ ಮನೋಭಾವದ ಜನರನ್ನು ನಾವು ಎಂದಿಗೂ ಮನೆಗೆ ಆಹ್ವಾನಿಸಬಾರದು. ಅಂಥವರು ನಿಮ್ಮ ಮನೆಗೆ ಬಂದರೆ ಮನೆಯಲ್ಲಿದ್ದ ಸುಖ-ಶಾಂತಿ ಎಲ್ಲವೂ ದೂರವಾಗುತ್ತದೆ.  ಅಂತಹ ಜನರು ಯಾರು ಎಂಬ ವಿವರ ಇಲ್ಲಿದೆ ಓದಿ. 

ಸ್ವಾರ್ಥಿಗಳು

ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ಮನೆಗೆ ಸ್ವಾರ್ಥಿ ಸ್ವಭಾವದ ವ್ಯಕ್ತಿಗಳನ್ನು ಎಂದಿಗೂ ಆಹ್ವಾನಿಸಬಾರದು. ಅಂತಹ ಜನರು ತಮ್ಮ ಸ್ವಂತ ಲಾಭ ಅಥವಾ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇದು ನಿಮ್ಮ ಮನೆಯ ಶಾಂತಿಯನ್ನು ಸಹ ಕಸಿದುಕೊಳ್ಳಬಹುದು. ಅಲ್ಲದೇ ಅವರು ನಿಮ್ಮ ಮನೆಗೆ ಬರುವುದೇ ಸ್ವಾರ್ಥ ಸಾಧನೆಗಾಗಿ ಇರಬಹುದು. ಹಾಗಾಗಿ ಸ್ವಾರ್ಥ ತುಂಬಿದ ಜನರನ್ನು ಎಂದಿಗೂ ನಿಮ್ಮ ಮನೆಗೆ ಆಹ್ವಾನಿಸಬೇಡಿ. 

ಕೆಟ್ಟ ಮನಸ್ಸಿನ ಜನರು

ಚಾಣಕ್ಯ ನೀತಿಯು ಅತಿ ಬುದ್ಧಿವಂತ ಅಥವಾ ದುಷ್ಟ ಮನಸ್ಸಿನ ಜನರನ್ನು ಮನೆಗೆ ಆಹ್ವಾನಿಸುವುದನ್ನು ನಿಷೇಧಿಸುತ್ತದೆ. ಅಂತಹ ಜನರು ಎಂದಿಗೂ ಯಾರಿಗೂ ಒಳಿತು ಮಾಡುವುದಿಲ್ಲ. ಅಂತಹವರು ನಿಮ್ಮ ಸಂತೋಷದ ಪ್ರಪಂಚಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಬಹುದು. ಇಂಥವರು ನಿಮ್ಮ ನಡುವಿನ ನೆಮ್ಮದಿ, ಸಂತೋಷ ಕಸಿಯಬಹುದು ಎಂದು ಚಾಣಕ್ಯ ಹೇಳುತ್ತಾರೆ.

ಎರಡು ಮುಖಗಳನ್ನು ಹೊಂದಿರುವ ಜನರು

ಆಚಾರ್ಯ ಚಾಣಕ್ಯರ ಪ್ರಕಾರ ಎರಡು ಮುಖದವರನ್ನು ನಿಮ್ಮ ಮನೆಗೆ ಆಹ್ವಾನಿಸಬಾರದು. ಅವರು ನಿಮ್ಮ ಮುಂದೆ ಒಂದು ಮಾತು ಹೇಳಿದರೆ, ನಂತರ ನಿಮ್ಮ ಬೆನ್ನ ಹಿಂದೆ ಇನ್ನೇನನ್ನೋ ಹೇಳುತ್ತಾರೆ. ಅಂತಹ ಜನರು ನಿಮ್ಮ ಮನೆಯಲ್ಲಿ ಜಗಳವನ್ನು ಸೃಷ್ಟಿಸಬಹುದು. ಮನೆಯವರ ನೆಮ್ಮದಿ ಕಸಿಯಬಹುದು. ಹಾಗಾಗಿ ಅಂತಹವರನ್ನು ನಿಮ್ಮ ಮನೆಗೆ ಬಿಡಬೇಡಿ.

ಅಗತ್ಯವಿರುವ ಸಮಯದಲ್ಲಿ ಮಾತ್ರ ನೆನಪಿಸಿಕೊಳ್ಳುವ ಜನ

ಕೆಲವರು ಬಹಳ ಸ್ವಾರ್ಥಿಗಳಿರುತ್ತಾರೆ. ಅವರು ತಮಗೆ ಬೇಕಾದ ಮಾತ್ರ ನಿಮ್ಮನ್ನು ನೆನೆಯುತ್ತಾರೆ. ನಿಮ್ಮನ್ನು ಹುಡುಕಿ ಬರುತ್ತಾರೆ. ತಮಗೆ ಅಗತ್ಯವಿದ್ದಾಗ ನಿಮ್ಮನ್ನು ಹುಡುಕಿ ಬರುವ ಮನೋಭಾವದವರಿಂದ ದೂರ ಇರಬೇಕು. ಅಂಥವರನ್ನು ಎಂದಿಗೂ ಮನೆಗೆ ಸೇರಿಸಬಾರದು. ಇಂತಹವರಿಂದಲೂ ಮನೆಯ ನೆಮ್ಮದಿ ಕೆಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಇತರರನ್ನು ನೋಯಿಸುವುದರಲ್ಲಿ ಸಂತೋಷಪಡುವವರು

ಚಾಣಕ್ಯರ ಪ್ರಕಾರ, ಇತರರನ್ನು ನೋಯಿಸುವ ಮೂಲಕ ಸಂತೋಷ ಪಡುವವರನ್ನು ಎಂದಿಗೂ ಮನೆಗೆ ಆಹ್ವಾನಿಸಬಾರದು. ಅಂತಹವರಿಂದ ಯಾವಾಗಲೂ ದೂರವಿರಬೇಕು. ಅಂತಹ ಜನರು ಬಹಳ ಕೆಟ್ಟ ಮನಸ್ಥಿತಿ ಹೊಂದಿರುತ್ತಾರೆ. ಅವರು ತಮ್ಮ ಲಾಭಕ್ಕಾಗಿ ನಿಮ್ಮನ್ನು ನೋಯಿಸಲು ಹಿಂಜರಿಯುವುದಿಲ್ಲ. ಹಾಗಾಗಿ ಅಂತಹವರನ್ನು ಬಹಳ ದೂರದಿಂದಲೇ ಸತ್ಕರಿಸುವುದು ಉತ್ತಮ ಎಂದು ಚಾಣಕ್ಯ ಸಲಹೆ ನೀಡುತ್ತಾರೆ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner