Chanakya Niti: ಈ 4 ವ್ಯಕ್ತಿಗಳೊಂದಿಗೆ ಎಂದಿಗೂ ಜಗಳವಾಡದಿರಿ, ಇದರಿಂದ ಜೀವನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತೆ
ಆಚಾರ್ಯ ಚಾಣಕ್ಯರ ನೀತಿಗಳು ಜೀವನದ ಸತ್ಯವನ್ನು ಹೇಳುತ್ತವೆ. ಅದಕ್ಕಾಗಿಯೇ ಅವು ಜನರಿಗೆ ಕಠಿಣವಾಗಿ ಕಾಣುತ್ತವೆ. ಅವರು ಸೂಚಿಸಿದ ಪರಿಹಾರಗಳು ಜೀವನದ ಪ್ರತಿ ಪರೀಕ್ಷೆಯಲ್ಲಿ ನಿಮಗೆ ಸಹಾಯ ಮಾಡುತ್ತವೆ. ಚಾಣಕ್ಯರ ಪ್ರಕಾರ ಈ 4 ವ್ಯಕ್ತಿಗಳ ಜೊತೆ ಜೀವನದಲ್ಲಿ ಎಂದಿಗೂ ಜಗಳವಾಡಬಾರದು. ಇದರಿಂದ ನಾವು ಜೀವನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳ ಜೊತೆಗೆ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹಾಗೂ ಅದಕ್ಕೆ ಪರಿಹಾರವನ್ನೂ ತಿಳಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ನೀತಿಗಳ ಬಗ್ಗೆ ವಿಭಿನ್ನ ಆಲೋಚನೆಗಳು ಮತ್ತು ಅಂಶಗಳನ್ನು ಹೊಂದಿರುತ್ತಾನೆ. ಆಚಾರ್ಯ ಚಾಣಕ್ಯರ ನೀತಿಗಳು ಜೀವನದ ಸತ್ಯವನ್ನು ಹೇಳುತ್ತವೆ, ಅದಕ್ಕಾಗಿಯೇ ಅವು ಜನರಿಗೆ ಕಠೋರವಾಗಿ ಕಾಣುತ್ತವೆ. ಅವರು ಸೂಚಿಸಿದ ಪರಿಹಾರಗಳು ಜೀವನದ ಪ್ರತಿ ಪರೀಕ್ಷೆಯಲ್ಲಿ ನಿಮಗೆ ಸಹಾಯ ಮಾಡುತ್ತವೆ. ಇಂದು ನಾವು ಚಾಣಕ್ಯರ ನೀತಿಯಲ್ಲಿ ಉಲ್ಲೇಖಿಸಲಾದ ಒಂದು ಅಂಶದ ಬಗ್ಗೆ ಹೇಳಲಿದ್ದೇವೆ. ಚಾಣಕ್ಯರ ಪ್ರಕಾರ, ನಾವು ಜೀವನದಲ್ಲಿ ಎಂದಿಗೂ ಈ 4 ವ್ಯಕ್ತಿಗಳ ಜೊತೆ ಜಗಳವಾಡಬಾರದು. ಇದರಿಂದ ತೊಂದರೆ ಖಚಿತ.
ಕುಟುಂಬದವರು
ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಡಿಪಾಯ ಅವನ ಕುಟುಂಬ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ವಾದ, ಜಗಳ ಮಾಡುವುದರಿಂದ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ವಿಷಾದಿಸಬಹುದು. ಒಳ್ಳೆಯ ಮತ್ತು ಕೆಟ್ಟ ನಡುವಿನ ವ್ಯತ್ಯಾಸವನ್ನು ಹೇಳುವವರು ಕುಟುಂಬದ ಸದಸ್ಯರು. ಹಾಗಾಗಿ ಅವರೊಂದಿಗೆ ಹೋರಾಡಿದ ನಂತರ, ನೀವು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಮನೆಯವರನ್ನು ದೂರ ಮಾಡಿಕೊಂಡು ಬದುಕಲು ನಿಮ್ಮಿಂದ ಸಾಧ್ಯವಿಲ್ಲ. ಆ ಕಾರಣಕ್ಕೆ ಮನೆಯವರೊಂದಿಗೆ ಎಂದಿಗೂ ಜಗಳವಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಸ್ನೇಹಿತರು
ಸ್ನೇಹವೇ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದುದು, ನಿಜವಾದ ಸ್ನೇಹಿತನು ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮನ್ನು ಬೆಂಬಲಿಸುತ್ತಾನೆ ಮತ್ತು ಜೀವನದ ಪ್ರತಿಯೊಂದು ಸತ್ಯವನ್ನು ಅರಿತುಕೊಳ್ಳುವಂತೆ ಮಾಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನಾವು ಸ್ನೇಹಿತರೊಂದಿಗೆ ಜಗಳವಾಡಿದರೆ, ಅವನು ವಿಶ್ವಾಸಾರ್ಹ ಸಂಬಂಧವನ್ನು ಕಳೆದುಕೊಳ್ಳುತ್ತಾನೆ. ಅವನು ನಿಮ್ಮೊಂದಿಗೆ ಮೊದಲಿನಂತೆ ಇಲ್ಲದೇ ಇರಬಹುದು. ಇದರಿಂದ ನೀವು ಪಶ್ಚಾತ್ತಾಪ ಪಡುತ್ತೀರಿ.
ಗುರುಗಳು, ಶಿಕ್ಷಕರು
ಗುರು ಮಾತ್ರ ನಮಗೆ ಮಾರ್ಗದರ್ಶನ ನೀಡುತ್ತಾನೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಗುರುವು ನಮಗೆ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಜ್ಞಾನವನ್ನು ನೀಡುತ್ತಾರೆ ಮತ್ತು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಗುರುಗಳೊಂದಿಗೆ ಜಗಳವಾಡಿದರೆ, ಅವನು ಗುರುವಿನ ಕೃಪೆಯ ಬಗ್ಗೆ ಅಜ್ಞಾನಿಯಾಗಿ ಉಳಿಯುತ್ತಾನೆ. ಅವನಿಗೆ ಜ್ಞಾನೋದಯ ಮತ್ತು ಮಾರ್ಗದರ್ಶನ ನೀಡುವವರು ಯಾರೂ ಇರುವುದಿಲ್ಲ.
ಮೂರ್ಖ ವ್ಯಕ್ತಿ
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ಮೂರ್ಖನೊಂದಿಗೆ ಎಂದಿಗೂ ವಾದ ಮಾಡಬಾರದು. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಮಾತ್ರವಲ್ಲದೆ ನಿಮ್ಮ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತದೆ. ಅಂತಹ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದು ವ್ಯರ್ಥ. ಇದರಿಂದಲೂ ನೀವು ಪಶ್ವಾತ್ತಾಪ ಪಡಬೇಕಾಗುತ್ತದೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ